ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

5.54 ಕೋಟಿ ರುಪಾಯಿ ಟೆಂಡರ್‌ನಲ್ಲಿ ಅಕ್ರಮ: ವಿಜಯ್ ಸರ್ಕಾರದ ವಿರುದ್ಧ ಮೊದಲ ಆರೋಪ; ಏನಿದು ಪ್ರಕರಣ?

ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಅವರ ಹೊಸ ಕಚೇರಿ ಸ್ಥಳಾಂತರ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿರುವುದಾಗಿ ಡಿಎಂಕೆ ಮತ್ತು ಬಿಜೆಪಿ ಆರೋಪಿಸಿದೆ. ಆದರೆ ಈ ಆರೋಪವನ್ನು ಟಿವಿಕೆ ತಿರಸ್ಕರಿಸಿದೆ.

ವಿಜಯ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ: ಏನು ಪ್ರಕರಣ?

ಸಂಗ್ರಹ ಚಿತ್ರ -

ಚೆನ್ನೈ: ಕಳೆದ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿರುವ ತಮಿಳುನಾಡು ಮುಖ್ಯಮಂತ್ರಿ (Tamilnadu CM) ಜೋಸೆಫ್ ವಿಜಯ್ (Joseph Vijay) ನೇತೃತ್ವದ ಸರ್ಕಾರದ ವಿರುದ್ಧ ಇದೀಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಆದರೆ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷವು ಈ ಆರೋಪವನ್ನು ತಿರಸ್ಕರಿಸಿದೆ. ಇತ್ತೀಚೆಗೆ 100 ದಿನಗಳನ್ನು ಪೂರೈಸಿದ ಟಿವಿಕೆ ಸರ್ಕಾರವು ಮುಖ್ಯಮಂತ್ರಿ ಕಚೇರಿಯನ್ನು ಹೊಸ ಕಚೇರಿಗೆ ಸ್ಥಳಾಂತರಿಸುವ ಯೋಜನೆ ಹಿನ್ನೆಲೆಯಲ್ಲಿ ನಡೆಸಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಡಿಎಂಕೆ ಮತ್ತು ಬಿಜೆಪಿ ಆರೋಪಿಸಿದೆ.

ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಭ್ರಷ್ಟಾಚಾರ ಮುಕ್ತ ಸರ್ಕಾರ ಒದಗಿಸುವ ಗುರಿಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರದ ಹೊಸ ಕಚೇರಿಗೆ ಸ್ಥಳಾಂತರಗೊಳ್ಳುವ ಯೋಜನೆಯು ಭಾರಿ ವಿವಾದವನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿ ಕಚೇರಿ ಸ್ಥಳಾಂತರಕ್ಕಾಗಿ ನೀಡಲಾದ 5.54 ಕೋಟಿ ರೂ. ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಮತ್ತು ಡಿಎಂಕೆ ಆರೋಪಿಸಿದೆ.

ಇಟಲಿಯಿಂದ ಭಾರತದ ರಾಜಕೀಯದವರೆಗೆ: ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆಗೆ ಸಿದ್ಧ

ಫೋರ್ಟ್ ಸೇಂಟ್ ಜಾರ್ಜ್‌ನ ಮುಖ್ಯ ಬ್ಲಾಕ್‌ನಲ್ಲಿರುವ ಮುಖ್ಯಮಂತ್ರಿ ಕಚೇರಿಯನ್ನು (ಸಿಎಂಒ) ಪಕ್ಕದಲ್ಲೇ ಇರುವ ನಮಕ್ಕಲ್ ಕವಿಂಗರ್ ಮಾಳಿಗೈ ಕಟ್ಟಡಕ್ಕೆ ಸ್ಥಳಾಂತರಿಸುವ ಯೋಜನೆಯ ಟೆಂಡರ್ ನಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಸ್ಪಷ್ಟನೆಯನ್ನು ನೀಡಿರುವ ಟಿವಿಕೆ, ವ ನಮಕ್ಕಲ್ ಕವಿಂಗರ್ ಮಾಳಿಗೈ ಕಟ್ಟಡವನ್ನು ತಮಿಳುನಾಡು ಮಾಜಿ ಸಿಎಂ ಕಲೈಗ್ನಾರ್ ನಿರ್ಮಿಸಿದ್ದರು. ಸಿಎಂ ಅವರ ವೈಯಕ್ತಿಕ ಐಷಾರಾಮಿಕ್ಕಾಗಿ ಸ್ಥಳಾಂತರ ಮಾಡಲಾಗುತ್ತಿಲ್ಲ. ತಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೆಚ್ಚು ಆರಾಮದಾಯಕ ಮತ್ತು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಲು ಸ್ಥಳಾಂತರ ನಡೆಸುತ್ತಿರುವುದಾಗಿ ಟಿವಿಕೆ ಹೇಳಿದೆ.

ಆರೋಪವೇನು?

ಟಿವಿಕೆ ಸರ್ಕಾರದ ಟೆಂಡರ್ ನಲ್ಲಿ ಅಕ್ರಮ ನಡೆದಿರುವ ಎಂದು ಆರೋಪಿಸಿರುವ ಪ್ರತಿಪಕ್ಷಗಳಾದ ಡಿಎಂಕೆ ಮತ್ತು ಬಿಜೆಪಿ, ಸಿಎಂಒ ಕಚೇರಿ ಸ್ಥಳಾಂತರಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಹೊಸ ಕಚೇರಿಯಲ್ಲಿ ದುರಸ್ತಿ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಕೆಲಸ ಪ್ರಾರಂಭವಾದ ಒಂದು ತಿಂಗಳ ಅನಂತರ 5.5 ಕೋಟಿ ರೂ.ಗಳ ಟೆಂಡರ್ ಅನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ.

ಟೆಂಡರ್ ಪ್ರಕ್ರಿಯೆಗೆ ಮೊದಲು ಯೋಜನೆಯ ಮೌಲ್ಯವನ್ನು ಆನ್‌ಲೈನ್‌ನಲ್ಲಿ ಬಹಿರಂಗಪಡಿಸಬೇಕು. ಕಟ್ಟಡದ ಮೌಲ್ಯವು 5.54 ಕೋಟಿ ರೂ.ಗಳಾಗಿತ್ತು. ಆದರೆ ಆರಂಭದಲ್ಲಿ ಇದನ್ನು ಮಾಡಿಲ್ಲ. ಅಂದಾಜು ವೆಚ್ಚದ ಬಗ್ಗೆ ಉಲ್ಲೇಖಿಸಲಾಗಿಲ್ಲ. ಇದಲ್ಲದೇ ಟೆಂಡರ್ ದಾಖಲೆಗಳನ್ನು ಸಾಮಾನ್ಯವಾಗಿ ಮುದ್ರಣ ಜಾಹೀರಾತುಗಳನ್ನು ನೀಡುವ ಮೊದಲು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಆದರೆ ಇದನ್ನು ಮಾಡಿಲ್ಲ. ಮುದ್ರಣ ಜಾಹೀರಾತುಗಳು ಪ್ರಸಾರವಾದ ಬಳಿಕ ಅಪ್‌ಲೋಡ್ ಮಾಡಲಾಗಿದೆ.

ಟೆಂಡರ್ ಅಧಿಸೂಚನೆಯನ್ನು ಆಗಸ್ಟ್ 13 ರಂದು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದ್ದು, ನಾಲ್ಕು ದಿನಗಳ ಅನಂತರ ಆಗಸ್ಟ್ 17 ರಂದು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಮುದ್ರಣ ಜಾಹೀರಾತು ಮತ್ತು ಆನ್‌ಲೈನ್ ಟೆಂಡರ್ ಒಂದೇ ರೀತಿಯ ವಿವರಗಳನ್ನು ಹೊಂದಿರಬೇಕು. ಆದರೆ ಆನ್ ಲೈನ್ ಟೆಂಡರ್‌ನಲ್ಲಿ ಆರಂಭದಲ್ಲಿ ಮೌಲ್ಯವನ್ನು 'NA' ಎಂದು ಉಲ್ಲೇಖಿಸಲಾಗಿದ್ದು, ಮುದ್ರಣ ಜಾಹೀರಾತಿನಲ್ಲಿ 5.54 ಕೋಟಿ ರೂಪಾಯಿ ವೆಚ್ಚ ಎಂದು ಹೇಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಟಿವಿಕೆ ಸಚಿವ ಆಧವ್ ಅರ್ಜುನ, ಇದು ತಾಂತ್ರಿಕ ದೋಷವಾಗಿರಬಹುದು. ಇಲ್ಲಿ ಯಾವುದೇ ರೀತಿಯ ಹಗರಣವಾಗಿಲ್ಲ. ಒಂದು ಲೋಪವಾಗಿದೆ ಎಂದು ಹೇಳಿದ್ದಾರೆ.

ಈ ಟೆಂಡರ್ ಕುರಿತು ತಮಿಳುನಾಡು ವಿಧಾನಸಭೆಯಲ್ಲೂ ವಿವಾದ ಕೇಳಿ ಬಂದಿತ್ತು. ಕಲೈನಾರ್, ಎಂಜಿ ರಾಮಚಂದ್ರನ್, ಜಯಲಲಿತಾ ಅವರಂತಹ ಮಾಜಿ ಮುಖ್ಯಮಂತ್ರಿಗಳು ಫೋರ್ಟ್ ಸೇಂಟ್ ಜಾರ್ಜ್ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿದ್ದರು. ಟಿವಿಕೆಗೆ ಮಾತ್ರ ಏಕೆ ಕಷ್ಟವಾಗುತ್ತಿದೆ ಎಂದು ಎಂದು ಡಿಎಂಕೆ ಶಾಸಕ ಇವಿ ವೇಲು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಪಿಡಬ್ಲ್ಯೂಡಿ ಸಚಿವರಾಗಿರುವ ಟಿವಿಕೆಯ ಅರ್ಜುನ, ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಮುಖ್ಯಮಂತ್ರಿ ಕಚೇರಿ ಯೋಜನೆಗೆ ದರಗಳ ಪಟ್ಟಿ ಘೋಷಿಸದಿರಲು ಒಂದು ಕಾರಣವಿದೆ. ದರಗಳ ಪಟ್ಟಿ ಮೂಲತಃ ಸಿಮೆಂಟ್, ಉಕ್ಕು, ಕಾರ್ಮಿಕ ಇತ್ಯಾದಿ ನಿರ್ಮಾಣ ಕಾರ್ಯಗಳಿಗೆ ಸರ್ಕಾರದ ಬೆಲೆ ಪಟ್ಟಿಯಾಗಿದೆ. ಹೊಸ ದರಗಳನ್ನು ಈಗ ಘೋಷಿಸಿದರೆ ಗುತ್ತಿಗೆದಾರರು ತಮ್ಮ ಬಿಡ್‌ಗಳನ್ನು ಹೆಚ್ಚಿಸಬಹುದು. ಹೀಗಾಗಿ ಕಳೆದ ವರ್ಷ ಜಾರಿಯಲ್ಲಿದ್ದ ದರಗಳ ಪಟ್ಟಿಯನ್ನು ನಾವು ಎಲ್ಲಾ ಇಲಾಖೆಗಳಿಗೆ ನೀಡಿದ್ದೇವೆ ಎಂದು ತಿಳಿಸಿದರು.

ಸಿಎಂ ವಿಜಯ್ ಅವರ ವೈಯಕ್ತಿಕ ಕಾರಣಕ್ಕಾಗಿ ಅಥವಾ ಅವರ ಸ್ವಂತ ಅವಶ್ಯಕತೆಗಳಿಗಾಗಿ ಹೊಸ ಕಚೇರಿಗೆ ಬದಲಾಯಿಸುತ್ತಿಲ್ಲ. ನಾಲ್ವರು ಕಾರ್ಯದರ್ಶಿಗಳು ಪ್ರಸ್ತುತ 100 ಚದರ ಅಡಿಗಿಂತ ಕಡಿಮೆ ಜಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಸರಿಯಾದ ಶೌಚಾಲಯ ಸೌಲಭ್ಯಗಳಿಲ್ಲ. ಮುಖ್ಯಮಂತ್ರಿಯವರು ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ವಿವಿಧ ವಿಭಾಗಗಳ ಜನರನ್ನು ಭೇಟಿಯಾಗುತ್ತಾರೆ. ಅನೇಕ ವಿದೇಶಿ ನಿಯೋಗಗಳು ಸಹ ಬರುತ್ತವೆ. ಈಗಿನ ಕಟ್ಟಡದಲ್ಲಿ ಅವರಿಗೆ ಸರಿಯಾದ ಸೌಲಭ್ಯಗಳಿಲ್ಲ ಎಂದು ತಿಳಿಸಿದರು.

ಸಂಬಳವಿಲ್ಲ, ಮನೆ ಬಾಡಿಗೆ ಪಾವತಿಸಬೇಕು... ಬಿಜೆಪಿಯಿಂದ ಹೊರನಡೆದ ಕಾರಣ ಹಂಚಿಕೊಂಡ ಶೆಹಜಾದ್ ಪೂನವಾಲಾ

ಬೆಲೆ ವಿಚಾರದಲ್ಲಿ ಅರ್ಜುನ ಅವರು ನೀಡಿರುವ ಮಾಹಿತಿ ಬಗ್ಗೆ ಡಿಎಂಕೆಯ ವೇಲು ಅವರು ಆಕ್ಷೇಪ ವ್ಯಕ್ತಪಡಿಸಿ ಗುತ್ತಿಗೆದಾರರು ಸಾಮಾನ್ಯವಾಗಿ ಸರ್ಕಾರಿ ಕೆಲಸವನ್ನು ಪಡೆಯಲು ಸ್ಪರ್ಧಿಸುತ್ತಾರೆ ಎಂದು ಪ್ರತಿಪಾದಿಸಿದರು. ಈ ಆರೋಪಗಳಿಗೆ ವಿಜಯ್ ನೇತೃತ್ವದ ಸರ್ಕಾರ ಯಾವ ರೀತಿಯ ಸ್ಪಷ್ಟನೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.