ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ಬೆಂಗಳೂರು ಯುವತಿಗೆ ಲೈಂಗಿಕ ಕಿರುಕುಳ ಕೇಸ್‌; ಆರೋಪಿ ಬಂಧನಕ್ಕಾಗಿ ಪೊಲೀಸರ ರೋಚಕ ಕಾರ್ಯಚರಣೆ

Bengaluru Molestation Case: ಸುದ್ದಗುಂಟೆಪಾಳ್ಯ ಪೊಲೀಸರು ಸಂತೋಷ್ ಡೇನಿಯಲ್ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸಂತೋಷ್ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ಕೃತ್ಯ ತನ್ನಿಂದಲೇ ನಡೆದಿದೆ ಎಂದು ಹೇಳಿದ್ದಾನೆ. ಬೈಕ್ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿ ಮನೆಗೆ ತೆರಳಿದ್ರು, ಪೊಲೀಸರು ಬೆನ್ನುಬಿದ್ದಿರುವ ವಿಷಯ ತಿಳಿದು ಏಪ್ರಿಲ್ 9 ರಂದು ಆರೋಪಿ ಎಸ್ಕೇಪ್ ಆಗಿದ್ದು, ಆರೋಪಿ ಹೊಸೂರು ಮತ್ತು ಸೇಲಂ ಮೂಲಕ ಕೇರಳದ ಕೋಝಿಕೋಡ್​​ಗೆ ತಲುಪಿದ್ದ.

ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದ ಆರೋಪಿ ಖಾಕಿ ಬಲೆಗೆ

‌ಬೆಂಗಳೂರಿನ ಲೈಂಗಿಕ ಕಿರುಕುಳ ಆರೋಪಿ ಸಂತೋಷ್

Profile Sushmitha Jain Apr 14, 2025 5:09 PM

ಬೆಂಗಳೂರು: ಸುದ್ದಗುಂಟೆಪಾಳ್ಯದ ಯುವತಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿ ಪರಾರಿಯಾಗಿದ್ದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿದ್ದು, ಕೇರಳದ ಕೋಝಿಕೋಡ್ (Kozhikode) ನಡುವೆ ವಿಲಂಗಡಿ ಎಂಬಲ್ಲಿ ಆರೋಪಿ ಸಂತೋಷ್ ನನ್ನು ಸೆರೆಹಿಡಿಯಲಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಈತ ಮುಗಿಬಿದ್ದು ಲೈಂಗಿಕ ಕಿರುಕುಳ ಎಸಗಿದ್ದ. ಆರೋಪಿಯ ವಿಕೃತಿ ಘಟನೆ ಸ್ಥಳದ ಪಕ್ಕದಲ್ಲಿದ್ದ ಕಟ್ಟಡವೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆದ್ರೆ ಕಿರುಕುಳ ಅನುಭವಿಸಿದ ಯುವತಿಯರು ಘಟನೆ ಸಂಬಂಧ ಯಾವುದೇ ದೂರು ನೀಡಿರಲಿಲ್ಲ ಆದರೆ, ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನನ್ವಯ ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸೋಷಿಲ್ ಮೀಡಿಯಾದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿ ಹೆಣ್ಣು ಮಕ್ಕಳಿಗಿರುವ ಭದ್ರತೆ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಆ ವಿಕೃತಿ ಕಾಮಿಯನ್ನು ಎಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇತನನ್ನು ಸೆರೆ ಹಿಡಿದಿದ್ದೇಗೆ...? ಘಟನೆ ನಡೆದು ಹತ್ತು ದಿನವಾದರೂ ಅಡಗಿಕೊಳ್ಳುತ್ತಿದ್ದ ಆತನ ಸುಳಿವು ಸಿಕ್ಕಿದ್ದೇಗೆ...? ಪೊಲೀಸರ ಕಾರ್ಯಾಚರಣೆ ಹೇಗಿತ್ತು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಪೊಲೀಸರು ಹುಡುಕುತ್ತಿರುವ ವಿಷಯ ತಿಳಿದು ಎಸ್ಕೇಪ್ ಆಗಿದ್ದ ಆರೋಪಿ

ಪೊಲೀಸರು ಬಂಧಿಸಿರುವ ಆರೋಪಿಯನ್ನು ಸಂತೋಷ್ ಡೇನಿಯಲ್ (26) ಎಂದು ಗುರಿತಿಸಲಾಗಿದ್ದು, ತಿಲಕ್ ನಗರದ ಗುಲ್ಬರ್ಗಾ ಕಾಲೋನಿಯಲ್ಲಿ ವಾಸಿಸುತ್ತಿದ್ದ ಇತ ತಮಿಳುನಾಡು ಮೂಲದನಾಗಿದ್ದಾನೆ. ಈ ಆರೋಪಿ ಹಲವಾರು ವರ್ಷಗಳಿಂದ ತಿಲಕ್ ನಗರದಲ್ಲಿ ವಾಸವಿದ್ದು, ಬ್ರೂಕ್ ಫೀಲ್ಡ್ ನ ಕಾರು ಶೋರೂಂನಲ್ಲಿ ಟೆಸ್ಟ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಏಪ್ರಿಲ್ 3ರಂದು ತಡರಾತ್ರಿ 1.35ಕ್ಕೆ ಈ ಕೃತ್ಯ ನಡೆದಿದ್ದು, ಘಟನೆಯ ನಂತರ ಸಂತೋಷ್ ನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಬೈಕ್ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿ ಮನೆಗೆ ತೆರಳಿದ್ರು, ಪೊಲೀಸರು ಬೆನ್ನುಬಿದ್ದಿರುವ ವಿಷಯ ತಿಳಿದು ಏಪ್ರಿಲ್ 9 ರಂದು ಆರೋಪಿ ಎಸ್ಕೇಪ್ ಆಗಿದ್ದು, ಆರೋಪಿ ಹೊಸೂರು ಮತ್ತು ಸೇಲಂ ಮೂಲಕ ಕೇರಳದ ಕೋಝಿಕೋಡ್​​ಗೆ ತಲುಪಿದ್ದ.

ಪ್ರಕರಣದ ಬೆನ್ನು ಬಿಡದ ಪೊಲೀಸರು

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಮಾಜದಲ್ಲಿ ಹೆಣ್ಣುಮಕ್ಕಳಿಗಿರುವ ಭದ್ರತೆ ಜೊತೆ ಕಾನೂನಿನ ವ್ಯವಸ್ಥೆಯ ಮೇಲೆಯೂ ಜನರು ಕಿಡಿಕಾರಿದ್ದರು. ಈ ಬೆಳವಣಿಗೆ ಪೊಲೀಸರನ್ನು ಅಸಮಾಧನಗೊಳಿಸಿತ್ತು, ಈ ಹಿನ್ನಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಎರಡು ಪ್ರತ್ಯೇಕ ಪೊಲೀಸ್ ತಂಡವನ್ನು ರಚಿಸಿದರು. ತನಿಖೆಯ ಭಾಗವಾಗಿ 700ಕ್ಕೂ ಅಧಿಕ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ರು. ಆರೋಪಿ ಪತ್ತೆಗಾಗಿ ಬರೋಬ್ಬರಿ ಹೆಚ್ಚು ಸಿಸಿಟಿವಿ ಪರಿಶೀಲನೆ ಮಾಡಿದ್ದರು. ಸಿಸಿಟಿವಿ ಜಾಡನ್ನು ಹಿಡಿದು ಆರೋಪಿ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ಮಾಡಿಕೊಂಡು, ಪ್ರಕರಣದ ಬೆನ್ನು ಬಿಡದ ಪೊಲೀಸರು ಅಂತಿಮವಾಗಿ ಆರೋಪಿಯ ಗುರುತು ಹಾಗೂ ಮುಖಚಹರೆ ಪತ್ತೆ ಹಚ್ಚಿ ಸರ್ಚಿಂಗ್ ಚುರುಕುಗೊಳಿಸಿದ್ರು. ಅದರ ಪ್ರತಿಫಲವಾಗಿ ಕೇರಳದಲ್ಲಿ ಆರೋಪಿಯನ್ನ ಬಂಧಿಸಲಾಗಿದ್ದು, ಯುವತಿಗೆ ಕಿರುಕುಳ ಕೊಟ್ಟವನನ್ನ ಸಂತೋಷ್ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನು ಓದಿ:Viral Video: ಈ ಬ್ರ್ಯಾಂಡ್‌ನ ಎಣ್ಣೆ ಮೇಲೆ ತಾತಪ್ಪನಿಗೆ ಹೆವೀ ಲವ್ವೋ ಲವ್‌! ವಿಡಿಯೊ ವೈರಲ್

ಇನ್ನು ದುಷ್ಕೃತ್ಯ ನಡೆದು 10 ದಿನಗಳ ಬಳಿಕ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೇರಳದಲ್ಲಿ ಆರೋಪಿ ಅರೆಸ್ಟ್ ಮಾಡಿದ್ದು ಬೆಂಗಳೂರಿಗೆ ಕರೆತಂದಿದ್ದಾರೆ. ಬಳಿಕ ಪೊಲೀಸರು ತಮ್ಮ ಕೈ ರುಚಿ ತೋರಿಸಿದ್ದು, ಕೃತ್ಯವನ್ನು ತಾನೇ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಘಟನೆಗಳಿಂದ ಭಾರತದಲ್ಲಿ ಹೆಣ್ಣು ಮಕ್ಕಳು ಅಭಿವೃದ್ಧಿ ಹೊಂದುತ್ತಿದ್ದಾರೆ, ಪ್ರಗತಿ ಪಥದಲ್ಲಿ ಸಾಗುತ್ತಿದ್ದಾರೆ , ಆರ್ಥಿಕವಾಗಿ ಬಲಗೊಳ್ಳುತ್ತಿದ್ದಾರೆ ಎಂದು ರಾಜಕಾರಣಿಗಳು, ಗಣ್ಯರು, ಅಧಿಕಾರಿಗಳು ಭಾಷಣ ಬೀಗಿಯುತ್ತಲೇ ಇದ್ದಾರೆ. ಆದ್ರೆ ಇಷ್ಟಾದರೂ ದಿನ ಬೆಳಗಾದ್ರೆ ಅಲ್ಲಿ ಅತ್ಯಾಚಾರ, ಇಲ್ಲಿ ಲೈಕಿಂಗ ಕಿರುಕುಳ ಹೀಗೆ ಹೆಣ್ಣಿನ ಮೇಲಾಗುವ ದೌರ್ಜನ್ಯ ಮಾತ್ರ ಕಡಿಮೆ ಆಗಿಲ್ಲ. ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ವರದಿ ಆಗುತ್ತಲ್ಲೇ ಇದೆ. ಮೊನ್ನೆ ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ನಡೆದಿರುವ ಐದು ವರ್ಷದ ಹೆಣ್ಣು ಮಗುವನ್ನ ಅಪಹರಿಸಿ, ಬಲತ್ಕಾರ ಮಾಡಿ ಕೊಲೆ ಮಾಡಿರುವ ಪ್ರಕರಣ ಇಡೀ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ಹೆಣ್ಣುಮಕ್ಕಳಿಗೆ ಈ ಸಮಾಜದಲ್ಲಿರುವ ಅಭದ್ರತೆಯನ್ನು ನೋಡುತ್ತಿದ್ದರೆ ಮುಂದೆ ಹೆಣ್ಣುಮಕ್ಕಳನ್ನು ಪಡೆಯುವುದಕ್ಕೂ ಭಯವಾಗುತ್ತಿದೆ.