ಸಿಮ್ ಬೇಕಿಲ್ಲ, ಟವರ್ ಹಾಕಿಲ್ಲ, ವೈಫೈ ಅಗತ್ಯವಿಲ್ಲ: ಭಯೋತ್ಪಾದಕರ 'ಲೋರಾ' ಭದ್ರತೆಗೆ ಹೊಸ ಸವಾಲು; ಏನಿದು ಹೊಸ ತಂತ್ರಜ್ಞಾನ?
ಭಯೋತ್ಪಾದಕರು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಇದು ಈಗ ಕಾಶ್ಮೀರದಲ್ಲಿ ಹೊಸ ಭದ್ರತಾ ಸವಾಲನ್ನು ಒಡ್ಡಿದೆ. ಭಯೋತ್ಪಾದಕರು ಸುಧಾರಿತ ಸಂವಹನ ತಂತ್ರಜ್ಞಾನವನ್ನು ಬಳಸುತ್ತಿದ್ದು, ಇದರ ಮೂಲವನ್ನು ಪತ್ತೆ ಹಚ್ಚುವುದು ಬಹುತೇಕ ಅಸಂಭವವಾಗಿದೆ. ಏನಿದು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಸಂಗ್ರಹ ಚಿತ್ರ -
ನವದೆಹಲಿ: ಸಿಮ್ ಬೇಕಿಲ್ಲ, ಟವರ್ ಹಾಕಿಲ್ಲ, ವೈಫೈ ಅಗತ್ಯವಿಲ್ಲ... ಭಯೋತ್ಪಾದಕರ "ಲೋರಾ'' (lora) ಈಗ ದೇಶದ ಭದ್ರತೆಗೆ ಹೊಸ ಸವಾಲನ್ನು ಒಡ್ಡಿದೆ. ಕಾಶ್ಮೀರದಲ್ಲಿ (Kashmir) ಇತ್ತೀಚೆಗೆ ಮೃತ ಪಾಕಿಸ್ತಾನಿ (pakistan) ಭಯೋತ್ಪಾದಕ (terror) ಕಮಾಂಡರ್‌ಗಳಿಂದ ವಶ ಪಡಿಸಿಕೊಳ್ಳಲಾದ ಈ ಅತ್ಯಾಧುನಿಕ ಆಫ್ ಗ್ರಿಡ್ ಹ್ಯಾಂಡ್‌ಸೆಟ್ ಅನ್ನು ''ಲೋರಾ'' ಎಂದು ಗುರುತಿಸಲಾಗಿದೆ. ಇದು ತುಂಬಾ ದೂರದವರೆಗೆ ಅತ್ಯಂತ ಕಡಿಮೆ ಶಕ್ತಿ ಬಳಸಿ ಬಳಕೆಯಾಗುವ ಸಂವಹನ ಸಾಧನವಾಗಿದೆ. ಇದನ್ನು ಪತ್ತೆಹಚ್ಚುವುದು ಅಸಾಧ್ಯ.
ಭಯೋತ್ಪಾದಕರು ಮೊಬೈಲ್ ಫೋನ್‌ಗಳ ಬಳಕೆಯನ್ನು ಬಹುತೇಕ ನಿಲ್ಲಿಸಿದ್ದಾರೆ. ಇದರ ಬಳಿಕ ಈಗ ಜಮ್ಮು ಮತ್ತು ಕಾಶ್ಮೀರದ ದಟ್ಟ ಕಾಡುಗಳಲ್ಲಿ ಹೊಸ ತಂತ್ರಜ್ಞಾನವೊಂದು ಕಂಡು ಬಂದಿದೆ. ಇದು ಭಯೋತ್ಪಾದಕ ಸಂವಹನ 2.0 ಎನ್ನುತ್ತಾರೆ ಭದ್ರತಾ ಪಡೆ ಅಧಿಕಾರಿಗಳು.
Khatron Ke Khiladi 15 winner: ಖತ್ರೋನ್ ಕೆ ಖಿಲಾಡಿ ಟ್ರೋಫಿ ಗೆದ್ದ ಅವಿನಾಶ್ ಮಿಶ್ರಾ!
ಈ ಕುರಿತು ಮಾಹಿತಿ ನೀಡಿದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು, ಕಳೆದ ಸೆಪ್ಟೆಂಬರ್ 29ರಂದು ಬುಡ್ಗಾಮ್‌ನ ಗುರ್ವತ್ಕಲನ್‌ನಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೈಬಾದ ಮೋಸ್ಟ್ ವಾಂಟೆಡ್ ಕಮಾಂಡರ್ ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾ ಫೌಜಿಯನ್ನು ಎನ್ ಕೌಂಟರ್ ಮಾಡಿತ್ತು. ಆತನ ಬಳಿ ಯಾವುದೇ ಸ್ಮಾರ್ಟ್‌ಫೋನ್ ಇಡಲಿಲ್ಲ. ಬದಲಿಗೆ ಲೋರಾ ಅಲ್ಟ್ರಾ ಎಂದು ಲೇಬಲ್ ಮಾಡಲಾದ ಒರಟಾದ ಕಪ್ಪು ಸಾಧನ ಕಂಡು ಬಂದಿದೆ. ಇದು ಸಾಮಾನ್ಯ ವಾಕಿ ಟಾಕಿಯಲ್ಲ. ಎನ್‌ಕ್ರಿಪ್ಟ್ ಮಾಡಲಾದ ಜಾಲರಿ ಆಧಾರಿತ ರೇಡಿಯೋ. ಪ್ರತಿಯೊಂದು ಹ್ಯಾಂಡ್‌ಸೆಟ್ ಸ್ವತಃ ಟವರ್ ನಂತೆ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಸಿಮ್ ಕಾರ್ಡ್, ರೀಚಾರ್ಜ್, ಸ್ಥಳದ ಅಗತ್ಯವಿಲ್ಲ. ಇದು ಎಲ್ಲಿ ಬೇಕಾದರೂ ಕಾರ್ಯನಿರ್ವಾಹಿಸುತ್ತದೆ ಎಂದು ತಿಳಿಸಿದ್ದಾರೆ.
ಲೋರಾ ಅರಣ್ಯ ಪ್ರದೇಶಗಳಲ್ಲಿ ಸುಮಾರು 10- 15 ಕಿಲೋಮೀಟರ್ ದೂರದವರೆಗೆ ಪಠ್ಯ ಸಂದೇಶ, ಲೈವ್ ಜಿಪಿಎಸ್ ಮಾಹಿತಿ, ತುರ್ತು ಎಸ್‌ಒಎಸ್ ಸಂದೇಶವನ್ನು ಕಳುಹಿಸಬಹುದು. ಇದರಿಂದ ಭಯೋತ್ಪಾದಕರು ಕಾಡಿನೊಳಗೆ ತಮ್ಮದೇ ಆದ ಖಾಸಗಿ ಸೇನಾ ಜಾಲವನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸೀಟ್ ಆಕ್ರಮಿಸಿ ಪದೇ ಪದೆ ಮಹಿಳೆಯನ್ನು ಸ್ಪರ್ಶಿಸಿದ ಪ್ರಯಾಣಿಕ: ವಿಡಿಯೊ ವೈರಲ್
ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) ನಡೆಸಿದ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಈ ಸಾಧನಗಳನ್ನು ಸ್ಥಳೀಯವಾಗಿ ಮಾಡಲಾಗಿಲ್ಲ. ಗಡಿಯಾಚೆಗಿನ ಹ್ಯಾಂಡ್ಲರ್‌ಗಳಿಗೆ ನೇರವಾಗಿ ಲಿಂಕ್ ಮಾಡಲು ಅವುಗಳನ್ನು ಪೂರ್ವ-ಕಾನ್ಫಿಗರ್ ಮಾಡಲಾಗಿದೆ. ಪಾಕಿಸ್ತಾನಕ್ಕೆ ಇದು ಚೀನಾ ತಂತ್ರಜ್ಞಾನವನ್ನು ಬಳಸಿ ತಯಾರಿಸಿರುವ ಸಾಧನವಾಗಿದೆ ಎಂದು ತಿಳಿದುಬಂದಿದೆ ಎಂದರು.