ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್‌ನ ನಾಯಕ, ಮಗನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆಯೇ ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಕೊಲ್ಲಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಲಹೆ ನೀಡಲಾಗಿದೆ. ಖಮೇನಿ ಮತ್ತು ಮೊಜ್ತಬಾ ಖಮೇನಿ ಅವರನ್ನು ಗುರಿಯಾಗಿಸಿಕೊಂಡು ಮಿಲಿಟರಿ ನಡೆಸಬಹುದಾದ ಕಾರ್ಯಾಚರಣೆ ಕುರಿತು ಡೊನಾಲ್ಡ್ ಟ್ರಂಪ್‌ಗೆ ಹಿರಿಯ ಸಲಹೆಗಾರರೊಬ್ಬರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇರಾನ್‌ನ ಸರ್ವೋಚ್ಚ ನಾಯಕನ ಕೊಲ್ಲಲು ಡೊನಾಲ್ಡ್ ಟ್ರಂಪ್ ಗೆ ಸಲಹೆ

ಸಂಗ್ರಹ ಚಿತ್ರ -

ವಾಷಿಂಗ್ಟನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Irans Supreme Leader Ali Khamenei) ಮತ್ತು ಅವರ ಪುತ್ರ ಮೊಜ್ತಬಾ ಖಮೇನಿ ( Mojtaba Khamenei) ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರಿಗೆ ಹಿರಿಯ ಸಲಹೆಗಾರರೊಬ್ಬರು ಇರಾನ್‌ನ (Iran) ಅಲಿ ಖಮೇನಿ ಮತ್ತು ಮೊಜ್ತಬಾ ಖಮೇನಿ ಅವರನ್ನು ಹತ್ಯೆ ಮಾಡಲು ಮಿಲಿಟರಿ ನಡೆಸಬಹುದಾದ ಕಾರ್ಯಾಚರಣೆಗಳ ಕುರಿತು ವಿವರಿಸಲಾಗಿದೆ. ಆದರೆ ಈ ಕುರಿತು ಯಾವುದೇ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗಿಲ್ಲ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ.

ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯೆಂದು ಮೊಜ್ತಬಾ ಖಮೇನಿ ಅವರನ್ನು ಪರಿಗಣಿಸಲಾಗಿದೆ. ಹೀಗಾಗಿ ಅವರಿಬ್ಬರನ್ನು ಕೊಲೆ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅವರ ಹಿರಿಯ ಸಲಹೆಗಾರರೊಬ್ಬರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ದೇಶದಲ್ಲಿ ಭಾರೀ ಸ್ಫೋಟ ನಡೆಸುವ ಸಂಚು! ಪಾಕ್‌ನ ಐಎಸ್‌ಐ, ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿ ಬಂಧನ

ಈ ಕುರಿತು ಇನ್ನು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅವರು ಅದನ್ನು ಮಾಡದಿರಬಹುದು. ಆದರೆ ಎಚ್ಚರಿಕೆಯನ್ನು ಖಂಡಿತಾ ಕೊಡುತ್ತಾರೆ ಎನ್ನಲಾಗಿದೆ.

ಖಮೇನಿ ಪರಿವಾರದ ವಿರುದ್ಧ ಕ್ರಮಕ್ಕೆ ಯುಎಸ್ ರಕ್ಷಣಾ ಇಲಾಖೆಯು ಟ್ರಂಪ್ ಅವರಿಗೆ ಬಹು ಆಯ್ಕೆಗಳನ್ನು ನೀಡಿದೆ. ಪ್ರತಿಯೊಂದು ಸನ್ನಿವೇಶಕ್ಕೂ ಸಿದ್ಧರಾಗಿರುವಂತೆ ಸಲಹೆ ನೀಡಿದೆ. ಅಂತಿಮ ಕ್ರಮ ಏನೆಂದು ಅಧ್ಯಕ್ಷರೇ ನಿರ್ಧರಿಸಲಿದ್ದಾರೆ. ಅದು ಏನೆಂದು ಯಾರಿಗೂ ತಿಳಿದಿಲ್ಲ. ಅವರು ನಿರ್ಧರಿಸಿಲ್ಲ ಎಂದು ಹೇಳಿದೆ.

ಖಮೇನಿ ಮತ್ತು ಅವರ ಮಗನ ಹತ್ಯೆಗೆ ಸಂಬಂಧಿಸಿದ ಯೋಜನೆಯನ್ನು ಹಲವಾರು ವಾರಗಳ ಹಿಂದೆಯೇ ಟ್ರಂಪ್‌ಗೆ ತಿಳಿಸಲಾಗಿತ್ತು. ಹಲವು ಸಮಯದಿಂದ ಈ ಕುರಿತು ಪರಿಗಣಿಸಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ದಾಳಿಯ ಕುರಿತು ಅಮೆರಿಕ ಅಧ್ಯಕ್ಷರು ನಿರ್ಧರಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಮಾಧ್ಯಮಗಳು ಅಧ್ಯಕ್ಷರ ಚಿಂತನೆಯ ಬಗ್ಗೆ ತಮಗೆ ಬೇಕಾದಂತೆ ಊಹಿಸುತ್ತಲೇ ಇರುತ್ತದೆ. ಅಧ್ಯಕ್ಷರು ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಕುರಿತು ಅವರೇ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ಇರಾನ್‌ನ ಉನ್ನತ ನಾಯಕತ್ವದ ಮೇಲೆ ಯಾವುದೇ ನೇರ ದಾಳಿಯು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಬಹುದು. ಇದು ಮಧ್ಯಪ್ರಾಚ್ಯದ ಸ್ಥಿರತೆ ಮೇಲೆ ಪರಿಣಾಮ ಬೀರಬಹುದು.

ಒಪ್ಪಂದವನ್ನು ನಡೆಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಗೆ ಎಚ್ಚರಿಕೆಯನ್ನು ನೀಡುತ್ತಲೇ ಇದ್ದಾರೆ. ಗುರುವಾರ ಅವರು ಟೆಹ್ರಾನ್ ಪರಮಾಣು ಒಪ್ಪಂದಕ್ಕೆ ಒಪ್ಪಿಕೊಳ್ಳಬೇಕು. ಇಲ್ಲವಾದರೆ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.

ಯುಎಸ್ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ಮಾತುಕತೆಗಳನ್ನು ಮುಂದುವರಿಸಲಾಗಿದೆ. ಇರಾನ್ ಮೇಲೆ ಅಮೆರಿಕ ದಾಳಿ ನಡೆಸಬಹುದು ಎನ್ನುವ ವದಂತಿಗಳ ನಡುವೆ 2003 ರ ಇರಾಕ್ ಯುದ್ಧದ ಅನಂತರ ಯುಎಸ್ ಮಧ್ಯಪ್ರಾಚ್ಯಕ್ಕೆ ತನ್ನ ಅತಿದೊಡ್ಡ ವಾಯು ಸೇನೆಯನ್ನು ನಿಯೋಜಿಸುತ್ತಿದೆ. ಇದರಲ್ಲಿ ಸುಧಾರಿತ ಫೈಟರ್ ಜೆಟ್‌ಗಳಾದ ಎಫ್-35ಎಸ್, ಎಫ್-22ಎಸ್, ಎಫ್-15ಎಸ್ ಮತ್ತು ಎಫ್ -16ಎಸ್ ಜೊತೆಗೆ ಕಮಾಂಡ್ ಅಂಡ್ ಕಂಟ್ರೋಲ್ ವಿಮಾನಗಳು ಮತ್ತು ಬಲವರ್ಧಿತ ವಾಯು ರಕ್ಷಣಾ ವ್ಯವಸ್ಥೆಗಳು ಸೇರಿವೆ.

ಗ್ಯಾಲೇರಿಯಾ ಮಾಲ್‌ನಲ್ಲಿ ಈ ತಿಂಗಳಲ್ಲಿ ಪೋಷಕರಿಗೆ ಆಹ್ವಾನ

ಯುಎಸ್ ನೌಕಾಪಡೆಯು ಪ್ರಸ್ತುತ ಮಧ್ಯಪ್ರಾಚ್ಯ ಮತ್ತು ಪೂರ್ವ ಮೆಡಿಟರೇನಿಯನ್‌ನಲ್ಲಿದ್ದು ಇದು 13 ಹಡಗುಗಳನ್ನು ಹೊಂದಿದೆ. ಅವುಗಳಲ್ಲಿ ವಿಮಾನವಾಹಕ ನೌಕೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಮತ್ತು ಒಂಬತ್ತು ಕ್ಷಿಪಣಿ ಸಮರ್ಥ ವಿಧ್ವಂಸಕ ನೌಕೆಗಳು ಸೇರಿವೆ. ಎರಡನೇ ವಾಹಕ ನೌಕೆ ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್ ಕೂಡ ಅಲ್ಲಿಗೆ ಧಾವಿಸುತ್ತಿದೆ.