80 ವರ್ಷದ ವೃದ್ಧೆ ಮೇಲೆ ಅತ್ಯಾಚಾರಗೈದ 28 ವರ್ಷದ ಕಾಮಾಂಧ
ಶಾರೀರಿಕ, ಮಾನಸಿಕವಾಗಿ ದುರ್ಬಲಳು, ಆಕೆಯ ಪಾಲಿಗೆ ಇನ್ನು ಉಳಿದಿರುವುದು ಕೆಲವೇ ದಿನಗಳು, ತನ್ನ ಅಜ್ಜಿ, ತಾಯಿಗೆ ಸಮಾನಳಾದವಳು ಎಂಬುದನ್ನು ಕೂಡ ನೋಡದ ಕಾಮಾಂಧನೊಬ್ಬ 80 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
-
ಉತ್ತರಪ್ರದೇಶ: ನೆರೆ ಮನೆಯ ವೃದ್ಧೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ (phyisical abuse) ಎಸಗಿರುವ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ. ದೈಹಿಕ, ಮಾನಸಿಕವಾಗಿ ದುರ್ಬಲಳು, ಆಕೆಯ ಪಾಲಿಗೆ ಇನ್ನು ಉಳಿದಿರುವುದು ಕೆಲವೇ ದಿನಗಳು, ತನ್ನ ಅಜ್ಜಿ, ತಾಯಿಗೆ ಸಮಾನಳಾದವಳು ಎಂಬುದನ್ನು ಕೂಡ ನೋಡದ ಕಾಮಾಂಧನೊಬ್ಬ 80 ವರ್ಷದ ವೃದ್ಧೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಹತ್ರಾಸ್ (Hathras) ನಲ್ಲಿ ನಡೆದಿದೆ. ವೃದ್ಧ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ 28 ವರ್ಷದ ಯುವಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಹತ್ರಾಸ್‌ನಲ್ಲಿ ಸೋಮವಾರ ವೃದ್ಧ ಮಹಿಳೆಯ ಮೇಲೆ ಆಕೆಯ ನಿವಾಸದಲ್ಲೇ ನೆರೆಮನೆಯ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಹೋಗಿದ್ದಾನೆ. ಘಟನೆಯ ಬಳಿಕ ಮಾಹಿತಿ ತಿಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಮತ್ತೆ ವಿಳಂಬ? ಹವಾಮಾನ ಇಲಾಖೆ ಹೇಳಿದ್ದೇನು?
ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ 80 ವರ್ಷದ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಆಕೆಯ ಕೋಣೆಗೆ ನುಗ್ಗಿದ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಹಾಯಕ್ಕಾಗಿ ಆಕೆಯ ಕೂಗು ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ರಕ್ತಸ್ರಾವದಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ಈ ಕುರಿತು ಮಾಹಿತಿ ನೀಡಿದ ಸದರ್ ವೃತ್ತ ಅಧಿಕಾರಿ ಹಿಮಾಂಶು ಮಾಥುರ್, ವೃದ್ಧೆಯ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ಪರೀಕ್ಷೆಯ ವರದಿ ಮತ್ತು ಮಹಿಳೆಯ ಕುಟುಂಬ ಸಲ್ಲಿಸಿದ ಔಪಚಾರಿಕ ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ
ಮಸೀದಿ ಆವರಣದೊಳಗೆ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಸೀದಿಯ ಧರ್ಮಗುರುವಿಗೆ ಮುಂತಜಿರ್ ಆಲಂಗೆ ಉತ್ತರ ಪ್ರದೇಶದ ಹಮೀರ್‌ಪುರದ ವಿಶೇಷ ಪೋಕ್ಸೋ ನ್ಯಾಯಾಲಯ 26,000 ರುಪಾಯಿ ದಂಡದೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2023ರ ನವೆಂಬರ್ 29ರ ಬೆಳಗ್ಗೆ ಕುರಾರಾ ಪೊಲೀಸ್ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 11 ವರ್ಷದ ಬಾಲಕಿ ಮತ್ತು ಆಕೆಯ 10 ವರ್ಷದ ಸಹೋದರ ಆಲಂ ದಿನನಿತ್ಯದ ಪಾಠಕ್ಕಾಗಿ ಗ್ರಾಮದ ಮಸೀದಿಗೆ ಹೋಗುತ್ತಿದ್ದರು.
ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಸೇಡು; ಸರ್ಕಾರಿ ಕಚೇರಿಯ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ ಗುಮಾಸ್ತ
ತರಗತಿ ಮುಗಿದ ಬಳಿಕ ಮೌಲ್ವಿ ಮುಂತಜಿರ್ ಆಲಂ ಇತರ ಮಕ್ಕಳನ್ನು ಬೇಗನೆ ಮನೆಗೆ ಕಳುಹಿಸಿ ಬಾಲಕಿಯ ಸಹೋದರನಿಗೆ ಹೊರಗಿದ್ದ ಪಾತ್ರೆಗಳನ್ನು ತೊಳೆದು, ನೆಲ ಗುಡಿಸುವಂತೆ ಆದೇಶಿಸಿದ್ದ. ಬಾಲಕಿ ಒಬ್ಬಂಟಿಯಾಗಿದ್ದಾಗ ಆಕೆಯನ್ನು ಬಲವಂತವಾಗಿ ಹಾಸಿಗೆಗೆ ಎಳೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದ. ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಬಂದು ಅಜ್ಜಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಈ ಕುರಿತು ಕುರಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.