ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುವುದಾಗಿ ವಂಚನೆ; ಟೆಕ್ಕಿ ದಂಪತಿಗೆ ವಂಚಿಸಿದ್ದು ಬರೋಬ್ಬರಿ 14 ಕೋಟಿ ರೂ.

Fraud Case: ಪುಣೆಯಲ್ಲಿ ನಡೆದ ಪ್ರಕರಣದಲ್ಲಿ ಟೆಕ್ಕಿಯೊಬ್ಬರು ನಕಲಿ ಆಧ್ಯಾತ್ಮಿಕ ಚಿಕಿತ್ಸೆಗಾರನಿಂದ 14 ಕೋಟಿ ರೂ. ವಂಚಿಸಲ್ಪಟ್ಟಿದ್ದಾರೆ. ಆ ವ್ಯಕ್ತಿ ತನ್ನ ಅಸ್ವಸ್ಥ ಪುತ್ರಿಯರ ಚಿಕಿತ್ಸೆಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಆರೋಪಿಗೆ ಹಣ ನೀಡಿದ್ದರು. ಆರೋಪಿಯು ಆತ್ಮೀಯ ಶಕ್ತಿ ಮತ್ತು ವಿಧಿವಿಧಾನಗಳ ಮೂಲಕ ಚಿಕಿತ್ಸೆ ನೀಡುತ್ತೇನೆ ಎಂದು ಭರವಸೆ ನೀಡಿ ಮೋಸ ಮಾಡಿದ್ದಾನೆಂದು ವರದಿಯಾಗಿದೆ.

ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುವುದಾಗಿ 14 ಕೋಟಿ ರೂ. ವಂಚನೆ

ಚಿಕಿತ್ಸೆ ನೆಪದಲ್ಲಿ ಟೆಕ್ಕಿ ದಂಪತಿಯಿಂದ14 ಕೋಟಿ ರೂ. ದೋಚಿದ ವಂಚಕ (ಸಾಂದರ್ಭಿಕ ಚಿತ್ರ). -

Priyanka P
Priyanka P Nov 8, 2025 6:03 PM

ಮುಂಬೈ: ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಇಬ್ಬರು ಹೆಣ್ಣುಮಕ್ಕಳಿಗೆ ಚಿಕಿತ್ಸೆ ನೀಡಿದ್ದರೂ ಗುಣಮುಖರಾಗದೆ ಹತಾಶರಾಗಿದ್ದ ಪುಣೆ ಮೂಲದ ಐಟಿ ಎಂಜಿನಿಯರ್ ಮತ್ತು ಅವರ ಪತ್ನಿ ಏಳು ವರ್ಷಗಳ ಅವಧಿಯಲ್ಲಿ ಸುಮಾರು 14 ಕೋಟಿ ರೂ. ವಂಚನೆಗೊಳಗಾಗಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುವುದಾಗಿ ನಂಬಿಸಿದ್ದ ನಕಲಿ ಆಧ್ಯಾತ್ಮಿಕ ಚಿಕಿತ್ಸಕ (Fake Spiritual Healer) ಈ ಮೋಸ ಮಾಡಿದ್ದಾನೆ.

ಪತಿ ಒಂದು ದಶಕಕ್ಕೂ ಹೆಚ್ಚು ಕಾಲ ಇಂಗ್ಲೆಂಡ್‌ನಲ್ಲಿ ಕೆಲಸ ಮಾಡಿ, 2010ರಲ್ಲಿ ಪುಣೆ ಮೂಲದ ದಂಪತಿ ಭಾರತಕ್ಕೆ ಮರಳಿದರು. 2018ರಲ್ಲಿ ಅವರು ಆಧ್ಯಾತ್ಮಿಕ ಚಿಕಿತ್ಸಕ ಎಂದು ಕರೆಯಲ್ಪಡುವ ಒಬ್ಬ ಗುರುವನ್ನು ಭೇಟಿಯಾದರು. ಆತ ಹೆಣ್ಣುಮಕ್ಕಳು ಮತ್ತು ಅವರ ಆಸ್ತಿಗಳ ಮೇಲೆ ಪರಿಣಾಮ ಬೀರುವ ನಕಾರಾತ್ಮಕ ಪ್ರಭಾವಗಳಿಂದ ಕುಟುಂಬವನ್ನು ಮುಕ್ತಗೊಳಿಸುವುದಾಗಿ ಸುಳ್ಳು ಭರವಸೆ ನೀಡಿದ್ದ. ದಂಪತಿ ಆತನ ಮಾತನನು ನಂಬಿದ್ದರು.

ಇದನ್ನೂ ಓದಿ: Viral News: ಗ್ರೀಕ್ ದೇವತೆಗಳು ಬಾಡಿ ಬಿಲ್ಡರ್‌ಗಳಂತಿದ್ದರೆ, ಹಿಂದೂ ದೇವರುಗಳು ಮಾತ್ರ... ಅರೇ! ಇದೇನಿದು ಹೊಸ ವಿವಾದ?

ಇದನ್ನು ನಂಬಿದ ಎಂಜಿನಿಯರ್ ಮತ್ತು ಅವರ ಪತ್ನಿ ಇಂಗ್ಲೆಂಡ್‌ನಲ್ಲಿರುವ ಮನೆ, ಪುಣೆಯಲ್ಲಿ ಒಂದು ಫ್ಲ್ಯಾಟ್‌ ಮತ್ತು ಕೊಂಕಣದಲ್ಲಿ ಕೃಷಿಭೂಮಿಯನ್ನು ಮಾರಿ, ಉಳಿತಾಯ ಮತ್ತು ಭವಿಷ್ಯ ನಿಧಿಗಳನ್ನು ಖಾಲಿ ಮಾಡಿದರು ಮತ್ತು ಸಂಬಂಧಿಕರ ಆಸ್ತಿಗಳನ್ನು ಅಡವಿಟ್ಟು ಸಾಲವನ್ನೂ ಪಡೆದರು. ಆಧ್ಯಾತ್ಮಿಕ ಚಿಕಿತ್ಸಕ ಎಂದು ಕರೆಯಲ್ಪಟ್ಟಾತನ ಆಜ್ಞೆಯ ಮೇರೆಗೆ ಇವೆಲ್ಲವನ್ನೂ ಮಾಡಿದರು. ಆತನ ಹೆಸರಿಗೆ ಹಣವನ್ನು ವರ್ಗಾಯಿಸಿದರೂ, ಹೆಣ್ಣುಮಕ್ಕಳ ಆರೋಗ್ಯ ಮಾತ್ರ ಬದಲಾಗದೆ ಹಾಗೆಯೇ ಉಳಿದಿದೆ.

ತಾವು ಮೋಸ ಹೋಗಿದ್ದೇವೆಂದು ತಿಳಿದ ಕೂಡಲೇ 2025ರ ನವೆಂಬರ್ ಆರಂಭದಲ್ಲಿ ದಂಪತಿ ಪುಣೆ ನಗರ ಪೊಲೀಸರಿಗೆ ದೂರು ಸಲ್ಲಿಸಿದರು. ಈ ಸಂಬಂಧ ಸೈಬರ್ ಮತ್ತು ಆರ್ಥಿಕ ಅಪರಾಧಗಳ ವಿಭಾಗ ತನಿಖೆ ಕೈಗೆತ್ತಿಕೊಂಡಿದೆ. ಕುಟುಂಬದಿಂದ ಭಾರಿ ಮೊತ್ತವನ್ನು ಕಸಿದುಕೊಳ್ಳಲು ಭಾವನಾತ್ಮಕ ಕುಶಲತೆಯನ್ನು ಬಳಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ಹೊಸ ವಂಚನೆ

ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆ ಸೈಬರ್ ಕ್ರೈಮ್ ಅಪರಾಧಗಳ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ವಾಟ್ಸ್‌ಆ್ಯಪ್‌ ಮೂಲಕ ಹೊಸ ಬಗೆಯ ವಂಚನೆಯೊಂದು ಇದೀಗ ಜೋರಾಗಿ ನಡೆಯುತ್ತಿದ್ದು, ಕೋಟ್ಯಂತರ ರೂಪಾಯಿಗಳನ್ನು ಮೋಸ ಹೋಗುವವರು ಕಳೆದುಕೊಳ್ಳುತ್ತಿದ್ದಾರೆ. ಈ ವಂಚನೆಗೆ ನಕಲಿ ಆರ್‌ಟಿಒ ಚಲನ್‌ಗಳನ್ನು ಬಳಸಲಾಗುತ್ತಿದೆ. ಹಲವು ಜನರು ಅಪರಿಚಿತ ಸಂಖ್ಯೆಗಳಿಂದ ನಕಲಿ RTO ಚಲನ್ ಸಂದೇಶಗಳನ್ನು ಸ್ವೀಕರಿಸುತ್ತಿದ್ದು, ಅವರ ವಾಹನದ ನಂಬರ್‌ಗೆ ಇದನ್ನು ನೀಡಲಾಗುತ್ತಿದೆ. ನಾಗರಿಕರು ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಈ ನಕಲಿ ಚಲನ್‌ಗಳು ವಾಟ್ಸ್‌ಆ್ಯಪ್‌ ಬರುತ್ತಿದ್ದು, ನಿಮ್ಮ ವಾಹನದ ನಂಬರ್‌ ಮೇಲೆ ಟ್ರಾಫಿಕ್‌ ಪೊಲೀಸ್‌ ದಂಡವನ್ನು ವಿಧಿಸಲಾಗಿದೆ ಎಂದು ಸೂಚಿಸುತ್ತದೆ. ನಿಮ್ಮಿಂದ ಅವರ ಖಾತೆಗಳಿಗೆ ಹಣ ಕಟ್ಟಿಸಿಕೊಳ್ಳುತ್ತಾರೆ. ಈ ಸಂದೇಶ ಅಧಿಕೃತ ಇಲಾಖಾ ಆದೇಶ ಎಂಬಂತೆಯೇ ಕಾಣುತ್ತದೆ. ಅಟ್ಯಾಚ್‌ಮೆಂಟ್‌ ಫೈಲನ್ನು ಸಹ ಇದು ಹೊಂದಿರುತ್ತದೆ. ಆದರೆ ಮೋಸ ಹೋದ ಬಳಿಕವೇ ಗೊತ್ತಾಗುತ್ತದೆ.