ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಗ್ರೀಕ್ ದೇವತೆಗಳು ಬಾಡಿ ಬಿಲ್ಡರ್‌ಗಳಂತಿದ್ದರೆ, ಹಿಂದೂ ದೇವರುಗಳು ಮಾತ್ರ... ಅರೇ! ಇದೇನಿದು ಹೊಸ ವಿವಾದ?

Hindu gods towards muscular bodies: ಹಿಂದೂ ದೇವತೆಗಳ ವಿಗ್ರಹಗಳು ಸಾಮಾನ್ಯವಾಗಿ ದುಂಡಗಿನ ಅಥವಾ ದಪ್ಪ, ದೊಡ್ಡ ಹೊಟ್ಟೆಯಿಂದ ರಚಿತವಾಗಿರುತ್ತದೆ. ಆದರೆ, ಗ್ರೀಕ್ ದೇವತೆಗಳ ವಿಗ್ರಹಗಳು ಬಾಡಿ ಬಿಲ್ಡರ್‌ಗಳಂತಿರುತ್ತವೆ. ಇದು ಯಾಕೆ ಹೀಗೆ ಎಂಬಂತಹ ಹೊಸ ಚರ್ಚೆಯೊಂದು ರೆಡ್ಡಿಟ್‌ನಲ್ಲಿ ಪ್ರಾರಂಭವಾಗಿದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ಹಿಂದೂ ದೇವರ ಬಗ್ಗೆ ಅವಹೇಳನ! ಏನಿದು ವಿವಾದ?

-

Priyanka P
Priyanka P Nov 7, 2025 11:33 AM

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಸದಾ ಒಂದಿಲ್ಲೊಂದು ಚರ್ಚೆ ಶುರುವಾಗುತ್ತದೆ. ಇದೀಗ ಹಿಂದೂ ಹಾಗೂ ಗ್ರೀಕ್ ಶಿಲ್ಪಕಲೆಗಳ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಹಿಂದೂ ಧರ್ಮದ ದೇವತೆಗಳನ್ನು (Hindu God) ಸಾಮಾನ್ಯವಾಗಿ ದಪ್ಪ ಅಥವಾ ದೊಡ್ಡ ಹೊಟ್ಟೆಯ ದೇಹದೊಂದಿಗೆ ಚಿತ್ರಿಸಲಾಗುತ್ತದೆ. ಆದರೆ, ಗ್ರೀಕ್ ಶಿಲ್ಪಗಳಲ್ಲಿ (Greek sculptures) ದೇವತೆಗಳು ಸೊಗಸಾದ, ಸ್ನಾಯುಬಲದ ದೇಹ ಹೊಂದಿರುತ್ತಾರೆ. ಇದರ ಹಿಂದಿನ ಕಾರಣವೇನು? ಎಂಬ ಪ್ರಶ್ನೆಯಿಂದ ರೆಡ್ಡಿಟ್‍ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ಚರ್ಚೆಯಲ್ಲಿ ಜನರು ಕಲೆ, ಸಂಸ್ಕೃತಿ ಮತ್ತು ದೈವೀ ಸೌಂದರ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ (Viral News).

ಕೆಲವು ವಿಮರ್ಶಕರು ಇದನ್ನು ವ್ಯಂಗ್ಯವಾಗಿ ಭಾರತೀಯ ದೇವರುಗಳ ಮೇಲೆ ಡಿಸಿ-ಮಾರ್ವೆಲ್ ಪ್ರಭಾವ ಎಂದು ಕರೆದಿದ್ದಾರೆ. ಹಿಂದೂ ದೇವರುಗಳ ಚಿತ್ರಗಳು ಮತ್ತು ವಿಗ್ರಹಗಳು ಎಂದಿಗೂ ಸಿಕ್ಸ್ ಪ್ಯಾಕ್ ಹೊಂದಿರುವ ದೇಹವನ್ನು ಹೊಂದಿಲ್ಲ. ಗ್ರೀಕ್ ಅಥವಾ ರೋಮನ್ ಪ್ರತಿಮೆಗಳಿಗೆ ಹೋಲಿಸಿದರೆ, ಭಾರತೀಯ ದೇವಾಲಯದ ಶಿಲ್ಪಗಳು ಮತ್ತು ಕೆತ್ತನೆಗಳು ಸಾಮಾನ್ಯವಾಗಿ ಗೋಚರಿಸುವ ಸ್ನಾಯುಗಳನ್ನು ಹೊಂದಿರುವುದಿಲ್ಲ. ಇದೇನು ಹಾಗೆ ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಅಚ್ಚರಿಪಟ್ಟರು. ಅದು ಸುದೀರ್ಘ ಚರ್ಚೆಯನ್ನು ಪ್ರಾರಂಭಿಸಿತು.

ಇಲ್ಲಿಯವರೆಗೆ ಪತ್ತೆಯಾಗಿರುವ ಹರಪ್ಪ ಪ್ರತಿಮೆಗಳು ಸಹ ಬಹಳ ಕಡಿಮೆ ಸಂಖ್ಯೆಯಲ್ಲಿದ್ದರೂ, ಅವು ಕೂಡ ಒಂದು ರೀತಿಯ ಹೊಟ್ಟೆಯನ್ನು ತೋರಿಸುತ್ತವೆ ಎಂದು ಮತ್ತೊಬ್ಬರು ಉತ್ತರಿಸಿದರು. ಹೆಚ್ಚಿನ ಚೀನೀ ಶಾಸ್ತ್ರೀಯ ಚಿತ್ರಣಗಳು ಮಡಕೆ ಹೊಟ್ಟೆಯನ್ನು ಹೊಂದಿರುವ ಜನರನ್ನು ಸಹ ಚಿತ್ರಿಸುತ್ತವೆ. ಇದು ಸಮೃದ್ಧಿಯ ಸಂಕೇತವಾಗಿದೆ. ಗಣೇಶ ಮತ್ತು ಲಾಫಿಂಗ್ ಬುದ್ಧವು ಈ ವ್ಯಾಖ್ಯಾನಕ್ಕೆ ಉತ್ತರದಂತಿದೆ.

ಇದನ್ನೂ ಓದಿ: Viral Post: ಇಷ್ಟು ದಿನ ಎಲ್ಲಾರಿಗೂ ಸಲಹೆ ನೀಡುತ್ತಿದ್ದ AI ಇದೀಗ ಮನುಷ್ಯರ ಬಳಿಯೇ ಸಲಹೆ ಕೇಳ್ತಿದೆ...!

ಮಹಾಭಾರತದಲ್ಲಿ, ಭೀಮನನ್ನು ವೃಕೋದರ ಎಂದು ವಿವರಿಸಲಾಗಿದೆ. ಅಂದರೆ ತೋಳದಂತೆ ಚಪ್ಪಟೆಯಾದ ಹೊಟ್ಟೆಯನ್ನು ಹೊಂದಿರುವುದು ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಇತರ ಬಳಕೆದಾರರು ಈ ತರ್ಕಕ್ಕೆ ವಿರುದ್ಧವಾಗಿ ಹೇಳಿದರು: ತೋಳದಂತೆ ಚಪ್ಪಟೆ ಹೊಟ್ಟೆ ಎಂದರ್ಥವಲ್ಲ, ಅವನ ಹಸಿವು ತೋಳದಂತಿತ್ತು ಎಂದರ್ಥ ಎಂದಿದ್ದಾರೆ. ವೃಕೋದರ ಎಂಬ ಪದಕ್ಕೆ ತೋಳದಂತೆ ಹಸಿವುಳ್ಳವನು ಮತ್ತು ಹೊಟ್ಟೆಬಾಕ ಎಂಬರ್ಥ ಇವೆ.

ಭಾರತೀಯ ಆಧ್ಯಾತ್ಮಿಕತೆಯಲ್ಲಿ, ವಿಶೇಷವಾಗಿ ಹಿಂದೂ ಸಂಸ್ಕೃತಿಯಲ್ಲಿ, ದೇಹವನ್ನು ಆತ್ಮವು ಆತ್ಮಸಾಕ್ಷಾತ್ಕಾರದಿಂದ ಮುಕ್ತವಾಗಬೇಕಾದ ಒಂದು ಪಾತ್ರೆಯೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇಹದ ಬಾಹ್ಯ ರೂಪ ಅಥವಾ ಸೌಂದರ್ಯಕ್ಕೆ ಅಲ್ಲಿ ಹೆಚ್ಚು ಮಹತ್ವವಿಲ್ಲ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ಭಾರತೀಯರು ಮತ್ತು ಪಾಶ್ಚಾತ್ಯರು ಸೌಂದರ್ಯದ ಭಾವನೆಗಳಲ್ಲಿ (aesthetics) ವಿಭಿನ್ನ ದೃಷ್ಟಿಕೋನ ಹೊಂದಿದ್ದಾರೆ ಎಂಬುದನ್ನು ಅವರು ಸೂಚಿಸಿದ್ದಾರೆ.

ಗ್ರೀಕ್ ಮತ್ತು ರೋಮನ್ ಕಲಾವಿದರು ಶಕ್ತಿಯುತ, ಸ್ನಾಯುಬಲದ ದೇಹವನ್ನು ಮತ್ತು ಹರಿವ ಬಟ್ಟೆಗಳನ್ನು ಸೌಂದರ್ಯದ ಚಿಹ್ನೆಯಾಗಿ ಚಿತ್ರಿಸುತ್ತಿದ್ದರು. ಅಂದರೆ ದೇಹದ ಬಲ ಮತ್ತು ಚಲನೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಆದರೆ, ಭಾರತೀಯ ಶಿಲ್ಪಕಲೆಯಲ್ಲಿ ಸ್ನಾಯುಗಳಿಗಿಂತ ಆಭರಣ, ಅಲಂಕಾರ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ದೇವತೆಗಳನ್ನು ಆಂತರಿಕ ಶಾಂತಿ, ದೈವತ್ವ ಮತ್ತು ಶ್ರದ್ಧೆಯನ್ನು ತೋರಿಸುವ ರೀತಿಯಲ್ಲಿ ಚಿತ್ರಿಸುತ್ತಾರೆ. ಭಾರತೀಯ ಮತ್ತು ಪಾಶ್ಚಾತ್ಯ ಕಲೆಗಳಲ್ಲಿ ಸೌಂದರ್ಯದ ಕಲ್ಪನೆಗಳು ಮತ್ತು ಕಲಾತ್ಮಕ ಆದ್ಯತೆಗಳು ಬೇರೆ ಬೇರೆಯಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ.

ಆಧುನಿಕ ಕಾಲದ ಪುರುಷ ಸೌಂದರ್ಯದ ಕಲ್ಪನೆಗಳು

ಭಾರತದಲ್ಲಿ ದೇಹದ ಗಾತ್ರ ಮತ್ತು ಸೌಂದರ್ಯದ ಕಲ್ಪನೆಗಳು ಕಾಲಾನಂತರದಲ್ಲಿ ಹೇಗೆ ಬದಲಾಗಿವೆ ಎಂಬುದನ್ನು ಪ್ರಸಿದ್ಧ ಪುರಾಣಶಾಸ್ತ್ರಜ್ಞ ದೇವದತ್ ಪಟ್ಟನಾಯಕ್ ತಮ್ಮ ಒಂದು ಅಂಕಣದಲ್ಲಿ ವಿವರಿಸಿದ್ದಾರೆ. ಹಿಂದಿನ ಶತಮಾನಗಳಲ್ಲಿ, ಶ್ರೀಮಂತರಿಗೆ ಮಾತ್ರ ತಿನ್ನಲು ಸಾಕಷ್ಟು ಆಹಾರವಿತ್ತು. ಆದ್ದರಿಂದ, ಬೊಜ್ಜು ಸಂಪತ್ತನ್ನು ಸೂಚಿಸುತ್ತಿತ್ತು. ಸ್ನಾಯುಗಳ ದೇಹವು ಶ್ರಮಕ್ಕೆ ಮತ್ತು ತೆಳ್ಳಗಿನ ದೇಹವು ಬಡತನಕ್ಕೆ ಸಂಬಂಧಿಸಿದೆ.

ಇದನ್ನೂ ಓದಿ: Viral Video: ಛೀ.. ಈತನೆಂಥಾ ನೀಚ! ಎಂಜಲು ಉಗುಳಿ ರೊಟ್ಟಿ ಮಾಡಿದ ಕಿಡಿಗೇಡಿ- ವಿಡಿಯೊ ಫುಲ್‌ ವೈರಲ್‌

ದೇವದತ್ ಪಟ್ನಾಯಕ್ ಅವರ ಪ್ರಕಾರ, ಗ್ರೀಕ್ ಕಲೆಯು ನಂತರ ಆಧುನಿಕ ಪುರುಷ ಸೌಂದರ್ಯದ ಕಲ್ಪನೆಗೆ ದೊಡ್ಡ ಪ್ರಭಾವ ಬೀರಿತು. ಅದಕ್ಕಾಗಿ ಇಂದಿನ ಕಾಲದಲ್ಲಿ, ಸ್ನಾಯುಗಳು ಸ್ಪಷ್ಟವಾಗಿ ಕಾಣುವ ದೇಹವನ್ನೇ ಶೂರತೆ ಮತ್ತು ವೀರತ್ವದ ಸಂಕೇತವಾಗಿ ತೋರಿಸಲಾಗುತ್ತದೆ. ಇದಕ್ಕೆ ಉದಾಹರಣೆಯಾಗಿ, ಇಂದಿನ ಹಿಂದೂ ದೇವತೆಗಳ ಪೋಸ್ಟರ್‌ಗಳಲ್ಲಿಯೂ ಕೂಡಾ ದೇವರನ್ನು ಸ್ನಾಯುಬಲದ ದೇಹದೊಂದಿಗೆ ಚಿತ್ರಿಸಲಾಗುತ್ತದೆ. ಹಾಗೆಯೇ ಪಾರಂಪರಿಕ ಹಿಂದೂ ಗ್ರಂಥಗಳಲ್ಲಿ ದೇವಿಯರನ್ನು ಸಾಮಾನ್ಯವಾಗಿ ಮೃದು, ವೃತ್ತಾಕಾರದ ದೇಹದೊಂದಿಗೆ ವರ್ಣಿಸಲಾಗುತ್ತದೆ. ಆದರೆ, ಪಾಶ್ಚಾತ್ಯ ಪ್ರಭಾವದಿಂದ ರೂಪುಬದ್ಧ ಆಕಾರಗಳಲ್ಲಿ ಚಿತ್ರಿಸಲಾಗಿದೆ.

ಗ್ರೀಕ್ ಕಲೆಯು ಪುರುಷ ಸೌಂದರ್ಯದ ಆಧುನಿಕ ಕಲ್ಪನೆಗಳನ್ನು ರೂಪಿಸಿತು. ಆದ್ದರಿಂದ ಇಂದು ಹಿಂದೂ ದೇವರುಗಳ ಪೋಸ್ಟರ್‌ಗಳಲ್ಲಿಯೂ ಸಹ ವೀರರನ್ನು ನಿರ್ದಿಷ್ಟ ಸ್ನಾಯುಗಳೊಂದಿಗೆ ಚಿತ್ರಿಸಲಾಗಿದೆ ಎಂದು ಪಟ್ಟನಾಯಕ್ ಹೇಳಿದ್ದಾರೆ. ಸಾಂಪ್ರದಾಯಿಕ ಹಿಂದೂ ಗ್ರಂಥಗಳು ಮೃದುವಾದ ದುಂಡಗಿನ ದೇಹವನ್ನು ಹೊಂದಿರುವ ದೇವತೆಗಳನ್ನು ವಿವರಿಸಿದರೆ, ಪಾಶ್ಚಿಮಾತ್ಯ ಪ್ರಭಾವವು ಮಹಿಳೆಯರನ್ನು ದೃಢವಾದ ಆಕಾರಗಳತ್ತ ತಳ್ಳಿದೆ.

ಪಟ್ಟನಾಯಕ್ ತಮ್ಮ ಯಕ್ಷನ ಹೊಟ್ಟೆ ಎಂಬ ಲೇಖನದಲ್ಲಿ ಕುಬೇರ ಮತ್ತು ಗಣೇಶನ ಉದಾಹರಣೆಗಳನ್ನು ನೀಡಿದ್ದಾರೆ. ಇಬ್ಬರಿಗೂ ದೊಡ್ಡ ಹೊಟ್ಟೆ ಇದ್ದು, ಅದು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಪುರುಷ ಸೌಂದರ್ಯದ ಆಧುನಿಕ ಕಲ್ಪನೆಗಳು ಗ್ರೀಕ್ ಶಿಲ್ಪಕಲೆಯಲ್ಲಿ ಬೇರುಗಳನ್ನು ಹೊಂದಿವೆ. ಅಲ್ಲಿ ವೀರರನ್ನು ಉತ್ತಮವಾದ ದೇಹಗಳೊಂದಿಗೆ ಚಿತ್ರಿಸಲಾಗುತ್ತಿತ್ತು. ಪ್ರತಿಯೊಂದು ಸ್ನಾಯು ಕಲಾತ್ಮಕ ನಿಖರತೆಯನ್ನು ಚಿತ್ರಿಸುತ್ತದೆ. ಇಂದಿನ ಬಾಲಿವುಡ್ ನಾಯಕರು ಗ್ರೀಕ್ ದೇವರುಗಳನ್ನು ಅನುಕರಿಸುತ್ತಾರೆ ಎಂದು ಪಟ್ಟನಾಯಕ್ ಬರೆದಿದ್ದಾರೆ.

ಇಂದಿನ ಕಾಲದ ಹನುಮಂತ, ರಾಮ ಮತ್ತು ಶಿವನ ಪೋಸ್ಟರ್‌ ಚಿತ್ರಗಳಲ್ಲಿಯೂ ಕೂಡ ಅವರನ್ನು ಬಾಡಿ ಬಿಲ್ಡರ್‌ಗಳಂತಿರುವ ಸ್ನಾಯುಬಲದ ದೇಹದೊಂದಿಗೆ ಚಿತ್ರಿಸಲಾಗುತ್ತದೆ. ಇದು ರಾಜಾ ರವಿವರ್ಮ ಅವರು ಚಿತ್ರಿಸಿದ ಮೃದು, ನಾಜೂಕಾದ ಮುಖಭಾವನೆಗಳು ಮತ್ತು ದೇಹದ ರೂಪಗಳಿಂದ ತುಂಬಾ ವಿಭಿನ್ನವಾಗಿದೆ.