Dowry Case: ನೋಯ್ಡಾ ವರದಕ್ಷಿಣೆ ಕೊಲೆ ಪ್ರಕರಣ; ಮೂವರ ಬಂಧನ
ಗ್ರೇಟರ್ ನೊಯ್ಡಾದಲ್ಲಿ (Dowry Case) ವರದಕ್ಷಿಣೆ ಆಸೆಗೆ ಪತಿಯೇ ಪತ್ನಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಪೊಲೀಸರು ಈ ವರೆಗೆ ಮೂವರನ್ನು ಬಂಧಿಸಿದ್ದಾರೆ. ನಿಕ್ಕಿ ಭಾಟಿಯ ಸೋದರ ಮಾವ ರೋಹಿತ್ ಭಾಟಿಯನ್ನು ಬಂಧಿಸಲಾಗಿದೆ. ಹತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದ ಗೇಟರ್ ನೊಯ್ಡಾದ ಸಿರ್ಸಾ ಗ್ರಾಮದ ವಿಪಿನ್ ಎಂಬಾತನಿಗೆ ನಿಕ್ಕಿಯನ್ನು ಮದುವೆ ಮಾಡಿಕೊಡಲಾಗಿತ್ತು.


ದೆಹಲಿ: ಗ್ರೇಟರ್ ನೊಯ್ಡಾದಲ್ಲಿ (Dowry Case) ವರದಕ್ಷಿಣೆ ಆಸೆಗೆ ಪತಿಯೇ ಪತ್ನಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಪೊಲೀಸರು ಈ ವರೆಗೆ ಮೂವರನ್ನು ಬಂಧಿಸಿದ್ದಾರೆ. ನಿಕ್ಕಿ ಭಾಟಿಯ ಸೋದರ ಮಾವ ರೋಹಿತ್ ಭಾಟಿಯನ್ನು ಬಂಧಿಸಲಾಗಿದೆ. 36 ಲಕ್ಷ ರೂ. ವರದಕ್ಷಿಣೆ ಬೇಡಿಕೆಯ ಆರೋಪದ ಮೇಲೆ ನಿಕ್ಕಿ ಭಾಟಿಯ ಕೊಲೆ ಪ್ರಕರಣದಲ್ಲಿ ಇದು ಮೂರನೇ ಬಂಧನವಾಗಿದೆ. ನಿಕ್ಕಿಯ ಪತಿ ವಿಪಿನ್ ಭಾಟಿ ಮತ್ತು ಅತ್ತೆ ದಯಾ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ವಿಪಿನ್ ತಂದೆ ಸತ್ಯವೀರ್ ಇನ್ನೂ ತಲೆಮರೆಸಿಕೊಂಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಇನ್ನೂ ನಡೆಯುತ್ತಲಿದೆ.
ತವರು ಮನೆಯಿಂದ 36 ಲಕ್ಷ ರೂ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಗಂಡ ಮತ್ತು ಅತ್ತೆ ಸೇರಿಕೊಂಡು 26 ವರ್ಷದ ನಿಕ್ಕಿ ಎಂಬ ಮಹಿಳೆಗೆ ಪುಟ್ಟ ಮಗನ ಎದುರೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದರು. ನಿಕ್ಕಿ ಭಾಟಿಯ ಪತಿ ವಿಪಿನ್ ಭಾಟಿ, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅವರ ಕಾಲಿಗೆ ಗುಂಡೇಟು ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಕ್ಕಿಯನ್ನು ಸುಡಲು ಬಳಸುವ ಸುಡುವ ದ್ರವವನ್ನು ಹೊಂದಿರುವ ಬಾಟಲಿಯನ್ನು ಪಡೆಯಲು ಇಂದು ವಿಪಿನ್ ನನ್ನು ಅವರ ಮನೆಗೆ ಪೊಲೀಸರು ಕರೆದೊಯ್ದರು. ಆಗ ವಿಪಿನ್ ಪೊಲೀಸರ ಪಿಸ್ತೂಲ್ ಕಸಿದುಕೊಂಡು ಗುಂಡು ಹಾರಿಸಿದ್ದ. ಆತನನ್ನು ಬಂಧಿಸಲು ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ.
ಹತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದ ಗೇಟರ್ ನೊಯ್ಡಾದ ಸಿರ್ಸಾ ಗ್ರಾಮದ ವಿಪಿನ್ ಎಂಬಾತನಿಗೆ ನಿಕ್ಕಿಯನ್ನು ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದ ಗಂಡ ಮತ್ತು ಅತ್ತೆ ಪ್ರತಿದಿನ ನಿಕ್ಕಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರು. ಕಳೆದ ಗುರುವಾರ ವರದಕ್ಷಿಣೆ ವಿಚಾರವಾಗಿ ಕಲಹವಾಗಿದೆ. ಹಣ ತರಲು ನಿರಾಕರಿಸಿದ ನಿಕ್ಕಿ ಮೇಲೆ ಹಲ್ಲೆ ನಡೆಸಿದ ಗಂಡ ವಿಪಿನ್ ಮತ್ತವರ ತಾಯಿ ಸೇರಿಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನಿಕ್ಕಿ ಸಾವನ್ನಪ್ಪಿದರು.
ಈ ಸುದ್ದಿಯನ್ನೂ ಓದಿ: Crime News: ಜಾಮೀನಿನ ಮೇಲೆ ಬಂದು ಕೊಲೆ ಆರೋಪಿ ಅತ್ತಿಗೆಯನ್ನು ಕೊಂದ; ಕಾರಣವೇನು?
ಮಗಳನನ್ನು ಕೊಂದ ಪಾಪಿಯನ್ನು ಎನ್‌ಕೌಂಟರ್ ಮಾಡಿ ಕೊಲ್ಲಬೇಕೆಂದು ಮೃತ ನಿಕ್ಕಿ ತಂದೆ ಕಣ್ಣೀರು ಹಾಕಿದ್ದಾರೆ. ಮಗಳ ಗಂಡ ವಿಪಿನ್ ಭಾಟಿ, ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದ. ಆದ್ದರಿಂದ ನಿಕ್ಕಿಯನ್ನು ದೂರವಿಡಲು ಬಯಸುತ್ತಿದ್ದ. ವಿಪಿನ್ ಭಾಟಿ ಹಾಗೂ ಆತನ ಕುಟುಂಬಸ್ಥರು ಕೊಲೆಗಾರರು ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ.