ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಶಾನ್‌ ಮಾಲಿಂಗಾಗೆ ಭುಜದ ಗಾಯ; ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಗಾಯದ ಭೀತಿ ಎದುರಾಗಿದೆ. ಯುವ ವೇಗದ ಬೌಲರ್‌ ಇಶಾನ್‌ ಮಾಲಿಂಗಾ ಅವರು ಗಾಯಕ್ಕೆ ತುತ್ತಾಗಿದ್ದಾರೆ. ಹಾಗಾಗಿ ಅವರು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸವುದು ಅನುಮಾನವಿದೆ. ಅವರ ವೈದ್ಯಕೀಯ ವರದಿಗಳು ಹೊರಬಂದ ಬಳಿಕ ಅವರ ವಿಶ್ವಕಪ್‌ ಭವಿಷ್ಯ ಬಹಿರಂಗವಾಗಲಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಇಶಾನ್‌ ಮಾಲಿಂಗಾಗೆ ಗಾಯ!

ಶ್ರೀಲಂಕಾ ತಂಡದ ವೇಗದ ಬೌಲರ್‌ ಇಶಾನ್‌ ಮಾಲಿಂಗಾಗೆ ಗಾಯ. -

Profile
Ramesh Kote Feb 2, 2026 9:34 PM

ನವದೆಹಲಿ: ಬಹುನಿರೀಕ್ಷಿತ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಗೆ ತಯಾರಿ ನಡೆಸುತ್ತಿದ್ದ ಶ್ರೀಲಂಕಾ (Sri lanka) ತಂಡಕ್ಕೆ ಅನಿರೀಕ್ಷಿತ ಹಿನ್ನಡೆ ಎದುರಾಗಿದೆ. ಇಂಗ್ಲೆಂಡ್ ವಿರುದ್ಧ ಪಲ್ಲೆಕೆಲೆಯಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಯುವ ವೇಗದ ಬೌಲರ್ ಇಶಾನ್ ಮಾಲಿಂಗಾ (Eshan Malinga) ಭುಜದ ಗಾಯಕ್ಕೆ ಒಳಗಾಗಿದ್ದಾರೆ. 24ರ ವಯಸ್ಸಿನ ಈ ವೇಗಿ ಶ್ರೀಲಂಕಾ ತಂಡದ ಉದಯೋನ್ಮುಖ ತಾರೆಗಳಲ್ಲಿ ಒಬ್ಬರಾಗಿದ್ದು, ಗಾಯದ ಕಾರಣದಿಂದಾಗಿ ಮುಂದಿನ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಇನ್ನು ಕೇವಲ ಒಂದು ವಾರ ಮಾತ್ರ ಅವಧಿ ಇದೆ. ಹಾಗಾಗಿ ಇದೀಗ ಈ ಅವಧಿಯ ಒಳಗೆ ಅವರಿಗೆ ಸಮಯದ ವಿರುದ್ಧ ಪೈಪೋಟಿ ಎದುರಾಗಿದೆ. ತಂಡದ ವೈದ್ಯಕೀಯ ಸಿಬ್ಬಂದಿ ಅವರ ಗಾಯದ ಗಂಭೀರತೆಯನ್ನು ಮೌಲ್ಯಮಾಪನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರ ಫಿಟ್ನೆಸ್ ಸ್ಥಿತಿಯ ಕುರಿತು ಸ್ಪಷ್ಟತೆ ಸಿಗಲಿದೆ.

ಮಳೆ ವಿಳಂಬದ ಬಳಿಕ ಇಂಗ್ಲೆಂಡ್ ತಂಡದ ರನ್‌ಚೇಸ್‌ನ ಎಂಟನೇ ಓವರ್‌ನಲ್ಲಿ ಇಶಾನ್ ಮಲಿಂಗಾ ಗಾಯಕ್ಕೆ ತುತ್ತಾಗಿದ್ದರು. ಬೌಲ್‌ ಮಾಡುವ ವೇಳೆ ಅವರು ಎಡಗೈ ಭುಜ ತಿರುಗಿಸಿಕೊಂಡಂತೆ ಕಾಣಿಸಿಕೊಂಡಿದ್ದು, ಅದರಿಂದ ತೀವ್ರ ನೋವಿಗೆ ಒಳಗಾದರು.

ಭಾರತದ ಪಂದ್ಯವನ್ನು ಬಾಯ್ಕಟ್‌ ಮಾಡಿದ್ದಕ್ಕೆ ಐಸಿಸಿ ಪಾಕ್‌ಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ: ಎಹ್ಸಾನ್‌ ಮಣಿ!

ಬೌಲ್‌ ರಿಲೀಸ್‌ ಮಾಡಿದ ತಕ್ಷಣವೇ ಮಾಲಿಂಗಾ ತಮ್ಮ ಭುಜವನ್ನು ಹಿಡಿದುಕೊಂಡು ಫಾಲೋ ಥ್ರೂ ವೇಳೆ ನೆಲಕ್ಕೆ ಕುಸಿದರು. ಇದನ್ನು ಗಮನಿಸಿದ ತಂಡದ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಮೈದಾನಕ್ಕೆ ಧಾವಿಸಿ ಚಿಕಿತ್ಸೆ ನೀಡಿದರು. ಗಾಯದ ತೀವ್ರತೆಯ ಹಿನ್ನೆಲೆಯಲ್ಲಿ ಯುವ ವೇಗಿ ಪಂದ್ಯವನ್ನು ಮಧ್ಯದಲ್ಲೇ ತೊರೆದು ಮೈದಾನದಿಂದ ಹೊರನಡೆದರು.

ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಹೇಳಿದ್ದೇನು?

ಇಶಾನ್ ಮಾಲಿಂಗಾಗೆ ಉಂಟಾದ ಗಾಯದ ಗಂಭೀರತೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ದೃಢಪಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಎಸ್‌ಎಲ್‌ಸಿ, ಯುವ ವೇಗಿಗೆ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳನ್ನು ನೀಡಬೇಕಾಗಿದ್ದು, ಕೊಲಂಬೊಗೆ ಮರಳಿದ್ದಾರೆ. ಅವರ ಭುಜಕ್ಕೆ ಎಂಆರ್‌ಐ ಸ್ಕ್ಯಾನ್ ನಡೆಸಲಾಗುವುದು ಎಂದು ಕ್ರಿಕೆಟ್‌ ಮಂಡಳಿ ತಿಳಿಸಿದೆ.

“ಗಾಯದ ಗಂಭೀರತೆಯನ್ನು ಮೌಲ್ಯಮಾಪನ ಮಾಡಲು ಹಾಗೂ ಮುಂದಿನ ಚಿಕಿತ್ಸೆ ಕುರಿತು ನಿರ್ಧಾರ ಕೈಗೊಳ್ಳಲು ಇಶಾನ್ ಮಾಲಿಂಗಾ ಇಂದು (ಸೋಮವಾರ) ಕೊಲಂಬೊಗೆ ಮರಳಲಿದ್ದಾರೆ. ಅಲ್ಲಿ ಅವರಿಗೆ ಎಂಆರ್‌ಐ ಸ್ಕ್ಯಾನ್ ನಡೆಸಲಾಗುವುದು,” ಎಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

Josh Hazlewood: 2026ರ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಆಘಾತ!

ವಿಶ್ವಕಪ್ ಕನಸಿಗೆ ಹಿನ್ನಡೆ: ಮಾಲಿಂಗಾಗೆ ಗಾಯದ ಆಘಾತ

ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಇಶಾನ್ ಮಾಲಿಂಗಾ ಶ್ರೀಲಂಕಾ ತಂಡದಲ್ಲಿ ತಮ್ಮ ಸ್ಥಾನವನ್ನು ಕ್ರಮೇಣ ಭದ್ರಪಡಿಸಿಕೊಂಡಿದ್ದರು. 2025ರ ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಈ ಯುವ ವೇಗದ ಬೌಲರ್, ಇದುವರೆಗೆ ಆಡಿದ ಎಂಟು ಟಿ20ಐ ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಪಡೆದು ತಮ್ಮ ವೇಗ ಮತ್ತು ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.

ಈ ಅದ್ಭುತ ಪ್ರದರ್ಶನದೊಂದಿಗೆ ಟಿ20 ವಿಶ್ವಕಪ್ ತಂಡಕ್ಕೆ ಬಲವಾದ ಸ್ಪರ್ಧಿಯಾಗಿ ಹೊರಹೊಮ್ಮಿದ್ದ ಅವರಿಗೆ ಇದೀಗ ಗಾಯ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಅವರ ಗಾಯದಿಂದಾಗಿ ವಿಶ್ವಕಪ್ ತಂಡಕ್ಕೆ ಸೇರುವ ಕನಸು ತಾತ್ಕಾಲಿಕವಾಗಿ ಅಸ್ಥಿರಗೊಂಡಿದೆ.