ಚೆನ್ನೈನಲ್ಲಿ ಟಿವಿಕೆ ಸದಸ್ಯನ ಇರಿದು ಹತ್ಯೆ: ಕಾನೂನು ಸುವ್ಯವಸ್ಥೆ ಬಗ್ಗೆ ವಿಜಯ್ ಸರ್ಕಾರಕ್ಕೆ ಡಿಎಂಕೆ ತರಾಟೆ
Crime news: ಕ್ರಿಮಿನಲ್ ದಾಖಲೆ ಹೊಂದಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸದಸ್ಯ ಕಣ್ಣನ್ ಅವರನ್ನು ಗುಂಪೊಂದು ಇರಿದು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಸೆಪ್ಟೆಂಬರ್ 5 ರಂದು ಕಣ್ಣನ್ ತನ್ನ ಸ್ನೇಹಿತರೊಂದಿಗೆ ಇದ್ದಾಗ ದ್ವಿಚಕ್ರ ವಾಹನಗಳಲ್ಲಿ ಬಂದ ಗುಂಪೊಂದು ಅವರ ಮೇಲೆ ದಾಳಿ ನಡೆಸಿತು.
ಕೊಲೆಯಾದ ಟಿವಿಕೆ ನಾಯಕ -
ಚೆನ್ನೈ, ಸೆ.7: ಕ್ರಿಮಿನಲ್ ದಾಖಲೆ ಹೊಂದಿರುವ ತಮಿಳಗ ವೆಟ್ರಿ ಕಳಗಂ (TVK) ಸದಸ್ಯ ಕಣ್ಣನ್ ಅವರನ್ನು ಗುಂಪೊಂದು ಇರಿದು ಹತ್ಯೆ ಮಾಡಿರುವ ಘಟನೆ ಸೆಪ್ಟೆಂಬರ್ 5 ರ ರಾತ್ರಿ ತಮಿಳುನಾಡಿನ (Tamil Nadu) ಚೆನ್ನೈನಲ್ಲಿ ನಡೆದಿದೆ. ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಐದು (Crime news) ಜನರನ್ನು ಬಂಧಿಸಲಾಗಿದೆ. ಕೊಲೆಯಾದ ಕಣ್ಣನ್, ಕಾರು ಬಾಡಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 5 ರಂದು ಕಣ್ಣನ್ ತನ್ನ ಸ್ನೇಹಿತರೊಂದಿಗೆ ಇದ್ದಾಗ ದ್ವಿಚಕ್ರ ವಾಹನಗಳಲ್ಲಿ ಬಂದ ಗುಂಪೊಂದು ಅವರ ಮೇಲೆ ದಾಳಿ ನಡೆಸಿತು. ದಾಳಿಕೋರರಲ್ಲಿ ಒಬ್ಬ ಕಣ್ಣನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಶಾಸ್ತ್ರಿನಗರ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ಐವರು ಆರೋಪಿಗಳನ್ನು ಬರಾನಿ, ರಾಕೇಶ್, ನರೇಶ್, ಮಣಿಕಂದನ್ ಮತ್ತು ಹರಿಹರನ್ ಎಂದು ಗುರುತಿಸಲಾಗಿದೆ.
ತನಿಖೆಯಲ್ಲಿ ಕಣ್ಣನ್ ಮತ್ತು ಅವನ ಸಹಚರರು 2009 ರಲ್ಲಿ ಆರೋಪಿ ಬರಾನಿಯ ಚಿಕ್ಕಪ್ಪ ಶಿವನನ್ನು ಕೊಲೆ ಮಾಡಿದ್ದರು ಎಂದು ತಿಳಿದುಬಂದಿದೆ. ಬರಾನಿಯ ತಂದೆ ವೇಲು ಅವರನ್ನು 2014 ರಲ್ಲಿ ಕೊಲೆ ಮಾಡಲಾಗಿತ್ತು. ಹಿಂದಿನ ಕೊಲೆಗಳಿಗೆ ಸೇಡು ತೀರಿಸಿಕೊಳ್ಳಲು ಕಣ್ಣನ್ ಹತ್ಯೆಯನ್ನು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಡ್ಯಾನ್ಸ್ ತರಗತಿಗೆ ಹಾಜರಾಗಲು ಅಡುಗೆ ಮಾಡಲು ನಿರಾಕರಿಸಿದ ಪತ್ನಿಯನ್ನು ಕೊಂದ ಪಾಪಿ ಪತಿ; ಮದ್ಯದ ಅಮಲಿನಲ್ಲಿ ಕೃತ್ಯ
ಘಟನೆಯ ನಂತರ, ಕಣ್ಣನ್ ಮೇಲಿನ ದಾಳಿಯನ್ನು ತಡೆಯುವಲ್ಲಿ ವಿಫಲರಾದ ಆರೋಪದ ಮೇಲೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಆದೇಶಿಸಿದರು. ಅಡ್ಯಾರ್ ಉಪ ಪೊಲೀಸ್ ಆಯುಕ್ತ ಕಾರ್ತಿಕೇಯನ್ ಮತ್ತು ಶಾಸ್ತ್ರಿ ನಗರ ಇನ್ಸ್‌ಪೆಕ್ಟರ್ ರೋಹಿಣಿ ಅವರನ್ನು ಖಾಲಿ ಮೀಸಲು ಹುದ್ದೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಟಿವಿಕೆ ಸರ್ಕಾರವನ್ನು ಟೀಕಿಸಿದ ಪ್ರತಿಪಕ್ಷಗಳು, ರಾಜ್ಯದ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರಶ್ನಿಸಿದವು. ಟಿವಿಕೆ ಸದಸ್ಯನನ್ನು ಕೊಲೆ ಸಾರ್ವಜನಿಕವಾಗಿ ಕೊಲೆ ಮಾಡಲಾಗಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪ್ರಶ್ನಿಸಿದರು.
ಪತ್ನಿಯನ್ನು ಹತ್ಯೆ ಮಾಡಿ ಬೆರಳುಗಳನ್ನು ಕತ್ತರಿಸಿ, ರುಂಡ ಫ್ರಿಡ್ಜ್‌ನಲ್ಲಿಟ್ಟ ಪಾಪಿ ಪತಿ
ಅಪಾರ್ಟ್‌ಮೆಂಟ್‌ವೊಂದರಲ್ಲಿ 25 ವರ್ಷದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಸೆಪ್ಟೆಂಬರ್ 6 ರಂದು, ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿ ಮಹಿಳೆಯನ್ನು ರಿಯಾ ತಾಲೂಕ್ದಾರ್ (25) ಎಂದು ಗುರುತಿಸಲಾಗಿದೆ. ಈಕೆಯನ್ನು ಕೊಲೆ ಮಾಡಿದ ಆರೋಪಿ ಆಕೆಯ ಪತಿ ರಾಮಾನುಜನ್ ಗೋಸ್ವಾಮಿ ಎಂದು ಗುರುತಿಸಲಾಗಿದೆ.
ಕೆಲವು ತಿಂಗಳ ಹಿಂದಷ್ಟೇ ದಂಪತಿ ವಿವಾಹವಾಗಿ ಮನೆಗೆ ಬಂದಿದ್ದರು. ಎರಡು ದಿನಗಳಿಂದ ದಂಪತಿಯನ್ನು ನೋಡಿಲ್ಲ, ಅವರ ಫೋನ್‌ಗಳು ಸ್ವಿಚ್ ಆಫ್ ಆಗಿವೆ ಎಂದು ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದರು. ನಂತರ ಪೊಲೀಸರು ಅಪಾರ್ಟ್ಮೆಂಟ್‌ನ ಬೀಗವನ್ನು ಮುರಿದು ಒಳಗೆ ಹೋದಾಗ ಮಹಿಳೆಯ ಮೃತದೇಹ ಕಂಡುಬಂದಿದೆ. ಆಕೆಯ ಬೆರಳುಗಳು ಅರ್ಧ ಕತ್ತರಿಸಲ್ಪಟ್ಟಿದ್ದವು, ದೇಹವು ಕೊಳೆಯಲು ಪ್ರಾರಂಭಿಸಿತ್ತು. ಆಕೆಯ ತಲೆ ಕಾಣೆಯಾಗಿತ್ತು.