ಬರ್ತ್‌ಡೇ ಪಾರ್ಟಿ ನಂತರ ನಾಪತ್ತೆಯಾಗಿದ್ದ ಗ್ರಾಮದ ಮುಖ್ಯಸ್ಥನ ಪುತ್ರ ಶವವಾಗಿ ಪತ್ತೆ; ಮೈ ತುಂಬ ಗಾಯ
Crime News: 18 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಧವಾರ (ಸೆಪ್ಟೆಂಬರ್ 23) ಸಂಜೆ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಆತ ಮನೆಗೆ ವಾಪಸ್ ಬಂದಿರಲಿಲ್ಲ. ಪ್ರಕರಣದ ತನಿಖೆ ನಡೆಸಲು ಮತ್ತು ತಪ್ಪಿತಸ್ಥರನ್ನು ಗುರುತಿಸಲು ಮುಜಫರ್‌ನಗರ ಎಸ್‌ಎಸ್‌ಪಿ ಸಂಜಯ್ ಕುಮಾರ್ ವರ್ಮಾ ಮೂರು ತಂಡಗಳನ್ನು ರಚಿಸಿದ್ದಾರೆ.
ಶವವಾಗಿ ಪತ್ತೆಯಾದ ರೋಹನ್ (ಸಂಗ್ರಹ ಚಿತ್ರ) -
ಲಖನೌ, ಸೆ. 25: 18 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮುಜಫರ್ ನಗರ ಜಿಲ್ಲೆಯಲ್ಲಿ ನಡೆದಿದೆ (Crime News). ರೋಹನ್ ಮೃತ ದುರ್ದೈವಿ. ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ರೋಹನ್ ಮನೆಗೆ ಹಿಂತಿರುಗಿಲ್ಲ. ಗ್ರಾಮದ ಮುಖ್ಯಸ್ಥ ವಿವೇಕ್ ರಥಿ ಅವರ ಪುತ್ರನಾಗಿರುವ ರೋಹನ್ ದೇಹದ ಮೇಲೆ ಗಾಯಗಳು ಕಂಡುಬಂದಿದ್ದು, ಆತನನ್ನು ಹೊಡೆದು ಸಾಯಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಬಂದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು, ಮೃತ ಯುವಕನ ಗುರುತು ಪತ್ತೆ ಹಚ್ಚಿದ್ದು, ನಂತರ ಅವರ ಕುಟುಂಬಕ್ಕೆ ಮಾಹಿತಿ ನೀಡಿದರು. ಕುಟುಂಬ ಸದಸ್ಯರು ಸ್ಥಳಕ್ಕೆ ಆಗಮಿಸಿ, ರೋಹನ್ ಮುಖವನ್ನು ಸ್ವಚ್ಛಗೊಳಿಸಿದ ನಂತರ ಗುರುತಿಸಿದರು.
ಸೆಪ್ಟೆಂಬರ್ 23ರ ಸಂಜೆ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಆತ ಮನೆಗೆ ವಾಪಸ್ ಬಂದಿರಲಿಲ್ಲ. ಪ್ರಕರಣದ ತನಿಖೆ ನಡೆಸಲು ಮತ್ತು ತಪ್ಪಿತಸ್ಥರನ್ನು ಗುರುತಿಸಲು ಮುಜಫರ್‌ನಗರ ಎಸ್‌ಎಸ್‌ಪಿ ಸಂಜಯ್ ಕುಮಾರ್ ವರ್ಮಾ ಮೂರು ತಂಡಗಳನ್ನು ರಚಿಸಿದ್ದಾರೆ. ತಂಡಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆಯ ಭಾಗವಾಗಿ ಜಿಪಿಎಸ್ ಮತ್ತು ಕರೆ ವಿವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಮಣಿಪುರದಲ್ಲಿ ಅಪರಿಚಿತರಿಂದ ದಾಳಿ: 4 ಮಂದಿ ಸಾವು, 24 ಗಂಟೆಗಳ ಬಂದ್ ಘೋಷಣೆ
ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 41 ವರ್ಷದ ಆರೋಪಿಗೆ ಶಿಕ್ಷೆ
ಅಪ್ರಾಪ್ತ ಬಾಲಕನಿಗೆ ಪಾರಿವಾಳ ತೋರಿಸುವುದಾಗಿ ನಂಬಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ 41 ವರ್ಷದ ವ್ಯಕ್ತಿಗೆ ಮಹಾರಾಷ್ಟ್ರದ ಪಾಲ್ಘರ್‌ನ ವಿಶೇಷ ಪೋಕ್ಸೋ (POCSO) ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2020ರಲ್ಲಿ ನಡೆದಿದ್ದ ಈ ಘೋರ ಕೃತ್ಯದ ಆರೋಪಿ ಮಧು ಧರ್ಮ ಗೋವಾರಿಗೆ ಶಿಕ್ಷೆಯ ಜತೆಗೆ ₹ 30,000 ದಂಡವನ್ನು ವಿಧಿಸಲಾಗಿದ್ದು, ಈ ಮೊತ್ತವನ್ನು ಸಂತ್ರಸ್ತ ಬಾಲಕನ ಪುನರ್ವಸತಿಗೆ ನೀಡುವಂತೆ ಆದೇಶಿಸಲಾಗಿದೆ.