ಪ್ರಧಾನಿ ಮೋದಿಗೆ ಜಲ್ಮುರಿ ನೀಡಿದ ಪಶ್ಚಿಮ ಬಂಗಾಳದ ವ್ಯಾಪಾರಿಗೆ ಪಾಕಿಸ್ತಾನ, ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ
ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಬದಿಯ ಅಂಗಡಿಯೊಂದರಿಂದ ರಾಜ್ಯದ ಖ್ಯಾತ ತಿಂಡಿ ಮಂಡಕ್ಕಿಯಿಂದ ಮಾಡಿದ ಜಲ್ಮುರಿಯನ್ನು ಸವಿದಿದ್ದರು. ಇದರ ಬಳಿಕ ಅಂಗಡಿಯವ ಖ್ಯಾತಿ ಪಡೆದಿದ್ದು, ಇದು ಈಗ ಆತನಿಗೆ ತೊಂದರೆಯನ್ನು ಉಂಟು ಮಾಡಿದೆ. ಪ್ರಧಾನಿ ಮೋದಿಯವರು ಬಂದು ಹೋದ ಮೇಲೆ ಆತನಿಗೆ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದ ಸಂಖ್ಯೆಗಳಿಂದ ಬಾಂಬ್ ಮತ್ತು ಕೊಲೆ ಬೆದರಿಕೆಗಳು ಬರಲು ಪ್ರಾರಂಭವಾಗಿವೆ.
ಸಂಗ್ರಹ ಚಿತ್ರ -
ಕೋಲ್ಕತ್ತಾ: ಚುನಾವಣಾ ಪ್ರಚಾರದ (Election campaign) ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಜಲ್ಮುರಿ (Jalmuri) ಕೊಟ್ಟ ವ್ಯಾಪಾರಿಗೆ ಬಳಿಕ ಪಾಕಿಸ್ತಾನಿ (Pakistan) ಮತ್ತು ಬಾಂಗ್ಲಾದೇಶದ (Bangladesh) ಸಂಖ್ಯೆಗಳಿಂದ ಬಾಂಬ್ ಮತ್ತು ಕೊಲೆ ಬೆದರಿಕೆಗಳು (bomb, death threats) ಬರಲು ಪ್ರಾರಂಭವಾಗಿವೆ. ಪಶ್ಚಿಮ ಬಂಗಾಳ (west bengal) ವಿಧಾನ ಸಭಾ ಚುನಾವಣೆ (assembly election) ಸಮಯದಲ್ಲಿ ಪ್ರಚಾರಕ್ಕೆಂದು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಬದಿಯ ಅಂಗಡಿಯೊಂದಕ್ಕೆ ತೆರಳಿ ಮಂಡಕ್ಕಿಯಿಂದ ಮಾಡಿದ್ದ ಜಲ್ಮುರಿಯನ್ನು ಸವಿದಿದ್ದರು. ಇದರ ಬಳಿಕ ಖ್ಯಾತಿ ಪಡೆದ ಜಲ್ಮುರಿ ಮಾರಾಟಗಾರ ಬಿಕ್ರಮ್ ಸೌ ಅವರಿಗೆ ಬೆದರಿಕೆಗಳು ಬರಲು ಪ್ರಾರಂಭವಾಗಿವೆ.
ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಕ್ರಮ್ ಸೌ ಅವರ ಅಂಗಡಿಗೆ ಭೇಟಿ ನೀಡಿ 10 ರೂ. ಯ ಜಲ್ಮುರಿ ಖರೀದಿ ಮಾಡಿ ಸವಿದಿದ್ದರು. ಇದರ ಬಳಿಕ ಬಿಕ್ರಮ್ ಸೌ ಅವರಿಗೆ ಅಂತಾರಾಷ್ಟ್ರೀಯ ಮೂಲಗಳಿಂದ ಬಾಂಬ್ ಮತ್ತು ಕೊಲೆ ಬೆದರಿಕೆಗಳು ಬರಲಾರಂಭಿಸಿದೆ. ಈ ಕುರಿತು ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಅಂಗಡಿಗೆ ಬಂದು ರಾಜ್ಯದ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದಾದ ಜಲ್ಮುರಿಯನ್ನು ಖರೀದಿಸಿದ್ದರು. ಇದರಿಂದ ತಮಗೆ ರಾತ್ರೋರಾತ್ರಿ ಖ್ಯಾತಿ ಸಿಕ್ಕಿದೆ. ಇದರಿಂದ ನಾನು ಮತ್ತು ನನ್ನ ಕುಟುಂಬ ಸಾಕಷ್ಟು ತೊಂದರೆ ಅನುಭವಿಸುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಬಿಕ್ರಮ್ ಸೌ ಅವರ ಅಂಗಡಿಗೆ ಬಂದು ಹೋದ ಮೇಲೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಅವರ ಅಂಗಡಿಯಲ್ಲಿ ಜಲ್ಮುರಿ ಖರೀದಿ ಮಾಡಿ ಸವಿದ ಚಿತ್ರವನ್ನು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಈಗ ಅವರು ಮತ್ತು ಅವರ ಕುಟುಂಬಕ್ಕೆ ದುಃಸ್ವಪ್ನವಾಗಿ ಮಾರ್ಪಟ್ಟಿದೆ.
ব্যস্ত রবিবারে পশ্চিমবঙ্গ জুড়ে চারটি জনসভার ফাঁকে, ঝাড়গ্রামে সুস্বাদু ঝালমুড়ি খেলাম। pic.twitter.com/VqIrc0zrmR
— Narendra Modi (@narendramodi) April 19, 2026
ಪ್ರಧಾನಿ ಮೋದಿ ಬಂದು ಹೋದ ಮೇಲೆ ತಮಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಿರಂತರ ಫೋನ್ ಮತ್ತು ವಿಡಿಯೋ ಕರೆಗಳು ಬರುತ್ತಿದ್ದು, ಬಾಂಬ್, ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಇದು ತಮಗೆ ತೀವ್ರ ಆತಂಕವನ್ನು ಉಂಟು ಮಾಡಿದೆ. ಈ ಕುರಿತು ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಅವರು ಏಪ್ರಿಲ್ 19ರಂದು ಹಿಂದಿರುಗುವಾಗ ರಸ್ತೆ ಬದಿಯಲ್ಲಿದ್ದ ಬಿಕ್ರಮ್ ಸೌ ಅವರ ಅಂಗಡಿಗೆ ಹೋಗಿ ಜಲ್ಮುರಿಯನ್ನು ಸವಿದಿದ್ದರು. ಇದರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿತ್ತು. ಇದು ರಾಜಕೀಯ ಚರ್ಚೆಗೂ ನಾಂದಿ ಹಾಡಿತ್ತು. ಆಗಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇದೊಂದು ಪೂರ್ವ ಯೋಜಿತ ನಾಟಕ ಎಂದು ಕರೆದರೆ ಬಳಿಕ ಮೋದಿಯವರು ಅವರನ್ನು ಟೀಕಿಸಿದ್ದರು.
ಬಿರುಸಿನ ಪ್ರಚಾರದ ನಡುವೆಯೇ ಬಂಗಾಳದ ರಸ್ತೆ ಬದಿ ಮಂಡಕ್ಕಿ ಸವಿದ ಪ್ರಧಾನಿ ಮೋದಿ!
ಚುನಾವಣೆ ಬಳಿಕವೂ ಜಲ್ಮುರಿ ಮಾತ್ರ ಚರ್ಚೆಯಲ್ಲಿ ಹಾಗೇ ಉಳಿದಿದೆ. ಇತ್ತೀಚೆಗೆ ನೆದರ್‌ಲ್ಯಾಂಡ್ಸ್‌ನಲ್ಲಿ ಸಭೆಯೊಂದರಲ್ಲಿ ಜಲ್ಮುರಿಯನ್ನು ನೋಡಿದ ಪ್ರಧಾನಿ ಮೋದಿ, ನಮ್ಮ ದೇಶದ ಜಲ್ಮುರಿ ಇಲ್ಲಿಗೂ ತಲುಪಿದೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.