ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪತಿ ಮೇಲೆ ಆ್ಯಸಿಡ್ ಎರಚಿದ ಪತ್ನಿ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Wife throws acid on husband: ದಾಂಪತ್ಯ ಕಲಹದ ಬಳಿಕ ಮಹಿಳೆಯೊಬ್ಬಳು ತನ್ನ ಪತಿಯ ಮೇಲೆ ಆ್ಯಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆದಿದೆ. ಇದರ ಪರಿಣಾಮ ಪತಿ ತೀವ್ರವಾಗಿ ಗಾಯಗೊಂಡಿದ್ದು, ಕೃತ್ಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪತಿ ಮೇಲೆ ಆ್ಯಸಿಡ್ ಎರಚಿದ ಪತ್ನಿ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಸಾಂದರ್ಭಿಕ ಚಿತ್ರ -

Priyanka P
Priyanka P Apr 27, 2026 6:21 PM

ಲಖನೌ, ಏ. 27: ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಮೇಲೆ ಆ್ಯಸಿಡ್ ಎರಚಿರುವ ಅಮಾನುಷ ಘಟನೆ ಉತ್ತರ ಪ್ರದೇಶದ (Uttar Pradesh) ಪಿಲಿಭಿತ್‌ನಲ್ಲಿ ನಡೆದಿದೆ. ಆ್ಯಸಿಡ್ ಎರಚಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ. ಕೊತ್ವಾಲಿ ನಗರದ ವ್ಯಾಪ್ತಿಗೆ ಬರುವ ಖೈರುಲ್ಲಾ ಶಾ ಮೊಹಲ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ಆರೋಪಿಯನ್ನು ಶಿಲ್ಪಿ (32) ಎಂದು ಉರುತಿಸಲಾಗಿದೆ. ವೃತ್ತಿಯಲ್ಲಿ ಆಭರಣ ವ್ಯಾಪಾರಿಯಾಗಿದ್ದ ತನ್ನ ಪತಿ ಹೇಮಂತ್ (35) ಮನೆಯ ಎರಡನೇ ಮಹಡಿಯ ಗೇಟ್ ಬಳಿ ಬಂದಾಗ ಅವರ ಮೇಲೆ ಆ್ಯಸಿಡ್ ಎರಚಿದ್ದಾಳೆ ಎಂದು ಆರೋಪಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹಿಳೆ ಎರಡನೇ ಮಹಡಿಯಲ್ಲಿ ಗ್ರಿಲ್ ಮಾಡಿದ ಗೇಟ್ ಹೊರಗೆ ನಿಂತಿರುವುದು ಕಂಡು ಬಂದಿದೆ.

ಹೇಮಂತ್ ತನ್ನ ಕೋಣೆಯಿಂದ ಗೇಟ್ ಕಡೆಗೆ ಹೆಜ್ಜೆ ಹಾಕುತ್ತಿದ್ದಂತೆ, ಆಕೆ ಗಾಜಿನಿಂದ ಆ್ಯಸಿಡ್ ಅನ್ನು ಅವನ ಮೇಲೆ ಸುರಿದಿದ್ದಾಳೆ. ಹೇಮಂತ್ ಆರಂಭದಲ್ಲಿ ಬಿಸಿ ಚಹಾ ತನ್ನ ಮೇಲೆ ಬಿದ್ದಿರುವುದಾಗಿ ಅಂದುಕೊಂಡಿದ್ದಳು. ಆದರೆ ಬಾಯಿಗೆ ತಾಕಿದಾಗ ತೀವ್ರವಾದ ಸುಡುವಿಕೆ ಮತ್ತು ಹುಳಿ ಸಂವೇದನೆಯನ್ನು ಅನುಭವಿಸಿದ ನಂತರ ಅದು ಆ್ಯಸಿಡ್ ಎಂದು ಅರಿತುಕೊಂಡರು.

ಇಲ್ಲಿದೆ ವಿಡಿಯೊ:



ದಂಪತಿ ಸುಮಾರು ಐದು ವರ್ಷಗಳಿಂದ ವೈವಾಹಿಕ ಕಲಹಗಳನ್ನು ಎದುರಿಸುತ್ತಿದ್ದರು. ಪತ್ನಿಗೆ ಅನೈತಿಕ ಸಂಬಂಧವಿದ್ದು, ಈ ವಿಚಾರವಾಗಿ ಪದೇ ಪದೆ ಜಗಳವಾಗುತ್ತಿತ್ತು. 2026ರ ಫೆಬ್ರವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಗಿ ಪತಿ ಹೇಳಿದ್ದಾರೆ. ಇದಕ್ಕೂ ಮೊದಲು ಮಹಿಳೆ 2021ರಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿ ಲಖಿಂಪುರದಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ್ದಳು.

ಪತ್ನಿಯನ್ನು ಕೊಂದು ಶವವನ್ನು ಮರದ ಪೆಟ್ಟಿಗೆಯಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ ಪಾಪಿ ಪತಿ

ಭಾನುವಾರ (ಏ. 26) ಸಂಜೆ 4 ಗಂಟೆ ಸುಮಾರಿಗೆ ಮಹಿಳೆ ಹೇಮಂತ್ ಮನೆಗೆ ಬಂದು ಗಲಾಟೆ ಎಬ್ಬಿಸಿದ್ದಾಳೆ ಎನ್ನಲಾಗಿದೆ. ಪತಿ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿದರು. ಆದರೆ ಮಹಿಳಾ ಕಾನ್‌ಸ್ಟೇಬಲ್ ಇಲ್ಲದ ಕಾರಣ ಹಿಂತಿರುಗಿದರು. ನಂತರ, ಮಹಿಳೆ ಬಲವಂತವಾಗಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.

ಆ್ಯಸಿಡ್ ಎರಚುವಾಗ ಮಹಿಳೆಯ ಮೇಲೂ ಬಿದ್ದಿದ್ದು, ಆಕೆಗೂ ಗಾಯಗಳಾಗಿವೆ. ಹೇಮಂತ್ ಮತ್ತು ಶಿಲ್ಪಿ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಹೇಮಂತ್ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.