2031ರ ಏಕದಿನ ವಿಶ್ವಕಪ್ಗೆ ಭಾರತಕ್ಕೆ ಆತಿಥ್ಯ ಹಕ್ಕು; 2029ರ ಚಾಂಪಿಯನ್ಸ್ ಟ್ರೋಫಿಗೂ ಆತಿಥ್ಯ!
2029ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಹಕ್ಕನ್ನು ಭಾರತ ಪಡೆದುಕೊಂಡಿದೆ. ಇದರ ಜೊತೆಗೆ 2031ರ ಏಕದಿನ ವಿಶ್ವಕಪ್ ಅನ್ನು ಬಾಂಗ್ಲಾದೇಶದೊಂದಿಗೆ ಜಂಟಿಯಾಗಿ ಆಯೋಜಿಸಲಿದೆ. 2023ರ ಬಳಿಕ ಮತ್ತೊಮ್ಮೆ ವಿಶ್ವಕಪ್ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಲಭಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ
2029ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತಕ್ಕೆ ಆತಿಥ್ಯ. -
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2029ರಿಂದ 2035ರವರೆಗಿನ ಪುರುಷರ ಪ್ರಮುಖ ಟೂರ್ನಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರ ಪ್ರಕಾರ ಭಾರತಕ್ಕೆ (India) 2029ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಹಕ್ಕು ಲಭಿಸಿದ್ದು, 2031ರ ಏಕದಿನ ವಿಶ್ವಕಪ್ ಅನ್ನು ಬಾಂಗ್ಲಾದೇಶದೊಂದಿಗೆ ಜಂಟಿಯಾಗಿ ಆಯೋಜಿಸಲಿದೆ.
2031ರ ಏಕದಿನ ವಿಶ್ವಕಪ್ ಅಕ್ಟೋಬರ್ 9ರಿಂದ ನವೆಂಬರ್ 23ರವರೆಗೆ ನಡೆಯಲಿದೆ. 2029ರ ಚಾಂಪಿಯನ್ಸ್ ಟ್ರೋಫಿ ಅಕ್ಟೋಬರ್ 9ರಿಂದ 28ರವರೆಗೆ ಭಾರತದಲ್ಲಿ ಆಯೋಜನೆಯಾಗಲಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತಕ್ಕೆ ತವರಿನ ಅಭಿಮಾನಿಗಳ ಎದುರು ಮತ್ತೊಮ್ಮೆ ಪ್ರಶಸ್ತಿ ಉಳಿಸಿಕೊಳ್ಳುವ ಅವಕಾಶ ಸಿಗಲಿದೆ.
ಇದರೊಂದಿಗೆ 2023ರ ವಿಶ್ವಕಪ್ ಬಳಿಕ ಎಂಟು ವರ್ಷಗಳ ಅಂತರದಲ್ಲಿ ಭಾರತ ಮತ್ತೊಮ್ಮೆ ಏಕದಿನ ವಿಶ್ವಕಪ್ ಆತಿಥ್ಯ ವಹಿಸಲಿದೆ. 1987ರಲ್ಲಿ ಮೊದಲ ಬಾರಿ ಭಾರತ ವಿಶ್ವಕಪ್ ಆಯೋಜಿಸಿತ್ತು. ಬಳಿಕ 1996ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಜತೆಗೆ, 2011ರಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಜತೆಗೆ ಜಂಟಿಯಾಗಿ ಆತಿಥ್ಯ ವಹಿಸಿತ್ತು. 2023ರಲ್ಲಿ ಭಾರತ ಏಕಾಂಗಿಯಾಗಿ ವಿಶ್ವಕಪ್ ಆಯೋಜಿಸಿತ್ತು. ಅಲ್ಲದೆ, 2006ರ ಬಳಿಕ ಮೊದಲ ಬಾರಿ ಭಾರತ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಲಿದೆ.
ENG vs AUS: ಆಸ್ಟ್ರೇಲಿಯಾ ತಂಡವನ್ನು 135 ರನ್ಗಳಿಂದ ಮಣಿಸಿ ಇತಿಹಾಸ ಬರೆದ ಇಂಗ್ಲೆಂಡ್!
2035ರವರೆಗಿನ ಐಸಿಸಿ ಪುರುಷರ ಟೂರ್ನಿಗಳ ವೇಳಾಪಟ್ಟಿ
2028ರ ಟಿ20 ವಿಶ್ವಕಪ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್
2029ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, ಇಂಗ್ಲೆಂಡ್
2029ರ ಚಾಂಪಿಯನ್ಸ್ ಟ್ರೋಫಿ, ಭಾರತ
2030ರ ಟಿ20 ವಿಶ್ವಕಪ್ ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್
2031ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, ಇಂಗ್ಲೆಂಡ್
2031ರ ಏಕದಿನ ವಿಶ್ವಕಪ್, ಭಾರತ ಮತ್ತು ಬಾಂಗ್ಲಾದೇಶ
2032ರ ಟಿ20 ವಿಶ್ವಕಪ್, ಆತಿಥೇಯರು ಪ್ರಕಟವಾಗಬೇಕಿದೆ
2033ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆತಿಥೇಯರು ಪ್ರಕಟವಾಗಬೇಕಿದೆ
2033ರ ಚಾಂಪಿಯನ್ಸ್ ಟ್ರೋಫಿ, ಆತಿಥೇಯರು ಪ್ರಕಟವಾಗಬೇಕಿದೆ
2034ರ ಟಿ20 ವಿಶ್ವಕಪ್, ಆತಿಥೇಯರು ಪ್ರಕಟವಾಗಬೇಕಿದೆ
2035ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, ಆತಿಥೇಯರು ಪ್ರಕಟವಾಗಬೇಕಿದೆ
2035ರ ಏಕದಿನ ವಿಶ್ವಕಪ್ ಟೂರ್ನಿ, ಆತಿಥೇಯರು ಪ್ರಕಟವಾಗಬೇಕಿದೆ
AUS vs ENG: 50 ರನ್ ಬಾರಿಸಿ ಒಡಿಐ ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ಜೋ ರೂಟ್!
ಇತರ ಐಸಿಸಿ ಟೂರ್ನಿಗಳ ಆತಿಥ್ಯ
2028ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಅಕ್ಟೋಬರ್ 12ರಿಂದ ನವೆಂಬರ್ 12ರವರೆಗೆ ನಡೆಯಲಿದೆ. 2030ರ ಟಿ20 ವಿಶ್ವಕಪ್ ಗೆ ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಆತಿಥ್ಯ ವಹಿಸಲಿವೆ.
2032 ಮತ್ತು 2034ರ ಟಿ20 ವಿಶ್ವಕಪ್ ಗಳ ಆತಿಥೇಯ ರಾಷ್ಟ್ರಗಳನ್ನು ಐಸಿಸಿ ಇನ್ನೂ ಪ್ರಕಟಿಸಿಲ್ಲ. 2035ರ ಏಕದಿನ ವಿಶ್ವಕಪ್ ಅಕ್ಟೋಬರ್ 2ರಿಂದ ನವೆಂಬರ್ 18ರವರೆಗೆ ನಡೆಯಲಿದ್ದು, ಆತಿಥೇಯರ ಹೆಸರನ್ನು ನಂತರ ಪ್ರಕಟಿಸಲಾಗುತ್ತದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯಲಿದ್ದು, 2029 ಮತ್ತು 2031ರ ಫೈನಲ್ ಪಂದ್ಯಗಳಿಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದೆ. 2033 ಮತ್ತು 2035ರ ಫೈನಲ್ ಗಳ ಆತಿಥೇಯ ಸ್ಥಳಗಳು ಇನ್ನೂ ನಿರ್ಧಾರವಾಗಿಲ್ಲ