ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vokkaliga Sangha: ಒಕ್ಕಲಿಗ ಸಂಘದಲ್ಲಿ ಬದಲಾವಣೆ ಆಗಬೇಕಿದೆ, ಆಡಳಿತದಲ್ಲಿ ಪಾರದರ್ಶಕತೆ ಬೇಕಿದೆ : ಗೋದಾನಿ ಹರೀಶ್‌ರೆಡ್ಡಿ ಆರೋಪ

ಅರ್ಧ ಶತಮಾನದ ಇತಿಹಾಸವಿರುವ ತಾಲೂಕು ಒಕ್ಕಲಿಗರ ಸಂಘದಲ್ಲಿ ತಾತ ತಂದೆ ಮಗ ಎಂದು ಕುಟುಂಬ ರಾಜಕಾರಣ ಮಾಡುತ್ತಾ ಒಂದೇ ಕುಟುಂಬದವರು ತಲೆಮಾರುಗಳಿಂದ ಅಧಿಕಾರದಲ್ಲಿದ್ದಾರೆ. ಇದೇ ಕಾರಣಕ್ಕೆ ಬಡ ಒಕ್ಕಲಿಗರು ರೈತರು ಸಾಮಾನ್ಯ ಕುಟುಂಬದವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಸಂಘದ ಸೌಲಭ್ಯಗಳು ಕೆಲವೇ ಮಂದಿಗೆ ಸೀಮಿತವಾಗಿವೆ ಎಂದು ಗಂಭಿರ ಆರೋಪ ಮಾಡಿದರು.

ಒಕ್ಕಲಿಗ ಸಂಘದಲ್ಲಿ ಬದಲಾವಣೆ ಆಗಬೇಕಿದೆ

-

Profile
Ashok Nayak Nov 15, 2026 10:40 PM

ಚಿಕ್ಕಬಳ್ಳಾಪುರ: ಜಿಲ್ಲೆಯ ಹೆಮ್ಮೆಯಾದ ಚಿಕ್ಕಬಳಾಪುರ ತಾಲೂಕು ಒಕ್ಕಲಿಗರ ಸಂಘವು ಕೆಲವೇ ಬಲಾಢ್ಯರ ಕಪಿಮುಷ್ಟಿಗೆ ಸಿಕ್ಕು ನರಳುತ್ತಿದ್ದು ಬಡವರು, ರೈತರು,ಸಾಮಾನ್ಯ ಕುಟುಂಬಗಳಿಗೆ, ಸಂಘದ ಬೆಳವಣಿಗೆಯಲ್ಲಿ ತಮ್ಮದೂ ಪಾತ್ರವಿರಲಿ ಎಂದು ಆಶಿಸುವ ಯುವಕರಿಗೆ ಅವಕಾಶ ವಿಲ್ಲದಂತಾಗಿರುವುದು ಶೋಚನೀಯ. ಶ್ರೀಮಂತರಿಂದ ಬಡವನವರೆಗೆ ಎಲ್ಲಾ ಒಕ್ಕಲಿಗರಿಗೂ ಸಂಘದ ಎಲ್ಲಾ ಚಟವಟಿಕೆಗಳಲ್ಲಿ ಸಮಾನ ಅವಕಾಶ ದೊರೆಯುವಂತೆ ಮಾಡಬೇಕಿದೆ ಎಂದು ಗೋ-ದಾನಿ ಹರೀಶ್ ಕೆ.ರೆಡ್ಡಿ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅರ್ಧ ಶತಮಾನದ ಇತಿಹಾಸವಿರುವ ತಾಲೂಕು ಒಕ್ಕಲಿಗರ ಸಂಘದಲ್ಲಿ ತಾತ ತಂದೆ ಮಗ ಎಂದು ಕುಟುಂಬ ರಾಜಕಾರಣ ಮಾಡುತ್ತಾ ಒಂದೇ ಕುಟುಂಬದವರು ತಲೆಮಾರುಗಳಿಂದ ಅಧಿಕಾರದಲ್ಲಿದ್ದಾರೆ. ಇದೇ ಕಾರಣಕ್ಕೆ ಬಡ ಒಕ್ಕಲಿಗರು ರೈತರು ಸಾಮಾನ್ಯ ಕುಟುಂಬದವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಸಂಘದ ಸೌಲಭ್ಯಗಳು ಕೆಲವೇ ಮಂದಿಗೆ ಸೀಮಿತವಾಗಿವೆ ಎಂದು ಗಂಭಿರ ಆರೋಪ ಮಾಡಿದರು.

ಸಂಘದ ಕುರ್ಚಿಗೆ ಗಮ್ ಹಾಕಿಕೊಂಡು ಕುಳಿತವರನ್ನು ಬದಲಾಯಿಸಬೇಕಾದ ಸಮಯ ಈಗ ಬಂದಿದೆ.ಸಮುದಾಯದ ಅಭಿವೃದ್ಧಿಗೆ ಸ್ಥಾಪನೆಯಾದ ಸಂಘವು ರಾಜಕೀಯ ಕೇಂದ್ರವಾಗಬಾರದು. ಕುಟುಂಬ ರಾಜಕಾರಣ ಪೋಷಣೆ ಮಾಡುವ ಮಾರ್ಗವೂ ಆಗಬಾರದು.ಇದರಿಂದಾಗಿಯೇ ಆಭಿವೃದ್ದಿ ಕುಂಠಿತವಾಗಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ: Chinthamani News: ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಿ: ಶ್ರೀನಿವಾಸನ್

ಸಂಘದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.ಇಲ್ಲಿ ಪಾರದರ್ಶಕತೆಯೆಂಬುದು ಮರೀಚಿಕೆಯಾಗಿದೆ. ಸಮುದಾಯದ ಪ್ರತಿಯೊಬ್ಬರಿಗೂ ಸಂಘದ ಲೆಕ್ಕ ಮತ್ತು ಆಡಳಿತದ ಮಾಹಿತಿ ದೊರೆಯಬೇಕು ಎಂದು ಆಗ್ರಹಿಸಿದ ಅವರು ಮುಂಬರುವ ಚುನಾವಣೆಯಲ್ಲಿ ಹೊಸಬರಿಗೆ ಯುವಕರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗೆ ಸಮುದಾಯದ ಜನಸಂಖ್ಯೆ 50 ಸಾವಿರದಷ್ಟು ಇದ್ದರೂ ಕೂಡ ಸಂಘದ ಚುಕ್ಕಾಣಿ ಹಿಡಿದವರು ತಮ್ಮ ಸ್ವಾರ್ಥಕ್ಕಾಗಿ ಕೇವಲ 4500 ಮತದಾರ ರನ್ನು ಮಾತ್ರ ಮಾಡಿಕೊಂಡಿದ್ದಾರೆ. ಅಂದರೆ ಸಂಘ ಸ್ಥಾಪನೆಯಾಗಿ 50 ವರ್ಷ ಕಳೆದರೂ ಕೂಡ 4500 ಮಂದಿಗೆ ಮಾತ್ರ  ಸದಸ್ಯತ್ವ ನೀಡಿರುವುದನ್ನು ಗಮನಿಸಿದರೆ ಇವರು ಪೂರ್ವಾಗ್ರಹ ಹೊಂದಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದು ದೂರಿದರು.

ನಾರಾಯಣರೆಡ್ಡಿ ಎಂಬುವರು ಸಂಘಕ್ಕೆ ಭೂಮಿಯನ್ನು ದೇಣಿಗೆ ನೀಡಿದ್ದಾರೆ. ಅವರ ಕುಟುಂಬ ದವರನ್ನು ಕೂಡ ಸದಸ್ಯರನ್ನಾಗಿ ಉಳಿಸಿಕೊಂಡಿಲ್ಲ.ಪೊಲೀಸ್ ದೊಡ್ಡಯ್ಯ ಅವರ ಕುಟುಂಬ ದವರು ಕೂಡ ಸದಸ್ಯರಾಗಿ ಇಲ್ಲ. ದೇಶದಲ್ಲಿ ಎಸ್‌ಐಆರ್ ಮೂಲಕ ಅನರ್ಹ ಮತದಾರರನ್ನು ಹೊರಗೆ ಹಾಕಿದ್ದಾರೆ. ನಮ್ಮ ಸಂಘದಲ್ಲಿ ೨೦೦೩ರಲ್ಲಿ ಮಾಡಿರುವ ಮತಪಟ್ಟಿಯನ್ನೇ ಇನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಜನ ಮರಣಹೊಂದಿದ್ದರೂ ಅವರ ಹೆಸರು ಮತಪಟ್ಟಿಯಲ್ಲಿದೆ. ಯಾಕೆಂದರೆ ಇವರಿಗೆ ಬೇಕಾದ ಸಂಖ್ಯೆ ಇಲ್ಲವಾಗುತ್ತದೆ ಎಂಬ ಆತಂಕವಿರಬಹುದು ಎಂದು ವ್ಯಂಗ್ಯವಾಡಿದರು.

ನಾನು ಸೂಚಿಸುವವರನ್ನು ಚುನಾವಣೆಯಲ್ಲಿ ಆರಿಸುವ ಮೂಲಕ ಬೆಂಬಲ ನೀಡಿದಲ್ಲಿ ಸಂಘ ವನ್ನು ಪಾರದರ್ಶಕವಾಗಿ ಮುನ್ನಡೆಸುತ್ತಾ ಸಮುದಾಯದ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. 20 ರಿಂದ 25 ಸಾವಿರದಷ್ಟು ಸದಸ್ಯರ ಸಂಖ್ಯೆಯನ್ನು ಏರಿಸಲು ಕ್ರಮ ವಹಿಸುತ್ತೇನೆ ಎಂದ ಅವರು ಸಂಘದ ಮುಖಂಡರಿಗೆ ರಾಜಕೀಯ ಬೇಡ.ಯಾರು ಯಾವುದೇ ಪಕ್ಷದಲ್ಲಿರಲಿ ಸಂಘದ ವಿಚಾರ ಬಂದಾಗ ಸಮುದಾಯದ ಹಿತವೇ ಮುಖ್ಯವಾಗಬೇಕು.ಹೀಗಾಗಿ ಈ ಚುನಾವಣಾ ಕಾರ್ಯ ಪಕ್ಷಾತೀತವಾಗಿ ನಡೆಯಬೇಕಿದೆ ಎಂದು ಒತ್ತಾಯಿಸಿದರು.

ಸಂಘದ ನಾನು ಹಿರಿಯ ಎನ್ನುವವರೆಲ್ಲಾ ಈವರೆಗೆ ಕುಟುಂಬ ರಾಜಕಾರಣವನ್ನು ಪೋಷಿಸುತ್ತಾ, ಇತರರನ್ನು ಕಾಲೆಳೆಯುವ ಕೆಲಸ ಮಾಡಿದವರೇ ಆಗಿದ್ದಾರೆ. ಇಂತಹ ವರ್ತನೆ ಬದಲಿಗೆ ಸಂಘಟಿತ ಮನೋಭಾವ ತೋರಬೇಕಿದೆ.ಸಮುದಾಯವನ್ನು ಕಟ್ಟಿ ಬೆಳೆಸಬೇಕಾದ ಜವಾಬ್ದಾರಿ ಯುವಕರ ಕೈಯಲ್ಲಿದ್ದರೆ ಉತ್ತಮ.ಒಮ್ಮೆ ಇದಕ್ಕೆ ಅವಕಾಶ ಮಾಡಿ ಕೊಡಿ ಎಂದರು.

ಸAಘಕ್ಕೆ ಆಯ್ಕೆಯಾಗುವ 15 ಪದಾಧಿಕಾರಿಗಳಲ್ಲಿ ಇಬ್ಬರು ಅಥವಾ 3 ಮಂದಿ ಹಿರಿಯರನ್ನು ಬಿಟ್ಟು ಉಳಿದವರೆಲ್ಲಾ ಹೊಸಬರೇ ಇರಬೇಕು.ಈಚುನಾವಣೆಯಲ್ಲಿ ಇದೇ ಪ್ರಧಾನ ವಿಷಯವಾಗಬೇಕಿದೆ ಎಂದು ಆಗ್ರಹಿಸಿದರು.

ಸುದ್ದಿಗೋಷ್ಡಿಯಲ್ಲಿ ಗಜೇಂದ್ರ, ಮಂಜುನಾಥ್, ಶ್ರೀನಿವಾಸ್, ಆನಂದ್, ಶಿವಕುಮಾರ್ ಇತರರು ಇದ್ದರು.