ಪತಿಗೆ ಕರೆ ಮಾಡಿದ ಕೆಲ ಹೊತ್ತಲ್ಲೇ ಕುತ್ತಿಗೆ ಸೀಳಿ, ಕಿವಿ ಕತ್ತರಿಸಿದ ಸ್ಥಿತಿಯಲ್ಲಿ ಪತ್ನಿಯ ಮೃತದೇಹ ಪತ್ತೆ; ತೆರೆದ ಬೀರು, 1 ತಟ್ಟೆ ಸಿಹಿತಿಂಡಿ, 2 ಲೋಟ ನೀರು ಕೊಲೆ ರಹಸ್ಯ ಬಿಚ್ಚಿಡುತ್ತ?
Crime News: 60 ವರ್ಷದ ಮಹಿಳೆಯೊಬ್ಬರ ಕುತ್ತಿಗೆ ಸೀಳಿ, ಕಿವಿ ಕತ್ತರಿಸಿ ಬರ್ಬರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಹಳೆಯ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ.
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕೊಲೆಯ ತನಿಖೆ ನಡೆಸುತ್ತಿರುವ ಪೊಲೀಸರು, ಅಧಿಕಾರಿಗಳು, ಮೃತ ಮಹಿಳೆ ಪೂನಂ ಮಿತ್ತಲ್ -
ಲಖನೌ, ಜೂ. 2: 60 ವರ್ಷದ ಮಹಿಳೆಯೊಬ್ಬರ ಕುತ್ತಿಗೆ ಸೀಳಿ, ಕಿವಿ ಕತ್ತರಿಸಿ ಬರ್ಬರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಸಹರಾನ್‌ಪುರದಲ್ಲಿ ನಡೆದಿದೆ (Crime News). ಆಕೆಯ ಪತಿ, ವ್ಯಾಪಾರಿ ಸಂಜಯ್ ಮಿತ್ತಲ್ ತನ್ನ ಪತ್ನಿಯ ಫೋನ್‌ನಿಂದ ಕರೆ ಬಂದ ನಂತರ ಮನೆಗೆ ಧಾವಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದ ಪತ್ನಿಯ ಮೃತದೇಹ ಕಂಡು ಅವರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಹಳೆಯ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಮಿತ್ತಲ್ ಅವರ ಪತ್ನಿಯ ಫೋನ್‌ನಿಂದ ಕರೆ ಬಂದಾಗ ಈ ಅಪರಾಧ ಬೆಳಕಿಗೆ ಬಂದಿತು. ಏನೋ ನಡೆದಿದೆ ಎಂದು ಗ್ರಹಿಸಿದ ಅವರು ವೈದ್ಯರೊಂದಿಗೆ ಮನೆಗೆ ತೆರಳಿದರು.
ಮುಖ್ಯ ಬಾಗಿಲು ತೆರೆದಿರುವುದನ್ನು ಅವರು ನೋಡಿ, ಒಳಹೊಕ್ಕಾಗ ಪತ್ನಿ ಪೂನಂ ಮಿತ್ತಲ್ ಅವರ ಮೃತದೇಹ ಒಳಗೆ ಬಿದ್ದಿರುವುದು ಕಂಡುಬಂದಿತು. ಆಕೆಯ ಕುತ್ತಿಗೆಯಲ್ಲಿ ಆಳವಾದ ಗಾಯಗಳಿದ್ದವು ಮತ್ತು ಅವರು ಧರಿಸಿದ್ದ ಕಿವಿಯೋಲೆಗಳು ಕಾಣೆಯಾಗಿದ್ದವು. ಕಿವಿ ಹರಿದಿತ್ತು.
80 ವರ್ಷದ ವೃದ್ಧೆ ಮೇಲೆ ಅತ್ಯಾಚಾರಗೈದ 28 ವರ್ಷದ ಕಾಮಾಂಧ
ಡ್ರಾಯಿಂಗ್ ರೂಮಿನಲ್ಲಿ ತೆರೆದ ಬೀರು, ಒಂದು ತಟ್ಟೆ ಸಿಹಿತಿಂಡಿ ಮತ್ತು ಎರಡು ಲೋಟ ನೀರು ಪತ್ತೆಯಾಗಿದ್ದು, ಕೊಲೆಗೆ ಕಾರಣವಾದ ಸಂದರ್ಭಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಾಥಮಿಕ ತನಿಖೆ, ಆರೋಪಿಗಳು ಮೃತ ಮಹಿಳೆಗೆ ಪರಿಚಿತ ವ್ಯಕ್ತಿಯಾಗಿರಬಹುದು ಎಂಬುದನ್ನು ಬೊಟ್ಟು ಮಾಡಿದೆ. ಆದರೆ ದರೋಡೆ ನಡೆದಿರುವ ಸ್ಪಷ್ಟ ಲಕ್ಷಣಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಈ ಕೊಲೆ ಹಳೆಯ ದ್ವೇಷ ಅಥವಾ ವೈಯಕ್ತಿಕ ದ್ವೇಷಕ್ಕೆ ಸಂಬಂಧಿಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ʼʼಮಾಹಿತಿ ಪಡೆದ ಕೂಡಲೇ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ತಲುಪಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದವು. ಆರಂಭಿಕ ತನಿಖೆಯು, ಅಪರಾಧಿ ಕುಟುಂಬಕ್ಕೆ ಪರಿಚಿತ ವ್ಯಕ್ತಿಯಾಗಿರುವ ಸಾಧ್ಯತೆ ಇದೆ ಎನ್ನುವುದನ್ನು ಸೂಚಿಸುತ್ತದೆʼʼ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಭಿನಂದನ್ ಹೇಳಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಕೊಲೆ ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಗುರುತಿಸಲು ಆರು ತಂಡಗಳನ್ನು ರಚಿಸಲಾಗಿದೆ. ʼʼಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರು ತಂಡಗಳನ್ನು ರಚಿಸಿದ್ದು, ಪ್ರಕರಣವನ್ನು ಆದಷ್ಟು ಬೇಗ ಬಗೆಹರಿಸಲಾಗುವುದುʼʼ ಎಂದು ಅಭಿನಂದನ್ ತಿಳಿಸಿದ್ದಾರೆ.