ಬೆಳ್ತಂಗಡಿ ನ್ಯಾಯಾಲಯಕ್ಕೆ ಹಿರಿಯ ನ್ಯಾಯವಾದಿ ರಾಜಶೇಖರ್ ಹಿಲಿಯಾರ್ ಭೇಟಿ
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ಕಂಡುಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಸಲ್ಲಿಸಲಾದ ಅರ್ಜಿ ವಿಚಾರಣೆಗಾಗಿ ಹಿರಿಯ ಹಾಗೂ ಖ್ಯಾತ ವಕೀಲ ರಾಜಶೇಖರ್ ಹಿಲಿಯಾರ್ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಅವರು ವಕೀಲರ ತಂಡದ ಭಾಗವಾಗಿ ಹಾಜರಾಗುತ್ತಿದ್ದು, ಈ ಹಿಂದೆ ಸಿ.ವಿ. ನಾಗೇಶ್ ಅವರು ಕ್ಷೇತ್ರದ ಪರವಾಗಿ ವಕಾಲತ್ತು ವಹಿಸಿದರು.