Delhi Election Result 2025: ʼಕೈʼ ಹಿಡಿಯದ ಗ್ಯಾರಂಟಿ ಯೋಜನೆಗಳು; ಕಾಂಗ್ರೆಸ್ ಯುಗಾಂತ್ಯಕ್ಕೆ ಕಾರಣವೇನು?
ದೆಹಲಿ ಚುನಾವಣೆಯ ತ್ರಿಕೋನ ಸ್ವರ್ಧೆಯಲ್ಲಿ ಕಾಂಗ್ರೆಸ್ ಶೂನ್ಯ ಸುತ್ತಿದೆ. ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದ ಗ್ಯಾರಂಟಿ ಯೋಜನೆಗಳು ಉತ್ತರದಲ್ಲಿ ಕೈ ಕೊಟ್ಟಿವೆ. ದೆಹಲಿಯ ಮತದಾರರು ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ್ದಾರೆ. ಕೇವಲ ಗ್ಯಾರಂಟಿಗಳನ್ನು ನಂಬಿಕೊಂಡು ಚುನಾವಣೆಯನ್ನು ಎದುರಿಸಿದ್ದ ಕಾಂಗ್ರೆಸ್ ಇದೀಗ ಬೆಲೆ ತೆತ್ತಿದೆ.
![ದೆಹಲಿಯಲ್ಲಿ ಕಾಂಗ್ರೆಸ್ ಯುಗಾಂತ್ಯ- ʼಕೈʼ ಕೊಟ್ಟ ಗ್ಯಾರಂಟಿ ಯೋಜನೆ!](https://cdn-vishwavani-prod.hindverse.com/media/original_images/Delhi_Election_4.jpg)
![Profile](https://vishwavani.news/static/img/user.png)
ನವದೆಹಲಿ: ದೆಹಲಿ ಚುನಾವಣೆ ಫಲಿತಾಂಶ(Delhi Election Result 2025) ಹೊರ ಬಿದ್ದಿದ್ದು, ಬಿಜೆಪಿಯ ಗೆದ್ದು ಬೀಗಿದೆ. ಆಮ್ ಆದ್ಮಿಯ ದಿಗ್ಗಜ ನಾಯಕರು ಬಿಜೆಪಿ ವಿರುದ್ಧ ಮಕಾಡೆ ಮಲಗಿದ್ದಾರೆ. ತ್ರಿಕೋನ ಸ್ವರ್ಧೆಯಲ್ಲಿ ಕಾಂಗ್ರೆಸ್ ಶೂನ್ಯ ಸುತ್ತಿದೆ. ದಕ್ಷಿಣದ ರಾಜ್ಯಗಳಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದ ಗ್ಯಾರಂಟಿ ಯೋಜನೆಗಳು ಉತ್ತರದಲ್ಲಿ ಕೈ ಕೊಟ್ಟಿವೆ. ಶೂನ್ಯ ಸಾಧನೆ ಮಾಡುವ ಮೂಲಕ ದೆಹಲಿಯಲ್ಲಿ ತನ್ನ ಯುಗಾಂತ್ಯ ಮಾಡಿದೆ. ಕೇವಲ ಗ್ಯಾರಂಟಿಗಳನ್ನು ನಂಬಿಕೊಂಡು ಚುನಾವಣೆಯನ್ನು ಎದುರಿಸಿದ್ದ ಕಾಂಗ್ರೆಸ್ ಮತದಾರರು ಬಿಗ್ ಶಾಕ್ ನೀಡಿದ್ದಾರೆ. ಹಾಗಿದ್ದರೆ, ಕೇವಲ ಗ್ಯಾರಂಟಿ ಬಲದಲ್ಲಿ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಉತ್ತರ ಭಾರತದ ಯಾವ್ಯಾವ ರಾಜ್ಯಗಳಲ್ಲಿ ಸೋಲಿನ ರುಚಿವುಂಡಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಡಿಟೇಲ್ಸ್
ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿಗಳನ್ನು ಘೋಷಿಸಿಕೊಂಡು ಬರುತ್ತಿದೆ. ದಕ್ಷಿಣದ ರಾಜ್ಯಗಳಾದ ಕರ್ನಾಟಕ ಸೇರಿದಂತೆ ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳು ಕೈ ಹಿಡಿದಿದ್ದವು. 2023 ರಲ್ಲಿ ನಡೆದಿದ್ದ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೃಹ ಲಕ್ಷ್ಮೀ ಯೋಜನೆಯ ಮೂಲಕ ಪ್ರತೀ ತಿಂಗಳು ಮಹಿಳೆಯರಿಗೆ 2 ಸಾವಿರ ನೀಡುವುದು ಹಾಗೂ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಜ್ಯೋತಿ ಯೋಜನೆಯಲ್ಲಿ 200 ಯುನಿಟ್ ಉಚಿತ ವಿದ್ಯುತ್ ಮತ್ತು ಬಡವರಿಗಾಗಿ ಅನ್ನ ಭಾಗ್ಯ ಯೋಜನೆ, ನಿರುದ್ಯೋಗಿಗಳಿಗಾಗಿ ಯುವನಿಧಿಯನ್ನು ಜಾರಿಗೆ ತಂದಿತ್ತು. ಅದು ಕಾಂಗ್ರೆಸ್‌ನ ಗೆಲುವಿಗೆ ಕಾರಣವಾಗಿತ್ತು. ತೆಲಂಗಾಣದಲ್ಲಿಯೂ 6 ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಮಹಿಳೆಯರಿಗೆ ಉಚಿತ ಪ್ರಯಾಣ, ರೈತ ಭರೋಸಾ ಇಂದಿರಮ್ಮ ಗೃಹ ನಿರ್ಮಾಣ’ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿತ್ತು. ನಂತರ ಚುನಾವಣೆಯಲ್ಲಿ ಗೆಲುವನ್ನು ಕೂಡ ಸಾಧಿಸಿತ್ತು.
ಉತ್ತರದಲ್ಲಿ "ಕೈ" ಹಿಡಿಯದ ಗ್ಯಾರಂಟಿ
ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಧಿಕ್ಕಾರಕ್ಕೇರಿದ್ದ ಕಾಂಗ್ರೆಸ್, 2023 ರಲ್ಲಿ ನಡೆದಿದ್ದ ಛತ್ತೀಸ್‌ಗಢ ಚುನಾವಣೆಯಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟಿತ್ತು. ಮಹಿಳೆಯರಿಗೆ ವಾರ್ಷಿಕ 15 ಸಾವಿರ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಮತದರಾರ ಬಿಜೆಪಿ ಕೈ ಹಿಡಿದಿದ್ದ. ಮಧ್ಯ ಪ್ರದೇಶ ಹಾಗೂ ರಾಜಸ್ಥಾನದ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕ ಮಾದರಿಯಲ್ಲೇ 7 ಗ್ಯಾರಂಟಿ ಘೋಷಿಸಿದ್ದ ಮನೆಯೊಡತಿಗೆ ವರ್ಷಕ್ಕೆ 10 ಸಾವಿರ ರೂ. ಸಹಾಯ ಧನ, ಸೇರಿದಂತೆ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ವಿಮೆ, ರೈತರ ಕೃಷಿ ಸಾಲ ಮನ್ನಾದಂತಹ ಹಲವು ಭರವಸೆಗಳನ್ನು ನೀಡಿತ್ತು. ಆದರೆ ಅಲ್ಲಿಯೂ ಅಧಿಕಾಕ್ಕೇರಲು ಸಾಧ್ಯವಾಗಿರಲಿಲ್ಲ.
ಇನ್ನು ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗ್ಯಾರಂಟಿ ಫೈಟ್ ತಾರಕಕ್ಕೇರಿತ್ತು. 2 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ, 25 ಲಕ್ಷವರೆಗೆ ಆರೋಗ್ಯ ವಿಮೆ, ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ. ಸಹಾಯ ಧನ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಸೇರಿದಂತೆ ಹಲವು ಭರವಸೆಗಳನ್ನು ನೀಡಿತ್ತು. ಆದರೆ ಮಧ್ಯಪ್ರದೇಶ ಮತದಾರ ಆಡಳಿತಾರೂಢ ಬಿಜೆಪಿಯತ್ತ ಒಲವು ತೋರಿದ್ದ.
ನಿರಂತವಾಗಿ ಸಾಲು ಸಾಲು ಸೋಲು ಕಂಡ ಬಳಿಕವೂ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ನಾಯಕರೂ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿಯೂ ಗ್ಯಾರಂಟಿಯ ಅಸ್ತ್ರವನ್ನು ಬಳಸಿದ್ದರು. 7 ಗ್ಯಾರಂಟಿಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಅಲ್ಲಿಯೂ ಅದು ಯಶಸ್ಸು ಕಾಣಲಿಲ್ಲ. ಇದೀಗ ದೆಹಲಿ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಮುಗ್ಗರಿಸಿದೆ. ಗ್ಯಾರಂಟಿಗಳನ್ನು ಅಸ್ರ್ತವಾಗಿ ಬಳಸಿಕೊಳ್ಳುವ ಅವರ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ.
ಈ ಸುದ್ದಿಯನ್ನೂ ಓದಿ : Delhi Election 2025: ದೆಹಲಿ ಚುನಾವಣೆ: ಕಾಂಗ್ರೆಸ್ ʼಶೂನ್ಯʼ ಸಾಧನೆ-ʼಗ್ಯಾರಂಟಿʼ ಫ್ಲಾಪ್!
ಒಂದೆಡೆ ಸ್ಥಳೀಯ ಮಟ್ಟದಲ್ಲಿ ಸೂಕ್ತವಾದ ನಾಯಕತ್ವದ ಕೊರತೆ ಕಂಡು ಬಂದರೆ, ಇನ್ನೊಂದೆಡೆ ಮತ್ತದೇ ಗ್ಯಾರಂಟಿಗಳನ್ನು ನಂಬಿ ಕಾಂಗ್ರೆಸ್ ಸೋಲನ್ನು ಕಂಡಿದೆ. ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್‌ನಿಂದ ದೂರ ಸರಿಯುತ್ತಿದೆ. ದೆಹಲಿಯ ಸೋಲಿಗೆ ಇವೆಲ್ಲವೂ ಪ್ರಮುಖ ಕಾರಣವೇ.