#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Delhi Election 2025: ವೋಟ್‌ ಮಾಡಿ ಶೇ.50ರಷ್ಟು ರಿಯಾಯಿತಿ ಪಡೆಯಿರಿ! ಡೆಲ್ಲಿ ಮತದಾರರಿಗೆ ವಿಶೇಷ ಆಫರ್‌

ದೆಹಲಿಯಲ್ಲಿ ಚುನಾವಣೆ ನಡೆಯುತ್ತಿದ್ದು, ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಚೇಂಬರ್ ಆಫ್ ಟ್ರೇಡ್ಸ್ ಅಂಡ್ ಇಂಡಸ್ಟ್ರೀಸ್ ವಿನೂತನ ಪ್ರಯತ್ನವೊಂದನ್ನು ಮಾಡಿದ್ದು, ಮತ ಚಲಾಯಿಸಿದವರಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಮತ ಹಾಕಿದ ಸಾಕ್ಷಿಗಾಗಿ ಶಾಯಿ ಹಚ್ಚಿದ ಬೆರಳನ್ನು ತೋರಿಸಿದರೆ ರಿಯಾಯಿತಿ ದೊರೆಯಲಿದೆ.

ವೋಟ್‌ ಮಾಡಿದ್ರೆ ಸ್ಪೆಷಲ್‌ ರಿಯಾಯಿತಿ! ಏನಿದು ಈ ಸ್ಟೋರಿ?

Delhi Election 2025

Profile Vishakha Bhat Feb 5, 2025 3:15 PM

ನವದೆಹಲಿ: ದೆಹಲಿಯಲ್ಲಿ ವಿಧಾನಸಭಾ ಚುನಾವಣೆ(Delhi Election 2025) ನಡೆಯುತ್ತಿದ್ದು, ಜನರು ಮತಗಟ್ಟೆಯ ಬಳಿ ಜಮಾಯಿಸುತ್ತಿದ್ದಾರೆ. ದೆಹಲಿಯಾದ್ಯಂತ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಚೇಂಬರ್ ಆಫ್ ಟ್ರೇಡ್ಸ್ ಅಂಡ್ ಇಂಡಸ್ಟ್ರೀಸ್ (CTI) ವಿನೂತನ ಪ್ರಯತ್ನವೊಂದನ್ನು ಮಾಡಿದ್ದು, ಮತ ಚಲಾಯಿಸಿದವರಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಮತದಾನ ಮಾಡಿದ್ದನ್ನು ಸಾಬೀತುಪಡಿಸಿದರೆ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಸಲೂನ್‌ಗಳು ಮತ್ತು ಬ್ಯೂಟಿ ಪಾರ್ಲರ್‌ಗಳಿಂದ ಹಿಡಿದು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಮಾಲ್‌ಗಳು ಮತ್ತು ಕಾಫಿ ಶಾಪ್‌ಗಳ ವರೆಗೆ ಫೆಬ್ರವರಿ 5 ಮತ್ತು ಫೆಬ್ರವರಿ 6 ರಂದು ಶೇ. 10 ರಿಂದ ಶೇ. 50 ರವರೆಗೆ ರಿಯಾಯಿತಿಗಳನ್ನು ನೀಡುತ್ತಿವೆ. ಸುಮಾರು 500 ಸಲೂನ್‌ಗಳು ಮತ್ತು ಪಾರ್ಲರ್‌ಗಳು ತಮ್ಮ ಸೇವೆಗಳ ಮೇಲೆ ಶೇ. 20 ರಿಂದ ಶೇ. 50ರವರೆಗೆ ರಿಯಾಯಿತಿಯನ್ನು ಒದಗಿಸಲಿದ್ದು, ಅದಕ್ಕೆ ಮತ ಚಲಾಯಿಸಿರಬೇಕು.

ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ಈ ಬಗ್ಗೆ ಮಾತನಾಡಿ, ಈ ರೀತಿಯ ರಿಯಾಯಿತಿಯನ್ನು ನೀಡುವುದರಿಂದ ಜನರು ಮತ ಚಲಾಯಿಸಬಹುದು ಎಂಬ ಆಶಯದೊಂದಿಗೆ ಇದನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಹೆಚ್ಚಿನ ಜನರಿಗೆ ಮತ ಚಲಾವಣೆ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.



ಆಫರ್‌ ಪಡೆಯಬೇಕೆಂದರೆ ಏನು ಮಾಡಬೇಕು?

ದೆಹಲಿಯ ಎಲ್ಲಾ ಮಳಿಗೆಗಳಲ್ಲಿ ಒಟ್ಟು ಬಿಲ್‌ನಲ್ಲಿ 15% ರಿಯಾಯಿತಿಯೊಂದಿಗೆ ಮತದಾರರನ್ನು ಸ್ವಾಗತಿಸುತ್ತಿದೆ. ಮತ ಹಾಕಿದ ಸಾಕ್ಷಿಗಾಗಿ ಶಾಯಿ ಹಚ್ಚಿದ ಬೆರಳನ್ನು ತೋರಿಸಬೇಕು. ಆಗ ಮಾತ್ರ ಈ ಆಫರ್‌ಗಳನ್ನು ಪಡೆಯಲು ಸಾಧ್ಯ . ಹೊಟೇಲ್‌ಗಳಲ್ಲಿಯೂ ಈ ಆಫರ್‌ ಲಭ್ಯವಿದ್ದು, ಮತ ಹಾಕಿದವರು ಕಡಿಮೆ ಬೆಲೆಗೆ ಊಟವನ್ನು ಸವಿಯಬಹುದು.

ಈ ಸುದ್ದಿಯನ್ನೂ ಓದಿ: Viral Video: ಜಬಲ್ಪುರ To ದೆಹಲಿ-ಸಲ್ಲು ಅಭಿಮಾನಿಯ ಮ್ಯಾರಥಾನ್ ಸೈಕಲ್ ಯಾತ್ರೆ; ಇದಕ್ಕಿದೆ ಒಂದು ಪ್ರಮುಖ ಕಾರಣ!

ದೆಹಲಿಯಲ್ಲಿ ಬಿರುಸಿನಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಒಟ್ಟು 83,76,173 ಪುರುಷರು, 72,36,560 ಮಹಿಳೆಯರು ಮತ್ತು 1,267 ತೃತೀಯ ಲಿಂಗದ ಮತದಾರರು ಸೇರಿದಂತೆ 1,56,14,000 ನೋಂದಾಯಿತ ಮತದಾರರಿದ್ದಾರೆ.ಚುನಾವಣೆಗಾಗಿ ಸುಮಾರು 97,955 ಸಿಬ್ಬಂದಿ ಮತ್ತು 8,715 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಇಡೀ ದೆಹಲಿಯಾದ್ಯಂತ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 220 ಕಂಪನಿಗಳು, 19,000 ಗೃಹರಕ್ಷಕ ದಳಗಳು ಮತ್ತು 35,626 ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.