ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

BJP Dominance: ದೇಶದ 15 ರಾಜ್ಯಗಳಲ್ಲಿ ಕೇಸರಿ ಪಡೆಯ ಆಧಿಪತ್ಯ: 4 ದಶಕಗಳ ನಂತರ ಇತಿಹಾಸ ಬರೆದ ಬಿಜೆಪಿ!

ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಆ ಮೂಲಕ 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆಗೆ ಏರಿದೆ. ಕಳೆದ ಹತ್ತು ವರ್ಷಗಳಿಂದ ದೆಹಲಿಯನ್ನು ಭದ್ರಕೋಟೆಯಾಗಿಸಿಕೊಂಡಿದ್ದ ಆಮ್‌ ಆದ್ಮಿ ಈ ಬಾರಿಯ ಚುನಾವಣೆಯಲ್ಲಿ ಮಕಾಡೆ ಮಲಗಿದೆ. ಆಪ್‌ನ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡಿದೆ. ಇದೀಗ ದೆಹಲಿಯಲ್ಲಿ ಅಧಿಕಾರವನ್ನು ಪಡೆಯುವ ಮೂಲಕ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ದೇಶದ 15 ರಾಜ್ಯಗಳಲ್ಲಿ ʼಕಮಲ‌ʼ ಕಮಾಲ್!

BJP Dominance

Profile Deekshith Nair Feb 9, 2025 4:49 PM

ನವದೆಹಲಿ: ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ(Delhi Election 2025) ಬಿಜೆಪಿ(BJP) ಅಭೂತಪೂರ್ವ ಗೆಲುವು ಸಾಧಿಸಿದೆ. ಆ ಮೂಲಕ 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆಗೆ ಏರಿದೆ. ಕಳೆದ ಹತ್ತು ವರ್ಷಗಳಿಂದ ದೆಹಲಿಯನ್ನು ಭದ್ರಕೋಟೆಯಾಗಿಸಿಕೊಂಡಿದ್ದ ಆಮ್‌ ಆದ್ಮಿ ಪಾರ್ಟಿ(AAP) ಈ ಬಾರಿಯ ಚುನಾವಣೆಯಲ್ಲಿ ಮಕಾಡೆ ಮಲಗಿದೆ. ಆ ಮೂಲಕ ಆಪ್‌ನ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡಿದೆ. ಇದೀಗ ದೆಹಲಿಯಲ್ಲಿ ಅಧಿಕಾರವನ್ನು ಪಡೆಯುವ ಮೂಲಕ ಬಿಜೆಪಿ (BJP Dominance) ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. 6 ರಾಜ್ಯಗಳಲ್ಲಿ ಎನ್‌ಡಿಎ(NDA) ಮೈತ್ರಿಕೂಟ ಅಧಿಕಾರದಲ್ಲಿದೆ. ಬರೋಬ್ಬರಿ ನಾಲ್ಕು ದಶಕಗಳ ನಂತರ ಬಿಜೆಪಿ ಈ ದಾಖಲೆಯನ್ನು ಬರೆದಿದೆ. ಕೇಂದ್ರ ಹಾಗೂ 15 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಡಬಲ್‌ ಇಂಜಿನ್ ಸರ್ಕಾರವಾಗಿ ಹೊರಹೊಮ್ಮಿದೆ.

ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಮಣ್ಣು ಮುಕ್ಕಿಸುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಶಸ್ವಿಯಾಗಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಡಬಲ್ ಇಂಜಿನ್‌ ಸರ್ಕಾರ ರಚನೆಯಾಗಿದೆ. ಇದರೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಮತ್ತೊಂದು ರಾಜ್ಯವನ್ನು ಆಳಲಿದೆ. ಬಿಜೆಪಿ ಈಗಾಗಲೇ ದೆಹಲಿಯ ಸುತ್ತಮುತ್ತಲಿನ ರಾಜ್ಯಗಳಾದ ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಅಧಿಕಾರದಲ್ಲಿದೆ. ಅಧಿಕಾರದಲ್ಲಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಬಿಜೆಪಿ 2017ರಿಂದಲೂ ಅಧಿಕಾರ ಪೀಠದಲ್ಲಿ ಕುಳಿತಿದೆ. ಕಳೆದ ವರ್ಷ ನಡೆದ ಹರಿಯಾಣದ ಚುನಾವಣೆಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. 2023ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಅನ್ನು ಹೀನಾಯವಾಗಿ ಸೋಲಿಸಿ ಅಲ್ಲಿಯೂ ಕಮಲವನ್ನು ಅರಳಿಸಿದೆ.



ದೇಶದ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿ ಅಧಿಕಾರ ಅನುಭವಿಸಿದ್ದರೂ ರಾಷ್ಟ್ರ ರಾಜಧಾನಿ ದೆಹಲಿ ಅಧಿಪತ್ಯ ಸಾಧಿಸುವುದು ಮಾತ್ರ 1998ರಿಂದ ಬಿಜೆಪಿಗೆ ಕೈಗೆ ಎಟುಕದ ನಕ್ಷತ್ರವಾಗಿತ್ತು. ಸಾಕಷ್ಟು ಕಸರತ್ತುಗಳನ್ನು ನಡೆಸಿದರೂ ದೆಹಲಿ ಕುರ್ಚಿಯಲ್ಲಿ ಕೂರುವುದು ಸಾಧ್ಯವಾಗಿರಲಿಲ್ಲ.ಇದೀಗ ದೆಹಲಿಯಲ್ಲಿ ಅಧಿಕಾರವನ್ನು ಪಡೆಯುವ ಮೂಲಕ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದರೆ, 6 ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ.

ಈ ಸುದ್ದಿಯನ್ನೂ ಓದಿ:PM Narendra Modi: ಶಾರ್ಟ್ ಕಟ್ ರಾಜಕೀಯಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿದೆ; ಆಪ್‌, ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಹೀಗಿತ್ತು

ಎನ್‌ಸಿಆರ್‌ ರಾಜ್ಯಗಳಲ್ಲೂ ಕೇಸರಿ ಬಾವುಟ

ಶನಿವಾರ (ಫೆ. 8) ಹೊರಬಿದ್ದ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ. 1985ರ ನಂತರ ಅಂದರೆ ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಬಿಜೆಪಿ ಮೊದಲ ಬಾರಿಗೆ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿ ಎಲ್ಲ ರಾಷ್ಟ್ರೀಯ ರಾಜಧಾನಿ ಪ್ರದೇಶಗಳ(NCR) ರಾಜ್ಯಗಳನ್ನು ಆಳಲಿದೆ. ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರ ಆಳ್ವಿಕೆ ಕಾಲದಲ್ಲಿ ಕಾಂಗ್ರೆಸ್‌ ಎನ್‌ಸಿಆರ್‌ ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಇದೀಗ ಬಿಜೆಪಿ ದಾಖಲೆಯ ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಿದೆ. ಎನ್‌ಸಿಆರ್‌ ರಾಜ್ಯಗಳನ್ನೂ ತನ್ನ ಮಡಿಲಿಗೆ ಹಾಕಿಕೊಂಡಿದೆ.

ಕೇಸರಿ ಕಲಿಗಳು ಅಧಿಕಾರದಲ್ಲಿರುವ ರಾಜ್ಯಗಳು

  • ಉತ್ತರಪ್ರದೇಶ
  • ಮಹಾರಾಷ್ಟ್ರ
  • ಉತ್ತರಾಖಂಡ
  • ರಾಜಸ್ಥಾನ
  • ಅಸ್ಸಾಂ
  • ಮಧ್ಯಪ್ರದೇಶ
  • ಹರಿಯಾಣ
  • ತ್ರಿಪುರ
  • ಗೋವಾ
  • ಮಣಿಪುರ
  • ಛತ್ತೀಸಗಢ
  • ದೆಹಲಿ
  • ಗುಜರಾತ್
  • ನಾಗಾಲ್ಯಾಂಡ್
  • ಒಡಿಶಾ

ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವ ರಾಜ್ಯಗಳು

  • ಬಿಹಾರ‌
  • ಅರುಣಾಚಲ ಪ್ರದೇಶ
  • ಸಿಕ್ಕಿಂ
  • ಮೇಘಾಲಯ
  • ಪುದುಚೇರಿ
  • ಆಂಧ್ರಪ್ರದೇಶ

ಯೋಗಿ ಆದಿತ್ಯನಾಥ್(ಉ.ಪ್ರ), ದೇವೆಂದ್ರ ಫಡ್ನವೀಸ್(ಮಹಾರಾಷ್ಟ್ರ), ಹಿಮಂತ ಬಿಸ್ವ ಶರ್ಮಾ(ಅಸ್ಸಾಂ) ಪುಷ್ಕರ್‌ ಸಿಂಗ್‌ ಧಾಮಿ (ಉತ್ತರಾಖಂಡ) ಬಿಜೆಪಿಯ ಪ್ರಮುಖ ಮತ್ತು ಪ್ರಭಾವಿ ಮುಖ್ಯಮಂತ್ರಿಗಳಾಗಿದ್ದಾರೆ. ಬಹುದೊಡ್ಡ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿರುವ ಮತ್ತು ಸುದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಕೇವಲ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರ ಆಡಳಿತ ನಡೆಸುತ್ತಿದೆ.