ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Election: ದೆಹಲಿಯ ಫಲಿತಾಂಶ ರಾಷ್ಟ್ರಮಟ್ಟದಲ್ಲಿ ಮುಖ್ಯ‌ ಏಕೆ?

ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ (BJP) ಅಧಿಕ್ಕಾರಕ್ಕೇರಿದೆ. ಹತ್ತು ವರ್ಷ ಆಡಳಿತ ನಡೆಸಿದ್ದ ಆಮ್‌ ಆದ್ಮಿ ಪಕ್ಷ ಹೀನಾಯ ಸೋಲನ್ನು ಕಂಡಿದೆ. 2019 ರಲ್ಲಿ ದೆಹಲಿಯ ಎಲ್ಲಾ ಏಳು ಸಂಸದೀಯ ಕ್ಷೇತ್ರಗಳನ್ನು ಹಾಗೂ 2024 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಇದೀಗ ದೆಹಲಿಯಲ್ಲಿ ಕಮಲ ಅರಳಿದೆ.

ದೆಹಲಿಯಲ್ಲಿ ಬಿಜೆಪಿ ಕಮಾಲ್‌; ಗೆಲುವಿಗೆ ಕಾರಣವೇನು?

BJP

Profile Vishakha Bhat Feb 9, 2025 10:27 AM

ನವದೆಹಲಿ: ದೆಹಲಿಯಲ್ಲಿ ಚುನಾವಣಾ (Delhi Election) ಫಲಿತಾಂಶ ಹೊರ ಬಿದ್ದಿದ್ದು, 27 ವರ್ಷಗಳ ಬಳಿಕ ಬಿಜೆಪಿ (BJP) ಅಧಿಕ್ಕಾರಕ್ಕೇರಿದೆ. ಹತ್ತು ವರ್ಷ ಆಡಳಿತ ನಡೆಸಿದ್ದ ಆಮ್‌ ಆದ್ಮಿ ಪಕ್ಷ (Aam Admi Party) ಹೀನಾಯ ಸೋಲನ್ನು ಕಂಡಿದೆ. ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಬಿಜೆಪಿ ಅಭ್ಯರ್ಥಿ ಪರ್ವೇಶ್‌ ವರ್ಮಾ ವಿರುದ್ಧ ಸೋತಿದ್ದಾರೆ. ಈ ಬಾರಿ ದೆಹಲಿ ಗದ್ದುಗೆ ಏರುವ ಮೂಲಕ ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಗೆಲುವಿನ ನಗೆಯನ್ನು ಬೀರಿದೆ. 2019 ರಲ್ಲಿ ದೆಹಲಿಯ ಎಲ್ಲಾ ಏಳು ಸಂಸದೀಯ ಕ್ಷೇತ್ರಗಳನ್ನು ಹಾಗೂ 2024 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಇದೀಗ ದೆಹಲಿಯಲ್ಲಿ ಕಮಲ ಅರಳಿದೆ.

ದೆಹಲಿಯಲ್ಲಿ ಬಿಜೆಪಿಯ ಪ್ರಚಂಡ ಗೆಲುವಿಗೆ ಹಲವಾರು ಅಂಶಗಳು ಕಾರಣವಾಗಿದೆ. ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿದಂತೆ ಪ್ರಮುಖ ನಾಯಕರು ದೆಹಲಿಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದರು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೇವಲ ಬಡರನ್ನು ಮಾತ್ರವಲ್ಲದೇ ಮಧ್ಯಮ ವರ್ಗದವರಿಗೂ ಯೋಜನೆಗಳನ್ನು ಘೋಷಣೆ ಮಾಡಿತ್ತು. ಶೌಚಾಲಯಗಳು, ಎಲ್‌ಪಿಜಿ ಸಿಲಿಂಡರ್‌ಗಳು, ಮನೆಗಳು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಬಗ್ಗೆ ಬಿಜೆಪಿ ಹೆಚ್ಚಿನ ಗಮನ ನೀಡಿತ್ತು. ಇನ್ನು ಆಪ್‌ ಸರ್ಕಾರದ ಭ್ರಷ್ಟಾಚಾರ ಹಗರಣ ಸೇರಿದಂತೆ ಹಲವು ಕಾರಣಗಳು ಬಿಜೆಪಿ ಗೆಲುವಿಗೆ ಪ್ರಮುಖ ಪಾತ್ರವನ್ನು ವಹಿಸಿವೆ.

2019 ರಲ್ಲಿ ನಡೆದಿದ್ದ ಲೋಕ ಸಭಾ ಚುನಾವಣೆಯಲ್ಲಿ ಅನಾಯಾಸವಾಗಿ ಗೆಲುವನ್ನು ಸಾಧಿಸಿದ್ದ ಬಿಜೆಪಿ, 2024 ರಲ್ಲಿ ಬಿಜೆಪಿಯ ಆರ್ಥಿಕ ನೀತಿ ಸೇರಿದಂತೆ ಹಲವು ವಿಷಯಗಳು ಚುನಾವಣಾ ಸಂದರ್ಭದಲ್ಲಿ ಹೊಡೆತ ಕೊಟ್ಟಿದ್ದವು. ಆದರೆ ಈ ಬಾರಿಯ ಬಜೆಟ್‌ನಲ್ಲಿ ವಿಷೇಶವಾಗಿ ಮಧ್ಯಮ ವರ್ಗಕ್ಕೆ ಅನುಕೂಲಕರವಾದ್ದರಿಂದ ಮತದಾರ ಮತ್ತೆ ಬಿಜೆಪಿಯತ್ತ ಒಲವನ್ನು ತೋರಿದ್ದಾನೆ.

ಈ ಸುದ್ದಿಯನ್ನೂ ಓದಿ: Delhi Election 2025: ದೆಹಲಿ ಚುನಾವಣೆ: ಕಾಂಗ್ರೆಸ್‌ ʼಶೂನ್ಯʼ ಸಾಧನೆ-ʼಗ್ಯಾರಂಟಿ‌ʼ ಫ್ಲಾಪ್!

ಬಿಹಾರ ಚುನಾವಣೆ ಮೇಲೆ ಹಿಡಿತ

ಈ ಬಾರಿಯ ದೆಹಲಿಯಲ್ಲಿನ ಗೆಲುವು ಮುಂಬರಲಿರುವ ಎಲ್ಲಾ ರಾಜ್ಯಗಳ ವಿಧಾನ ಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ದೆಹಲಿಯಲ್ಲಿ ಬಿಜೆಪಿಯ ಗೆಲುವು ಮಿತ್ರಪಕ್ಷಗಳಿಗೂ ಒಂದು ಸಂದೇಶ ರವಾನಿಸಿದಂತಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ಚುನಾವಣೆಯ ಸೀಟು ಹಂಚಿಕೆ ಸೇರಿದಂತೆ, ಚುನಾವಣಾ ನೀತಿಯ ಮೇಲೆ ಬಿಜೆಪಿ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.