ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangles Fashion: ಯುಗಾದಿ-ರಂಜಾನ್‌ಗೆ ಎಂಟ್ರಿ ನೀಡಿದ ಮಿರ ಮಿರ ಮಿನುಗುವ ಬಳೆಗಳು

Bangles Fashion: ಯುಗಾದಿ-ರಂಜಾನ್‌ ಈ ಎರಡೂ ಹಬ್ಬಗಳ ಈ ಸೀಸನ್‌ನಲ್ಲಿ ಮಾರುಕಟ್ಟೆಗೆ ನಾನಾ ಬಗೆಯ ಮಿರಮಿರ ಮಿನುಗುವ ಬಳೆಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಡಿಸೈನ್‌ನ ರಂಗುರಂಗಾದ ಬಳೆಗಳು ಎಂಟ್ರಿ ನೀಡಿವೆ. ಯಾವ್ಯಾವ ಡಿಸೈನ್‌ನವಕ್ಕೆ ಬೇಡಿಕೆ ಹೆಚ್ಚಿದೆ? ಆಯ್ಕೆ ಹೇಗೆ? ಎಂಬುದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಯುಗಾದಿ-ರಂಜಾನ್‌ಗೆ ಎಂಟ್ರಿ ನೀಡಿದ ಮಿರ ಮಿರ ಮಿನುಗುವ ಬಳೆಗಳು

ಚಿತ್ರಗಳು: ಮಿಂಚು

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುಗಾದಿ-ರಂಜಾನ್‌ ಫೆಸ್ಟಿವ್‌ ಸೀಸನ್‌ನಲ್ಲಿ ಮಾನಿನಿಯರ ಕೈಗಳನ್ನು ಸಿಂಗರಿಸಲು ಮಿರಮಿರ ಮಿನುಗುವ ಬಳೆಗಳು (Bangles Fashion) ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಹೌದು, ಈ ಬಾರಿಯ ಫೆಸ್ಟಿವ್‌ ಸೀಸನ್‌ನಲ್ಲಿ ಯುಗಾದಿ ಹಾಗೂ ರಂಜಾನ್‌ ಎರಡೂ ಹಬ್ಬಗಳು ಒಟ್ಟೊಟ್ಟಿಗೆ ಸಾಲುಸಾಲಾಗಿ ಬಂದಿದ್ದು, ಹಬ್ಬದ ಸಿಂಗಾರಕ್ಕೆ ಪೂರಕವಾಗುವಂತೆ, ಈಗಾಗಲೇ ಮಾರುಕಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ರಂಗುರಂಗಾಗಿರುವ ಮಿನುಗುವ ಬಳೆಗಳು ಆಗಮಿಸಿದ್ದು, ಮಾನಿನಿಯರ ಕೈಗಳನ್ನು ಅಲಂಕರಿಸಲು ಸಿದ್ಧವಾಗಿವೆ. ಹಬ್ಬದ ಸೀಸನ್‌ನಲ್ಲಿ ಬಂದಿರುವ ಬಳೆಗಳಲ್ಲಿ ಕಣ್ಣಿಗೆ ಹಬ್ಬ ನೀಡುವ ಕಲರ್‌ಫುಲ್‌ ಡಿಸೈನ್‌ಗಳು ಬಂದಿವೆ. ಅವುಗಳಲ್ಲಿ ಮೊದಲ ಸ್ಥಾನದಲ್ಲಿ ಸೆಟ್‌ ಬ್ಯಾಂಗಲ್ಸ್‌, ಜೋಡಿ ಬಳೆಗಳು, ಸಿಂಗಲ್‌ ಬಳೆಗಳು, ಸ್ಟೋನ್‌, ಕುಂದನ್‌, ಮೀನಾಂಕಾರಿ ಸೇರಿದಂತೆ ನಾನಾ ಬಗೆಯವು ಲಗ್ಗೆ ಇಟ್ಟಿವೆ. ಅವುಗಳಲ್ಲಿ ಮಿನುಗುವ ಡಿಸೈನ್‌ ಇರುವಂತವಕ್ಕೆ ಹೆಚ್ಚು ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಬ್ಯಾಂಗಲ್ಸ್‌ ಮಾರಾಟಗಾರರು.

1

ಮಿನುಗುವ ಬಳೆಗಳ ಸೆಟ್‌

ಮಿನುಗುವ ಬಳೆಗಳ ಲಿಸ್ಟ್‌ನಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಡಿಸೈನ್‌ ಎಂದರೆ, ಸ್ಟೋನ್‌ ಬ್ಯಾಂಗಲ್ಸ್.‌ ಅವುಗಳಲ್ಲಿ ವೈಟ್‌, ಗೋಲ್ಡ್‌, ಸಿಲ್ವರ್‌ ಕಲರ್‌ ಸ್ಟೋನ್‌ ಇರುವಂತವು ಹೆಚ್ಚು ಡಿಮ್ಯಾಂಡ್‌ ಸೃಷ್ಟಿಸಿಕೊಂಡಿವೆ. ಸೆಟ್‌ ಸ್ಟೋನ್‌ ಬಳೆಗಳನ್ನು ಎಲ್ಲಾ ಉಡುಪಿನೊಂದಿಗೆ ಧರಿಸಬಹುದು. ಇನ್ನು ಗೋಲ್ಡನ್‌ ಕೂಡ ಧರಿಸಬಹುದು. ಹಾಗಾಗಿ ಇವುಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರು.

2

ಜೋಡಿ ಬ್ಯಾಂಗಲ್ಸ್‌

ಸೆಟ್‌ ಬ್ಯಾಂಗಲ್ಸ್‌ ಬೇಡ! ನಮಗೆ ಸಿಂಪಲ್‌ ಜೋಡಿ ಬಳೆ ಸಾಕು, ಎನ್ನುವವರಿಗೆ ಜೋಡಿ ಬಳೆಗಳಲ್ಲಿ ನಾನಾ ವೆರೈಟಿ ಲಭ್ಯ. ಕಲರ್‌ ಉಡುಪುಗಳಿಗೆ ಮ್ಯಾಚ್‌ ಆಗುವಂತಹ ಡಿಸೈನ್‌ನಲ್ಲಿ ಲಭ್ಯ. ಆದರೆ, ಸಾಕಷ್ಟು ಮಂದಿ ಇವನ್ನು ಸೈಡ್‌ ಬಳೆಗಳೆಂದು ಕೂಡ ಧರಿಸುತ್ತಾರೆ. ಇವುಗಳಲ್ಲೂ ಬಹಳಷ್ಟು ಡಿಸೈನ್‌ನವು ಲಭ್ಯ ಎನ್ನುತ್ತಾರೆ ಕಮರ್ಷಿಯಲ್‌ ಸ್ಟ್ರೀಟ್‌ವೊಂದರ ಬಳೆ ವ್ಯಾಪಾರಿ.

3

ಡಿಸೈನರ್‌ ಬಳೆಗಳ ಸೆಟ್‌

ಇವು ಸಾದಾ ಬಳೆಗಳಲ್ಲ. ಇವು ಹೆವ್ವಿ ಡಿಸೈನ್‌ ಇಷ್ಟಪಡುವವರಿಗೆಂದೇ ಸಿದ್ಧಪಡಿಸಲಾದ ಹ್ಯಾಂಡ್‌ ಮೇಡ್‌ ಬಳೆಗಳು. ಇವು ದುಬಾರಿ ಕೂಡ. ಸಾಕಷ್ಟು ಕಲರ್‌ಗಳಲ್ಲಿ ದೊರಕುತ್ತವೆ. ಶಿಮ್ಮರ್‌ ಹಾಗೂ ಚಮಕಿ ಹಾಕಿದ ಬಳೆಗಳು ದೊರೆಯುತ್ತವೆ. ಇವು ಧರಿಸುವವರಿಗೆ ಸೆಲೆಬ್ರೆಟಿ ಲುಕ್‌ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಈ ಸುದ್ದಿಯನ್ನೂ ಓದಿ | Star Summer Fashion Interview: ಸಮ್ಮರ್‌ ಕೂಲ್‌ ಔಟ್‌ಫಿಟ್ಸ್‌ನಲ್ಲಿ ನಟಿ ಜಯಶ್ರೀ ಆರಾಧ್ಯ ಸ್ಟೈಲಿಶ್‌ ಲುಕ್‌

ಬಳೆ ಪ್ರಿಯರಿಗೆ 5 ಸಿಂಪಲ್‌ ಟಿಪ್ಸ್‌

* ಆದಷ್ಟೂ ಕೊಂಚ ಲೂಸಾಗಿರುವ ಬಳೆ ಆಯ್ಕೆ ಮಾಡಿ.

* ಗೋಲ್ಡ್‌ ಹಾಗೂ ವೈಟ್‌ ಶೇಡ್‌ನ ಡಿಸೈನರ್‌ ಬಳೆಗಳು ಎಲ್ಲಾ ಉಡುಪಿಗೂ ಹೊಂದುತ್ತವೆ.

* ಸೆಟ್‌ ಬಳೆಗಳು ಮ್ಯಾಚಿಂಗ್‌ ಉಡುಪಿಗೆ ಮಾತ್ರ ಹೊಂದುತ್ತವೆ.

* ಜೋಡಿ ಬಳೆಗಳನ್ನು ಇತರೇ ಸಮಯದಲ್ಲೂ ಧರಿಸಬಹುದು.

* ಕಡದಂತಹ ಸಿಂಗಲ್‌ ಬಳೆ ಯಾವುದೇ ಉಡುಪಿಗೂ ಧರಿಸಬಹುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)