ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Festival Jewel Fashion 2026: ವರಮಹಾಲಕ್ಷ್ಮೀ ಹಬ್ಬದ ಟ್ರೆಡಿಷನಲ್‌ ಲುಕ್‌ಗಾಗಿ ನೀವು ಧರಿಸಲೇಬೇಕಾದ ಜ್ಯುವೆಲರಿಗಳಿವು

Festival Jewel Fashion 2026: ವರಮಹಾಲಕ್ಷ್ಮೀ ಹಬ್ಬದಂದು ನೀವು ಪಕ್ಕಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಬೇಕ? ಹಾಗಾದಲ್ಲಿ ನೀವು ರೇಷ್ಮೆ ಸೀರೆ ಅಥವಾ ಡಿಸೈನರ್‌ವೇರ್‌ ಜತೆ ಇಲ್ಲಿ ಕೆಳಗೆ ನೀಡಿರುವ ಒಂದಿಷ್ಟು ಸಾಂಪ್ರದಾಯಿಕ ಜ್ಯುವೆಲರಿಗಳನ್ನು ಧರಿಸಿ. ಆಗಷ್ಟೇ ನೋಡಲು ದೇಸಿ ಲುಕ್‌ನಲ್ಲಿ ಕಂಗೊಳಿಸುವಿರಿ ಎನ್ನುತ್ತಾರೆ ಫ್ಯಾಷನ್‌ ತಜ್ಞರು.

ವರಮಹಾಲಕ್ಷ್ಮೀ ಹಬ್ಬದಂದು ನಿಮ್ಮ ಅಲಂಕಾರ ಹೀಗಿರಲಿ

ಚಿತ್ರಗಳು: ಪಿಕ್ಸೆಲ್‌ -

Profile
Siddalinga Swamy Aug 17, 2026 10:06 PM

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವರಮಹಾಲಕ್ಷ್ಮಿ ಹಬ್ಬದಂದು (Festival Jewel Fashion 2026) ನೀವು ಪಕ್ಕಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಬೇಕೇ! ಹಾಗಾದಲ್ಲಿ, ನೀವು ರೇಷ್ಮೆ ಸೀರೆ ಅಥವಾ ಡಿಸೈನರ್‌ವೇರ್‌ ಜತೆ ಇಲ್ಲಿ ಕೆಳಗೆ ನೀಡಿರುವ ಒಂದಿಷ್ಟು ಸಾಂಪ್ರದಾಯಿಕ ಜ್ಯುವೆಲರಿಗಳನ್ನು ಧರಿಸಿ. ಆಗಷ್ಟೇ ನೋಡಲು ದೇಸಿ ಲುಕ್‌ನಲ್ಲಿ ಕಂಗೊಳಿಸುವಿರಿ.

ಬಂಗಾರದ್ದಾಗಬಹುದು ಇಲ್ಲವೇ ಇಮಿಟೇಷನ್‌ ಜ್ಯುವೆಲರಿಯಾಗಿರಬಹುದು. ಇದೀಗ ಟ್ರೆಂಡಿಯಾಗಿರುವ ಬಿಗ್‌ ಜುಮಕಿ ಇಲ್ಲವೇ ಬೆಳ್ಳಿ ಮೋಡ ಜುಮಕಿಯನ್ನು ಧರಿಸಿ. ಜತೆಗೆ ಮಾಟಿ ಇಲ್ಲವೇ ಲೇಯರ್ಡ್ ಕೆನ್ನೆ ಸರಪಳಿ ಅಥವಾ ಮಾಟಿಯನ್ನು ಹಾಕಿಕೊಳ್ಳಿ.

Festival Jewel Fashion

ನೆಕ್ಲೇಸ್‌-ಹಾರದ ಸೆಟ್‌

ಸೀರೆ ಅಥವಾ ಡಿಸೈನರ್‌ವೇರ್‌ ಧರಿಸಿದ ನಂತರ ನಿಮ್ಮ ಕತ್ತನ್ನು ಅಲಂಕರಿಸುವಂತಹ ಅಗಲವಾದ ನೆಕ್ಲೇಸ್‌ ಹಾಗೂ ಹಾರವನ್ನು ಧರಿಸಿ. ಇದು ನಿಮ್ಮನ್ನು ರಾಣಿಯಂತೆ ಬಿಂಬಿಸುತ್ತದೆ.

Jewellery

ಕಂಗನ್‌ ಅಥವಾ ಬಳೆಗಳ ಸೆಟ್‌

ಇದೀಗ ಬಳೆಗಳ ಸೆಟ್‌ಗಳು ದೊರೆಯುತ್ತವೆ. ಇವುಗಳ ಮಧ್ಯೆ ಅಥವಾ ಸೈಡಿಗೆ ಕಂಗನ್‌ ಧರಿಸಿದಲ್ಲಿ ಗ್ರ್ಯಾಂಡ್‌ ಲುಕ್‌ ನೀಡುತ್ತವೆ. ಕೈತುಂಬಾ ಧರಿಸಿದಾಗ ಲಕ್ಷಣವಾಗಿ ಕಾಣುತ್ತವೆ.

Varamahalakshmi festival

ಹಣೆಗೆ ಮಾಂಗ್‌ಟೀಕಾ

ಬೈತಲೆ ಬೊಟ್ಟು ಅಥವಾ ಮಾಂಗ್‌ಟೀಕಾ ನಿಮ್ಮ ಹೇರ್‌ಸ್ಟೈಲನ್ನು ಮತ್ತಷ್ಟು ಅಂದವಾಗಿ ಬಿಂಬಿಸುತ್ತದೆ. ಧರಿಸಿರುವ ಇತರೇ ಜ್ಯುವೆಲರಿಗಳಿಗೆ ಮ್ಯಾಚ್‌ ಆಗುವಂತೆ ಆಯ್ಕೆ ಮಾಡಿ, ಧರಿಸಿ.

ವರಮಹಾಲಕ್ಷ್ಮೀಯ ಅಲಂಕಾರಿಕ ವಸ್ತ್ರಾಭರಣಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌

ಸೊಂಟಕ್ಕೆ ಸೊಂಟದ ಪಟ್ಟಿ

ಉಟ್ಟ ಸೀರೆ ಅಥವಾ ಲಂಗ-ದಾವಣಿಗೆ ಹೊಂದುವಂತೆ ಡಿಸೈನರ್‌ ಸೊಂಟದಪಟ್ಟಿ ಇಲ್ಲವೇ ಕಮರ್‌ಬಾಂದ್‌ ಆಯ್ಕೆ ಮಾಡಿ, ಧರಿಸಿ. ಇದು ಇಡೀ ಲುಕ್ಕನ್ನು ಹೈಲೈಟ್‌ ಮಾಡುವುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)