Festive Season Shopping 2025: ಎಲ್ಲೆಡೆ ಶುರುವಾಯ್ತು ಯುಗಾದಿ-ರಂಜಾನ್ ಫೆಸ್ಟಿವ್ ಸೀಸನ್ ಶಾಪಿಂಗ್
Festive Season Shopping 2025: ಈ ಬಾರಿ ಯುಗಾದಿ- ರಂಜಾನ್ ಹಬ್ಬಗಳು ಒಟ್ಟೊಟ್ಟಿಗೆ ಆಗಮಿಸಿದ್ದು, ಹಾಗಾಗಿ ಎಲ್ಲೆಡೆ ಶಾಪಿಂಗ್ ಶುರುವಾಗಿದೆ. ಈ ಫೆಸ್ಟಿವ್ ಸೀಸನ್‌ನಲ್ಲಿ ಕೇವಲ ಫ್ಯಾಷನ್‌ವೇರ್ಸ್ ಮಾತ್ರವಲ್ಲ, ಆಕ್ಸೆಸರೀಸ್, ಗೃಹಾಲಂಕಾರ ಸಾಮಗ್ರಿಗಳು ಸೇರಿದಂತೆ ಎಲ್ಲವನ್ನೂ ಖರೀದಿಸುವುದು ಹೆಚ್ಚಾಗಿದೆ.

ಚಿತ್ರಗಳು: ಮಿಂಚು

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಎಲ್ಲೆಡೆ ಯುಗಾದಿ ಹಾಗೂ ರಂಜಾನ್ ಫೆಸ್ಟಿವ್ ಸೀಸನ್ ಶಾಪಿಂಗ್ (Festive Season Shopping 2025) ಈಗಾಗಲೇ ಶುರುವಾಗಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಸ್ಟ್ರೀಟ್ ಶಾಪ್‌ಗಳಲ್ಲಿ, ಕಮರ್ಷಿಯಲ್ ಶಾಪ್‌ಗಳಲ್ಲಿ, ವೈವಿಧ್ಯಮಯ ಲೇಡಿಸ್-ಮೆನ್ಸ್-ಕಿಡ್ಸ್ ಫ್ಯಾಷನ್‌ವೇರ್ಸ್, ಬಗೆಬಗೆಯ ಆಕ್ಸೆಸರೀಸ್, ವೆರೈಟಿ ಗೃಹಾಲಂಕಾರ ಸಾಮಗ್ರಿಗಳು ಲಗ್ಗೆ ಇಟ್ಟಿವೆ. ಈ ಬಾರಿಯ ಎರಡು ಹಬ್ಬಗಳು ಒಟ್ಟೊಟ್ಟಿಗೆ ಆಗಮಿಸುತ್ತಿರುವ ಪರಿಣಾಮ, ಫೆಸ್ಟಿವ್ ಸೀಸನ್‌ನಲ್ಲಿ ಶಾಪಿಂಗ್ ಮಾಡುವುದು ಹೆಚ್ಚಾಗಿದೆ. ಕೇವಲ ಡಿಸೈನರ್‌ವೇರ್‌ಗಳು ಮಾತ್ರವಲ್ಲ, ನಾನಾ ಬಗೆಯ ಆಕ್ಸೆಸರೀಸ್‌ಗಳು ಆನ್‌ಲೈನ್ ಹಾಗೂ ಆಫ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದಕ್ಕೆ ಪೂರಕ ಎಂಬಂತೆ, ವಯಸ್ಸಿನ ಭೇದ-ಬಾವವಿಲ್ಲದೇ ಎಲ್ಲ ವಯಸ್ಸಿನ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆಂದು ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿವೆ. ಲಕ್ಷ ರೂ.ಗಳಿಂದಿಡಿದು ಸಾವಿರ ರೂ.ಗಳಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ ಜಾವೀದ್ ಹಾಗೂ ರಜತ್. ಅವರ ಪ್ರಕಾರ, ಈ ಹಬ್ಬದ ಸೀಸನ್‌ನಲ್ಲಿ ಶಾಪಿಂಗ್ ಮಾಡಿದಲ್ಲಿ ಎಕ್ಸ್‌ಕ್ಲೂಸೀವ್ ಡಿಸೈನ್‌ವೇರ್ ಖರೀದಿಸಬಹುದು.

ಹಬ್ಬಕ್ಕೆ ಗ್ರ್ಯಾಂಡ್ ಎಥ್ನಿಕ್ ಡಿಸೈನರ್‌ವೇರ್ಸ್ ಶಾಪಿಂಗ್
ಮಾನಿನಿಯರು, ಹುಡುಗಿಯರು ಧರಿಸುವ ಗ್ರ್ಯಾಂಡ್ ಅನಾರ್ಕಲಿ, ಗಾಗ್ರಾ, ಗರಾರ, ಶರಾರ, ಲೆಹೆಂಗಾ, ಸೀರೆ, ಸಲ್ವಾರ್ ಸೂಟ್ಗಳು ಡಾರ್ಕ್ ಶೇಡ್‌ನಲ್ಲಿ ಎಲ್ಲೆಡೆ ಎಂಟ್ರಿ ನೀಡಿವೆ. ಎಂಬ್ರಾಯ್ಡರಿ ಹಾಗೂ ಹ್ಯಾಂಡ್ ವರ್ಕ್, ಮೆಷಿನ್ ವರ್ಕ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಮಾರಾಟಗಾರರು. ಇನ್ನು ಈ ಫೆಸ್ಟಿವ್ ಸೀಸನ್‌ನಲ್ಲಿ ಪುರುಷರು ಧರಿಸಬಹುದಾದ ಲಾಂಗ್ ಕುರ್ತಾ ಹಾಗೂ ಪಠಾನ್ ಶೈಲಿಯ ಡಿಸೈನರ್‌ವೇರ್‌ಗಳು, ಪಂಚೆ-ಶಲ್ಯ ಹಾಗೂ ಧೋತಿ ಸೆಟ್‌ಗಳು ಲೈಟ್ ಕಲರ್ಸ್‌ನಲ್ಲಿ ಆಗಮಿಸಿವೆ.

ಚಿಣ್ಣರಿಗೆ ಬಂತು ಮಿನಿ ಡಿಸೈನರ್‌ವೇರ್ಸ್
ಇನ್ನು, ಚಿಕ್ಕ ಹೆಣ್ಣು ಮಕ್ಕಳಿಗಂತೂ ಮಿರಮಿರ ಮಿನುಗುವ ಜರತಾರಿ ಹಾಗೂ ಬ್ರೋಕೆಡ್‌ನ ಮಿನಿ ಸಲ್ವಾರ್ ಕಮೀಝ್, ಗರಾರ, ಶರಾರ ಹಾಗೂ ಲಾಂಗ್ ಅನಾರ್ಕಲಿ ಸೂಟ್‌ಗಳು ಬಂದಿವೆ. ಗಂಡು ಮಕ್ಕಳಿಗೆ ಮಿನಿ ಮೆನ್ಸ್ ಫ್ಯಾಷನ್‌ವೇರ್‌ಗಳು ಆಕರ್ಷಕ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ.
ಈ ಸುದ್ದಿಯನ್ನೂ ಓದಿ | Fashion Interview: ಫ್ಯಾಷನ್ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ ಕಂಡಂತೆ ಅಪ್ಪು
ಹಬ್ಬದ ಆಕ್ಸೆಸರೀಸ್ ಮಾರಾಟ
ಈ ಫೆಸ್ಟೀವ್ ಸೀಸನ್‌ನಲ್ಲಿ ರಂಜಾನ್‌ಗೆ ಹೊಂದುವ ಜಗಮಗಿಸುವ ಆಕ್ಸೆಸರೀಸ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಂದಿವೆ. ಯುಗಾದಿಗೆ ಟ್ರೆಡಿಷನಲ್ ಡಿಸೈನ್‌ನವು ಆಗಮಿಸಿವೆ.
* ಶಾಪಿಂಗ್ ಮಾಡುವಾಗ ಟ್ರೆಂಡಿ ಡಿಸೈನ್‌ಗೆ ಆದ್ಯತೆ ನೀಡಿ.
* ಶಾಪಿಂಗ್ ಹೋಗುವಾಗ ಮಕ್ಕಳನ್ನು ಕರೆದೊಯ್ಯಬೇಡಿ.
* ಸೀಸನ್‌ಗೆ ತಕ್ಕಂತೆ ಕಂಫರ್ಟಬಲ್ ಡ್ರೆಸ್ ಧರಿಸಿ ಹೊರಡಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)