Fishcut Lehenga Fashion: ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ ಡಿಸೈನರ್ ಫಿಶ್‌ಕಟ್ ಲೆಹೆಂಗಾ
Fishcut Lehenga Fashion: ಈ ಬಾರಿಯ ವೆಡ್ಡಿಂಗ್ ಹಾಗೂ ಫೆಸ್ಟಿವ್ ಸೀಸನ್‌ನಲ್ಲಿ ನೋಡಲು ಆಕರ್ಷಕವಾಗಿ ಕಾಣಿಸುವ ಡಿಸೈನರ್ ಫಿಶ್ ಕಟ್ ಲೆಹೆಂಗಾಗಳು ಟ್ರೆಂಡಿಯಾಗಿವೆ. ಮಾನಿನಿಯರ ಗ್ರ್ಯಾಂಡ್ ರಾಯಲ್ ಲುಕ್‌ಗೆ ಸಾಥ್ ನೀಡುತ್ತಿವೆ. ಈ ಡಿಸೈನರ್ ಲೆಹೆಂಗಾ ಕುರಿತಂತೆ ಸೆಲೆಬ್ರೆಟಿ ಡಿಸೈನರ್ ಜಯಂತಿ ಬಲ್ಲಾಳ್ ಅವರು ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಚಿತ್ರಗಳು: ಹೇಮಾಮಾಲಿನಿ ಲಕ್ಷ್ಮಣ್, ಮಿಸೆಸ್ ಇಂಡಿಯಾ ಸೌತ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರ್ಯಾಂಡ್ ಲುಕ್ ಇರುವಂತಹ ಫಿಶ್‌ಕಟ್ ಲೆಹೆಂಗಾ ಡಿಸೈನರ್‌ವೇರ್‌ಗಳು (Fishcut Lehenga Fashion) ಈ ಬಾರಿಯ ವೆಡ್ಡಿಂಗ್ ಸೀಸನ್ ಹಾಗೂ ಫೆಸ್ಟಿವ್ ಸೀಸನ್‌ನಲ್ಲಿ ಹಂಗಾಮ ಎಬ್ಬಿಸಿವೆ. ಮದುವೆಯ ಸೀಸನ್‌ನಲ್ಲಿ ಟ್ರೆಡಿಷನಲ್ ಲುಕ್ ಇರುವಂತಹ ಡಿಸೈನರ್‌ವೇರ್‌ಗಳ ಜತೆಗೆ ಈ ಫಿಶ್‌ಕಟ್ ಲೆಹೆಂಗಾಗಳು ಈಗಾಗಲೇ ಹಿಟ್‌ಲಿಸ್ಟ್‌ನಲ್ಲಿದ್ದು, ಬಾಲಿವುಡ್-ಫ್ಯಾಷನ್‌ವುಡ್ ಎಂಬ ಭೇದವಿಲ್ಲದೇ ಮಾನಿನಿಯರ ಮೇಲೆ ಸವಾರಿ ಮಾಡತೊಡಗಿವೆ. ರಾಯಲ್ ಲುಕ್‌ಗೆ ಸಾಥ್ ನೀಡುತ್ತಿವೆ. ದಿನದಿಂದ ದಿನಕ್ಕೆ ಎಥ್ನಿಕ್ ಫ್ಯಾಷನ್ ಉಡುಪುಗಳ ರೂಪು-ರೇಷೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿಯೇ, ಹಲವು ವಿನ್ಯಾಸಗಳು ಸಮ್ಮಿಲನಗೊಂಡಿದ್ದು, ವೆಡ್ಡಿಂಗ್ ಸೀಸನ್‌ಗೂ ಹೊಂದುವಂತೆ ರೂಪುಗೊಂಡಿರುವ ಎದ್ದು ಕಾಣುವಂತಹ ವರ್ಣದಲ್ಲಿ ಫಿಶ್‌ಕಟ್ ಡಿಸೈನರ್ ಲೆಹೆಂಗಾ ವಿನ್ಯಾಸಗಳು ಬಿಡುಗಡೆಯಾಗಿವೆ. ಕಾಲಕ್ಕೆ ತಕ್ಕಂತೆ ಬದಲಾದ ವಿನ್ಯಾಸಗಳು ಇವು ಮತ್ತಷ್ಟು ಆಕರ್ಷಕವಾಗಲು ಕಾರಣ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ಜಯಂತಿ ಬಲ್ಲಾಳ್.
ಇನ್ನು, ಈ ವೆಡ್ಡಿಂಗ್ ಸೀಸನ್‌ನಲ್ಲಿ ಫಿಶ್ ಕಟ್ ಲೆಹೆಂಗಾಗಳು ಬ್ರೈಡಲ್‌ವೇರ್ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ, ಇವು ಇದೀಗ ದಕ್ಷಿಣದತ್ತಲೂ ಪಯಣ ಬೆಳೆಸಿವೆ. ಯುವತಿಯರ ಮನ ಗೆದ್ದಿವೆ ಎನ್ನುತ್ತಾರೆ.

ಫ್ಯಾಷನ್ ಲೋಕದಲ್ಲಿ ಹೆಚ್ಚು ಮೂವಿಂಗ್‌ನಲ್ಲಿರುವ ವೆಡ್ಡಿಂಗ್‌ವೇರ್, ಬ್ರೈಡಲ್‌ವೇರ್, ಫೆಸ್ಟಿವ್‌ವೇರ್ ಜೊತೆಗೆ ಫಿಶ್‌ಕಟ್ ಲೆಹೆಂಗಾಗಳು ತಮ್ಮ ಛಾಪು ಮೂಡಿಸುತ್ತಿವೆ. ಸಾಮಾನ್ಯ ಯುವತಿಯರಿಗೂ ಸೆಲೆಬ್ರೆಟಿ ಲುಕ್ ನೀಡುತ್ತಿವೆ ಎನ್ನುತ್ತಾರೆ ಡಿಸೈನರ್. ಈ ಹೊಸ ವಿನ್ಯಾಸ ಎಲ್ಲರನ್ನೂ ಆಕರ್ಷಿಸುತ್ತಿದೆಯಂತೆ ಎನ್ನುತ್ತಾರೆ.

ಕಂಟೆಂಪರರಿ ಡಿಸೈನ್‌ನಲ್ಲಿ ಫಿಶ್ ಕಟ್ ಲೆಹೆಂಗಾ ಜಾದೂ
ಫಿಶ್ ಕಟ್ ವಿನ್ಯಾಸದ ಲೆಹೆಂಗಾಗಳು ಇದೀಗ ಮಿಕ್ಸ್ ಅಂಡ್ ಮ್ಯಾಚ್, ಕಾಂಟ್ರಾಸ್ಟ್ ಬಣ್ಣ ಹಾಗೂ ಕಂಟೆಪರರಿ, ಟಿಪಿಕಲ್ ಡಿಸೈನ್‌ಗಳಲ್ಲೂ ಫ್ಯಾಷನ್‌ಲೋಕದಲ್ಲಿ ಕಾಣಿಸಿಕೊಂಡಿವೆ. ವಿನ್ಯಾಸಗಳು ಸೂಕ್ಷ್ಮ ರೀತಿಯಲ್ಲಿ ಸಮ್ಮಿಲನಗೊಂಡಿವೆ. ಅವುಗಳಲ್ಲಿ ರೇಷ್ಮೆಯವು, ಕ್ರೇಪ್ ಸಿಲ್ಕ್, ಸೆಮಿ ಸಿಲ್ಕ್‌ನಲ್ಲಿ ವಿನ್ಯಾಸಗೊಂಡಿರುವಂತವು ಹೆಚ್ಚು ಚಾಲ್ತಿಯಲ್ಲಿವೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ಜಯಂತಿ ಬಲ್ಲಾಳ್‌ರವರು.

ಮಾನಿನಿಯರಿಗೆ ರಾಯಲ್ ಲುಕ್
ಹಬ್ಬ-ಹರಿದಿನ, ಸಮಾರಂಭ ಹಾಗೂ ಮದುವೆಗಳಲ್ಲಿ ಧರಿಸಿದಾಗ ಇವು ರಾಯಲ್ ಲುಕ್ ನೀಡುತ್ತವೆ. ಎಲ್ಲರ ಮಧ್ಯೆ ಎದ್ದು ಕಾಣುವಂತೆ ಬಿಂಬಿಸುತ್ತವೆ ಎನ್ನುತ್ತಾರೆ ಮಿಸೆಸ್ ಸೌತ್ ಇಂಡಿಯಾ ಹೇಮಾಮಾಲಿನಿ ಲಕ್ಷ್ಣಣ್. ಅವರ ಪ್ರಕಾರ, ಫಿಶ್ ಕಟ್ ಲೆಹೆಂಗಾದ ಡಿಸೈನರ್ ದುಪ್ಪಟಾಗಳು ಲೆಹೆಂಗಾವನ್ನು ಹೈಲೈಟ್ ಮಾಡುತ್ತವೆ. ಅತ್ಯಾಕರ್ಷಕವಾಗಿ ಬಿಂಬಿಸುತ್ತವೆ.
ಈ ಸುದ್ದಿಯನ್ನೂ ಓದಿ | Bangles Fashion: ಯುಗಾದಿ-ರಂಜಾನ್‌ಗೆ ಎಂಟ್ರಿ ನೀಡಿದ ಮಿರ ಮಿರ ಮಿನುಗುವ ಬಳೆಗಳು
ಫಿಶ್ ಕಟ್ ಲೆಹೆಂಗಾ ಟಿಪ್ಸ್
- ಫಿಶ್ ಕಟ್ ಲೆಹೆಂಗಾಗಳು ಬಾಡಿ ಮಾಸ್ ಇಂಡೆಕ್ಸ್ ಹೈಲೈಟ್ ಮಾಡುತ್ತವೆ.
- ಸ್ಲಿಮ್ ಫಿಟ್ ಬಾಡಿ ಇರುವವರಿಗೆ ಆಕರ್ಷಕವಾಗಿ ಕಾಣಿಸುತ್ತವೆ.
- ಯುವತಿಯರಿಗೆ ಹೇಳಿ ಮಾಡಿಸಿದ ಡಿಸೈನರ್‌ವೇರ್ ಇದು.
- ಫಿಟ್ನೆಸ್ ಕ್ರೇಝಿ ಮಾನಿನಿಯರಿಗಂತೂ ಸಖತ್ತಾಗಿ ಕಾಣಿಸುತ್ತವೆ.
- ಹ್ಯಾಂಡ್‌ವರ್ಕ್ ಫಿಶ್ ಕಟ್ ಲೆಹಂಗಾಗೆ ಆದ್ಯತೆ ನೀಡುವುದು ಉತ್ತಮ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)