ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Holi Mens Fashion 2025: ಹೋಳಿ ಹಬ್ಬದ ಮೆನ್ಸ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಔಟ್‌ಫಿಟ್ಸ್‌ಗಳಿವು

Holi Mens Fashion 2025: ಹೋಳಿ ಹಬ್ಬದ ಮೆನ್ಸ್ ಫ್ಯಾಷನ್‌ನಲ್ಲಿ ಸಾಕಷ್ಟು ವಿಧದ ಔಟ್‌ಫಿಟ್‌ಗಳು ಬಿಡುಗಡೆಗೊಂಡಿವೆ. ಅದರಲ್ಲೂ ಬಣ್ಣದ ಹಬ್ಬದಂದು ಹೈಲೈಟ್ ಆಗುವಂತಹ ಹಾಗೂ ಸೆಲೆಬ್ರೇಷನ್‌ಗೆ ಸಾಥ್ ನೀಡುವಂತವು ಟ್ರೆಂಡಿಯಾಗಿವೆ. ಅವು ಯಾವುವು? ಎಂಬುದರ ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.

ಹೋಳಿ ಹಬ್ಬದ ಮೆನ್ಸ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಔಟ್‌ಫಿಟ್ಸ್‌ಗಳಿವು

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹೋಳಿ ಹಬ್ಬದ ಸೆಲೆಬ್ರೇಷನ್‌ಗೆ ಮೆನ್ಸ್ ಫ್ಯಾಷನ್‌ನಲ್ಲಿ (Holi Mens Fashion 2025) ವೈವಿಧ್ಯಮಯ ಎಥ್ನಿಕ್‌ವೇರ್ ಹಾಗೂ ಕ್ಯಾಶುವಲ್‌ ವೇರ್‌ಗಳು ಬಿಡುಗಡೆಗೊಂಡಿವೆ. ಸಿಂಪಲ್ ಶೆರ್ವಾನಿ, ಕುರ್ತಾ, ಪೈಜಾಮ, ಹಾರೆಮ್ ಪ್ಯಾಂಟ್ಸ್ ಎಂದಿನಂತೆ ಪುರುಷರನ್ನು ಹೋಳಿಯಂದು ಅಲಂಕರಿಸಲಿವೆ. ಸೀಸನ್ ಬದಲಾದಂತೆ, ಲೇಯರ್ ಲುಕ್ ಈ ಹೋಳಿಯಲ್ಲಿ ಹಿಂದೆ ಸರಿದಿದೆ. ಸ್ಟ್ರಿಂಗ್ ಸಮ್ಮರ್ ಹಿನ್ನೆಲೆಯಲ್ಲಿ, ಹೋಳಿಯ ರಂಗು ಹೆಚ್ಚಿಸಲು, ಮತ್ತಷ್ಟು ಲೈಟ್‌ವೇಟ್ ಜೆಂಟ್ಸ್ ಡಿಸೈನರ್‌ವೇರ್‌ಗಳು ಇಂದು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ. ಈ ಬಾರಿ ಹುಡುಗರು ಕಸ್ಟಮೈಸ್ಡ್ ಡಿಸೈನ್‌ನ ಹೋಳಿ ಉಡುಪುಗಳ ಮೊರೆ ಹೋಗಿದ್ದಾರೆ. ತಮಗೆ ಇಷ್ಟ ಬಂದಂತಹ ಡಿಸೈನ್‌ನಲ್ಲಿಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದಾರೆ.

2

ಫ್ಯಾಷನಿಸ್ಟಾ ಜಾನ್ ಪ್ರಕಾರ, ಹುಡುಗಿಯರು ಎಷ್ಟೇ ಮಲ್ಟಿಪಲ್ ಡಿಸೈನ್‌ಗಳಿಗೆ ಮೊರೆ ಹೋದರೂ ಹುಡುಗರು ಮಾತ್ರ ಸದಾ ವೈಟ್ ಹಾಗೂ ಕ್ರೀಮ್ ವರ್ಣವನ್ನೇ ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಈ ವರ್ಣವೇ ಪ್ರತಿ ಹೋಳಿಯಲ್ಲಿ ರಿಪೀಟ್ ಆಗುತ್ತದೆ. ಎಷ್ಟೇ ಟ್ರೆಂಡ್ ಬದಲಾದರೂ ಅತಿ ಹೆಚ್ಚು ಮಂದಿ ವೈಟ್‌ನ ನಾನಾ ಶೇಡ್‌ಗೆ ಮೊರೆ ಹೋಗುತ್ತಾರೆ.

ಈ ಸುದ್ದಿಯನ್ನೂ ಓದಿ | Holi Dresscode 2025: ಹೋಳಿ ಸಂಭ್ರಮಕ್ಕೆ ಬಂತು 3 ಶೈಲಿಯ ಡ್ರೆಸ್ ಕೋಡ್ಸ್

3

ವೆರೈಟಿ ಶ್ವೇತ ವರ್ಣಕ್ಕೆ ಫಿದಾ

ಬಿಳಿ ಬಣ್ಣದಲ್ಲೇ ಮಲ್ಮಲ್ ಹಾಗೂ ಕಾಟನ್ ಮಿಕ್ಸ್ ಇರುವಂತಹ ಸಮ್ಮರ್ ಸೀಸನ್‌ಗೆ ಹೊಂದುವಂತಹ ಕುರ್ತಾ ಅತಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದು ಕಂಡು ಬಂದಿದೆ. ಇನ್ನು ಪ್ಯಾಂಟ್ ಕೂಡ ಅಷ್ಟೇ ಲೂಸಾಗಿರುವ ಹಾರೆಮ್ ಹಾಗೂ ಪಟಿಯಾಲಾದಂತವಕ್ಕೆ ಬೇಡಿಕೆ ಹೆಚ್ಚಾಗಿದೆ. ಫ್ಯಾಬ್ರಿಕ್ ಕೂಡ ಅಷ್ಟೇ. ಒಮ್ಮೆ ಹೋಳಿಯಲ್ಲಿಆಡಿದ ನಂತರ ಕೆಲವೊಮ್ಮೆ ಬಳಸಲು ಆಗುವುದಿಲ್ಲ. ಹಾಗಾಗಿ ತೀರಾ ಹೆಚ್ಚು ಬೆಲೆ ಬಾಳದ ಫ್ಯಾಬ್ರಿಕ್ ಸೆಲೆಕ್ಟ್ ಮಾಡಿಕೊಂಡು ಸ್ಟಿಚ್ ಮಾಡಿಸುತ್ತಿದ್ದಾರೆ. ಇನ್ನು ಡಿಸೈನ್ ಕೂಡ ಅಷ್ಟೇ ನೆಕ್‌ಲೈನ್ ಹೊರತುಪಡಿಸಿದರೆ ಇನ್ನಿತರ ಭಾಗಗಳಲ್ಲಿ ಹೆಚ್ಚು ವಿನ್ಯಾಸದವನ್ನು ಆರಿಸಿಕೊಳ್ಳುತ್ತಿಲ್ಲಎನ್ನುತ್ತಾರೆ ಫ್ಯಾಷನಿಸ್ಟಾ ಕೌಶಲ್ ವಿಶು. ಇನ್ನು ಹೋಳಿಯ ರಂಗಿನ ಮಜಾ ಎಕ್ಸ್ಪಿರಿಯೆನ್ಸ್ ಮಾಡಲು ಆದಷ್ಟೂ ಸೀಸನ್‌ಗೆ ಹೊಂದುವಂತಹ ಔಟ್‌ಫಿಟ್ ಧರಿಸುವುದು ಬೆಸ್ಟ್ ಎನ್ನುತ್ತಾರೆ.

4

ದುಬಾರಿ ಔಟ್‌ಫಿಟ್ ಆವಾಯ್ಡ್ ಮಾಡಿ

* ಆದಷ್ಟೂ ವಾಶ್ ಮಾಡಿದಾಗ ಕಲೆ ಹೋಗುವಂತಹ ಔಟ್‌ಫಿಟ್ ಚಾಯ್ಸ್ ಮಾಡಿ.

* ಕಂಫರ್ಟಬಲ್ ಔಟ್‌ಫಿಟ್ ಖರೀದಿಸಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)