ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Holiday Fashion: ಸಮ್ಮರ್‌ ಹಾಲಿಡೇ ಫ್ಯಾಷನ್‌ಗೆ ಇಲ್ಲಿವೆ 5 ಕೂಲ್‌ ಐಡಿಯಾ

Holiday Fashion: ಸಮ್ಮರ್‌ ಸೀಸನ್‌ನಲ್ಲಿ ಹಾಲಿಡೇ ಫ್ಯಾಷನ್‌ ಶಾಪಿಂಗ್‌ ಇದೀಗ ಮೊದಲಿಗಿಂತ ಹೆಚ್ಚಾಗಿದೆ. ಈ ಸೀಸನ್‌ನಲ್ಲಿ ನೀವು ಖರೀದಿಸುವ ಈ ಫ್ಯಾಷನ್‌ವೇರ್‌ಗಳು ಸೆಕೆಗೆ ಉಸಿರುಗಟ್ಟಿಸುವಂತಿರಬಾರದು. ಏನೇ ಖರೀದಿಸಿದರೂ, ಧರಿಸಿದಾಗ ಆರಾಮ ಏಂದೆನಿಸಬೇಕು. ಈ ಕುರಿತಂತೆ ಫ್ಯಾಷನ್‌ ಎಕ್ಸ್‌ಪರ್ಟ್‌ಗಳು ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.

ಸಮ್ಮರ್‌ ಹಾಲಿಡೇ ಫ್ಯಾಷನ್‌ಗೆ ಇಲ್ಲಿವೆ 5 ಕೂಲ್‌ ಐಡಿಯಾ

ಚಿತ್ರಗಳು: ಪಿಕ್ಸೆಲ್‌

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಮ್ಮರ್‌ ಸೀಸನ್‌ನಲ್ಲಿ ಎಲ್ಲಿ ನೋಡಿದರೂ ಹಾಲಿಡೇ ಫ್ಯಾಷನ್‌ ಶಾಪಿಂಗ್‌ ಮೇನಿಯಾ! ಬೇಸಿಗೆ ರಜೆಯ ಮೋಜಿಗೆಂದು ಹಾಲಿಡೇ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಂತೆ, ಈ ಕೆಟಗರಿಯ ಫ್ಯಾಷನ್‌ವೇರ್‌ಗಳನ್ನು ಶಾಪಿಂಗ್‌ ಮಾಡುವುದು ಅಧಿಕಗೊಂಡಿದೆ. ಸೋ, ಹಾಲಿಡೇ ಫ್ಯಾಷನ್‌ವೇರ್‌ ಶಾಪಿಂಗ್‌ (Holiday Fashion) ಮಾಡುವವರಿಗೆ ಸ್ಟೈಲಿಸ್ಟ್‌ ಜಾನ್‌ ಒಂದಿಷ್ಟು ಸಿಂಪಲ್‌ ಐಡಿಯಾ ನೀಡಿದ್ದಾರೆ. ಲಾಂಗ್‌ ಹಾಲಿಡೇಸ್‌ ಟೂರ್‌ಗೆ ಹೋಗುವುದಾದಲ್ಲಿ ಆದಷ್ಟೂ ಲೈಟ್‌ವೇಟ್‌ ಉಡುಪುಗಳನ್ನು ಕೊಂಡೊಯ್ಯಬೇಕು. ಇನ್ನು ಅಲ್ಲಿನ ವೆದರ್‌ಗೆ ಹೊಂದುವಂತಹ ಉಡುಪುಗಳು ದೊರಕುತ್ತವೆ, ಕೊಳ್ಳಬಹುದು. ಹುಡುಗಿಯರು ಹಾಲಿಡೇ ಫ್ಯಾಷನ್‌ವೇರ್‌ ವಿಷಯದಲ್ಲಿ ಕೊಂಚ ಪ್ರಿಪೇರ್‌ ಆಗಬೇಕಾಗುತ್ತದೆ. ಇವೆಲ್ಲವೂ ಈಗಾಗಲೇ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿವೆ. ಆದರೆ, ಹುಡುಗರಿಗೆ ಹೆಚ್ಚು ಟೆನ್ಷನ್‌ ಮಾಡಿಕೊಳ್ಳಬೇಕಾಗಿಲ್ಲ. ಒಂದೆರೆಡು ಟೀ ಶರ್ಟ್ಸ್ ಹಾಗೂ ಬರ್ಮುಡಾ ಪ್ಯಾಕೇಜ್‌ನಲ್ಲಿದ್ದರಾಯಿತು ಎನ್ನುತ್ತಾರೆ ಮಾಡೆಲ್‌ ವಿನಯ್‌.

1

ಪಿಕ್‌ನಿಕ್‌ಗೆ ರೆಸಾರ್ಟ್‌ವೇರ್‌

ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ರೆಸಾರ್ಟ್‌ವೇರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮಾನಿನಿಯರು ಲಾಂಗ್‌ ಸ್ಕರ್ಟ್ಸ್, ಫುಲ್‌ ಸ್ಲೀವ್‌ ಇರುವಂತಹ ಡ್ರೆಸ್‌ಗಳನ್ನು ದೂರವಿಡಬೇಕು. ನೀವು ಎಲ್ಲಿಗೆ ಪ್ರಯಾಣ ಮಾಡುತ್ತಿದ್ದೀರಾ ಎಂಬುದರ ಆಧಾರದ ಮೇಲೆ ಉಡುಪುಗಳನ್ನು ಚೂಸ್‌ ಮಾಡಬೇಕಾಗುತ್ತದೆ.

ಸಮ್ಮರ್‌ಗಿರಲಿ ಬ್ರೈಟ್‌

ಫೋಟೋಶೂಟ್‌ ಮಾಡಿಸುವುದಾದಲ್ಲಿ ಶಾಪಿಂಗ್‌ ಮಾಡುವಾಗ ಬ್ರೈಟ್‌ ಸನ್‌ಶೇಡ್‌ನಂತವನ್ನು ಚೂಸ್‌ ಮಾಡಿ. ಇಲ್ಲವಾದಲ್ಲಿ ಡಲ್‌ ಆಗಿ ಕಾಣಿಸಬಹುದು. ಟ್ರೆಂಡಿ ಕಲರ್ಸ್‌ ಡಿಸೈನರ್‌ವೇರ್‌ ಶಾಪಿಂಗ್‌ ಮಾಡಿ. ಯಾವುದೇ ಕಾರಣಕ್ಕೂ ಬ್ಲಾಕ್‌, ಕಾಫಿ ಕಲರ್‌, ಡೀಪ್‌ ಬ್ಲ್ಯೂ ವರ್ಣದ ಉಡುಪುಗಳು ಬೇಡ. ಇವು ಬಿಸಿಲ ಶಾಖವನ್ನು ಹೀರುತ್ತವೆ. ನಿತ್ರಾಣಗೊಳಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

2

ವಾಟರ್‌ ಸ್ಪಾಟ್ಸ್‌ ಡ್ರೆಸ್‌ ಆಯ್ಕೆ

ನೀರಿನ ಪ್ರದೇಶಗಳಿಗೆ ಅಥವಾ ವಾಟರ್‌ ಹಾಗೂ ಫನ್‌ ಸ್ಪಾಟ್‌ಗಳಿಗೆ ಹೋಗುವುದಾದಲ್ಲಿ ಆದಷ್ಟೂ ವಾಟರ್‌ ಪ್ರೂಫ್‌ ಡ್ರೆಸ್‌ಗಳನ್ನೇ ಶಾಪ್‌ ಮಾಡಿ. ಇನ್ನು, ಶಾರ್ಟ್‌ ಪ್ಯಾಂಟ್ಸ್‌, ಕೇಪ್ರೀಸ್‌, ಕ್ಯೂಲೆಟ್ಸ್‌ ಈಗಾಗಲೇ ಮಾಲ್‌ಗಳಲ್ಲಿ ಲಗ್ಗೆ ಇಟ್ಟಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಚಿಣ್ಣರ ಶಾಪಿಂಗ್‌ ಹೀಗಿರಲಿ

ಮಕ್ಕಳಿಗೆ ಯಾವುದೇ ಕಾರಣಕ್ಕೂ ಕಿರಿಕಿರಿ ಏನಿಸುವಂತಹ ಉಡುಪುಗಳನ್ನು ಹಾಕಬಾರದು. ಬಿಸಿಲ ಬೇಗೆಗೂ ಆರಾಮ ಏನಿಸಬೇಕು. ಗಾಳಿಯಾಡುವಂತಿರಬೇಕು. ಲೇಯರ್‌ ಲುಕ್‌ ಬೇಡ. ಇದಕ್ಕೆ ಪೂರಕ ಎಂಬಂತೆ, ಸಿಂಪಲ್‌ ಔಟ್‌ಫಿಟ್‌ ಅದರಲ್ಲೂ ಕೋಲ್ಡ್‌ ಶೋಲ್ಡರ್‌ ಹಾಗೂ ಸ್ಲಿವ್‌ಲೆಸ್‌ ಟಾಪ್‌ ಹಾಗೂ ಶರ್ಟ್ಸ್ ಡಿಸೈನರ್‌ವೇರ್‌ ಎಂಟ್ರಿ ನೀಡಿವೆ. ಈ ರೀತಿಯ ನಾನಾ ಬಗೆಯ ಡ್ರೆಸ್‌ಗಳು ಇದೀಗ ಸಮ್ಮರ್‌ ಶಾಪಿಂಗ್‌ ಫೆಸ್ಟಿವಲ್‌ನಲ್ಲಿ ಲಭ್ಯ.

ಈ ಸುದ್ದಿಯನ್ನೂ ಓದಿ | Sheer Fashion: ಬೇಸಿಗೆಯಲ್ಲಿ ಶೀರ್‌ ಫ್ಯಾಷನ್‌ ವೇರ್ಸ್ ಹಂಗಾಮ

ಹಾಲಿಡೇ ಶಾಪಿಂಗ್‌ ಪ್ರಿಯರೇ ಗಮನಿಸಿ

  • ಶಾಪಿಂಗ್‌ ಮಾಡುವಾಗ ಟ್ರೆಂಡ್‌ ಬಗ್ಗೆ ಗಮನದಲ್ಲಿಟ್ಟು ಕೊಳ್ಳಿ.
  • ಸಮ್ಮರ್‌ ಆಫರ್‌ ಬಗ್ಗೆ ತಿಳಿದುಕೊಳ್ಳಿ.
  • ಆನ್‌ಲೈನ್‌ನಲ್ಲಿ ಸಾಕಷ್ಟು ಡಿಸ್ಕೌಂಟ್ಸ್‌ ದೊರೆಯುತ್ತದೆ. ಸದುಪಯೋಗಪಡಿಸಿಕೊಳ್ಳಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)