ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Navaratri Fashion 2026: ನವರಾತ್ರಿಯ ಐದನೇ ದಿನ ಹಳದಿ ಬಣ್ಣದ ಜಾದೂ

ನವರಾತ್ರಿಯ ಐದನೇ ದಿನ ಹಳದಿ ಬಣ್ಣದ ಬಟ್ಟೆಯನ್ನು ಧರಿಸುವುದು ಶುಭ. ಈ ದಿನದಂದು ದುರ್ಗಾ ದೇವಿಯ 5ನೇ ರೂಪವಾದ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಇನ್ನು ನವರಾತ್ರಿಯಲ್ಲಿ ಧರಿಸುವ ಹಳದಿ ಬಣ್ಣ ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವುದು ಮಾತ್ರವಲ್ಲ, ನೋಡುಗರಿಗೂ ಅಂದವಾಗಿ ಕಾಣಿಸಬೇಕು ಎನ್ನುವ ಫ್ಯಾಷನಿಸ್ಟಾ ಶ್ವೇತಾ ನಂದಕುಮಾರ್ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ನವರಾತ್ರಿಯ ಐದನೇ ದಿನ ಹಳದಿ ಬಣ್ಣದ ಜಾದೂ

ಚಿತ್ರಕೃಪೆ: ಪಿಕ್ಸೆಲ್ -

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಯಲ್ಲಿ ಹಳದಿ ವರ್ಣದ ಸೀರೆ ಅಥವಾ ಡಿಸೈನರ್‌ವೇರನ್ನು (Navaratri Fashion 2026) ಟ್ರೆಂಡಿಯಾಗಿ ಧರಿಸಬಹುದು. ಜತೆಗೆ ಫ್ಯಾಷನೆಬಲ್ ಆಗಿಯೂ ಕಾಣಿಸಬಹುದು. ಈ ವರ್ಣವು ಎಂತಹವರನ್ನು ಎದ್ದು ಕಾಣುವಂತೆ ಮಾಡುತ್ತದೆ. ಧರಿಸಿದ ಡಿಸೈನರ್‌ವೇರ್‌ಗಳು ಹೈಲೈಟಾಗುತ್ತವೆ.

ಹೈಲೈಟ್ ಮಾಡುವ ಹಳದಿ ಸೀರೆ

ಹಳದಿ ವರ್ಣವನ್ನು ಸನ್ ಕಲರ್ ಎಂದು ಕೂಡ ಹೇಳಲಾಗುತ್ತದೆ. ನೋಡಲು ಸ್ಕಿನ್‌ ಟೋನ್‌ಗಿಂತ ಹಳದಿ ಡಿಸೈನರ್‌ವೇರ್‌ಗಳು ಎದ್ದು ಕಾಣುವುದರಿಂದ ಆದಷ್ಟೂ ಹೊಂದುವಂತಹ ಉಡುಪುಗಳನ್ನು ಚೂಸ್ ಮಾಡುವುದು ಉತ್ತಮ ಎನ್ನುತ್ತಾರೆ ಫ್ಯಾಷನಿಸ್ಟಾ ಶ್ವೇತಾ. ಅವರ ಪ್ರಕಾರ, ಹಳದಿ ವರ್ಣದಲ್ಲೂ ತಿಳಿ, ಡಾರ್ಕ್, ಮಾನೋಕ್ರೋಮ್ ಪ್ರಿಂಟ್ಸ್, ಡಿಜಿಟಲ್ ಶೇಡ್ಸ್ ಹೀಗೆ ಊಹೆಗೂ ಮೀರಿದ ವರ್ಣಗಳು ಫ್ಯಾಷನ್‌ಲೋಕದಲ್ಲಿ ಎಂಟ್ರಿ ನೀಡಿವೆಯಂತೆ.

Navaratri Fashion

ಗ್ರಾಫಿಕ್ ಟ್ರೆಂಡಿ ಪ್ರಿಂಟ್ಸ್‌ನ ಸೀರೆಗಳು

ಇನ್ನು, ಹಳದಿ ಸೀರೆಗಳಲ್ಲಿ ಇದೀಗ ಗ್ರಾಫಿಕ್ ಪ್ರಿಂಟ್‌ನವು ಹೆಚ್ಚು ಟ್ರೆಂಡಿಯಾಗಿವೆ. ಬಾಲಿವುಡ್ ಸೆಲೆಬ್ರಿಟಿಗಳ ಪ್ರಯೋಗಾತ್ಮಕ ಲಿಸ್ಟ್‌ನಲ್ಲಿರುವ ಸ್ಯಾಟಿನ್ ಹಳದಿ ಸೀರೆಗಳು, ಇದೀಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದ್ದು, ಉಟ್ಟರೆ ಸೆಲೆಬ್ರೆಟಿ ಲುಕ್ ನೀಡುತ್ತವೆ ಎನ್ನುತ್ತಾರೆ ಮಾಡೆಲ್ ದೀಪ್ತಿ.

Saree Fashion

ಹಳದಿ ವರ್ಣದ ಎಥ್ನಿಕ್‌ವೇರ್ಸ್

ಡಿಸೈನರ್ ಪ್ರಕಾರ, ಹಳದಿಯ ಚಿಕನ್ಕಾರಿ ಸೂಟ್, ಕುರ್ತಾ, ಕಮೀಝ್‌ಗಳನ್ನು ವರ್ಕಿಂಗ್ ವುಮೆನ್ ಕೆಟಗರಿಯವರು ಧರಿಸಬಹುದು. ಗ್ರ್ಯಾಂಡ್ ಲುಕ್ ಬೇಕಿದ್ದಲ್ಲಿ, ಗಾಗ್ರ, ಲೆಹೆಂಗಾವನ್ನು ದುಪಟ್ಟಾದೊಂದಿಗೆ ಧರಿಸಬಹುದು. ರಾತ್ರಿಯ ಆಚರಣೆಗಾದಲ್ಲಿ ಶಿಮ್ಮರ್ ಹಾಗೂ ಶೈನಿಂಗ್ ಫ್ಯಾಬ್ರಿಕ್‌ನ ಎಥ್ನಿಕ್‌ವೇರ್ಸ್ ಧರಿಸಬಹುದು ಎನ್ನುತ್ತಾರೆ.

Yellow Colour saree

ಮಿಕ್ಸ್ ಆ್ಯಂಡ್ ಮ್ಯಾಚ್ ಬಗ್ಗೆ ಗಮನವಿರಲಿ

ನವರಾತ್ರಿಯ ಕಲರ್ ಟ್ರೆಂಡ್‌ಗೆ ಧರಿಸುವುದಾದಲ್ಲಿ ಹಳದಿ ಜತೆಗೆ ಯಾವುದೇ ಕಾಂಟ್ರಸ್ಟ್ ಶೇಡ್‌ನ ಮಿಕ್ಸ್ ಮ್ಯಾಚ್ ಬ್ಲೌಸ್ ಅವಾಯ್ಡ್ ಮಾಡಿ. ಡಿಫರೆಂಟ್ ಲುಕ್ ಬೇಕು ಎಂದಲ್ಲಿ ಮಿಕ್ಸ್ ಮ್ಯಾಚ್ ಮಾಡಿ ಧರಿಸಿ ಎನ್ನುವ ಶ್ವೇತಾ ಪ್ರಕಾರ, ಹಳದಿ ಬಣ್ಣವೊಂದರಲ್ಲೆ ಸುಮಾರು 10ಕ್ಕೂ ಹೆಚ್ಚು ಫ್ಯಾಷನ್ ಶೇಡ್‌ಗಳಿವೆ. ಗಾಢ ಹಳದಿ ಹಾಗೂ ಗೋಲ್ಡನ್ ಶೇಡ್ ಇರುವಂತಹ ಕುರ್ತಾಗಳು ಈ ನವರಾತ್ರಿಗೆ ಹೊಂದುತ್ತವೆ ಎನ್ನುತ್ತಾರೆ.

Navaratri Saree Fashion 2026: ನಾರಿಯರ ನವರಾತ್ರಿಯ ಸಂಭ್ರಮಕ್ಕೆ ನವ ವರ್ಣದ ಸೀರೆಗಳು

ಹಳದಿ ವರ್ಣ ಪ್ರಿಯರಿಗೆ ಟಿಪ್ಸ್

  • ಹಳದಿಯ ಪಾಸ್ಟೆಲ್ ವರ್ಣ ಜೆನ್ ಜಿ ಹುಡುಗಿಯರಿಗೆ ಬೆಸ್ಟ್.
  • ಹ್ಯಾಂಡ್‌ವರ್ಕ್ ಇರುವಂತವು ಎಲಿಗೆಂಟ್ ಲುಕ್ ನೀಡುತ್ತದೆ.
  • ಡ್ರೆಸ್ ಅಥವಾ ಸೀರೆಯ ಫ್ಯಾಬ್ರಿಕ್ ಗುಣಮಟ್ಟದ್ದಾಗಿರಬೇಕು.
  • ಮಾನೋಕ್ರೋಮ್ ವರ್ಣಕ್ಕೆ ಆದ್ಯತೆ ನೀಡಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)