Summer Kids Travel Fashion: ಮಕ್ಕಳ ಸಮ್ಮರ್ ಟ್ರಾವೆಲ್ ಫ್ಯಾಷನ್‌ಗೆ ಇಲ್ಲಿವೆ ಸಿಂಪಲ್ ಟಿಪ್ಸ್
Summer Kids Travel Fashion: ಬೇಸಿಗೆ ರಜೆಯಲ್ಲಿ ಟ್ರಾವೆಲ್ ಮಾಡುವ ಮಕ್ಕಳ ಫ್ಯಾಷನ್‌ವೇರ್‌ಗಳು ನೋಡಲು ಆಕರ್ಷಕವಾಗಿದ್ದರೆ ಸಾಲದು. ಜತೆಗೆ ಕಂಫರ್ಟಬಲ್ ಆಗಿರಬೇಕು ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ಜೆನ್. ಪೋಷಕರು ಈ ಕುರಿತಂತೆ ಯಾವ್ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಒಂದಿಷ್ಟು ಸಲಹೆ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ರಜೆಯಲ್ಲಿ ಟ್ರಾವೆಲ್ ಮಾಡುವ ಚಿಣ್ಣರ ಔಟ್‌ಫಿಟ್‌ಗಳು, ಉಡುಗೆಗಳು ಫ್ಯಾಷೆನಬಲ್ (Summer Kids Travel Fashion) ಆಗಿದ್ದರೆ ಸಾಲದು, ಜತೆಗೆ ಆರಾಮದಾಯಕ ಎಂದೆನಿಸಬೇಕು ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ಜೆನ್. ಹೌದು, ಬೇಸಿಗೆಯಲ್ಲಿ ಮಕ್ಕಳೊಂದಿಗೆ ಪಿಕ್ನಿಕ್, ಟೂರ್, ಔಟಿಂಗ್ ಎಂದೆಲ್ಲಾ ಪ್ರಯಾಣಿಸುವ ಚಿಣ್ಣರ ಡ್ರೆಸ್‌ಕೋಡ್ ಬಗ್ಗೆ ಪೋಷಕರು ಗಮನ ನೀಡಬೇಕಾದ್ದು ಅತ್ಯಗತ್ಯ. ಮಕ್ಕಳಿಗೆ ಹಾಕುವ ಒಂದೊಂದು ಉಡುಪು ನೋಡಲು ಸ್ಟೈಲಾಗಿದ್ದರೆ ಸಾಲದು, ಜತೆಗೆ ಕಂಫರ್ಟಬಲ್ ಆಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಅವರಿಗೆ ಕಿರಿಕಿರಿಯಾಗುವುದರೊಂದಿಗೆ ಆರೋಗ್ಯಕ್ಕೂ ಧಕ್ಕೆಯುಂಟಾಗಬಹುದು ಎನ್ನುವ ಜೆನ್ ಒಂದಿಷ್ಟು ಸಿಂಪಲ್ ಟಿಪ್ಸ್ ಐಡಿಯಾಗಳನ್ನು ನೀಡಿದ್ದಾರೆ.

ಸಮ್ಮರ್‌ಗೆ ತಕ್ಕಂತಿರಲಿ ಔಟ್‌ಫಿಟ್ಸ್
ಬೇಸಿಗೆಯ ಸೀಸನ್‌ಗೆ ತಕ್ಕಂತೆ ಮಕ್ಕಳ ಔಟ್‌ಫಿಟ್‌ಗಳಿರಬೇಕು. ಧರಿಸಿದಾಗ ಸೆಕೆಯಾಗಬಾರದು. ಅಲ್ಲದೇ, ಆರಾಮ ಎಂದೆನಿಸಬೇಕು. ಹಾಗಾಗಿ ಟ್ರೆಂಡಿಯಾಗಿರುವ ಉಡುಪುಗಳಿಗಿಂತ ಆರಾಮದಾಯಕ ಎಂದೆನಿಸುವ ಔಟ್‌ಫಿಟ್‌ಗಳನ್ನು ಮಾತ್ರ, ಮಕ್ಕಳಿಗೆ ಪ್ರಿಫರ್ ಮಾಡಬೇಕು. ಅದರಲ್ಲೂ ಉಡುಗೆಗಳು ಲೈಟ್‌ವೈಟ್‌ನದ್ದಾಗಿರಬೇಕು.

ಯೂನಿಸೆಕ್ಸ್ ಡಿಸೈನ್‌ನ ಉಡುಗೆಗಳು ಬೇಡ
ಟ್ರಾವೆಲಿಂಗ್ ಸಮಯದಲ್ಲಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಯೂನಿಸೆಕ್ಸ್ ಡಿಸೈನ್ ಚೂಸ್ ಮಾಡಬೇಡಿ. ಧರಿಸಿದಾಗ ಅವರ ಬಾಡಿಗೆ ಸರಿಯಾಗಿ ಕೂರುವುದಿಲ್ಲ. ಇನ್ನು, ಈ ಸೀಸನ್‌ನಲ್ಲಿ, ಹುಡುಗರಿಗೆ ಸ್ಲೀವ್‌ಲೆಸ್ ಟೀಶರ್ಟ್ ಹಾಕಿಸಿದಲ್ಲಿ, ಹುಡುಗಿಯರಿಗೆ ಸ್ಲೀವ್‌ಲೆಸ್ ಫ್ರಾಕ್ ಹಾಕಿಸಬಹುದು. ಕ್ಯಾಶುವಲ್‌ವೇರ್ ಆದಲ್ಲಿ ಮಾತ್ರ ಇಬ್ಬರಿಗೂ ಒಂದೇ ರೀತಿಯದ್ದನ್ನು ಹಾಕಿಸಬಹುದು. ಟೀಶರ್ಟ್, ಪ್ಯಾಂಟ್, ಬರ್ಮಡಾ, ಶಾರ್ಟ್ಸ್ ಹೀಗೆ ಒಂದೇ ರೀತಿಯಲ್ಲಿ ನಾನಾ ಬಗೆಯಲ್ಲಿ ಮ್ಯಾಚ್ ಮಾಡಬಹುದು.

ಆಕರ್ಷಕ ಟ್ವಿನ್ನಿಂಗ್ ಕಾನ್ಸೆಪ್ಟ್
ಇಬ್ಬರು ಮಕ್ಕಳಿಗಾದಲ್ಲಿ ಟ್ವಿನ್ನಿಂಗ್ ಮಾಡಬಹುದು. ಒಂದೇ ರೀತಿಯ ಉಡುಪುಗಳನ್ನು ಹಾಕಬಹುದು. ನೋಡಲು ಆಕರ್ಷಕವಾಗಿ ಕಾಣುವ ಔಟ್‌ಫಿಟ್ ಚೂಸ್ ಮಾಡಬಹುದು. ಕಾರ್ಟೂನ್ ಕ್ಯಾರೆಕ್ಟರ್ ನಿಂದಿಡಿದು ಟ್ರೆಂಡಿಯಾಗಿರುವ ಫಂಕಿ ಉಡುಪನ್ನು ಹಾಕಬಹುದು. ಸಮ್ಮರ್ ಡಿಸೈನ್‌ಗಳಲ್ಲಿ ನಾನಾ ವಿನ್ಯಾಸದವು ಲಭ್ಯ.
ಪಿಕ್ನಿಕ್‌ಗೆ ಹೀಗಿರಲಿ ಔಟ್‌ಫಿಟ್ಸ್
ಒಂದು ದಿನದ ಫಿಕ್ನಿಕ್‌ಗೆ ಹೋಗುವುದಾದಲ್ಲಿ ಆದಷ್ಟೂ ಅಟ್ರಾಕ್ಟಿವ್ ಆಗಿರುವಂತಹ, ನೋಡಲು ಚೆನ್ನಾಗಿ ಕಾಣುವಂತಹ ಫಂಕಿಸ್ಟೈಲ್ ಇರುವಂತಹ ಸ್ಲಿವ್‌ಲೆಸ್, ಕ್ರಾಪ್‌ಟಾಪ್ಸ್, ಸ್ಟ್ರಾಪ್ಸ್, ಸ್ಪೆಗೆಟಿ, ನೂಡಲ್ಸ್ ಸ್ಟ್ರಾಪ್ ಸೇರಿದಂತೆ ನಾನಾ ಬಗೆಯ ಟಾಪ್‌ಗಳಿರುವಂತಹ ಔಟ್‌ಫಿಟ್‌ಗಳನ್ನು ಹೆಣ್ಣುಮಕ್ಕಳಿಗೆ ಹಾಕಿಸಬಹುದು. ಇನ್ನು ಗಂಡುಮಕ್ಕಳಿಗಾದಲ್ಲಿ ಸಿಂಪಲ್ ಟೀಶರ್ಟ್ಸ್, ಸ್ಲಿವ್‌ಲೆಸ್ ಟಾಪ್ಸ್, ಪಾಕೆಟ್‌ಶಾರ್ಟ್ಸ್, ಪ್ಯಾಂಟ್ಸ್ ಚೂಸ್ ಮಾಡಬಹುದು.

ಟೂರ್‌ಗೆ ಹೋಗುವಾಗ ಹೀಗಿರಲಿ
ಮಕ್ಕಳನ್ನು ಕರೆದುಕೊಂಡು ಲಾಂಗ್‌ಟೂರ್‌ಗಳಿಗೆ ತೆರಳುವುದಾದಲ್ಲಿ, ಆದಷ್ಟೂ ರಫ್ ಆಗಿ ಬಳಸಬಹುದಾದ ಫ್ಯಾಬ್ರಿಕ್‌ನ ಡ್ರೆಸ್‌ಗಳನ್ನು ಆಯ್ಕೆ ಮಾಡಿ. ಸೆಕೆಕಾಲವಾದ್ದರಿಂದ ಬ್ರಿಥೆಬಲ್ ಔಟ್‌ಫಿಟ್ಸ್ ಮಕ್ಕಳಿಗೆ ಹಾಕಿಸಿ. ಅವರು ಧರಿಸುವ ಉಡುಪು ಉಸಿರುಗಟ್ಟಿಸುವಂತಿರಬಾರದು. ನೋಡಲು ಬಣ್ಣಬಣ್ಣದ ಉಡುಪುಗಳನ್ನು ಸೆಲೆಕ್ಟ್ ಮಾಡಿ. ಮುದ್ದುಮುದ್ದಾಗಿ ಕಾಣಿಸುತ್ತವೆ.
ಈ ಸುದ್ದಿಯನ್ನೂ ಓದಿ | Resortwear Fashion: ಸಮ್ಮರ್‌ನಲ್ಲಿ ರೆಸಾರ್ಟ್‌ವೇರ್ ಫ್ಯಾಷನ್ ಹಂಗಾಮ
ಮಕ್ಕಳ ಪರ್ಸನಾಲಿಟಿಗೆ ತಕ್ಕಂತಿರಲಿ
ಮಕ್ಕಳ ಬಾಡಿಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಔಟ್‌ಫಿಟ್ ಆಯ್ಕೆ ಉತ್ತಮ. ತೀರಾ ದೊಗಲೆಯಾದರೂ ಚೆನ್ನಾಗಿ ಕಾಣದು. ತೀರಾ ಟೈಟಾದರೂ ಉಸಿರುಗಟ್ಟಿಸುವುದು. ಹಾಗಾಗಿ ಮಕ್ಕಳ ಆರಾಮಕ್ಕೆ ಸೂಕ್ತವೆನಿಸುವುದನ್ನು ಚೂಸ್ ಮಾಡಿ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)