Varamahalaxmi Makeover 2026: ಹಬ್ಬದ ಅತ್ಯಾಕರ್ಷಕ ಮೇಕೋವರ್‌ಗೆ ಇಲ್ಲಿದೆ 5 ಐಡಿಯಾ
Varamahalaxmi Makeover 2026: ವರಮಹಾಲಕ್ಷ್ಮಿ ಹಬ್ಬ ಹೆಣ್ಣುಮಕ್ಕಳು ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಹಬ್ಬ ಎನ್ನಬಹುದು. ಈ ದಿನ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳಲು ಒಂದೈದು ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ಪಿಕ್ಸೆಲ್ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವರಮಹಾಲಕ್ಷ್ಮಿ ಹಬ್ಬ (Varamahalaxmi Makeover 2026) ಹೆಣ್ಣುಮಕ್ಕಳು ಟ್ರೆಡಿಷನಲ್ ಲುಕ್‌ನಲ್ಲಿ (Traditional look) ಕಾಣಿಸಿಕೊಳ್ಳುವ ಹಬ್ಬ ಎನ್ನಬಹುದು. ಈ ದಿನ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳಲು ಒಂದೈದು ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹಬ್ಬದ ಮೇಕೋವರ್‌ಗೆ ಪ್ಲಾನ್ ಮಾಡಿ
ಫೆಸ್ಟೀವ್ ಸೀಸನ್‌ನಲ್ಲಿ ಫ್ಯಾಬುಲಸ್ ಆಗಿ ಕಾಣಿಸಲು ಮೊದಲೇ ಪ್ಲಾನ್ ಮಾಡಿ. ಯಾವ ಬಗೆಯ ಔಟ್‌ಫಿಟ್ ಅಥವಾ ಸೀರೆ ಉಟ್ಟಲ್ಲಿ ಅಂದವಾಗಿ ಕಾಣಿಸಬಹುದು? ಅದಕ್ಕಾಗಿ ಏನು ಮಾಡಬೇಕು? ಎಂಬುದನ್ನು ಪ್ಲಾನ್ ಮಾಡಿ, ಎಲ್ಲವನ್ನೂ ರೆಡಿಯಾಗಿಟ್ಟುಕೊಳ್ಳಿ.
ಹಬ್ಬಕ್ಕಿರಲಿ ಕಂಪ್ಲೀಟ್ ದೇಸಿ ಲುಕ್
ಹಬ್ಬದಂದು ಟ್ರೆಡಿಷನಲ್ ಇಮೇಜ್ ನೀಡುವ ದೇಸಿ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಉತ್ತಮ. ರೇಷ್ಮೆ ಸೀರೆಗಳು, ಲಂಗ-ದಾವಣಿ, ಉದ್ದಲಂಗ, ಎಥ್ನಿಕ್ ಡಿಸೈನರ್‌ವೇರ್‌ನಂತವನ್ನು ಆಯ್ಕೆ ಮಾಡಿ. ಇವು ಧರಿಸಿದಾಗ ನೋಡಲು ಮನಮೋಹಕವಾಗಿ ಕಾಣಿಸುತ್ತವಲ್ಲದೇ ಅಂದವಾಗಿ ಬಿಂಬಿಸುತ್ತವೆ.
ಸೂಕ್ತ ಜ್ಯುವೆಲರಿ ಧರಿಸಿ
ನೀವು ಧರಿಸಿರುವ ಸೀರೆ ಅಥವಾ ಡಿಸೈನರ್‌ವೇರ್‌ಗೆ ತಕ್ಕಂತೆ ಜ್ಯುವೆಲರಿ ಧರಿಸಿ. ಕಿವಿಗೆ, ಕತ್ತಿಗೆ, ಸೊಂಟಕ್ಕೆ ಟ್ರೆಂಡಿಯಾಗಿರುವ ಆಭರಣಗಳನ್ನು ಧರಿಸಿ. ಸೊಂಟಕ್ಕೆ ಡಾಬು, ಮಾಂಗ್ ಟೀಕಾ, ಕಾಲ್ಗೆಜ್ಜೆ, ತೋಳಿನ ಬಂಧಿ, ಬಿಗ್ ಜುಮ್ಕಾ, ಮಾಟಿ ಧರಿಸಿದಾಗ ಟ್ರೆಡಿಷನಲ್ ಶೃಂಗಾರ ಕಂಪ್ಲೀಟ್ ಆಗುತ್ತದೆ. ಲಕ್ಷ್ಮಿಯಂತೆ ಕಾಣಿಸುವಿರಿ.
ಮೇಕಪ್ ಅಂದವಾಗಿರಲಿ
ಹಣೆಗೆ ಡಿಸೈನರ್ ಬಿಂದಿ ಇರಿಸಿ. ಇದು ಕೂಡ ಸುಂದರವಾಗಿ ನಿಮ್ಮನ್ನು ಬಿಂಬಿಸಬಲ್ಲದು. ಮುಖದ ಮೇಕಪ್ ಹಬ್ಬಕ್ಕೆ ಹೊಂದುವಂತಿರಲಿ.
ಟ್ರೆಡಿಷನಲ್ ಹೇರ್‌ಸ್ಟೈಲ್
ಔಟ್‌ಫಿಟ್ ಅಥವಾ ಟ್ರೆಡಿಷನಲ್ ಸೀರೆಗೆ ಹೊಂದುವಂತಹ ಹೇರ್‌ಸ್ಟೈಲ್ ಮಾಡಿ. ಉದಾಹರಣೆಗೆ., ಉದ್ದದ ಮೊಗ್ಗಿನ ಜಡೆ, ಉದ್ದ ಜಡೆ ಹೆಣೆದು ಹೂ ಮುಡಿಯಿರಿ. ಇಲ್ಲವೇ ಬನ್ ಹೇರ್‌ಸ್ಟೈಲ್ ಮಾಡಿ ಮಲ್ಲಿಗೆ ಹೂ ಮುಡಿಯಿರಿ. ಒಟ್ನಲ್ಲಿ, ವರಮಹಾಲಕ್ಷ್ಮಿ ಹಬ್ಬದಂದು ಟ್ರೆಡಿಷನಲ್ ಶೃಂಗಾರವನ್ನು ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಮಾಡಿ, ಅಂದವಾಗಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)