ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕ ಮತದಾರರ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡಿತ್ತಾ ಚೀನಾ; ಡ್ರ್ಯಾಗನ್ ದೇಶದ ವಿರುದ್ಧ ಟ್ರಂಪ್‌ ಆರೋಪ

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲಿ ಚೀನಾವು ಯುಎಸ್ ಮತದಾರರ ಮಾಹಿತಿಗಳನ್ನು ಹ್ಯಾಕ್ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಶ್ವೇತಭವನದಿಂದ ದೂರದರ್ಶನದ ಪ್ರೈಮ್-ಟೈಮ್ ಭಾಷಣದಲ್ಲಿ ಶುಕ್ರವಾರ ಅವರು ಈ ಮಾಹಿತಿ ನೀಡಿ, 220 ಮಿಲಿಯನ್ ಯುಎಸ್ ಮತದಾರರ ವೈಯಕ್ತಿಕ ಮಾಹಿತಿಯನ್ನು ಬೀಜಿಂಗ್ ಅಕ್ರಮವಾಗಿ ಪಡೆದುಕೊಂಡಿದೆ ಎಂದು ಹೇಳಿದರು.

ಚೀನಾದಿಂದ ಯುಎಸ್ ಮತದಾರರ ಮಾಹಿತಿ  ಹ್ಯಾಕ್

ಸಂಗ್ರಹ ಚಿತ್ರ -

ವಾಷಿಂಗ್ಟನ್: ಹೆಸರು, ವಿಳಾಸ, ಫೋನ್ ನಂಬರ್, ಆದ್ಯತೆಯ ರಾಜಕೀಯ ಪಕ್ಷ, ಮತ ಚಲಾಯಿಸಲು ನೋಂದಾಯಿಸಲು ಅಗತ್ಯವಿರುವ ಇತರ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದ್ದ ಯುಎಸ್ ಮತದಾರರ (US voters information) ರಹಸ್ಯ ಮಾಹಿತಿಗಳನ್ನು ಚೀನಾ (China) ಕಾನೂನು ಬಾಹಿರವಾಗಿ ಪಡೆದುಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಆರೋಪಿಸಿದ್ದಾರೆ. ಶ್ವೇತಭವನದಿಂದ (White House) ದೂರದರ್ಶನದ ಪ್ರೈಮ್-ಟೈಮ್ ಭಾಷಣದಲ್ಲಿ (Prime time speech) ಶುಕ್ರವಾರ ಅವರು ಈ ಮಾಹಿತಿ ನೀಡಿದ್ದು, ಸುಮಾರು 220 ಮಿಲಿಯನ್ ಯುಎಸ್ ಮತದಾರರ ವೈಯಕ್ತಿಕ ಮಾಹಿತಿ ಅಕ್ರಮವಾಗಿ ಬೀಜಿಂಗ್ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಅಮೆರಿಕದ ಇತಿಹಾಸದಲ್ಲೇ ಇದು ಒಂದು ಅತ್ಯಂತ ದೊಡ್ಡ ಸೈಬರ್ ಹ್ಯಾಕಿಂಗ್ ಪ್ರಕರಣವಾಗಿದೆ. ಚೀನಾವು ಇಂತಹ ಒಂದು ಮಹಾ ವಂಚನೆಯ ಮೂಲಕ ಅಮೆರಿಕದ ಸಾರ್ವಭೌಮತ್ವಕ್ಕೆ ಸವಾಲು ಹಾಕಿದೆ. ದೇಶದ ಆಡಳಿತದ ಒಳಗಿರುವವರೇ ಇದರಲ್ಲಿ ಶಾಮೀಲಾಗಿದ್ದು, ಈ ಕೃತ್ಯ ಯಾರಿಗೂ ತಿಳಿಯದಂತೆ ಮುಚ್ಚಿಡಲಾಗಿತ್ತು ಎಂದರು.

ಉಕ್ರೇನ್ ದಾಳಿಯಿಂದ ರಷ್ಯಾಗೆ ಇಂಧನ ಬಿಕ್ಕಟ್ಟು: ಪೆಟ್ರೋಲ್ ಪೂರೈಸುವಂತೆ ಭಾರತಕ್ಕೆ ಮನವಿ; ಏನಿದು ಹೊಸ ಬೆಳವಣಿಗೆ?

ದೇಶಾದ್ಯಂತ ನವೆಂಬರ್ ತಿಂಗಳಲ್ಲಿ ಮಧ್ಯಂತರ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನವೇ 2020 ರ ಚುನಾವಣೆಗಳಿಗೆ ಸಂಬಂಧಿಸಿ ಮಾತನಾಡಿದ ಅವರು, ದೇಶದ ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳ ಕುರಿತು ಗುಪ್ತಚರ ಇಲಾಖೆ ದಾಖಲೆಗಳನ್ನು ಸಂಗ್ರಹಿಸುತ್ತಿದೆ ಎಂದು ತಿಳಿಸಿದರು.

2020ರ ಚುನಾವಣೆಗೂ ಮೊದಲು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಇತಿಹಾಸದಲ್ಲಿಯೇ ಅತಿದೊಡ್ಡ ಚುನಾವಣಾ ದತ್ತಾಂಶವನ್ನು ಹ್ಯಾಕ್ ಮಾಡಿದೆ. ಇದರ ಮೂಲಕ 220 ಮಿಲಿಯನ್ ಯುಎಸ್ ಮತದಾರರ ಫೈಲ್‌ಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಬಗ್ಗೆ ಎಫ್‌ಬಿಐ ತನಿಖೆ ನಡೆಸಲಾಗುವುದು ಎಂದರು.

ಹತ್ತಾರು ಮಿಲಿಯನ್ ಮತದಾರರ ಮಾಹಿತಿಗಳನ್ನು ಕದ್ದ ಚೀನಾ ಡೊನಾಲ್ಡ್ ಟ್ರಂಪ್ ಗೆಲ್ಲದಂತೆ ಮಾಡಲು ಪ್ರಯತ್ನಿಸಿತ್ತು. ಆದರೆ ವಿಷಯವನ್ನು ಮುಚ್ಚಿ ಹಾಕಲಾಗಿದೆ. 2018ರಿಂದ ಚೀನಾವು ಅಮೆರಿಕದ ರಾಜಕೀಯದ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಿದೆ. ಹಿಂದಿನ ಅಧ್ಯಕ್ಷರಾದ ಜೋ ಬಿಡೆನ್, ಬರಾಕ್ ಒಬಾಮಾ ಅವರ ಅಧಿಕಾರಾವಧಿಯ ಕಾಲದಲ್ಲೂ ಇದು ನಡೆದಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

ಅಮೆರಿಕದಲ್ಲಿ ಬಳಸಲಾಗುವ ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆಗಳಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ ಟ್ರಂಪ್, ನಾವು ಸಾರ್ವಜನಿಕ ಇಂಟೆಲ್ ಮೌಲ್ಯಮಾಪನವನ್ನು ಮಾಡುತ್ತಿದ್ದೇವೆ. ಎಲೆಕ್ಟ್ರಾನಿಕ್ ಯಂತ್ರಗಳನ್ನು ಹ್ಯಾಕ್ ಮಾಡಬಹುದು ಎಂದು ಸರ್ಕಾರಗಳಿಗೆ ತಿಳಿದಿದೆ ಎಂದರು.

ರಷ್ಯಾ, ಚೀನಾ, ಇರಾನ್, ಉತ್ತರ ಕೊರಿಯಾಗಳು ಅಮೆರಿಕದ ಚುನಾವಣೆಗಳಿಗೆ ಹಾನಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. 2020 ರ ಅಧ್ಯಕ್ಷೀಯ ಚುನಾವಣೆಯು ವ್ಯಾಪಕ ವಂಚನೆಯಿಂದ ಕೂಡಿತ್ತು ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿ ಡೊನಾಲ್ಡ್ ಟ್ರಂಪ್ ಅವರ ಆಪ್ತರು ಸಲ್ಲಿಸಿದ್ದ 60 ಕ್ಕೂ ಹೆಚ್ಚು ಮೊಕದ್ದಮೆಗಳನ್ನು ನ್ಯಾಯಾಲಯ ಆಲಿಸಿದ್ದು, ಇದಕ್ಕೆ ಸಂಬಂಧಿಸಿ ದಾಖಲೆ ಸಿಗದೇ ಇದ್ದುದರಿಂದ ಯಾವುದೇ ತೀರ್ಪು ನೀಡಲಾಗಿಲ್ಲ.

ಯುಎಸ್ ಮತದಾರರ ದಾಖಲೆಗಳು ಚೀನಾ ವಶಕ್ಕೆ ಹೋಗಲು ತಮ್ಮದೇ ಗುಪ್ತಚರ ಸಂಸ್ಥೆಯವರು ಸಹಕರಿಸಿದ್ದಾರೆ ಎಂದು ಆರೋಪಿಸಿರುವ ಟ್ರಂಪ್ ಹೇಳಿಕೆಯನ್ನು ಯುಎಸ್ ಗುಪ್ತಚರ ವಿಭಾಗವು ನಿರಾಕರಿಸಿದೆ. 2020ರ ಚುನಾವಣೆ ಫಲಿತಾಂಶದ ಮೇಲೆ ಚೀನಾ ಪ್ರಭಾವ ಬೀರಲು ಪ್ರಯತ್ನಿಸಿಲ್ಲ ಎಂದು ಹೇಳಿದೆ.

''ನೀನು ಮುಸ್ಲಿಮಾ?ʼʼ ಧರ್ಮ ಕೇಳಿ ಭಾರತ ಮೂಲದ ಮುಸ್ಲಿಂ ವ್ಯಕ್ತಿಯ ಮೇಲೆ ಅಮೆರಿಕದಲ್ಲಿ ಚಾಕು ದಾಳಿ

ಅಮೆರಿಕದ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಆತಂಕ ವ್ಯಕ್ತಪಡಿಸುವ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಚುನಾವಣಾ ಭದ್ರತೆಗೆ ಸಂಬಂಧಿಸಿದ ಹಲವಾರು ಸರ್ಕಾರಿ ವ್ಯವಸ್ಥೆಗಳನ್ನು ದುರ್ಬಲಗೊಳಿಸಿದ್ದಾರೆ. ಮುಖ್ಯವಾಗಿ ಸೈಬರ್ ಸೆಕ್ಯುರಿಟಿ ಮತ್ತು ಇನ್ಫ್ರಾಸ್ಟ್ರಕ್ಚರ್ ಸೆಕ್ಯುರಿಟಿ ಏಜೆನ್ಸಿ (ಸಿಐಎಸ್ಎ) ನಲ್ಲಿ ಸುಮಾರು 1,100 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ದ್ವಿಪಕ್ಷೀಯ ಚುನಾವಣಾ ಸಹಾಯ ಆಯೋಗವನ್ನು ಕೂಡ ವಿಸರ್ಜಿಸಲಾಗಿದೆ ಎಂದು ಆರೋಪಿಸಲಾಗಿದೆ.