Elon Musk: ಅಮೆರಿಕದ ರಾಜಕೀಯದಲ್ಲಿ ಭಾರೀ ಬದಲಾವಣೆ; ಹೊಸ ಪಕ್ಷ ಘೋಷಿಸಿದ ಎಲಾನ್ ಮಸ್ಕ್!
ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗಿನ ಮುನಿಸಿನ ಬೆನ್ನಲ್ಲೇ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ಶನಿವಾರ ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷವನ್ನು (America Party) ಘೋಷಿಸಿದ್ದಾರೆ.


ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮುನಿಸಿನ ಬೆನ್ನಲ್ಲೇ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ಶನಿವಾರ ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷವನ್ನು (America Party) ಘೋಷಿಸಿದ್ದಾರೆ. ಈ ಕುರಿತು ಮಾತನಾಡಿದ ಟ್ರಂಪ್ ಅಮೆರಿಕದಲ್ಲಿರುವ ಏಕಪಕ್ಷ ವ್ಯವಸ್ಥೆ ಮುಕ್ತಗೊಳಿಸೋಣ. ಈಗಿರುವ 2 ಪಕ್ಷಗಳಿಂದ ಜನತೆಗೆ ಸ್ವಾತಂತ್ರ್ಯ ಬೇಕಿದೆ. ಈ ಹೊಸ ಪಕ್ಷದಿಂದ ಜನರು ಸ್ವತಂತ್ರರಾಗುತ್ತಾರೆ ಎಂದು ಮಸ್ಕ್ ಹೇಳಿದ್ದಾರೆ.
ಎಕ್ಸ್‌ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, ಸಮೀಕ್ಷೆಯಲ್ಲಿ, ಸಾರ್ವಜನಿಕರು 2:1 ಅನುಪಾತದಲ್ಲಿ ಹೊಸ ರಾಜಕೀಯ ಆಯ್ಕೆಯ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ಅಮೆರಿಕ ಪಕ್ಷವನ್ನು ಕಟ್ಟಲಾಗಿದೆ. ಇದು ಅಮೆರಿಕನ್ನರಿಗೋಸ್ಕರವೇ ರಚನೆಯಾದ ಪಕ್ಷ ಎಂದು ಹೇಳಿದ್ದಾರೆ. ನಮ್ಮ ದೇಶವನ್ನು ವ್ಯರ್ಥ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯ ಬಂದಾಗ, ನಾವು ಪ್ರಜಾಪ್ರಭುತ್ವದಲ್ಲಿ ಅಲ್ಲ, ಏಕಪಕ್ಷೀಯ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ’ ಎಂದು ಹೇಳುವ ಮೂಲಕ ಮಸ್ಕ್ ತಮ್ಮ ಪ್ರಕಟಣೆಯಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಟೀಕಿಸಿದ್ದಾರೆ.
ಜುಲೈ 4 ರಂದು ನಡೆದ ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಎಲಾನ್ ಮಸ್ಕ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಲ್ ಒಂದನ್ನು ಹಾಕಿದ್ದರು. ಅದರಲ್ಲಿ ಅವರು ‘ಸ್ವಾತಂತ್ರ್ಯ ದಿನವು ಎರಡು ಪಕ್ಷಗಳ (ಕೆಲವರು ಇದನ್ನು ಏಕಪಕ್ಷ ಎಂದು ಕರೆಯುತ್ತಾರೆ) ವ್ಯವಸ್ಥೆಯಿಂದ ಸ್ವಾತಂತ್ರ್ಯ ಬೇಕೇ ಎಂದು ಕೇಳಲು ಸೂಕ್ತ ಸಮಯ! ನಾವು ಅಮೆರಿಕವನ್ನು ಪಕ್ಷವನ್ನಾಗಿ ಮಾಡಬೇಕೇ?’ಎಂದು ಕೇಳಿದ್ದರು. ಈ ಸಮೀಕ್ಷೆಯಲ್ಲಿ, 65.4% ಜನರು 'ಹೌದು' ಎಂದು ಮತ ಚಲಾಯಿಸಿದರೆ, 34.6% ಜನರು 'ಇಲ್ಲ' ಎಂದು ಹೇಳಿದ್ದಾರೆ. ಸಾರ್ವಜನಿಕ ಬೆಂಬಲವನ್ನು ಗಮನಿಸಿದ ಮಸ್ಕ್ ಅಮೆರಿಕ ಪಕ್ಷವನ್ನು ಕಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: Rahul Gandhi: ಟ್ರಂಪ್ ತೆರಿಗೆ ನಿಯಮಕ್ಕೆ ಪ್ರಧಾನಿ ತಲೆಬಾಗುತ್ತಾರೆ; ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
ಹೊಸ ಪಕ್ಷವು 2026 ರ ಮಧ್ಯಂತರ ಚುನಾವಣೆಗಳ ಮೇಲೆ ಅಥವಾ ಅದರ ಎರಡು ವರ್ಷಗಳ ನಂತರದ ಅಧ್ಯಕ್ಷೀಯ ಚುನಾವಣೆಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಇದು ಯಶಸ್ವಿಯಾದರೆ, ಉಳಿದ ಪಕ್ಷಗಳಿಗೆ ಭಾರೀ ಹೊಡೆತವಂತೂ ಬೀಳುತ್ತದೆ. ಮಸ್ಕ್ ಹೊಸ ರಾಜಕೀಯ ತಂತ್ರಗಳನ್ನು ಯಶಸ್ವಿಯಾಗಿ ಪ್ರಯತ್ನಿಸಿದರೆ, ಟ್ರಂಪ್ ತಮ್ಮ ಪಕ್ಷಕ್ಕೂ ಅದನ್ನೇ ಬಳಸಿಕೊಳ್ಳುವಂತೆ ಒತ್ತಾಯಿಸಬಹುದು. ಇದು ಅಮೆರಿಕ ರಾಜಕೀಯ ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ.