Israel- Hamas: ಇಸ್ರೇಲ್- ಹಮಾಸ್ ಕದನ ವಿರಾಮ ಫಿಕ್ಸ್? ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ
ಇಸ್ರೇಲ್ ಹಾಗೂ ಹಮಾಸ್ ( Israel- Hamas) ನಡುವಿನ ಯುದ್ಧ ತೆರೆ ಬೀಳುವ ಹಂತಕ್ಕೆ ಬಂದು ತಲುಪಿದೆ. ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಯೋಜನೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಇತರ ಕೆಲವು ಷರತ್ತುಗಳನ್ನು ಹಮಾಸ್ ಒಪ್ಪಿಕೊಂಡಿದೆ.

-

ಗಾಜಾ: ಇಸ್ರೇಲ್ ಹಾಗೂ ಹಮಾಸ್ (Israel- Hamas) ನಡುವಿನ ಯುದ್ಧ ತೆರೆ ಬೀಳುವ ಹಂತಕ್ಕೆ ಬಂದು ತಲುಪಿದೆ. ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಯೋಜನೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಇತರ ಕೆಲವು ಷರತ್ತುಗಳನ್ನು ಹಮಾಸ್ ಒಪ್ಪಿಕೊಂಡ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಇಸ್ರೇಲ್‌ಗೆ ಗಾಜಾ ಮೇಲೆ ಬಾಂಬ್ ದಾಳಿ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಹೇಳಿದ್ದಾರೆ. ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್ ಒಪ್ಪಿಗೆಯನ್ನು ಸೂಚಿಸಿದೆ. ಆದಾಗ್ಯೂ, ಪ್ರಸ್ತಾವನೆಯ ಕೆಲವು ಭಾಗಗಳನ್ನು ಒಪ್ಪಿಕೊಂಡರೂ, ಇತರ ಅಂಶಗಳಿಗೆ ಹೆಚ್ಚಿನ ಮಾತುಕತೆ ಅಗತ್ಯವಿದೆ ಎಂದು ಹಮಾಸ್ ಹೇಳಿದೆ.
ತಕ್ಷಣವೇ ಮಧ್ಯವರ್ತಿಗಳ ಮೂಲಕ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು" ಸಿದ್ಧ ಎಂದು ಭಯೋತ್ಪಾದಕ ಗುಂಪು ಹೇಳಿಕೆಯಲ್ಲಿ ತಿಳಿಸಿದೆ. ಇದು ಕಾರ್ಯರೂಪಕ್ಕೆ ಬಂದರೆ, ಅಕ್ಟೋಬರ್ 2023 ರಲ್ಲಿ ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಸೆರೆಹಿಡಿಯಲಾದ ಒತ್ತೆಯಾಳುಗಳು ಬಿಡುಗಡೆಗೊಳ್ಳಲಿದ್ದಾರೆ. ಗಾಜಾದ ಆಡಳಿತವನ್ನು ಪ್ಯಾಲೆಸ್ಟೀನಿಯನ್ ಸಂಸ್ಥೆಗೆ ಹಸ್ತಾಂತರಿಸಲು ಹಮಾಸ್ ಸಿದ್ಧವಿದೆ ಎಂದು ಪುನರುಚ್ಚರಿಸಿದೆ. ಹಮಾಸ್ ಅರಬ್, ಇಸ್ಲಾಮಿಕ್ ಮತ್ತು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನಗಳನ್ನು ಮೆಚ್ಚುತ್ತದೆ" ಎಂದು ಹಮಾಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಹಮಾಸ್ ಹೇಳಿಕೆಯ ನಂತರ, ಡೊನಾಲ್ಡ್ ಟ್ರಂಪ್ ಇಸ್ರೇಲ್ ಅನ್ನು ಗಾಜಾದಲ್ಲಿ ತನ್ನ ಬಾಂಬ್ ದಾಳಿ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಕೇಳಿಕೊಂಡರು. ಅಷ್ಟೇ ಅಲ್ಲದೇ ಹಮಾಸ್ ಕದನ ವಿರಾಮದ ಮಾತುಕತೆಗೆ ಒಪ್ಪಿದೆ ಎಂದು ಟ್ರಂಪ್ ಹೇಳಿದ್ದಾರೆ. ಹಮಾಸ್ ಬಿಡುಗಡೆ ಮಾಡಿದ ಹೇಳಿಕೆಯ ಆಧಾರದ ಮೇಲೆ, ಅವರು ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂದು ನಾನು ನಂಬುತ್ತೇನೆ. ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು, ಇದರಿಂದ ನಾವು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಹೊರಗೆ ತರಬಹುದು ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Vishweshwar Bhat Column: ಇಸ್ರೇಲ್ ಮಿಲಿಟರಿಯಲ್ಲಿ ಯುದ್ಧದಲ್ಲಿ ಗಾಯಗೊಂಡ ಪ್ರಾಣಿಗಳ ಚಿಕಿತ್ಸೆಗೂ ಒಂದು ಘಟಕ !
ಇದಕ್ಕೂ ಮೊದಲು, ಟ್ರಂಪ್ ತಮ್ಮ ಯೋಜನೆಯನ್ನು ಒಪ್ಪಿಕೊಳ್ಳಲು ಭಾನುವಾರ ಸಂಜೆಯ ಗಡುವನ್ನು ನಿಗದಿಪಡಿಸಿದ್ದರು, ಅದು ಪಾಲಿಸಲು ವಿಫಲವಾದರೆ "ಎಲ್ಲವೂ ನಾಶವಾಗುತ್ತದೆ" ಎಂದು ಎಚ್ಚರಿಸಿದ್ದರು. ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಶಾಂತಿಗೆ ಒಪ್ಪುವ ಮೂಲಕ ಯುದ್ಧವನ್ನು ಕೊನೆಗೊಳಿಸಲು ಭಯೋತ್ಪಾದಕ ಗುಂಪಿನ ಕೊನೆಯ ಅವಕಾಶ ಎಂದು ಅವರು ತಿಳಿಸಿದ್ದರು.