ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹಿಂದೂ ಸಮುದಾಯಕ್ಕೆ ಹೋಳಿ ಹಬ್ಬದ ಶುಭ ಕೋರಿದ ಪ್ರಧಾನಿ ಇಮ್ರಾನ್ ಖಾನ್

ಹಿಂದೂ ಸಮುದಾಯಕ್ಕೆ ಹೋಳಿ ಹಬ್ಬದ ಶುಭ ಕೋರಿದ ಪ್ರಧಾನಿ ಇಮ್ರಾನ್ ಖಾನ್

ಹಿಂದೂ ಸಮುದಾಯಕ್ಕೆ ಹೋಳಿ ಹಬ್ಬದ ಶುಭ ಕೋರಿದ ಪ್ರಧಾನಿ ಇಮ್ರಾನ್ ಖಾನ್

Profile Vishwavani News Mar 28, 2021 3:02 PM
ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ಹಿಂದೂ ಸಮುದಾಯಕ್ಕೆ ಹೋಳಿ ಹಬ್ಬದ ಶುಭ ಕೋರಿದ್ದಾರೆ. ಹೋಳಿ ಹಬ್ಬವನ್ನು ಪಾಕಿಸ್ತಾನದಲ್ಲಿ ಭಾನುವಾರ ಮತ್ತು ಸೋಮವಾರ ಆಚರಿಸಲಾಗುತ್ತಿದೆ. ನಮ್ಮೆಲ್ಲಾ ಹಿಂದೂ ಸಮುದಾ ಯಕ್ಕೆ ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು," ಎಂದು ಇಮ್ರಾನ್‌‌ ಟ್ವೀಟ್ ಮಾಡಿದ್ದಾರೆ. ಸಂಸತ್‌ ಸ್ಪೀಕರ್ ಅಸಾದ್ ಖೈಸರ್ ಸೇರಿದಂತೆ, ಹಲವು ನಾಯಕರು ಹಿಂದೂ ಸಂಸದರಿಗೆ ಮತ್ತು ಹಿಂದೂ ಸಮುದಾಯಕ್ಕೆ ಹೋಳಿ ಹಬ್ಬದ ಶುಭ ಕಾಮನೆಗಳನ್ನು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಧಾರ್ಮಿಕ ಹಬ್ಬಗಳನ್ನು ಬಹಿರಂಗವಾಗಿ ಆಚರಿಸುವ ಹಕ್ಕು ಹೊಂದಿವೆ ಎಂದು ಸ್ಪೀಕರ್‌ ಖೈಸರ್ ಹೇಳಿದ್ದಾರೆ. ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಅಧಿಕೃತ ಅಂಕಿ ಅಂಶಗಳ ಪ್ರಕಾರ, 75 ಲಕ್ಷ ಹಿಂದೂಗಳು ನೆರೆ ರಾಷ್ಟ್ರದಲ್ಲಿ ನೆಲೆಸಿದ್ದಾರೆ. ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ https://www.facebook.com/Vishwavanidaily