ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Bengaluru Development Plan: ಬೆಂಗಳೂರು ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಸಮಗ್ರ ಯೋಜನೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಸಮಗ್ರ ಯೋಜನೆ: ಸಿಎಂ

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತಾದ ಸಲಹಾ ಸಮಿತಿ ಸಭೆಯಲ್ಲಿ ಸಿಎಂ ಶಿವಕುಮಾರ್ ಅವರು ಸೋಮವಾರ ಮಾತನಾಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ, ವಸತಿ, ಕೈಗಾರಿಕಾ ಅಭಿವೃದ್ಧಿಗೆ ರೂಪುರೇಷೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ 'ಸಿಂಗಲ್ಸ್'ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

ಭಾರತದ 'ಸಿಂಗಲ್ಸ್'ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ

ಕೆಲಸದ ಒತ್ತಡದ ನಡುವೆಯೂ ಹೊಸ ಪರಿಚಯಗಳನ್ನು ಮಾಡಿಕೊಳ್ಳಲು ಯುವಜನತೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಶೇ. 40ರಷ್ಟು ಸಿಂಗಲ್ಸ್ ಪ್ರಸ್ತುತ ಯಾವುದಾದರೊಂದು ಡೇಟಿಂಗ್ ಆ್ಯಪ್ ಬಳಸುತ್ತಿದ್ದಾರೆ ಎಂಬುವುದು ಡೇಟಿಂಗ್ ಆ್ಯಪ್‌ಗಳ ಪ್ರಸಿದ್ಧ ಸಂಸ್ಥೆ ಮ್ಯಾಚ್ ಗ್ರೂಪ್ ಮತ್ತು ಇಪ್ಸೋಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ತುಮಕೂರಿನ ಲಕ್ಕೇನಹಳ್ಳಿಯಲ್ಲಿ ಅಪರೂಪದ 'ಚಿಪ್ಪು ಹಂದಿ' ರಕ್ಷಣೆ

ತುಮಕೂರಿನ ಲಕ್ಕೇನಹಳ್ಳಿಯಲ್ಲಿ ಅಪರೂಪದ 'ಚಿಪ್ಪು ಹಂದಿ' ರಕ್ಷಣೆ

Tumkur News: ತುಮಕೂರು ತಾಲೂಕಿನ ನಾಗವಲ್ಲಿ ಸಮೀಪದ ಲಕ್ಕೇನಹಳ್ಳಿಯಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿ 'ಚಿಪ್ಪು ಹಂದಿ' ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಶಿಕ್ಷಕರಿಗೆ ಬೆದರಿಕೆ ಹಾಕಿ ಅಧಿಕಾರ ದುರುಪಯೋಗ: ಸಿಎಂ ಡಿಕೆಶಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಶಿಕ್ಷಕರಿಗೆ ಬೆದರಿಕೆ ಹಾಕಿ ಅಧಿಕಾರ ದುರುಪಯೋಗ: ಮಾಜಿ ಸಿಎಂ ಬಿಎಸ್‌ವೈ

BS Yediyurappa: ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಪ್ರತಿಭಟನೆ ನಡೆಸಿದ ಶಿಕ್ಷಕರ ವಿರುದ್ಧ ಅಧಿಕಾರದ ಬಲ ಪ್ರಯೋಗಿಸಿ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

FRP ಅಷ್ಟೇ ಅಲ್ಲ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಬೇಕು SAP ಬೆಂಬಲ

FRP ಅಷ್ಟೇ ಅಲ್ಲ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಬೇಕು SAP ಬೆಂಬಲ

Sugarcane farmers Protest: 'ಯಾವುದೇ ಹೊಸ ಯೋಜನೆ ಘೋಷಣೆಗೆ ಹಣವಿಲ್ಲ' ಎಂಬ ಆರ್ಥಿಕ ಇಲಾಖೆ ಹೇಳಿಕೆ ಸಹ ಸ್ವತಃ ರಾಜ್ಯ ಸರ್ಕಾರವನ್ನೂ ದಿಕ್ಕೆಡಿಸಿದೆ. ಹೀಗಾಗಿ ಕಬ್ಬು ಬೆಳೆಗಾರರ ಹೋರಾಟವನ್ನು ಕೇಂದ್ರದತ್ತ ತಿರುಗಿಸಲಾಗಿದೆ? ಎಂಬ ಬಲವಾದ ಆರೋಪ ವಿಪಕ್ಷಗಳದ್ದಾಗಿದೆ.

KRS ಬಳಿ ನಡೆಯಬೇಕಿದ್ದ ಕಾವೇರಿ ಆರತಿ ಕಾರ್ಯಕ್ರಮ ಮುಂದೂಡಿಕೆ; ಕಾರಣವೇನು?

KRS ಬಳಿ ನಡೆಯಬೇಕಿದ್ದ ಕಾವೇರಿ ಆರತಿ ಕಾರ್ಯಕ್ರಮ ಮುಂದೂಡಿಕೆ

ಕೆಆರ್‌ಎಸ್ ಅಣೆಕಟ್ಟಿನ (KRS) ಬಳಿ ಆಯೋಜಿಸಲಾಗಿದ್ದಕಾವೇರಿ ಆರತಿ ಕಾರ್ಯಕ್ರಮದ ದಿನಾಂಕ ಮುಂದೂಡಲಾಗಿದೆ. ಈ ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯ ಪ್ರಕಾರ ಅ.11 ರಿಂದ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದರೆ ಇದೀಗ ಇದೇ ತಿಂಗಳ 18 ಕ್ಕೆ ಮುಂದೂಡಲಾಗಿದೆ.

ಬಾಗಲಕೋಟೆಯ  ದೇವಾಲಯದಲ್ಲಿ ದಲಿತರಿಗೆ ಪ್ರತ್ಯೇಕ ಊಟ: ಗಾಂಧಿ ಜಯಂತಿಯಂದೇ ಕಂಡುಬಂದ  ಅಸ್ಪ್ರಶ್ಯತೆ

ದೇವಾಲಯದಲ್ಲಿ ದಲಿತರಿಗೆ ಪ್ರತ್ಯೇಕ ಊಟ: ದೂರು ದಾಖಲು

ಗಾಂಧಿ ಜಯಂತಿಯಂದು ದೇವಾಲಯವೊಂದರಲ್ಲಿ ಅಸ್ಪ್ರಶ್ಯತೆಯನ್ನು ಪಾಲಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತು ಗ್ರಾಮದ ದಲಿತ ಸಮುದಾಯದ ಬಸಪ್ಪ ಯಲದಗಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

ನಗರದ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಹುಮನಾಬಾದ್ ರಸ್ತೆಯ ಕಲಬು ರಗಿ ಹೋಟೆಲ್ ಸಮೀಪ ಸಿದ್ದಲಿಂಗ (35) ಎಂಬುವವರನ್ನು ಸೋಮು ಅಲಿಯಾಸ್ ಸೋಮಶೇಖರ ಹಾಗೂ ಇತರರು ಮೈದಾನದ ಕಡೆಗೆ ಕರೆದುಕೊಂಡು ಹೋಗಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಅಗ್ರಿಕಾನ್–ಹಾರ್ಟಿಕನೆಕ್ಟ್ ಇಂಡಿಯಾ 2026 ಉದ್ಘಾಟಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಅಗ್ರಿಕಾನ್–ಹಾರ್ಟಿಕನೆಕ್ಟ್ ಇಂಡಿಯಾ 2026 ಉದ್ಘಾಟನೆ

ಸಂರಕ್ಷಿತ ಬೇಸಾಯ, ನೀರಾವರಿ, ಕೃಷಿ ಯಂತ್ರೋಪಕರಣ, ಬೀಜ, ಬೆಳೆ ಪರಿಕರ, ಅಗ್ರಿಟೆಕ್, ಕೊಯ್ಲೋತ್ತರ ತಂತ್ರಜ್ಞಾನ, ಹಣಕಾಸು ಮತ್ತು ರಫ್ತು ಕ್ಷೇತ್ರಗಳ ಪರಿಹಾರಗಳನ್ನು 200ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಇಲ್ಲಿ ಪ್ರದರ್ಶಿಸುತ್ತಿವೆ. ಕರ್ನಾಟಕ ರಾಜ್ಯ ಪೆವಿಲಿಯನ್ ಮತ್ತು ಡಚ್ ಪೆವಿಲಿಯನ್ ಸಹ ಇಲ್ಲಿವೆ. ಮೂರು ದಿನಗಳಲ್ಲಿ ಜಗತ್ತಿನ ವಿವಿಧೆಡೆಗಳಿಂದ 25,000ಕ್ಕೂ ಹೆಚ್ಚು ಭಾಗವಹಿಸು ವವರು ಬರುವ ನಿರೀಕ್ಷೆಯಿದೆ.

Chikkaballapur News: ಸಾಹಿತಿ–ಹೋರಾಟಗಾರರ ಸೇವೆ ಪರಿಗಣಿಸಿ ಆಯ್ಕೆ ಮಾಡುವಂತೆ ಸಿ.ಕೆ.ರಾಮೇಗೌಡ ಮನವಿ

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಬೆಂಬಲಿಸಲು ಮನವಿ

ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ಜಾಣಗೆರೆ ವೆಂಕಟರಾಮಯ್ಯ ಅವರು ಸಾಹಿತಿ, ಕಥೆಗಾರ ಹಾಗೂ ಕಾದಂಬರಿಕಾರರಾಗಿ ಗುರುತಿಸಿಕೊಂಡಿದ್ದು, ಕನ್ನಡಪರ ಹೋರಾಟಗಳಲ್ಲೂ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಅವರ ಸಾಹಿತ್ಯ ಮತ್ತು ಕನ್ನಡಪರ ಸೇವೆಯನ್ನು ವಿವಿಧ ಸಂಸ್ಥೆಗಳು ಗುರುತಿಸಿವೆ. ಇಂತಹ ಅರ್ಹರನ್ನು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸಿರುವುದರಿಂದ ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

Chikkaballapur News: ಮೂರು ವರ್ಷಗಳ ಆಡಳಿತದಲ್ಲಿ ದಲಿತರಿಗೆ ನೆರವಾಗಿಲ್ಲ, ಇನ್ನಾದರೂ ಆ ಕೆಲಸವಾಗಲಿ : ರಾಜಾಕಾಂತ್ ಆಗ್ರಹ

ಮೂರು ವರ್ಷಗಳ ಆಡಳಿತದಲ್ಲಿ ದಲಿತರಿಗೆ ನೆರವಾಗಿಲ್ಲ

ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರು ಸಾಮಾಜಿಕ ನ್ಯಾಯದ ಪರವಾಗಿ ನಡೆದುಕೊಳ್ಳಬೇಕು. ಈ 3 ವರ್ಷಗಳಲ್ಲಿ ತಮ್ಮ ಕ್ಷೇತ್ರದಲ್ಲಿ ಸಾವಿರಾರು ಬಡವರಿಗೆ ಮನೆ, ಭೂಮಿ ಹಕ್ಕಿನ ಮೂಲಕ ಸಾಗುವಳಿ ಚೀಟಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯ ಗಳನ್ನು ತಲುಪಿಸಬಹುದಿತ್ತು. ಆದರೆ ಇತ್ತ ಗಮನ ಹರಿಸಿತ್ತೀ ಪುಣ್ಯಾತ್ಮ ಒಂದೇ ಒಂದು ಕೆಡಿಪಿ ಸಭೆಯನ್ನೂ ನಡೆಸಿಲ್ಲ. ಮೈಲಪನಹಳ್ಳಿ ನಿರ್ಗತಿಕರ ಅಹವಾಲು ಆಲಿಸಿಲ್ಲ

B Y Vijayendra: ಜಿಲ್ಲೆಯ ಜಲಮೂಲಗಳ ಕಲುಷಿತ ಆರೋಪ; ರೈತ ಮುಖಂಡ ಮಳ್ಳೂರು ಶಿವಣ್ಣ ಮನವಿ

ಕೆ.ಸಿ.–ಎಚ್.ಎನ್.ವ್ಯಾಲಿ ನೀರಿಗೆ ಪರ್ಯಾಯವಾಗಿ ಕೃಷ್ಣಾ ನೀರು ಹರಿಸಿ

ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದ್ದು, ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ಭಾಗಗಳಲ್ಲೇ ಸುಮಾರು ಒಂದು ಲಕ್ಷ ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ ನಡೆಯುತ್ತಿದೆ. ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯಾಗುತ್ತಿದ್ದರೂ ಚೀನಾ ಮತ್ತು ವಿಯೆಟ್ನಾಂನಿಂದ ರೇಷ್ಮೆ ನೂಲು ಆಮದಾಗುತ್ತಿರುವುದು ಸ್ಥಳೀಯ ಬೆಳೆಗಾರರಿಗೆ ತೊಂದರೆ ಉಂಟುಮಾಡುತ್ತಿದೆ

Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ

ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು

ಸಮಾಜದಲ್ಲಿ ವಿವಿಧ ಕ್ಷೇತ್ರಗಳ ನಡುವೆ ಇರುವ ವೈರುಧ್ಯಗಳನ್ನು ಅರ್ಥಮಾಡಿಕೊಂಡು ಮುನ್ನಡೆ ಯುವ ಅಗತ್ಯವಿದೆ. ಉದ್ಯಮಿಗಳು ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ರೈತರು ತಮ್ಮ ದೈನಂದಿನ ಬದುಕಿನಲ್ಲಿ ಸ್ಕೂಟರ್ ಸೇರಿದಂತೆ ವಿವಿಧ ಸಾಧನಗಳನ್ನು ಅವಲಂಬಿಸುತ್ತಾರೆ. ಕೃಷಿ ಸಹಕಾರ ಸಂಘಗಳ ಸದಸ್ಯರು ರೈತರಾಗಿದ್ದರೆ, ರಾಜ್ಯಸಭೆ ಮತ್ತು ಲೋಕಸಭೆಗೆ ಆಯ್ಕೆ ಯಾಗುವವರಲ್ಲಿ ಉದ್ಯಮಿಗಳೂ ಇದ್ದಾರೆ

MLA B Suresh Gowda: ಅಂಕ ಗಳಿಸುವುದೇ ಶಿಕ್ಷಣದ ಗುರಿಯಲ್ಲ, ಸಂಸ್ಕಾರವಂತರಾಗುವುದು ಮುಖ್ಯ:  ಶಾಸಕ ಬಿ. ಸುರೇಶ್ ಗೌಡ

ಅಂಕ ಗಳಿಸುವುದೇ ಶಿಕ್ಷಣದ ಗುರಿಯಲ್ಲ, ಸಂಸ್ಕಾರವಂತರಾಗುವುದು ಮುಖ್ಯ

ನಗರ ಸಮೀಪದ ಗೊಲ್ಲಹಳ್ಳಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನದಡಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮ ಹಾಗೂ ಔಷಧೀಯ ಸಸ್ಯಗಳ ಉದ್ಯಾನವನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

Tumkur News: ತುಮಕೂರಿನಲ್ಲಿ ಜಿಲ್ಲಾ ಮಟ್ಟದ ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಎಸ್‌ಸಿ, ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದ ನೂತನ ಘಟಕ ಉದ್ಘಾಟನೆ

ಎಸ್‌ಸಿ, ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದ ನೂತನ ಘಟಕ ಉದ್ಘಾಟನೆ

​ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸಂಘದ ತುಮಕೂರು ಜಿಲ್ಲಾ ಘಟಕದ ಸ್ಥಾಪನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಅವರು ಮಾತನಾಡಿದರು. 10ಕ್ಕೂ ಹೆಚ್ಚು ಸಂಪಾದಕರನ್ನು ಹೊಂದಿರುವ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಸಂಘಟನೆಗಳನ್ನು ಪ್ರಾರಂಭಿ ಸುವ ತೀರ್ಮಾನದಂತೆ, ಪ್ರಥಮ ಬಾರಿಗೆ ತುಮಕೂರಿನಲ್ಲಿ ನೂತನ ಘಟಕವನ್ನು ಯಶಸ್ವಿಯಾಗಿ ಉದ್ಘಾಟಿಸಲಾಗಿದೆ ಎಂದರು.

ಸೇವಾ ಸಂಕಲ್ಪ ಅಭಿಯಾನ: ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Seva Sankalp Abhiyan: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸುದೀರ್ಘ ರಾಜಕೀಯ ಜೀವನ ಹಾಗೂ ಸೇವಾ ಸಾಧನೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಪ್ರಯುಕ್ತ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಗೆ ಭೇಟಿ ನೀಡಿದರು.

ಗ್ಯಾರಂಟಿ ಯೋಜನೆಗಳಿಂದ ಖಜಾನೆ ಖಾಲಿ; ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲು ವಿಜಯೇಂದ್ರ ಆಗ್ರಹ

ಫಾರಂ-7 ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್: ವಿಜಯೇಂದ್ರ

BY Vijayendra: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದ್ದು, ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ಹಣದ ಕೊರತೆ ಎದುರಾಗಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್‌ ಕೊಟ್ಟ ರಾಜ್ಯ ಸರ್ಕಾರ; ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಿಸಿದ ರಾಜ್ಯ ಸರ್ಕಾರ

SSLC Exam Fee Hike: ಇತ್ತೀಚೆಗಷ್ಟೇ ಪಿಯುಸಿ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದ್ದ ಸರ್ಕಾರ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನೂ ಏರಿಕೆ ಮಾಡಿದೆ. ಶೇಕಡಾ 5ರಷ್ಟು ಹೆಚ್ಚಳ ಮಾಡಿದೆ. ಹೊಸದಾಗಿ ಪರೀಕ್ಷೆ ಬರೆಯುವವರು, ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿ ಶುಲ್ಕದ ಜತೆಗೆ ಪರೀಕ್ಷಾ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

ವಿಜ್ಞಾನಿಗಳು ಹುಡುಕುವ ಕ್ಷುದ್ರಗ್ರಹಗಳ ಕುಳಿ ಬೆಂಗಳೂರಿನಲ್ಲೇ ಇದೆ: ಇದು ‘ಬ್ರ್ಯಾಂಡ್‌ ಬೆಂಗಳೂರು’ ವೈಭವ ಎಂದ ಜೆಡಿಎಸ್‌; ಕೆನಡಾ ಪ್ರಜೆ ಹಂಚಿಕೊಂಡ ವಿಡಿಯೊ ವೈರಲ್‌

ಬೆಂಗಳೂರಿನ ಫುಟ್‌ಪಾತ್‌ ಅವ್ಯವಸ್ಥೆ ತೆರೆದಿಟ್ಟ ಕೆನಡಾ ಪ್ರಜೆ

Viral Video: ಬೆಂಗಳೂರಿನ ಇಂದಿರಾ ನಗರದಲ್ಲಿನ ರಸ್ತೆ, ಫುಟ್‌ಪಾತ್‌ ಅವ್ಯವಸ್ಥೆಯ ಮೇಲೆ ಕೆನಡಾದ ಕಂಟೆಂಟ್‌ ಕ್ರಿಯೇಟರ್‌ ಕ್ಯಾಲೆಬ್‌ ಫ್ರೀಸೆನ್ ಬೆಳಕು ಚೆಲ್ಲಿದ್ದು, ವಿಡಿಯೊ ವೈರಲ್‌ ಆಗಿದೆ. ಈ ವಿಡಿಯೊವನ್ನು ಹಂಚಿಕೊಂಡ ಜೆಡಿಎಸ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದೇ ‘ಬ್ರ್ಯಾಂಡ್‌ ಬೆಂಗಳೂರು’ ವೈಭವ ಎಂದು ವ್ಯಂಗ್ಯವಾಡಿದೆ.

ಮುಸ್ಲಿಮರೇ ಬೋಗಸ್​ ವೋಟು ಹಾಕುವುದು ಜಾಸ್ತಿ, ಹಿಂದೂಗಳು ಕಾನೂನು ಮೀರುವುದಿಲ್ಲ: ಬಸನಗೌಡ ಪಾಟೀಲ ಯತ್ನಾಳ್ ಗಂಭೀರ ಆರೋಪ

ಮುಸ್ಲಿಮರೇ ಬೋಗಸ್​ ವೋಟು ಹಾಕುವುದು ಜಾಸ್ತಿ ಎಂದ ಯತ್ನಾಳ್

Basangouda Patil Yatnal: ʼʼಮುಸ್ಲಿಮರೇ ಬೋಗಸ್​ ವೋಟು ಹಾಕುವುದು ಜಾಸ್ತಿ, ಹಿಂದೂಗಳಿಗೆ ಆ ಧೈರ್ಯವಿಲ್ಲ ಮತ್ತು ಕಾನೂನು ಮೀರುವುದಿಲ್ಲ. ಬುರ್ಖಾ ಹಾಕೊಂಡು ಒಂದೇ ಹೆಸರಲ್ಲಿ 10 ಜನರ ವೋಟ್ ಇದೆ. ಕಾಂಗ್ರೆಸ್​​ ಕೂಡ ಅವರಿಗೆ ಬೆಂಬಲ ನೀಡುತ್ತಿದೆʼʼ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು. ‌ದಾವಣಗೆರೆಯಲ್ಲಿ ಅವರು ಮಾತನಾಡಿದರು.

ʼʼಬರಗೆಟ್ಟ ಆಡಳಿತʼʼ: ಬರ ಪರಿಸ್ಥಿತಿ ಮಧ್ಯೆ ʼಬೆಂಗಳೂರು ಜಾತ್ರೆʼ ಆಯೋಜಿಸಿದ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ಕಿಡಿ

ʼಬೆಂಗಳೂರು ಜಾತ್ರೆʼ ಆಯೋಜಿಸಿದ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್‌ ಕಿಡಿ

JDS: ಡಿಸೆಂಬರ್‌ 4ರಿಂದ 13ರವರೆಗೆ 10 ದಿನಗಳ ಕಾಲ ʼಬೆಂಗಳೂರು ಜಾತ್ರೆʼ ಆಚರಿಸಲು ಮುಂದಾದ ರಾಜ್ಯ ಸರ್ಕಾರವನ್ನು ಪ್ರತಿಪಕ್ಷ ಜೆಡಿಎಸ್‌ ಟೀಕಿಸಿದೆ. ರಾಜ್ಯಾದ್ಯಂತ ಬರ ಪರಿಸ್ಥಿತಿ ಇರುವಾಗ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಜಾತ್ರೆ ಆಯೋಜಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದೆ. ʼಬೆಂಗಳೂರು ಜಾತ್ರೆʼ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿ ಹೊಡೆಯಲು ಹೊರಟಿದ್ದೀರಿ ಎಂದು ಆರೋಪಿಸಿದೆ.

High Court: ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠದಿಂದ ಆದೇಶ: ಸೇವೆಯಿಂದ ಉಪನ್ಯಾಸಕರ ಮುಕ್ತಿ ತಪ್ಪಲ್ಲ: ಹೈಕೋರ್ಟ್

ಸೇವೆಯಿಂದ ಉಪನ್ಯಾಸಕರ ಮುಕ್ತಿ ತಪ್ಪಲ್ಲ: ಹೈಕೋರ್ಟ್

ಹಾಸನದ ರಾಜೀವ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ರಾಜೀವ್ ಎಜುಕೇಷನಲ್ ಟ್ರಸ್ಟ್) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಎಚ್.ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಅಲ್ಲದೆ, ಉಪನ್ಯಾಸಕ ಎಂ.ವಿ. ರಮೇಶ್ ಅವರನ್ನು ಮರು ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಮೇಲ್ಮನವಿ ಪ್ರಾಧಿಕಾರ ಮತ್ತು ಏಕಸದಸ್ಯ ಪೀಠ ನೀಡಿದ್ದ ಆದೇಶಗಳನ್ನು ರದ್ದುಗೊಳಿಸಿ ಆದೇಶಿಸಿದೆ. ‌

MLA Bhimanna Nayak: ಅತಿಕ್ರಮಣ ಜಾಗದ ಆಸ್ತಿ ತೆರಿಗೆ ವಿವಾದ-ಕೇಂದ್ರದ ಸುತ್ತೋಲೆ ಬಹಿರಂಗಪಡಿಸುವಂತೆ ಬಿಜೆಪಿ ಆಗ್ರಹ

ಬಿಜೆಪಿ ಸಂಸದರ ನೇತೃತ್ವದಲ್ಲಿ ಜನಪರ ಹೋರಾಟ ಮುಂದುವರಿಯಲಿದೆ

​ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆದೇಶವನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದಿಂದ ಸರ್ಕಾರಕ್ಕೆ ಉಂಟಾಗಿರುವ ಆಕ್ರೋಶಕ್ಕೆ ಉತ್ತರಿಸಲಾಗದೆ ಶಾಸಕರು ರಾಜಕೀಯ ಲೇಪಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಾಸಕರು ಕೇವಲ ಆರೋಪಗಳ ಭಾಷಣ ಮಾಡುವುದನ್ನು ಬಿಟ್ಟು, ಈ ಜನವಿರೋಧಿ ಆದೇಶವನ್ನು ಎಷ್ಟು ದಿನಗಳ ಒಳಗೆ ವಾಪಸ್ ಪಡೆಯುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು

Vande Bharat Train: ಕಲಬುರಗಿಗೆ ಬೆಂಗಳೂರು-ಮುಂಬೈ ಸಂಚಾರ ಸುಗಮ: ರಾಜ್ಯದಲ್ಲಿ ಕಲಬುರಗಿ, ರಾಯಚೂರಲ್ಲಿ ನಿಲುಗಡೆ

ಕಲಬುರಗಿಗೆ ಬೆಂಗಳೂರು-ಮುಂಬೈ ಸಂಚಾರ ಸುಗಮ

ಪ್ರತಿಯಾಗಿ 27651 ಸಂಖ್ಯೆ ರೈಲು ಮುಂಬೈನಿಂದ ರಾತ್ರಿ 10.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 2.50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ರಾತ್ರಿ ಪ್ರಯಾಣಕ್ಕೆ ಆದ್ಯತೆ ನೀಡುವವರಿಗೆ ಈ ಸೇವೆ ಹೊಸ ಆಯ್ಕೆಯಾಗಲಿದೆ. ರೈಲಿನ ಮಾರ್ಗದಲ್ಲಿ ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೋಲಾಪುರ, ಪುಣೆ ಹಾಗೂ ಕಲ್ಯಾಣ ವಾಣಿಜ್ಯ ನಿಲುಗಡೆಗಳಾಗಿವೆ.

Loading...