Modi in Mauritius: ಮಾರಿಷಸ್ ಜೊತೆ ಮೋದಿಯದು 27 ವರ್ಷಗಳ ಹಳೆಯ ಬಾಂಧವ್ಯ; ಪ್ರಧಾನಿಯ ಅಂದಿನ ದಿನಗಳು ಹೀಗಿತ್ತು?
ಮಧ್ಯೆ ಪ್ರಧಾನಿ ಮೋದಿಯವರ ಎಕ್ಸ್ ಖಾತೆಯ ಒಂದು ಪೋಸ್ಟ್ ಸಖತ್ ಸದ್ದು ಮಾಡುತ್ತಿದ್ದು, 1998 ರಲ್ಲಿ ಅಂದರೆ 27 ವರ್ಷಗಳ ಹಿಂದೆ ನರೇಂದ್ರ ಮೋದಿ ಮಾರಿಷಸ್ ಗೆ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿದೆ. ಪ್ರಧಾನಿಯಾಗುವ ಮೊದಲೇ ಮಾರಿಷಸ್ ಗೆ ಮೋದಿ ಭೇಟಿ ನೀಡಿದ್ದು, ಅಂದೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಿನಿ ಇಂಡಿಯಾಕ್ಕೆ ಬಂದಿದ್ದೇನೆ ಎಂಬ ಭಾವ ಬರುತ್ತಿದೆ ಎಂಬ ಕ್ಯಾಪ್ಷನ್ ನೀಡಿ ತಮ್ಮ ಮಾರಿಷಸ್ ಭೇಟಿಯ ಕ್ಷಣಗಳನ್ನು ಸೋಷಿಯಲ್ ಮೀಡಿಯಾ ಖಾಟೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಆ ಪೋಸ್ಟ್ ಇಂದು ಭಾರೀ ಸದ್ದು ಮಾಡುತ್ತಿದೆ.


ಮಾರಿಷಸ್: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಮಾರಿಷಸ್(Modi in Mauritius) ಪ್ರವಾಸದಲಿದ್ದು, ಇಂದು ಮಾರಿಷಸ್‌ಗೆ ತಲುಪಿರುವ ಪ್ರಧಾನಿ ನರೇಂದ್ರ ಮೋದಿಗೆ ಮಾರಿಷಸ್‌ನಲ್ಲಿರುವ ಭಾರತೀಯ ವಲಸಿಗರು ಆತ್ಮೀಯ ಸ್ವಾಗತ ನೀಡಿದ್ದಾರೆ. ಮಾರ್ಚ್ 12ರಂದು ನಡೆಯುವ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಅಲ್ಲಿನ ಪ್ರಧಾನಿ ನವೀನಚಂದ್ರ ರಾಮ್‌ಗೂಲಂ ಅವರ ಆಹ್ವಾನದ ಮೇರೆಗೆ ಮೋದಿ ಮಾರಿಷಸ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಮತ್ತು ಮಾರಿಷಸ್ ಪ್ರಧಾನಿ ನವೀನ್ ರಾಮ್ ಗೂಲಾಮ್ ಇಬ್ಬರು ಒಟ್ಟಾಗಿ ನಾಗರಿಕ ಸೇವಾ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. 4.75 ಮಿಲಿಯನ್ ಯುಎಸ್ ಡಾಲರ್ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದ್ದು, ಈ ಯೋಜನೆಗಾಗಿ 2017 ರಲ್ಲಿ ತಿಳುವಳಿಕಾ ಒಡಂಬಡಿಕೆಗೆ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಿಂದ ಧನಸಹಾಯ ಪಡೆದ 20ಕ್ಕೂ ಹೆಚ್ಚು ಸಾಮರ್ಥ್ಯ ವರ್ಧನೆ ಹಾಗೂ ಸಮುದಾಯ ಸಂಬಂಧಿತ ಮೂಲಸೌಕರ್ಯಗಳ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಪ್ರಧಾನಿ ಮೋದಿಯವರ ಎಕ್ಸ್ ಖಾತೆಯ ಒಂದು ಪೋಸ್ಟ್ ಸಖತ್ ಸದ್ದು ಮಾಡುತ್ತಿದ್ದು, 1998 ರಲ್ಲಿ ಅಂದರೆ 27 ವರ್ಷಗಳ ಹಿಂದೆ ನರೇಂದ್ರ ಮೋದಿ ಮಾರಿಷಸ್ ಗೆ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿದೆ. ಪ್ರಧಾನಿಯಾಗುವ ಮೊದಲೇ ಮಾರಿಷಸ್ ಗೆ ಮೋದಿ ಭೇಟಿ ನೀಡಿದ್ದು, ಅಂದೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಿನಿ ಇಂಡಿಯಾಕ್ಕೆ ಬಂದಿದ್ದೇನೆ ಎಂಬ ಭಾವ ಬರುತ್ತಿದೆ ಎಂಬ ಕ್ಯಾಪ್ಷನ್ ನೀಡಿ ತಮ್ಮ ಮಾರಿಷಸ್ ಭೇಟಿಯ ಕ್ಷಣಗಳನ್ನು ಸೋಷಿಯಲ್ ಮೀಡಿಯಾ ಖಾಟೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಆ ಪೋಸ್ಟ್ ಇಂದು ಭಾರೀ ಸದ್ದು ಮಾಡುತ್ತಿದೆ.

ಹೌದು ಮಾರಿಷಸ್ ಮೋಕಾದಲ್ಲಿ 1998 ರಲ್ಲಿ ಅಕ್ಟೋಬರ್ 2 ರಿಂದ 8ನೇ ತಾರೀಖು ವರೆಗೆ ನಡೆದ, 'ಅಂತರರಾಷ್ಟ್ರೀಯ ರಾಮಾಯಣ ಸಮ್ಮೇಳನ'ಕ್ಕೆ ಮೋದಿ ಪಾಲ್ಗೊಂಡಿದ್ದು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಾಚರಿಸುತ್ತಿದ್ದ ಮೋದಿಗೆ ಈ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅತಿಥಿಯಾಗಿ ಆಹ್ವಾನ ನೀಡಲಾಗಿತ್ತು. ಈ ನಿಮಿತ್ತ ಅಂದು ಮೊಟ್ಟಮೊದಲ ಬಾರಿಗೆ ಮೋದಿ ಮಾರಿಷಸ್‌ನತ್ತ ಪ್ರಯಾಣ ಬೆಳೆಸಿದರು.

ಅಲ್ಲದೇ ಅಂದು ಅವರು ಮಾಡಿದ ಭಾಷಣ ಭಾರೀ ಸಂಚಲನ ಮೂಡಿಸಿತ್ತು, ರಾಮನ ಸಾರ್ವತ್ರಿಕ ಮೌಲ್ಯಗಳ ಅವರು ಮಾತಾನಾಡಿದ ಮಾತುಗಳು ಎಲ್ಲೆಡೆ ಹರಡಿತ್ತು. ಭಾರತ ಮತ್ತು ಮಾರಿಷಸ್ ನಡುವೆ ಸಂಬಂಧ ಬೆಸೆದು, ಅದನ್ನು ಗಟ್ಟಿಗೊಳಿಸುವಲ್ಲಿ ಈ ಕಾರ್ಯಕ್ರಮ ಸೇತುವೆಯಾಗಿ ಮಾರ್ಪಡಾಗಿತ್ತು. ಮಾರಿಷಸ್‌ನಲ್ಲಿರುವ ರಾಮಾಯಣ ಕೇಂದ್ರವು ಎರಡು ರಾಷ್ಟ್ರಗಳ ಸಂಸ್ಕೃತಿ ಆಚಾರ ವಿಚಾರವನ್ನು ಎತ್ತಿ ಹಿಡಿದಿತ್ತು.
ಈ ಸುದ್ದಿಯನ್ನೂ ಓದಿ: Modi In Mauritius : ಮಾರಿಷಸ್ನಲ್ಲಿ ಪ್ರಧಾನಿ ಮೋದಿ; ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ
ಅಂದಿನ ಮಾರಿಷಸ್ ನ ಅಧ್ಯಕ್ಷ ಕ್ಯಾಸಮ್ ಉತೀಮ್, ಪ್ರಧಾನಿ ನವೀನ್‌ಚಂದ್ರ ರಾಮ್‌ಗೂಲಮ್, ವಿರೋಧ ಪಕ್ಷದ ನಾಯಕ ಅನೆರೂದ್ ಜುಗ್ನಾಥ್ ಮತ್ತು ನಂತರ ಮಾರಿಷಸ್‌ನ ಪ್ರಧಾನಿಯಾದ ಪಾಲ್ ರೇಮಂಡ್ ಬೆರೆಂಜರ್ ಸೇರಿದಂತೆ ಪ್ರಮುಖ ಮಾರಿಷಸ್ ನಾಯಕರೊಂದಿಗೆ ಮೋದಿ ಮಾತುಕತೆ ನಡೆಸಿದ್ದರು.

ಇದರ ಹೊರತಾಗಿ ಅಲ್ಲಿನ ಸ್ಥಳೀಯರಲ್ಲಿ ಒಬ್ಬರಾಗಿ ಅಲ್ಲಿನ ಜನರಲ್ಲಿ ಬೆರತು, ಅವರ ಆಚಾರ-ವಿಚಾರ ಕಲೆ ಸಂಸ್ಕೃತಿಯನ್ನುಅಧ್ಯಯನ ಮಾಡಿದ್ದರು. ಇದೇ ವೇಳೆ ಅಲ್ಲಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅದರ ಇತಿಹಾಸ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ಮಾರಿಷಸ್ ನ ಹೆಸರಾಂತ ಗಂಗಾ ತಲಾವ್‌ಗೆ ಭೇಟಿ ನೀಡಿ, ಅಲ್ಲಿ ಇಂದಿಗೂ ಅನುಸರಿಸುತ್ತಿರುವ ಹಿಂದೂ ಸಂಪ್ರದಾಯಗಳನ್ನು ನೋಡಿ ಮೆಚ್ಚುಗೆ ಸೂಚಿಸಿದಲ್ಲದರು. ಅಷ್ಟೇ ಅಲ್ಲದೇ “ಇಡೀ ಮಾರಿಷಸ್ ಅನ್ನು ಒಂದುಗೂಡಿಸುವ ಒಂದು ಸ್ಥಳವಿದ್ದರೆ ಅದು ಗಂಗಾ ಸಾಗರ. ಗಂಗಾ ನದಿ ಗಾತ್ರದಲ್ಲಿ ಚಿಕ್ಕದಿರಬಹುದು, ಆದರೆ ಅದರೊಂದಿಗೆ ಬೆಸೆದ ಸಂಬಂಧಗಳು, ಭಾವನೆಗಳು ಮತ್ತು ಭಕ್ತಿ ಬಹಳ ಆಳವಾದದ್ದು... ಭಾರತದಿಂದ ಹೊರಗಿದ್ದರು, ಗಂಗಾ ನದಿಯು ಮಾರಿಷಸ್ ತನ್ನ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಂಡು ಮುನ್ನೆಡೆಯಲು ಸ್ಫೂರ್ತಿ ನೀಡುತ್ತಲೇ ಇದೆ ಎಂದಿದ್ದರು.

ಇನ್ನು ಈ ಭೇಟಿಯ ನಂತರ 2015 ರಲ್ಲಿ ಮತ್ತೊಮ್ಮೆ ಮಾರಿಷಸ್ ಗೆ ಭೇಟಿ ನೀಡುವ ಉದ್ದೇಶ ಮೋದಿಗೆ ಪಾಲಿಗೆ ಬಂತು, ಈ ಪ್ರವಾಸ ಭಾರತ ಹಾಗೂ ಮಾರಿಷಸ್ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿತ್ತು. ಇದು ಕೇವಲ ರಾಜಕೀಯ ಭೇಟಿಯಾಗಿ ಉಳಿಯದೇ ಒಂದು ಭಾವನ್ಮಾತಕ ಬಂಧಕ್ಕೆ ಸಾಕ್ಷಿಯಾಯಿತು. ಹದಿನೇಳು ವರ್ಷಗಳ ನಂತರ ಮತ್ತೇ ಮಾರಿಷಸ್ ಗೆ ಭೇಟಿ ನೀಡಿದ ಮೋದಿ ಗಂಗಾ ತಲಾವ್‌ಗೆ ತೆರಳಿ, ಗಂಗಾ ಮಾತೆಗೆ ಹೂವು-ಬಾಗಿನ ಅರ್ಪಿಸಿದರು, ಭಾರತ ಮತ್ತು ಮಾರಿಷಸ್ ನಡುವಿನ ಕಾಲಾತೀತ ಸಾಂಸ್ಕೃತಿಕ ಮತ್ತು ನಾಗರಿಕತೆಯ ಬಾಂಧವ್ಯವನ್ನು ಪುನರುಚ್ಚರಿಸಿದರು.

ಇದೀಗ ಮತ್ತೇ ಹತ್ತು ವರ್ಷಗಳ ಬಳಿಕ ಮೋದಿಯಈ ಮಾರಿಷಸ್ ಭೇಟಿಯು ಭಾರತ- ಮಾರಿಷಸ್ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದ್ದು, ಮಾರಿಷಸ್ ಜೊತೆ ನಾವು ಐತಿಹಾಸಿತ, ಭೌಗೋಳಿಕತೆ ಮತ್ತು ಸಾಂಸ್ಕೃತಿಕವಾಗಿ ಸಂಪರ್ಕ ಹೊಂದಲು ಸಹಕಾರಿಯಾಗಲಿದೆ. ಇನ್ನು ನಾಳೆ ನಡೆಯುವ ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತೀಯ ರಕ್ಷಣಾ ಪಡೆಗಳ ತುಕಡಿ ಮತ್ತು ಭಾರತೀಯ ನೌಕಾಪಡೆಯ ಒಂದು ಹಡಗು ಭಾಗವಹಿಸಲಿದೆ.