ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರ್ಮುಜ್ ಜಲಸಂಧಿಯಲ್ಲಿ ದೂರವಾಣಿ ಹಾಟ್‌ಲೈನ್ ಸ್ಥಾಪಿಸಲು ಇರಾನ್‌ ಸಮ್ಮತಿ; ಕರಗಿತಾ ಯುದ್ಧದ ಕಾರ್ಮೋಡ?

ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಪ್ರಾರಂಭವಾಗುವ ಮೊದಲು ಹೊರ್ಮುಜ್ ಜಲ ಮಾರ್ಗದಲ್ಲಿದ್ದಂತಹ ಪರಿಸ್ಥಿತಿ ಎಂದಿಗೂ ಮರಳಿ ಬರುವುದಿಲ್ಲ ಎಂದು ಇರಾನ್ ಹೇಳಿದೆ. ಯುದ್ಧ ಕೊನೆಗೊಳಿಸಲು ನಡೆದಿರುವ ಒಪ್ಪಂದಗಳ ಅಡಿಯಲ್ಲಿ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ದೂರವಾಣಿ ಹಾಟ್‌ಲೈನ್ ಸ್ಥಾಪನೆಗೆ ಒಪ್ಪಿಕೊಂಡಿದೆ.

ಹೊರ್ಮುಜ್ ಜಲಸಂಧಿಯಲ್ಲಿ ದೂರವಾಣಿ ಹಾಟ್‌ಲೈನ್ ಗೆ ಇರಾನ್ ಒಪ್ಪಿಗೆ

ಸಂಗ್ರಹ ಚಿತ್ರ -

ಟೆಹರಾನ್: ಹೊರ್ಮುಜ್ ಜಲಸಂಧಿಯಲ್ಲಿ (Strait Of Hormuz) ದೂರವಾಣಿ ಹಾಟ್ ಲೈನ್ (Telephone Hotline) ಸ್ಥಾಪಿಸಲು ಇರಾನ್ (Iran) ಒಪ್ಪಿಕೊಂಡಿದೆ. ಆದ್ದರಿಂದ ಇನ್ನು ಯಾವತ್ತೂ ಕೂಡ ಇಲ್ಲಿ ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಪ್ರಾರಂಭವಾಗುವ ಮೊದಲಿನ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಘರ್ ಗಲಿಬಾಫ್ (Mohammad Bagher Ghalibaf) ತಿಳಿಸಿದ್ದಾರೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮಾತುಕತೆ ನಡೆಸಿ ಸೋಮವಾರ ಹಿಂದಿರುಗುವಾಗ ಇರಾನಿನ ರಾಜ್ಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೆಹರಾನ್ ಮತ್ತು ವಾಷಿಂಗ್ಟನ್ ಸಾಮರಸ್ಯ ಮತ್ತು ಪರಸ್ಪರ ಸಹಕಾರವನ್ನು ಕಾಪಾಡಿಕೊಳ್ಳುವ ಕಾರ್ಯವಿಧಾನಗಳನ್ನು ಸ್ಥಾಪಿಸುವ ಒಪ್ಪಂದಕ್ಕೆ ಬಂದಿವೆ ಎಂದು ತಿಳಿಸಿದರು.

ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ದೂರವಾಣಿ ಹಾಟ್‌ಲೈನ್ ಅನ್ನು ಸ್ಥಾಪಿಸಲಿದ್ದು, ಇದರಿಂದಾಗಿ ಜಲ ಮಾರ್ಗದಲ್ಲಿ ಯಾವುದೇ ಅಸ್ಪಷ್ಟತೆ ಅಥವಾ ಸಮಸ್ಯೆ ಉದ್ಭವಿಸಿದರೆ ಹಡಗುಗಳು ಇರಾನ್ ನ ದೂರವಾಣಿ ಹಾಟ್‌ಲೈನ್ ಕೇಂದ್ರವನ್ನು ಸಂಪರ್ಕಿಸಬಹುದು ಎಂಬುದಾಗಿ ಅವರು ತಿಳಿಸಿದರು.

ನೌಕಾಪಡೆಗೆ 3 ಸ್ವದೇಶಿ ಯುದ್ಧನೌಕೆಗಳು; ಸಮುದ್ರ ಶಕ್ತಿಯಲ್ಲಿ ಭಾರತದ ಹೊಸ ಅಧ್ಯಾಯ

ಜಗತ್ತಿನ ಮೂಲೆ ಮೂಲೆಯನ್ನು ಸಂಪರ್ಕಿಸಲು ಪ್ರಮುಖ ದಾರಿಯಾದ ಈ ಜಲ ಮಾರ್ಗದ ಮೂಲಕ ಹಾದು ಹೋಗುವ ಹಡಗುಗಳು ಯಾವುದೇ ತಪ್ಪು ಮಾಹಿತಿ ಹೊಂದಿದ್ದರೆ ಅದನ್ನು ಪರಿಹರಿಸಲು ಸಹಾಯ ಮಾಡುವ ಉದ್ದೇಶದಿಂದ ಹೊರ್ಮುಜ್ ಜಲಸಂಧಿಯ ದೂರವಾಣಿ ಹಾಟ್‌ಲೈನ್ ಅನ್ನು ಸ್ಥಾಪಿಸಲು ಇರಾನ್ ಒಪ್ಪಿಕೊಂಡಿದೆ ಎಂದರು.

ಹೊರ್ಮುಜ್ ಜಲಸಂಧಿಯನ್ನು ಇನ್ನು ಇರಾನಿನ ಒಪ್ಪಂದಗಳ ಅಡಿಯಲ್ಲಿ ನಿರ್ವಹಿಸಲಾಗುವುದು. ಹೀಗಾಗಿ ಇಲ್ಲಿ ಯಾವುದೇ ಕಾರಣಕ್ಕೂ ಯುದ್ಧದ ಮೊದಲು ಇದ್ದ ಸ್ಥಿತಿ ಮರಳುವುದಿಲ್ಲ. ಇರಾನ್ ಅಂತಾರಾಷ್ಟ್ರೀಯ ಕಾನೂನುಗಳನ್ನು ನಿಖರವಾಗಿ ಜಾರಿಗೆ ತರಲಿದೆ. ಜಲಮಾರ್ಗದಲ್ಲಿ ಉದ್ಭವಿಸುವ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ತ್ವರಿತವಾಗಿ ಕಾರ್ಯನಿರ್ವಹಿಸಲಿದೆ ಎಡನು ಅವರು ಹೇಳಿದರು.

ದೂರವಾಣಿ ಹಾಟ್‌ಲೈನ್ ಉನ್ನತ ಮಟ್ಟದ ಸುರಕ್ಷತೆ ಮತ್ತು ನಿರಂತರ ಸಂಚಾರವನ್ನು ಖಚಿತ ಪಡಿಸಿಕೊಳ್ಳಲು ಸ್ಥಾಪಿಸಲಾಗಿದೆ. ಇದಕ್ಕೆ ಸಂಬಂಧಿಸಿ ಅಮೆರಿಕನ್ನರು ಯಾವುದೇ ಆಕ್ಷೇಪಣೆಯನ್ನು ಹೊಂದಿದ್ದರೆ, ಯಾವುದೇ ಹಡಗುಗಳಿಗೆ ಮಾರ್ಗ ಅಥವಾ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಬೇಕಾದರೆ ಖಂಡಿತಾ ಕರೆ ಮಾಡಬಹುದು ಎಂದರು.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಮಾತುಕತೆಯಲ್ಲಿ ಇರಾನ್‌ಗೆ ಸ್ಥಗಿತಗೊಳಿಸಿರುವ 12 ಬಿಲಿಯನ್ ಡಾಲರ್ ಫ್ರೋಜನ್ ಫಂಡ್ಸ್ ಗಳನ್ನು ಪಡೆಯಲು ಮತ್ತು ತೈಲ ನಿರ್ಬಂಧಗಳನ್ನು ತೆಗೆದುಹಾಕಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೊಹಮ್ಮದ್ ಬಘರ್ ಗಲಿಬಾಫ್ ಹೇಳಿದರು.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಲ್ಲಿ ಇರಾನ್ ಗೆ ವಿಧಿಸಿರುವ ನಿರ್ಬಂಧಗಳಿಗೆ ಪರಿಹಾರ, ವಶಕ್ಕೆ ಪಡೆದಿರುವ ಇರಾನಿನ ಸ್ವತ್ತುಗಳ ಬಿಡುಗಡೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಇಸ್ಲಾಮಾಬಾದ್ ತಿಳುವಳಿಕೆ ಒಪ್ಪಂದದ ಅಡಿಯಲ್ಲಿ ಸುಮಾರು 80 ನಿಮಿಷಗಳ ಕಾಲ ಮಾತುಕತೆ ನಡೆಸಲಾಗಿದೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡದ ನಾಗರಸು ಗುರುದ್ವಾರದ ಮೇಲೆ ದಾಳಿ ನಡೆಸಿ ಭಕ್ತರನ್ನು ಒತ್ತೆಯಾಳಾಗಿರಿಸಿದ ನಿಹಾಂಗ್‌ಗಳು; ಸಿಖ್ ತೀವ್ರವಾದಿ ಗುಂಪಿನ ಬೇಡಿಕೆ ಏನು?

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಭಾನುವಾರ ತುಂಬಾ ಒಳ್ಳೆಯ ದಿನ. ಮಾತುಕತೆಯಲ್ಲಿ ಎರಡು ರಾಷ್ಟ್ರಗಳು ಸಾಕಷ್ಟು ಪ್ರಗತಿಯನ್ನು ಸಾಧಿಸಿವೆ ಎಂದು ಹೇಳಿದರು.