ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುಎಇ, ಕುವೈತ್‌ನ ತೈಲಾಗಾರಗಳ ಮೇಲೆ ಇರಾನ್ ದಾಳಿ; ಗಲ್ಫ್‌ ವಿರುದ್ಧದ ಕಾರ್ಯಾಚರಣೆ ಇಷ್ಟಕ್ಕೆ ನಿಲ್ಲುವುದಿಲ್ಲವೆಂದು ಎಚ್ಚರಿಕೆ

Iran attacks Gulf countries: ಯುಎಇ, ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಪೆಟ್ರೋಕೆಮಿಕಲ್ ಮತ್ತು ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗಳ ಹೊಣೆಯನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೊತ್ತುಕೊಂಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹರಾನ್ ಬಗ್ಗೆ ತಮ್ಮ ನಿಲುವನ್ನು ಕಠಿಣಗೊಳಿಸಿದ್ದರಿಂದ ಈ ದಾಳಿ ನಡೆದಿದೆ.

ಯುಎಇ, ಕುವೈತ್‌  ತೈಲಾಗಾರಗಳ ಮೇಲೆ ಇರಾನ್ ದಾಳಿ

ಯುಎಇ, ಕುವೈತ್‌ನಲ್ಲಿರುವ ತೈಲಾಗಾರಗಳ ಮೇಲೆ ಇರಾನ್ ದಾಳಿ -

Priyanka P
Priyanka P Apr 5, 2026 7:03 PM

ಟೆಹರಾನ್, ಏ. 5: ಯುಎಇ, ಕುವೈತ್ ಮತ್ತು ಬಹ್ರೇನ್‌ನಲ್ಲಿರುವ (Gulf countries) ಪೆಟ್ರೋಕೆಮಿಕಲ್ ಮತ್ತು ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗಳ ಹೊಣೆಯನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೊತ್ತುಕೊಂಡಿದೆ. ಇದು ಅಮೆರಿಕ, ಇಸ್ರೇಲ್ ಮತ್ತು ಇರಾನ್ (US-Israel-Iran war) ನಡುವಿನ ನಡೆಯುತ್ತಿರುವ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿರುವುದನ್ನು ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇರಾನ್‌ನೊಳಗಿನ ನಾಗರಿಕ ಗುರಿಗಳ ಮೇಲೆ ದಾಳಿಗಳು ಮುಂದುವರಿದರೆ ಈ ಪ್ರದೇಶದಲ್ಲಿ ಅಮೆರಿಕದ ಆರ್ಥಿಕ ಹಿತಾಸಕ್ತಿಗಳ ಮೇಲಿನ ದಾಳಿ ತೀವ್ರಗೊಳ್ಳುತ್ತದೆ ಎಂದು ಐಆರ್‌ಜಿಸಿ ಎಚ್ಚರಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಟೆಹರಾನ್ ಬಗ್ಗೆ ತಮ್ಮ ನಿಲುವನ್ನು ಕಠಿಣಗೊಳಿಸಿದ್ದರಿಂದ ಈ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಶನಿವಾರ (ಏ. 4) ಅವರು ಇರಾನ್‌ನ ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ತೀವ್ರಗೊಳಿಸುವುದಾಗಿ ಬೆದರಿಕೆ ಹಾಕಿದರು.

ಕುವೈತ್‌ ಮೇಲೆ ಇರಾನ್‌ ದಾಳಿ:



ಹೊರ್ಮುಜ್ ಜಲಸಂಧಿಯಲ್ಲಿ ಹಡಗು ಮಾರ್ಗಗಳನ್ನು ತೆರೆಯಲು ಟ್ರಂಪ್‌ ಮತ್ತೆ 48 ಗಂಟೆಗಳ ಕಾಲಾವಕಾಶ ನೀಡಿದ್ದಾರೆ. ಇದು ವಿಶ್ವದ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಐದನೇ ಒಂದು ಭಾಗದಷ್ಟು ಸಾಗುವ ಪ್ರಮುಖ ಮಾರ್ಗವಾಗಿದ್ದು, ಇದು ಬಹುತೇಕ ಮುಚ್ಚಲ್ಪಟ್ಟಿದೆ. ಭಾನುವಾರ (ಏ. 5) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ಜಲಸಂಧಿಯನ್ನು ತೆರೆಯುವಂತೆ ಎಚ್ಚರಿಸಿದರು. ಇಲ್ಲದಿದ್ದರೆ ನೀವು ನರಕದಲ್ಲಿ ವಾಸಿಸುತ್ತೀರಿ ಎಂದು ಬೆದರಿಕೆ ಹಾಕಿದರು.

ಅಮೆರಿಕ ಸೇನೆಯ ಭರ್ಜರಿ ಕಾರ್ಯಾಚರಣೆ; ಇರಾನ್‌ಗೆ ನುಗ್ಗಿ ಪೈಲಟ್ ರಕ್ಷಣೆ

ಕುವೈತ್‌ನಲ್ಲಿ ಡ್ರೋನ್‌ ದಾಳಿ, ಇಂಧನ ಸೌಲಭ್ಯಗಳಿಗೆ ಹಾನಿ

ಕುವೈತ್‌ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ರಾಜ್ಯ ಇಂಧನ ಸಂಸ್ಥೆ ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್‌ನ ಹಲವು ಕಾರ್ಯಾಚರಣಾ ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೆಟ್ರೋಕೆಮಿಕಲ್ ಇಂಡಸ್ಟ್ರೀಸ್ ಕಂಪನಿ ಮತ್ತು ನ್ಯಾಷನಲ್ ಪೆಟ್ರೋಲಿಯಂ ಕಂಪನಿ ಸೇರಿ ಅದರ ಅಂಗಸಂಸ್ಥೆಗಳಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ತುರ್ತು ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕಂಪನಿ ತಿಳಿಸಿದೆ.

ಪ್ರತ್ಯೇಕ ಘಟನೆಯಲ್ಲಿ ತೈಲ ಸಚಿವಾಲಯ ಮತ್ತು ಕೆಪಿಸಿ ಪ್ರಧಾನ ಕಚೇರಿಯನ್ನು ಹೊಂದಿರುವ ಶುವೈಖ್ ತೈಲ ವಲಯ ಸಂಕೀರ್ಣದಲ್ಲಿ ಡ್ರೋನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದೆ. ಸರ್ಕಾರಿ ಸಚಿವಾಲಯಗಳ ಕಚೇರಿ ಸಂಕೀರ್ಣಕ್ಕೂ ಬೆಂಕಿ ತಗುಲಿದ್ದು, ಗಮನಾರ್ಹ ಹಾನಿಯಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಕುವೈತ್ ಮಾಧ್ಯಮಗಳು ವರದಿ ಮಾಡಿವೆ.

ಯುದ್ಧದ ಫೋಟೊ ಪೋಸ್ಟ್ ಮಾಡಿದ 25 ವರ್ಷದ ಫ್ಲೈಟ್ ಅಟೆಂಡರ್‌ ಬಂಧನ

ದಾಳಿ ಕುವೈತ್‌ನ ಆಚೆಗೂ ವಿಸ್ತರಿಸಿದೆ. ಡ್ರೋನ್‌ ಅವಶೇಷಗಳು ಕೈಗಾರಿಕಾ ತಾಣಗಳ ಮೇಲೆ ಬಿದ್ದು ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಂತರ ಅಬುಧಾಬಿಯಲ್ಲಿರುವ ಪೆಟ್ರೋಕೆಮಿಕಲ್ ಸೌಲಭ್ಯಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಯುಎಇ ವರದಿ ಮಾಡಿದೆ.

ಬಹ್ರೇನ್ ಮತ್ತು ಅಬುಧಾಬಿಯಲ್ಲಿರುವ ಪೆಟ್ರೋಕೆಮಿಕಲ್ ಸ್ಥಾವರಗಳ ಮೇಲೂ ಇರಾನ್ ಡ್ರೋನ್ ದಾಳಿ ನಡೆಸಿದೆ. ಕುವೈತ್, ಯುಎಇ ಮತ್ತು ಬಹ್ರೇನ್‌ನಾದ್ಯಂತ ಪೆಟ್ರೋಕೆಮಿಕಲ್ ಸ್ಥಾವರಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಐಆರ್‌ಜಿಸಿ ಹೇಳಿದೆ.

ಸಂಘರ್ಷವು ಈಗ ಆರನೇ ವಾರಕ್ಕೆ ಕಾಲಿಟ್ಟಿದೆ. ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರಿಸಿದೆ. ಅಮೆರಿಕದ ಮಿತ್ರ ಗಲ್ಫ್ ರಾಷ್ಟ್ರಗಳಿಗೆ ಇರಾನ್‌ ತನ್ನ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.