ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೋಲ್ಕತಾದಲ್ಲಿ ಟಿಎಂಸಿ, ಸಿಪಿಐಎಂ ಕಚೇರಿ, ಮಾಜಿ ಶಾಸಕನ ಮನೆ ಧ್ವಂಸ: ಬಿಜೆಪಿ ವಿರುದ್ಧ ದಾಳಿ ಆರೋಪ

TMC, CPI(M) Offices Vandalised: ಪಶ್ಚಿಮ ಬಂಗಾಳದಲ್ಲಿ ಸಿಪಿಐಎಂ ಕಚೇರಿ ಬಹುತೇಕ ಪ್ರತಿದಿನ ದಾಳಿಗೆ ಒಳಗಾಗುತ್ತಿದೆ. ಇದೀಗ ಟಿಎಂಸಿಯ ಮಾಜಿ ಶಾಸಕರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬಿಜೆಪಿಯೇ ಇದಕ್ಕೆ ಕಾರಣ ಎಂದು ಜಾದವ್‌ಪುರದ ಸಿಪಿಐಎಂ ಮಾಜಿ ಶಾಸಕ ಸುಜನ್ ಚಕ್ರವರ್ತಿ ಅರೋಪಿಸಿದರು. ಆದರೆ ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿದೆ.

ಬಿಜೆಪಿ ವಿರುದ್ಧ ದಾಳಿ ಆರೋಪ, ನಮ್ಮ ಸಂಸ್ಕೃತಿಯಲ್ಲ ಎಂದ ಆಡಳಿತರೂಢ ಪಕ್ಷ

ಕೋಲ್ಕತಾದಲ್ಲಿ ಟಿಎಂಸಿ, ಸಿಪಿಐಎಂ ಕಚೇರಿಗಳು, ಮಾಜಿ ಶಾಸಕರ ಮನೆಗಳು ಧ್ವಂಸ -

Priyanka P
Priyanka P Sep 20, 2026 9:08 PM

ಕೋಲ್ಕತಾ, ಸೆ. 20: ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (AITC) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPIM) ಎರಡೂ ಪಕ್ಷಗಳಿಗೆ ಸೇರಿದ ಕಚೇರಿಗಳು, ಮಾಜಿ ಶಾಸಕರ ನಿವಾಸಗಳು ಮತ್ತು ಹುತಾತ್ಮರ ಸ್ಮಾರಕದ ಮೇಲೆ ಶನಿವಾರ (ಸೆಪ್ಟೆಂಬರ್‌ 20) ಮುಂಜಾನೆ ಸಶಸ್ತ್ರ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿ, ಧ್ವಂಸಗೊಳಿಸಿದೆ ಎಂದು ಪಕ್ಷದ ಸದಸ್ಯರು ತಿಳಿಸಿದ್ದಾರೆ. ಈ ದಾಳಿಯ ಹಿಂದೆ ಆಡಳಿತರೂಢ ಬಿಜೆಪಿ ಬೆಂಬಲಿತ ಗೂಂಡಾಗಳ ಕೈವಾಡವಿದೆ ಎಂದು ಎಐಟಿಸಿ ಮತ್ತು ಸಿಪಿಐಎಂ ಎರಡೂ ಆರೋಪಿಸಿದರೆ, ಆಡಳಿತ ಪಕ್ಷದ ನಾಯಕರು ಆರೋಪಗಳನ್ನು ನಿರಾಕರಿಸಿದ್ದಾರೆ.

“ಸುಮಾರು 100ರಿಂದ 150 ಜನರು ಈ ದಾಳಿ ನಡೆಸಿದ್ದಾರೆ. ಅವರಲ್ಲಿ ಹೆಚ್ಚಿನವರು ಯಾರೆಂದು ಗುರುತಿಸಲು ಸಾಧ್ಯವಿಲ್ಲ. ಜತೆಗೆ ಅವರೆಲ್ಲ ಹೊರಗಿನಿಂದ ಬಂದವರು. ಅವರು ನನ್ನ ಮನೆಯ ಸಿಸಿಟಿವಿ ಕ್ಯಾಮೆರಾಗಳು, ಕಿಟಕಿಗಳು ಮತ್ತು ಬಾಗಿಲನ್ನು ಹಾನಿಗೊಳಿಸಿದ್ದಾರೆ. ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಗೆ ಬಂದಾಗ, ಅವರ ಮೇಲೂ ಹಲ್ಲೆ ನಡೆಸಲಾಗಿದೆ. ನಾನು ಈ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದೇನೆ. ಹಲ್ಲೆಗೊಳಗಾದ ಇತರ ಕೆಲವು ಸ್ಥಳೀಯ ನಿವಾಸಿಗಳೂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಘಟನೆ ಕುರಿತು ವಿಚಾರಣೆ ನಡೆಸಿದ್ದಾರೆ” ಎಂದು ಜಾದವ್‌ಪುರದ ಎಐಟಿಸಿ ಮಾಜಿ ಶಾಸಕ ದೇಬಬ್ರತ ಮಜುಂದಾರ್ ಹೇಳಿದರು.

“ಕೆಲವು ನೂರು ಮೀಟರ್ ದೂರದಲ್ಲಿರುವ ಬಾಪೂಜಿನಗರದಲ್ಲಿ ಸಿಪಿಐಎಂ ಮತ್ತು ಟಿಎಂಸಿ ಕಚೇರಿ ಮತ್ತು ಸಿಪಿಐಎಂ ಹುತಾತ್ಮರ ಸ್ಮಾರಕವನ್ನು ಧ್ವಂಸಗೊಳಿಸಲಾಯಿತು. ಬಿಜೆಪಿ ಬೆಂಬಲಿತ ಗೂಂಡಾಗಳು ಇಡೀ ರಾತ್ರಿ ದಾಳಿ ನಡೆಸಿದ್ದಾರೆ. ನಮ್ಮ ಮಾಜಿ ಶಾಸಕ ಮತ್ತು ಮಾಜಿ ಕೌನ್ಸಿಲರ್ ಅವರ ಕಚೇರಿ ಹಾಗೂ ನಿವಾಸಗಳನ್ನು ಧ್ವಂಸಗೊಳಿಸಲಾಗಿದೆ. ಆರೋಪಿಗಳ ಮುಖಗಳು ಸಿಸಿಟಿವಿ ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದರೂ, ಇನ್ನೂ ಅವರನ್ನು ಬಂಧಿಸಲಾಗಿಲ್ಲ” ಎಂದು ಎಐಟಿಸಿಯ ಮಮತಾ ಬೆಂಬಲಿತ ಬಣದ ವಕ್ತಾರ ಕುನಾಲ್ ಘೋಷ್ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಮತ್ತೆ ಸ್ಪರ್ಧೆಗಿಳಿದ ಮಮತಾ ಬ್ಯಾನರ್ಜಿ ಪಕ್ಷದ ಅಭ್ಯರ್ಥಿ

“ಸಿಪಿಐಎಂ ಕಚೇರಿಗಳ ಮೇಲೂ ದಾಳಿ ನಡೆದಿದೆ. ಇದು ನಿಜವಾದ ಶತ್ರು ಯಾರು ಎಂಬುದನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ. ಬಿಜೆಪಿ ವಿರುದ್ಧ ಹೋರಾಡಲು ರಾಜಕೀಯ ಪಕ್ಷಗಳು ಒಗ್ಗೂಡಬೇಕು ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿದ್ದಾರೆ” ಎಂದು ಘೋಷ್ ಹೇಳಿದರು.

ಜಾದವ್‌ಪುರ ವಿಧಾನಸಭಾ ಕ್ಷೇತ್ರವು 2006ರವರೆಗೆ ಎಡಪಕ್ಷಗಳ ಭದ್ರಕೋಟೆಯಾಗಿತ್ತು. 2011ರಲ್ಲಿ ಮೊದಲ ಬಾರಿಗೆ ಎಐಟಿಸಿ ಅದನ್ನು ಗೆದ್ದುಕೊಂಡಿತು. 2016ರಲ್ಲಿ ಸಿಪಿಐಎಂ ಅದನ್ನು ಮರಳಿ ಗೆದ್ದುಕೊಂಡಿತು. 2021ರಲ್ಲಿ ಎಐಟಿಸಿ ಮತ್ತೆ ಜಯಭೇರಿ ಬಾರಿಸಿತು. ಆದರೆ 2026ರ ಚುನಾವಣೆಯಲ್ಲಿ, ಆ ಕ್ಷೇತ್ರ ಬಿಜೆಪಿ ಪಾಲಾಯಿತು. 2009ರಿಂದ ಸತತವಾಗಿ ನಾಲ್ಕು ಬಾರಿ ಎಐಟಿಸಿ ಜಾದವ್‌ಪುರ ಲೋಕಸಭಾ ಸ್ಥಾನವನ್ನು ಗೆದ್ದಿದೆ.

ಸಿಪಿಐಎಂ ಬಹುತೇಕ ಪ್ರತಿದಿನ ದಾಳಿಗೆ ಒಳಗಾಗುತ್ತಿದೆ. ಟಿಎಂಸಿಯ ಮಾಜಿ ಶಾಸಕರ ನಿವಾಸದ ಮೇಲೆ ದಾಳಿ ನಡೆಸಲಾಯಿತು. ಬಿಜೆಪಿಯೇ ಇದಕ್ಕೆ ಕಾರಣ ಎಂದು ಜಾದವ್‌ಪುರದ ಸಿಪಿಐಎಂ ಮಾಜಿ ಶಾಸಕ ಸುಜನ್ ಚಕ್ರವರ್ತಿ ಅರೋಪಿಸಿದರು. ಆದರೆ ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿದ್ದು, ಅದು ಬಿಜೆಪಿಯ ಸಂಸ್ಕೃತಿಯಲ್ಲ. ತಮ್ಮ ಪಕ್ಷ ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.