ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅರ್ನಾಬ್‌ ಆರ್ಭಟಕ್ಕೆ ಆಂಧ್ರಪ್ರದೇಶದಲ್ಲಿ ಐವರು ಸಾವು; ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ

Cyclone Arnab: ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಿಗೆ ತೀವ್ರ ಸ್ವರೂಪದ ‘ಅರ್ನಾಬ್’ ಚಂಡಮಾರುತ ಭೀಕರವಾಗಿ ಅಪ್ಪಳಿಸಿದೆ. ಬುಧವಾರ ಮುಂಜಾನೆ ನರ್ಸಾಪುರ ಬಳಿ ಚಂಡಮಾರುತ ಭೂಸ್ಪರ್ಶ ಮಾಡಿದ್ದು, ಸೃಷ್ಟಿಸಿರುವ ಭೀಕರ ಅವಾಂತರಗಳಿಗೆ ಕನಿಷ್ಠ ಐದು ಮಂದಿ ಬಲಿಯಾಗಿದ್ದಾರೆ.

ಅರ್ನಾಬ್‌ ಆರ್ಭಟಕ್ಕೆ ಆಂಧ್ರಪ್ರದೇಶದಲ್ಲಿ ಐವರು ಸಾವು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 28, 2026 6:00 PM

ಹೈದರಾಬಾದ್‌: ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಿಗೆ ತೀವ್ರ ಸ್ವರೂಪದ ‘ಅರ್ನಾಬ್’ (Cyclone Arnab) ಚಂಡಮಾರುತ ಭೀಕರವಾಗಿ ಅಪ್ಪಳಿಸಿದೆ. ಬುಧವಾರ ಮುಂಜಾನೆ ನರ್ಸಾಪುರ ಬಳಿ ಚಂಡಮಾರುತ ಭೂಸ್ಪರ್ಶ ಮಾಡಿದ್ದು, ಸೃಷ್ಟಿಸಿರುವ ಭೀಕರ ಅವಾಂತರಗಳಿಗೆ ಕನಿಷ್ಠ ಐದು ಮಂದಿ ಬಲಿಯಾಗಿದ್ದಾರೆ. ಗಂಟೆಗೆ 135 ರಿಂದ 150 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿ ಮತ್ತು ಜಿಟಿಜಿಟಿ ಮಳೆಗೆ ಕರಾವಳಿ ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಪಶ್ಚಿಮ ಗೋದಾವರಿಯ ಭೀಮವರಂನಲ್ಲಿ ಮರ ಬಿದ್ದು ಒಬ್ಬರು, ವಿಶಾಖಪಟ್ಟಣ ಮತ್ತು ಅನಕಾಪಲ್ಲಿಯಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು, ಬಾಲಾಜಿನಗರದಲ್ಲಿ ಕಂಬ ಬಿದ್ದು ಓರ್ವ ಮಹಿಳೆ ಹಾಗೂ ಕೋನಸೀಮಾದಲ್ಲಿ ಮನೆ ಕುಸಿದು ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಚಂಡಮಾರುತದ ಭೀಕರ ರಭಸಕ್ಕೆ ಕರಾವಳಿ ಜಿಲ್ಲೆಗಳಲ್ಲಿ ಸಾವಿರಾರು ಮರಗಳು ಹಾಗೂ ನೂರಾರು ವಿದ್ಯುತ್ ಕಂಬಗಳು ನೆಲಸಮವಾಗಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರವು ಕರಾವಳಿ ತೀರದ ತಗ್ಗು ಪ್ರದೇಶಗಳಲ್ಲಿದ್ದ ಸುಮಾರು 1.80 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಆಶ್ರಯ ಕೇಂದ್ರಗಳಿಗೆ ರವಾನಿಸಿದೆ. ಮುಂಜಾಗ್ರತಾ ಕ್ರಮವಾಗಿ ಕರಾವಳಿಯ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ತಗ್ಗು ಪ್ರದೇಶಗಳು ಹಾಗೂ ಸಮುದ್ರ ತೀರದಲ್ಲಿದ್ದ ಸುಮಾರು 1.80 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಆಶ್ರಯ ಕೇಂದ್ರಗಳಿಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ ಕರಾವಳಿ ಕೇಂದ್ರಗಳಲ್ಲಿ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಅರ್ನಾಬ್‌ ಚಂಡಮಾರುತದ ಅಬ್ಬರ: ಅಕ್ಟೋಬರ್ 28ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

ಸುರಕ್ಷತೆಯ ದೃಷ್ಟಿಯಿಂದ ವಿಶಾಖಪಟ್ಟಣಂ ವಿಮಾನ ನಿಲ್ದಾಣದಿಂದ ಹೊರಡುವ ಮತ್ತು ಆಗಮಿಸುವ ಎಲ್ಲಾ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದಕ್ಷಿಣ ಮಧ್ಯ ರೈಲ್ವೆ ವಲಯವು ಕರಾವಳಿ ಮಾರ್ಗವಾಗಿ ಚಲಿಸುವ ನೂರಾರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಶಾಖಪಟ್ಟಣದಲ್ಲಿ ಬೆಳಿಗ್ಗೆ 8:30 ರವರೆಗೆ ಅತಿ ಹೆಚ್ಚು 315 ಮಿ.ಮೀ ಮಳೆಯಾಗಿದ್ದು, ನಂತರ ವಿಜಯನಗರಂನಲ್ಲಿ 301 ಮಿ.ಮೀ, ಅನಕಪಲ್ಲಿಯಲ್ಲಿ 275 ಮಿ.ಮೀ, ಶ್ರೀಕಾಕುಳಂನಲ್ಲಿ 257 ಮಿ.ಮೀ ಮತ್ತು ಕೃಷ್ಣಾದಲ್ಲಿ 223 ಮಿ.ಮೀ ಮಳೆಯಾಗಿದೆ.