ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

9/11 ದಾಳಿಗೂ ಮುನ್ನ ಭಾರತದ ಮೇಲೆ ಟಾರ್ಗೆಟ್ ಮಾಡಿದ್ದ ಒಸಾಮಾ ಬಿನ್ ಲಾಡೆನ್; 20 ವರ್ಷಗಳ ಸತ್ಯ ಹೊರ ಬಿದ್ದಿದ್ದೇಗೆ?

ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅಮೆರಿಕದ ಮೇಲೆ ದಾಳಿ ನಡೆಸುವ ಮೊದಲು ಭಾರತದ ಮೇಲೆ ದಾಳಿಗೆ ಯೋಜನೆ ಹಾಕಿಕೊಂಡಿದ್ದನು ಎಂದು ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ ತಿಳಿಸಿದೆ. ಸೆಪ್ಟೆಂಬರ್ 11ರ ದಾಳಿಗೂ ಹಲವು ವರ್ಷಗಳ ಹಿಂದೆ ಒಸಾಮಾ ಬಿನ್ ಲಾಡೆನ್ ದಾಳಿಗಾಗಿ ಪರಿಗಣಿಸುತ್ತಿದ್ದ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ ಭಾರತವೂ ಸೇರಿತ್ತು ಎಂದು ಅದು ಹೇಳಿದೆ.

ಭಾರತದ ಮೇಲೆ ದಾಳಿಗೆ ಯೋಜನೆ ರೂಪಿಸಿದ್ದ ಒಸಾಮಾ ಬಿನ್ ಲಾಡೆನ್

ಸಂಗ್ರಹ ಚಿತ್ರ -

ವಾಷಿಂಗ್ಟನ್: ಅಮೆರಿಕದ ಮೇಲೆ ದಾಳಿ (9/11 attack) ನಡೆಸುವ ಮೊದಲು ಅಲ್-ಖೈದಾ (al-Qaeda) ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ (Osama Bin Laden) ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಎಂದು ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (US Central Intelligence Agency) ದಾಖಲೆಗಳು ಬಹಿರಂಗ ಪಡಿಸಿವೆ. ಈ ದಾಖಲೆಗಳಲ್ಲಿ 9/11 ದಾಳಿಗೂ ಹಲವು ವರ್ಷಗಳ ಮೊದಲಿನ ಗುಪ್ತಚರ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಇದರಲ್ಲಿ ಅಲ್-ಖೈದಾವು ವಿವಿಧ ದೇಶಗಳ ಮೇಲೆ ದಾಳಿ ನಡೆಸಲು ರೂಪಿಸಿರುವ ಸಂಚಿನ ಕುರಿತು ವಿವರಿಸಲಾಗಿದೆ.

ಒಸಾಮಾ ಬಿನ್ ಲಾಡೆನ್ ಅಮೆರಿಕದ ಮೇಲೆ ಸೆಪ್ಟೆಂಬರ್ 11ರಂದು ದಾಳಿ ನಡೆಸಿದ್ದನು. ಇದಕ್ಕೂ ಹಲವು ವರ್ಷಗಳ ಹಿಂದೆ ಆತ ದಾಳಿಗಾಗಿ ಪರಿಗಣಿಸುತ್ತಿದ್ದ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ ಭಾರತವೂ ಸೇರಿತ್ತು. ಉಳಿದಂತೆ ಪಾಕಿಸ್ತಾನ, ಈಜಿಪ್ಟ್, ಕುವೈತ್, ಸೌದಿ ಅರೇಬಿಯಾ, ಯೆಮೆನ್ ಮತ್ತು ಉಗಾಂಡಾ, ನೈಜೀರಿಯಾದ ಮೇಲೆ ಕೂಡ ದಾಳಿ ನಡೆಸಲು ಲಾಡೆನ್ ಸಂಚು ರೂಪಿಸಿದ್ದನ್ನು ಎಂದು 1998 ಆಗಸ್ಟ್ 28ರ ಅಮೆರಿಕ ಅಧ್ಯಕ್ಷೀಯ ಗುಪ್ತಚರ ವರದಿ ತಿಳಿಸಿದೆ.

Vishwavani Global Achievers Awards Celebration in Tashkent: ತಾಷ್ಕೆಂಟ್‌ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ

ಈ ವರದಿಯಲ್ಲಿ ಭಾರತದ ಮೇಲಿನ ದಾಳಿಗೆ ಸಂಬಂಧಿಸಿ ಯಾವುದೇ ನಿರ್ದಿಷ್ಟ ಗುರಿಯ ಬಗ್ಗೆ ಉಲ್ಲೇಖಿಸಲಾಗಿಲ್ಲ. 2001 ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಗೆ 25 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಸಿಐಎ ಶುಕ್ರವಾರ ಈ ವರದಿಯನ್ನು ಬಹಿರಂಗ ಮಾಡಿದೆ. ಇದರಲ್ಲಿ 70ಕ್ಕೂ ಹೆಚ್ಚು ಅಧ್ಯಕ್ಷೀಯ ಗುಪ್ತಚರ ದಾಖಲೆಗಳ ವರದಿಗಳು ಸೇರಿವೆ. 9/11 ದಾಳಿಗೆ ಸಂಬಂಧಿಸಿದ ದಾಖಲೆಗಳು 100ಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ.

ಸಿಐಎ ವರದಿಯಲ್ಲೇನಿದೆ?

"Bin Ladin Terrorist Network Still a Threat'' ಎಂಬ ಶೀರ್ಷಿಕೆಯ ವರದಿಯಲ್ಲಿ ಅಫ್ಘಾನಿಸ್ತಾನದ ಅಲ್-ಖೈದಾ ಶಿಬಿರಗಳ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಗಳ ಬಳಿಕ ಬಿನ್ ಲಾಡೆನ್‌ನ ಅಮೆರಿಕ ಮಾತ್ರವಲ್ಲ ಉತ್ತರ ಅಮೆರಿಕ, ಯುರೋಪ್ ಮತ್ತು ಪೂರ್ವ ಏಷ್ಯಾದ ಕೆಲವು ದೇಶಗಳ ಮೇಲೆ ದಾಳಿ ನಡೆಸುವ ಯೋಜನೆ ಹೊಂದಿದ್ದ ಎಂದು ತಿಳಿಸಲಾಗಿದೆ. ಅಫ್ಘಾನಿಸ್ತಾನದ ಮೇಲೆ ಅಮೆರಿಕ ದಾಳಿ ನಡೆಸಿದಾಗ ಅಲ್-ಖೈದಾ ಗುಂಪಿನ ಭಯೋತ್ಪಾದಕ ನಾಯಕರು ಬದುಕುಳಿದಿದ್ದರು. ಅವರ ನಡುವೆ ಸಂವಹನ ಮುಂದುವರಿದಿತ್ತು. ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಮ್ ಮೇಲೆ ಮತ್ತಷ್ಟು ದಾಳಿಗೆ ಲಾಡೆನ್ ಯೋಜನೆ ಹಾಕಿಕೊಂಡಿದ್ದ ಎಂದು ವರದಿ ತಿಳಿಸಿದೆ.

ದಾಳಿಗಳನ್ನು ನಡೆಸಲು ಕನಿಷ್ಠ 60 ದೇಶಗಳಲ್ಲಿರುವ ಹಲವಾರು ವ್ಯಕ್ತಿಗಳನ್ನೊಳಗೊಂಡ ಗುಂಪುಗಳನ್ನು ರಚಿಸಲಾಗಿತ್ತು. 9/11 ರ ಮೊದಲೇ ಬಿನ್ ಲಾಡೆನ್ ಬೆದರಿಕೆಯ ಬಗ್ಗೆ ಯುಎಸ್ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ , ಜಾರ್ಜ್ ಡಬ್ಲ್ಯೂ ಬುಷ್ ಅವರ ಆಡಳಿತ ಅವಧಿಯ ದಾಖಲೆಯನ್ನು ಇದು ಒಳಗೊಂಡಿದೆ.

Vishwavani Global Achievers Awards Celebration in Tashkent: ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿ ಸಂಭ್ರಮ: ಶಾಸ್ತ್ರಿ ಪುಣ್ಯ ನೆಲದಲ್ಲಿ ಸಾಧಕರಿಗೆ ಸನ್ಮಾನ

2001ರ ಸೆಪ್ಟೆಂಬರ್ 11ರಂದು 19 ಅಲ್-ಖೈದಾ ಕಾರ್ಯಕರ್ತರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಾಲ್ಕು ಪ್ರಯಾಣಿಕ ವಿಮಾನಗಳನ್ನು ಅಪಹರಿಸಿದ್ದರು. ಬಳಿಕ ಇದರಲ್ಲಿ ಎರಡು ವಿಮಾನಗಳಿಂದ ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳ ಮೇಲೆ ದಾಳಿ ನಡೆಸಲಾಯಿತು. ಮತ್ತೊಂದು ವಿಮಾನವು ವಾಷಿಂಗ್ಟನ್‌ನ ಹೊರಗೆ ಪೆಂಟಗನ್‌ಗೆ ಡಿಕ್ಕಿ ಹೊಡೆದಿದೆ. ಶ್ವೇತಭವನದ ಕಡೆಗೆ ಹೋಗುತ್ತಿದ್ದ ಇನ್ನೊಂದು ವಿಮಾನ ಪೆನ್ಸಿಲ್ವೇನಿಯಾದಲ್ಲಿ ಅಪಘಾತಕ್ಕೀಡಾಯಿತು. ಈ ದಾಳಿಯಲ್ಲಿ ಸುಮಾರು 3,000 ಮಂದಿ ಸಾವನ್ನಪ್ಪಿದ್ದರು. ಇದರ ಬಳಿಕ ಯುಎಸ್ ಭಯೋತ್ಪಾದನೆಯ ವಿರುದ್ಧದ ಸಮರ ಪ್ರಾರಂಭಿಸಿತ್ತು.