ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Global Achievers Awards Celebration in Tashkent: ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿ ಸಂಭ್ರಮ: ಶಾಸ್ತ್ರಿ ಪುಣ್ಯ ನೆಲದಲ್ಲಿ ಸಾಧಕರಿಗೆ ಸನ್ಮಾನ

ಇಂತಹ ಐತಿಹಾಸಿಕ ಮಹತ್ವವನ್ನು ಹೊಂದಿರುವ, ಭಾರತದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ತಾಷ್ಕೆಂಟ್‌ನಲ್ಲಿ ವಿಶ್ವವಾಣಿ 14ನೇ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಅದರಲ್ಲಿಯೂ ಈ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಸುನಿಲ್ ಶಾಸ್ತ್ರಿ ಅವರ ಘನ ಉಪಸ್ಥಿತಿ ಇಡೀ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ತುಂಬಿತ್ತು.

ಶಾಸ್ತ್ರಿ ಪುಣ್ಯ ನೆಲದಲ್ಲಿ ಸಾಧಕರಿಗೆ ಸನ್ಮಾನ

-

Profile
Ashok Nayak Sep 13, 2026 8:14 AM

ತಾಷ್ಕೆಂಟ್: ಭಾರತೀಯರಿಗೆ ದೇಶದ ಹತ್ತಾರು ಸ್ಥಳಗಳು ಭಾವನಾತ್ಮಕವಾಗಿ ಹತ್ತಿರವಾಗಿರುತ್ತದೆ. ಆದರೆ ವಿದೇಶದಲ್ಲಿರುವ ಯಾವುದಾದರೂ ಒಂದು ಸ್ಥಳದ ಬಗ್ಗೆ ದಶಕಗಳಿಂದ ಅದೇ ಭಾವನಾತ್ಮಕ ಸಂಬಂಧ ಹೊಂದಿದ್ದರೆ ಅದು ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ ಎಂದರೆ ತಪ್ಪಾಗುವುದಿಲ್ಲ. ದೇಶಕ್ಕೆ ಜೈ ಜವಾನ್-ಜೈ ಕಿಸಾನ್ ಘೋಷಣೆ ನೀಡಿದ್ದ, 1965ರ ಇಂಡೋ-ಪಾಕ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟುವಲ್ಲಿ ಭಾರತೀಯ ಸೇನೆಗೆ ಸಕಲ ರೀತಿಯ ಬೆಂಬಲ ನೀಡಿದ್ದ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೊನೆಯುಸಿರು ಎಳೆದ ಸ್ಥಳವಾಗಿರುವ ತಾಷ್ಕೆಂಟ್ ಈಗಲೂ ಭಾರತೀಯರನ್ನು ಸೆಳೆಯುವ ಊರೆಂದರೆ ತಪ್ಪಾಗುವುದಿಲ್ಲ.

ಇಂತಹ ಐತಿಹಾಸಿಕ ಮಹತ್ವವನ್ನು ಹೊಂದಿರುವ, ಭಾರತದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ತಾಷ್ಕೆಂಟ್‌ನಲ್ಲಿ ವಿಶ್ವವಾಣಿ 14ನೇ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಅದರ ಲ್ಲಿಯೂ ಈ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಸುನಿಲ್ ಶಾಸ್ತ್ರಿ ಅವರ ಘನ ಉಪಸ್ಥಿತಿ ಇಡೀ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ತುಂಬಿತ್ತು.

ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುವ ‘ಗ್ಲೋಬಲ್ ಅಚೀವರ್ಸ್’ ಕಾರ್ಯಕ್ರಮ ಈ ಹಿಂದೆ ಕಾಂಬೋ ಡಿಯಾ, ವಿಯೆಟ್ನಾಮ, ಬಾಲಿ, ಮಾಲ್ಡೀವ್ಸ್, ಮಾರಿಷಸ್, ಒಮಾನ್, ರಷ್ಯಾ, ಜಪಾನ್, ಜಾರ್ಜಿಯಾ, ದಕ್ಷಿಣ ಆಫ್ರಿಕಾ, ಫಿಲಿಪೈನ್ಸ್, ಭೂತಾನ್, ಪ್ಯಾರಿಸ್ ಸೇರಿದಂತೆ ಇಲ್ಲಿಯವರೆಗೆ ವಿಶ್ವದ ಹದಿನಾಲ್ಕು ಪ್ರಮುಖ ದೇಶಗಳಲ್ಲಿ ನಡೆದಿತ್ತು. ಈ ಬಾರಿ ಈ ವಿಶಿಷ್ಟ ಪಯಣದ ನಕ್ಷೆಯಲ್ಲಿ ಅರಳಿದ್ದು ಉಜ್ಬೇಕಿಸ್ತಾನದ ತಾಷ್ಕೆಂಟ್.

ಇದನ್ನೂ ಓದಿ: Vishwavani Global Achievers Award held at Manila, Philippines: ಫಿಲಿಫೈನ್ಸ್‌ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ

ತಾಷ್ಕೆಂಟ್ ಎನ್ನುವ ಹೆಸರು ಕಿವಿಗೆ ಬಿದ್ದಾಗಲೆಲ್ಲ ಎದೆಯಾಳದಲ್ಲಿ ಒಂದು ಹಳೆಯ ಕಪ್ಪು-ಬಿಳುಪು ಫೋಟೋ ದಂತೆ ಏನೋ ಒಂದು ಮೌನ ತೇವ ಆವರಿಸಿಕೊಳ್ಳುತ್ತದೆ. ರೇಷ್ಮೆ ರಸ್ತೆಯ ಧೂಳಿನಲ್ಲಿ ಹಳೆಯ ಸಾಮ್ರಾಜ್ಯಗಳ ಪಳೆಯುಳಿಕೆಗಳಿವೆ, ಆದರೆ ಭಾರತೀಯ ನೊಬ್ಬನಿಗೆ ತಾಷ್ಕೆಂಟ್ ಎಂದರೆ ಇತಿಹಾಸದ ಪುಸ್ತಕದಲ್ಲಿ ಅರ್ಧಕ್ಕೇ ಮುರಿದುಬಿದ್ದ ಒಂದು ಸಾಲು. 1966ರ ಆ ಜನವರಿಯ ಕೊರೆವ ಚಳಿಯ ರಾತ್ರಿ ನಮ್ಮ ದೇಶದ ಪ್ರಧಾನಿ, ಸರಳತೆಯ ಸಾಕಾರಮೂರ್ತಿ ಲಾಲ್ ಬಹದ್ದೂರ್ ಶಾಸ್ತ್ರಿಗಳು ಕೊನೆಯುಸಿರೆಳೆದ ನೆಲವಿದು. ಅಲ್ಲಿ ಸಮಾರಂಭ ಮಾಡುವು ದೆಂದರೆ, ಇತಿಹಾಸ ಬಿಟ್ಟುಹೋದ ನೋವಿನ ತಣ್ಣನೆಯ ಗಾಳಿಗೆ ನಮ್ಮ ಪ್ರೀತಿಯ ಮುಖಾಮುಖಿ. ಇಂಥದೊಂದು ಭಾವುಕ ತಾಣದಲ್ಲಿ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ ಆಯೋಜಿಸಲು ನಿಂತಾಗ, ಮುಖ್ಯ ಅತಿಥಿ ಯಾರಾಗಬೇಕೆಂಬ ಗೊಂದಲಕ್ಕೆ ಜಾಗವೇ ಇರಲಿಲ್ಲ. ಮನಸ್ಸಿನ ಕಿಟಕಿಯ ಬಳಿ ಬಂದು ನಿಂತಿದ್ದು ಒಂದೇ ಒಂದು ಸೌಮ್ಯ ಮುಖ, ಅದು ದಿ.ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಮಗ ಸುನಿಲ್ ಶಾ ಶಾಸ್ತ್ರಿ ಅವರದ್ದು.

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದಲ್ಲಿ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಸೇರಿದಂತೆ 40ಕ್ಕೂ ಹೆಚ್ಚು ಜನರ ವಿಶ್ವವಾಣಿ ನಿಯೋಗ ಕಜಕಿಸ್ತಾನ ಹಾಗೂ ಉಜ್ಬೇಕಿಸ್ತಾನದ ವಿವಿಧ ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿತ್ತು. ತಾಷ್ಕೆಂಟ್‌ನಲ್ಲಿ ನಡೆದ ಕಾರ್ಯಕ್ರಮಕ್ಕೂ ಮೊದಲು ಖಜಕಿಸ್ತಾನ ದೇಶದ ವಿವಿಧ ಭಾಗಗಳಿಗೆ ಅಧ್ಯಯನ ಪ್ರವಾಸ ಕೈಗೊಂಡ ವಿಶ್ವವಾಣಿ ನಿಯೋಗ ಬಳಿಕ ಉಜ್ಬೇಕಿಸ್ತಾನಕ್ಕೆ ಭೇಟಿ ನೀಡಿತ್ತು. ಉಜ್ಬೇಕಿಸ್ತಾನದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಮೊದಲು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕೊನೆಯುಸಿರು ಎಳೆದಿದ್ದ ತಾಷ್ಕೆಂಟ್‌ನಲ್ಲಿ ಅದ್ಧೂರಿಯಾಗಿ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಕರ್ನಾಟಕದ ಸಾಧಕರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಸುನೀಲ್ ಶಾಸ್ತ್ರಿ ಸೇರಿದಂತೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮಾಜಿ ಸಚಿವ ಮಾಧು ಸ್ವಾಮಿ ಅವರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಉಜ್ಬೇಕಿಸ್ತಾನ ದೇಶದ ಸಾಂಪ್ರದಾಯಿಕ ಸಾಂಸ್ಕೃತಿಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ಭಾಗವಹಿಸಿದ ಗಣ್ಯರು ತಮ್ಮ ಸಾಧನಾ ಪಥದ ಯಶೋಗಾಥೆಯ ಅನುಭವವನ್ನು ಹಂಚಿಕೊಂಡರು.

Tashkent - Vishwavani Global Achievers Award Lead2 ok

ಪ್ರಶಸ್ತಿ ಪುರಸ್ಕೃತರ ಪಟ್ಟಿ

ಶ್ರೀ ಶ್ರೀ ನಟರಾಜ ಸ್ವಾಮೀಜಿ

ಶ್ರೀ ಕೆ.ರಾಧಾಕೃಷ್ಣ ಹೊಳ್ಳ

ಶ್ರೀ ರೇಣುಕಾ ಲಕ್ಷ್ಮಣ್ ಉಪ್ಪಾರ್

ಶ್ರೀ ಸುನಿಲ್ ಕುಮಾರ್ ಎಚ್.ವಿ

ಶ್ರೀ ಎ.ಎಸ್. ಪ್ರೇಮನಾಥ್

ಶ್ರೀ ಕಿರಣ್ ಕುಮಾರ್ ವಿ.ಜಿ

ಶ್ರೀ ರಾಘವ್ ಸೂರ್ಯ ಹೆಗಡೆ

ಶ್ರೀ ಸಿದ್ದಪ್ಪ ಮುನಿಯಪ್ಪ

ಶ್ರೀ ರಾಹುಲ್ ಚಂದ್ರಶೇಖರ್

ಶ್ರೀ ಸಂಗಮೇಶ್ ಸುಗ್ರೀವಾ

ವಿಶ್ವವಾಣಿ ನಿಯೋಗದಲ್ಲಿದ್ದವರು

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ನೇತೃತ್ವದ ನಿಯೋಗದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಪುತ್ರ ಸುನಿಲ್ ಶಾಸ್ತ್ರಿ, ಸೊಸೆ ಮೀರಾ ಶಾಸ್ತ್ರಿ, ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ, ತ್ರಿವೇಣಿ ಮಾಧುಸ್ವಾಮಿ, ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಎಚ್.ಪಿ ನೀಲೇಶ್, ದಿವ್ಯಾ ನೀಲೇಶ್, ಮಂಜುನಾಥ್, ಲಕ್ಷ್ಮಣ ಉಪ್ಪಾರ್, ಸಿ.ಆರ್. ಸುರೇಶ್, ಆರ್.ಬೈರೇ ಗೌಡ, ರಾಜೇಶ್ವರಿ, ಎಚ್. ಎಸ್.ಚಂದ್ರಮೌಳಿ, ಅರುಣಾ ಚಂದ್ರಮೌಳಿ, ಆರ್.ರವಿ, ನೀತಾ ರವಿ, ವೆಂಕಟೇಶ್ ಹೆಗಡೆ ಹೊಸಬಾಳೆ, ಉಮೇಶ್ ಗೌಡ, ನಾಗರಾಜ್ ಅಡಿಗ, ರಾಘವೇಂದ್ರ ಡಿ.ನಾಯಕ್, ಚನ್ನ ವೀರಪ್ಪ ಪೂಜಾರ್, ಸಿದ್ದೇಶ್ ಹಾರನಹಳ್ಳಿ, ಸುಜಾತಾ, ವಿಶಾಲ್ ಶಾನುಭಾಗ್, ಬಸವರಾಜ್ ಉಪ್ಪಾರ್, ದಯಾನಂದ್ ವಜ್ರಪ್ಪ, ನಂದೀಶ್ ಜಿ.ಎಚ್., ಆನಂದ ಮುನಿರಾಜು, ವಿಶ್ವವಾಣಿ ಪುಸ್ತಕದ ಮುಖ್ಯಸ್ಥ ರಾದ ಸುಷ್ಮಾ ಭಟ್, ವಿಶ್ವವಾಣಿ ಸಿಇಒ ಚಿದಾನಂದ ಕಡಲಾಸ್ಕರ, ನಾಗಾರ್ಜುನ್ ಇದ್ದರು.

image

ಜೈ ಜವಾನ್, ಜೈ ಕಿಸಾನ್ ಜತೆ ಜೈ ಇನ್ಸಾನ್ ಎನ್ನುವುದನ್ನೂ ಸೇರಿಸಬೇಕಿದೆ. ನನ್ನ ತಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವರ್ಗಸ್ಥ ರಾದ ತಾಷ್ಕೆಂಟ್‌ನಲ್ಲಿ ವಿಶ್ವವಾಣಿ ಬಳಗವು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಿರುವುದು ನನ್ನನ್ನು ಭಾವುಕ ಆಗಿಸಿದೆ. ವಿಶ್ವೇಶ್ವರ ಭಟ್ ಅವರ ಪ್ರಭಾವ, ವರ್ಚಸ್ಸು ಮತ್ತು ಕಾರ್ಯ ವೈಖರಿಯನ್ನು ಹಲವು ವರ್ಷಗಳಿಂದ ಹತ್ತಿರದಿಂದ ಕಂಡಿದ್ದೇನೆ. ವಿಶ್ವವಾಣಿ ಸಮೂಹ ಮತ್ತಷ್ಟು ಬೆಳೆಯಲಿ, ಯಶಸ್ಸು ಸಿಗಲಿ.

-ಸುನಿಲ್ ಶಾಸ್ತ್ರಿ, ರಾಜ್ಯಸಭೆ ಮಾಜಿ ಸದಸ್ಯ, ಮಾಜಿ ಸಚಿವ
image

ಕಾಂಬೋಡಿಯಾ, ವಿಯೆಟ್ನಾಂ, ಬಾಲಿ, ಮಾಲ್ಡೀವ್ಸ್, ಓಮನ್, ಜಪಾನ್, ಫ್ರಾನ್ಸ್, ಸ್ವಿಟ್ಜರ್‌ಲೆಂಡ್, ಜಾರ್ಜಿಯಾ, ರಷ್ಯಾ, ಭೂತಾನ್, ದಕ್ಷಿಣ ಆಫ್ರಿಕಾ ಮತ್ತು ಫಿಲಿಪೈನ್ಸ್ ಗಳಲ್ಲಿ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದು ನಮ್ಮ ಕಾರ್ಯಕ್ರಮದ 14ನೇ ಆವೃತ್ತಿ. ಪ್ರತಿಯೊಬ್ಬ ಭಾರತೀಯನಿಗೂ ತಾಷ್ಕೆಂಟ್ ಎಂಬ ಹೆಸರು ಒಬ್ಬ ಅಸಾಧಾರಣ ನಾಯಕನೊಂದಿಗೆ ಬೆಸೆದು ಕೊಂಡಿದೆ, ಅದು ಲಾಲ್ ಬಹದ್ದೂರ್ ಶಾಸ್ತ್ರೀಜೀ. ಇಲ್ಲಿ ಈ ಕಾರ್ಯಕ್ರಮ ಆಯೋಜಿ ಸಿರುವುದು ಅವರಿಗೆ ಸಲ್ಲಿಸುವ ಗೌರವವೂ ಹೌದು.

- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ, ವಿಶ್ವವಾಣಿ
image

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತದ ಹೆಮ್ಮೆ. ಚಿಕ್ಕಂದಿನಿಂದಲೂ ನಮಗೆಲ್ಲ ಆದರ್ಶ ವಾಗಿದ್ದವರು. ಅವರು ಕೊನೆಯುಸಿರೆಳೆದಿದ್ದ ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ವಿಶ್ವವಾಣಿ ಆಯೋಜಿಸಿರುವ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಭಾಗಿ ಯಾಗಿದ್ದು ರೋಮಾಂಚನ ಉಂಟು ಮಾಡಿದೆ. ಇಂಥ ವಿಶೇಷ ಸ್ಥಳದಲ್ಲಿ ವಿಶ್ವೇಶ್ವರ ಭಟ್ಟರು ಕಾರ್ಯಕ್ರಮ ಆಯೋಜಿಸುವ ಸಾಹಸ ಮಾಡಿದ್ದನ್ನು ಮೆಚ್ಚಲೇಬೇಕು. ಈ ಪ್ರಶಸ್ತಿ ಮತ್ತಷ್ಟು ಸಾಧಕರಿಗೆ ಸ್ಪೂರ್ತಿ ತುಂಬಲಿ.

- ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವರು
image

ಲಾಲ್ ಬಹದ್ದೂರ್ ಶಾಸ್ತ್ರಿಯವರು ಸ್ವರ್ಗಸ್ಥ ರಾದ ತಾಷ್ಕೆಂಟ್‌ನಲ್ಲಿ ವಿಶ್ವೇಶ್ವರ ಭಟ್ ಅವರು ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಪ್ರದಾನ ಸಮಾರಂಭ ಆಯೋಜಿಸಿದ್ದು ಅರ್ಥ ಪೂರ್ಣ. ವಿಧಾನಸೌಧದದ ಮುಂದೆ ಶಾಸ್ತ್ರಿಯ ವರ ಪ್ರತಿಮೆ ಸ್ಥಾಪಿಸದಿರವುದು ಬೇಸರದ ಸಂಗತಿ. ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಇಂದು ಪ್ರತಿಷ್ಠಿತ ಪ್ರಶಸ್ತಿಯಾಗಿ ಸಾಧಕರರಿಗೆ ಸ್ಪೂರ್ತಿ ನೀಡುತ್ತಿದೆ. ವಿಶ್ವೇಶ್ವರ ಭಟ್ ಅವರು ಮತ್ತಷ್ಟು ಸಾಹಸಗಳನ್ನು ಮಾಡಲಿ.

- ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕರು
image

ನಮ್ಮೆಲ್ಲರ ಹೆಮ್ಮೆಯ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ಸುನೀಲ್ ಶಾಸ್ತ್ರಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಕ್ಷಣ ಸ್ಮರಣೀಯ. ಅಕ್ಷರ ಕಟ್ಟುವ ಜತೆಜತೆಯಲ್ಲಿ ಸಮಾಜವನ್ನೂ ಬೆಳಗುವ, ಸಾಧಕರ ಬೆನ್ನು ತಟ್ಟಿ ಪ್ರೋತ್ಸಾಹಿ ಸುವ ವಿಶ್ವೇಶ್ವರ ಭಟ್ಟರ ಕಾಯಕ ಪ್ರಜ್ಞೆಗೆ ಶರಣು. ಇಂಥ ದೊಂದು ಮರೆಯಲಾ ಗದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ ವಿಶ್ವವಾಣಿ ಬಳಗಕ್ಕೆ ಆಭಾರಿ.

- ಎಚ್.ಪಿ. ನೀಲೇಶ್, ಸಂಸ್ಥಾಪಕರು, ಪರ್ವ ಗ್ರೂಪ್
image

ನಾಡಿನ ಸಾಧಕರನ್ನು ವಿಶ್ವೇಶ್ವರ ಭಟ್ಟರು ಇಂಥದ್ದೊಂದು ಅಪೂರ್ವ ಸ್ಥಳಕ್ಕೆ ಕರೆದು ಕೊಂಡು ಬಂದು ಸನ್ಮಾನಿಸಿದ್ದು ಪ್ರಶಂಸಾರ್ಹ. ಕನ್ನಡ ಪತ್ರಿಕೋದ್ಯಮದಲ್ಲಿ ಹೊಸತನ ತಂದಿರುವ, ತಮ್ಮ ಬರವಣಿಗೆ ಮೂಲಕ ಲಕ್ಷಾಂತರ ಜನರಿಗೆ ಹೊಸ ಹೊಸ ಸಂಗತಿಗಳನ್ನು ನಿತ್ಯವೂ ಹಂಚುತ್ತಿರುವ ವಿಶ್ವೇಶ್ವರ ಭಟ್ಟರು ಪದ್ಮಭೂಷಣ ಪ್ರಶಸ್ತಿಗೆ ಅರ್ಹರು. ಪ್ರಶಸ್ತಿ ಪುರಸ್ಕೃತರಿಗೆ ಇದು ಕೇವಲ ಪ್ರವಾಸವಲ್ಲ, ಅಧ್ಯಯನ.

- ಶ್ರೀ ನಟರಾಜ ಸ್ವಾಮೀಜಿ, ಶ್ರೀ ಗುರುಲಿಂಗ ಜಂಗಮದೇವರ ಮಠ