ಯೆಮೆನ್ ಆಸ್ಪತ್ರೆಯ ಮೇಲೆ ಸೌದಿ ವೈಮಾನಿಕ ದಾಳಿ; 20 ಕ್ಕೂ ಅಧಿಕ ಸಾವು, ಹಲವರಿಗೆ ಗಾಯ
ಯೆಮೆನ್‌ನ ಆಗ್ನೇಯ ತೈಲ ಸಮೃದ್ಧ ಪ್ರಾಂತ್ಯವಾದ ಹದ್ರಾಮೌಟ್‌ನ ಅನೇಕ ಸ್ಥಳಗಳ ಮೇಲೆ ಸೌದಿ ಯುದ್ಧ ವಿಮಾನಗಳು ಶುಕ್ರವಾರ ನಡೆಸಿದ ವೈಮಾನಿಕ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ವೈದ್ಯಕೀಯ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ -
ಸನಾ: ಯೆಮೆನ್‌ನ (Yemen) ಆಗ್ನೇಯ ತೈಲ ಸಮೃದ್ಧ ಪ್ರಾಂತ್ಯವಾದ ಹದ್ರಾಮೌಟ್‌ನ ಅನೇಕ ಸ್ಥಳಗಳ ಮೇಲೆ ಸೌದಿ ಯುದ್ಧ ವಿಮಾನಗಳು ಶುಕ್ರವಾರ ನಡೆಸಿದ (Saudi airstrikes) ವೈಮಾನಿಕ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ವೈದ್ಯಕೀಯ ಮೂಲಗಳು ತಿಳಿಸಿವೆ. ಕಳೆದ ಕೆಲವು ಗಂಟೆಗಳಲ್ಲಿ ಆಸ್ಪತ್ರೆಯು 20 ಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ. ನಾಗರಿಕರು ಸೇರಿದಂತೆ ಡಜನ್ಗಟ್ಟಲೆ ಇತರರು ದಾಳಿಯಲ್ಲಿ ಗಾಯಗೊಂಡಿದ್ದು, ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಮುನ್ನ, ಸೌದಿ ಅರೇಬಿಯಾದ ತೀವ್ರಗೊಂಡ ವಾಯುದಾಳಿಗಳು ಸೆಯುನ್ ವಿಮಾನ ನಿಲ್ದಾಣ ಮತ್ತು ಹತ್ತಿರದ ವಸತಿ ಕಟ್ಟಡಗಳನ್ನು ಹೊಡೆದವು ಮತ್ತು ಒಂದೇ ಕುಟುಂಬದ ಏಳು ಸದಸ್ಯರು ಸಾವನ್ನಪ್ಪಿದ್ದರು. ವೈಮಾನಿಕ ದಾಳಿಗಳು ನಾಗರಿಕರಲ್ಲಿ ಭೀತಿಯನ್ನು ಉಂಟುಮಾಡಿದ್ದು, ಅನೇಕ ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ. 2014 ರಲ್ಲಿ ಹೌತಿ ಪಡೆಗಳು ಸನಾ ಮತ್ತು ಉತ್ತರದ ದೊಡ್ಡ ಪ್ರದೇಶಗಳನ್ನು ವಶಪಡಿಸಿಕೊಂಡಾಗಿನಿಂದ ಯೆಮೆನ್ ಸಂಘರ್ಷದಲ್ಲಿ ಸಿಲುಕಿದೆ. ಕಳೆದ ತಿಂಗಳು ಹದ್ರಾಮೌತ್ ಮತ್ತು ಪೂರ್ವ ಪ್ರಾಂತ್ಯದ ಅಲ್-ಮಹ್ರಾವನ್ನು ಯೆಮೆನ್ ವಶಪಡಿಸಿಕೊಂಡ ನಂತರ ಸರ್ಕಾರ ಮತ್ತು ಎಸ್‌ಟಿಸಿ ನಡುವಿನ ಉದ್ವಿಗ್ನತೆ ಹೆಚ್ಚಾಯಿತು.
ಸೌದಿ ದಾಳಿ ಮಾಡಿದ್ದೇಕೆ?
ಯೆಮೆನ್‌ನಲ್ಲಿ ಆಂತರಿಕ ಸಂಘರ್ಷವಿದ್ದು ವಿವಿಧ ರಾಜಕೀಯ ಪಕ್ಷಗಳು, ಬಂಡುಕೋರರು ಅಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕೆಲ ಪ್ರದೇಶಗಳು ಬಂಡುಕೋರರ ಕೈಯಲ್ಲಿದ್ದರೆ ಕೆಲವು ಪ್ರದೇಶ ಸರ್ಕಾರದ ನಿಯಂತ್ರಣದಲ್ಲಿದೆ. Southern Transitional Council (STC) ಹೆಸರಿನ ರಾಜಕೀಯ ಸಂಘಟನೆ 2017 ರಲ್ಲಿ ರಚನೆಯಾಗಿದ್ದು ದಕ್ಷಿಣ ಯೆಮೆನ್‌ನಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಈ ಸಂಘಟನೆಗೆ ಯುಎಇ ಬೆಂಬಲ ನೀಡುತ್ತಿದೆ. ಈ ಎಸ್‌ಟಿಸಿ ಇತ್ತೀಚಿಗೆ ಪೂರ್ವ ಯೆಮೆನ್‌ನಲ್ಲಿರುವ ತೈಲ ಸಮೃದ್ಧ ಹದ್ರಾಮೌಟ್ ಮತ್ತು ಅಲ್ ಪ್ರಾಂತ್ಯಗಳನ್ನು ವಶಕ್ಕೆ ಪಡೆದಿತ್ತು.
ನಾನು ಭಾರತೀಯ; ಜನಾಂಗೀಯ ದಾಳಿಯಲ್ಲಿ ಹತ್ಯೆಗೊಳಗಾಗುವ ಮುನ್ನ ತ್ರಿಪುರಾ ವಿದ್ಯಾರ್ಥಿ ಕೊನೆಯದಾಗಿ ಹೇಳಿದ್ದೇನು?
ಎಸ್‌ಟಿಸಿಗೆ ಬಲ ತುಂಬಲು ಮುಕಲ್ಲಾ ಬಂದರಿಗೆ ಶಸ್ತ್ರಾಸ್ತ್ರಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಯುಎಇ ಕಳುಹಿಸಿಕೊಟ್ಟಿತ್ತು. ಶಸ್ತ್ರಾಸ್ತ್ರ ಕಳುಹಿಸಿದ ಹಿನ್ನೆಲೆಯಲ್ಲಿ ಸಿಟ್ಟಾದ ಸೌದಿ ಅರೇಬಿಯಾ ಈಗ ದಾಳಿ ನಡೆಸಿತ್ತು. ಸೌದಿ ಅರೇಬಿಯಾ ಯೆಮೆನ್ ಜೊತೆ ಗಡಿಯನ್ನು ಹಂಚಿಕೊಂಡಿದ್ದರೂ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿಲ್ಲ. ಭೌಗೋಳಿಕ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಾಗಿ ಯೆಮೆನ್ ವಿಚಾರದಲ್ಲಿ ಆಸಕ್ತಿಯನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿ ಬಂಡುಕೋರರನ್ನು ನಿಯಂತ್ರಿಸಿ ಸಮುದ್ರ ವ್ಯಾಪಾರ ಮಾರ್ಗದಲ್ಲಿ ಯಾವುದೇ ಸಮಸ್ಯೆ ಆಗದೇ ಇರಲು ಯೆಮೆನ್ ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ.