ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

3 ದಿನಗಳ ಅಧಿಕೃತ ಭೇಟಿಗಾಗಿ ದ್ವೀಪ ರಾಷ್ಟ್ರ ಸೀಶೆಲ್ಸ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ

Prime Minister Modi in Seychelles: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಅಧಿಕೃತ ಭೇಟಿಗಾಗಿ ಶನಿವಾರ (ಜೂ. 27) ಸೀಶೆಲ್ಸ್‌ಗೆ ತೆರಳಿದರು. ಸೀಶೆಲ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಪ್ರಧಾನ ಮಂತ್ರಿ ಅವರು ಔಪಚಾರಿಕ ಗಾರ್ಡ್ ಆಫ್ ಆನರ್ ಅನ್ನು ಸಹ ಸ್ವೀಕರಿಸಿದರು.

ಸೀಶೆಲ್ಸ್‌ಗೆ ಆಗಮಿಸಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

ಸೀಶೆಲ್ಸ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ -

Priyanka P
Priyanka P Jun 27, 2026 6:02 PM

ವಿಕ್ಟೋರಿಯಾ, ಜೂ. 27: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮೂರು ದಿನಗಳ ಅಧಿಕೃತ ಭೇಟಿಗಾಗಿ ಶನಿವಾರ (ಜೂ. 27) ದ್ವೀಪ ರಾಷ್ಟ್ರ ಸೀಶೆಲ್ಸ್‌ಗೆ ಆಗಮಿಸಿದರು. ಈ ಸಮಯದಲ್ಲಿ ಅವರು ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ (Patrick Herminie) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ದ್ವೀಪ ಸಮೂಹ ರಾಷ್ಟ್ರದ ರಾಷ್ಟ್ರೀಯ ದಿನದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಸೀಶೆಲ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಮೋದಿ ಔಪಚಾರಿಕ ಗಾರ್ಡ್ ಆಫ್ ಆನರ್ ಪ್ರಶಸ್ತಿ ಸ್ವೀಕರಿಸಿದರು. “ಸೀಶೆಲ್ಸ್‌ಗೆ ಬಂದಿಳಿದಿದ್ದೇನೆ. ಡಾ. ಪ್ಯಾಟ್ರಿಕ್ ಹರ್ಮಿನಿ ವಿಮಾನ ನಿಲ್ದಾಣದಲ್ಲಿ ನೀಡಿದ ಆತ್ಮೀಯ ಸ್ವಾಗತಕ್ಕೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸೀಶೆಲ್ಸ್ ನಮ್ಮ ಅಮೂಲ್ಯ ಪಾಲುದಾರ ಹಾಗೂ ಆತ್ಮೀಯ ಸ್ನೇಹಿತ ರಾಷ್ಟ್ರ. ನಮ್ಮ ದೀರ್ಘಕಾಲದ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವುದು ಮತ್ತು ಉಭಯ ದೇಶಗಳ ಜನರ ಹಿತಕ್ಕಾಗಿ ಪರಸ್ಪರ ಸಹಕಾರವನ್ನು ವೃದ್ಧಿಸುವ ಉದ್ದೇಶದ ಫಲಪ್ರದ ಭೇಟಿಗಾಗಿ ನಾನು ಎದುರು ನೋಡುತ್ತಿದ್ದೇನೆ” ಎಂದು ಅವರು ಹೇಳಿದರು.

ಶೀಘ್ರದಲ್ಲೇ ವಿಶ್ವದ ಹಿರಿಯ ಜೀವಂತ ಪ್ರಾಣಿಯನ್ನು ಭೇಟಿಯಾಗಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ನವದೆಹಲಿಯಿಂದ ಪ್ರಯಾಣ ಬೆಳೆಸುವ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ʼʼಸೀಶೆಲ್ಸ್ ಭಾರತದ ಅಮೂಲ್ಯ ಸಮುದ್ರ ನೆರೆಯ ರಾಷ್ಟ್ರವಾಗಿದ್ದು, ವಿಷನ್ ಮಹಾಸಾಗರ್ ಉಪಕ್ರಮದ ಪ್ರಮುಖ ಪಾಲುದಾರವಾಗಿದೆ. ಅಲ್ಲದೆ, ಜಾಗತಿಕ ದಕ್ಷಿಣ ರಾಷ್ಟ್ರಗಳ ಅಭಿವೃದ್ಧಿ ಮತ್ತು ಹಿತಾಸಕ್ತಿಗಳಿಗಾಗಿ ಭಾರತ ಹೊಂದಿರುವ ಬದ್ಧತೆಯನ್ನು ಹಂಚಿಕೊಳ್ಳುವ ದೇಶವೂ ಆಗಿದೆʼʼ ಎಂದು ಅವರು ತಿಳಿಸಿದರು.

ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರ ಆಹ್ವಾನದ ಮೇರೆಗೆ ಭೇಟಿ ನೀಡುತ್ತಿರುವ ಪ್ರಧಾನ ಮಂತ್ರಿ ರಾಷ್ಟ್ರೀಯ ದಿನಾಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿರಂತರ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿರುವ ದ್ವಿಪಕ್ಷೀಯ ಚರ್ಚೆಗಳನ್ನು ಎದುರು ನೋಡುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೀಶೆಲ್ಸ್ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ.

ವಿಶ್ವದ ಹಿರಿಯ ಜೀವಂತ ಪ್ರಾಣಿಯನ್ನು ಭೇಟಿಯಾಗಲಿದ್ದಾರೆ ಮೋದಿ

ಹಿಂದೂ ಮಹಾಸಾಗರದಲ್ಲಿರುವ ಸುಮಾರು 115 ದ್ವೀಪಗಳ ಸುಂದರ ರಾಷ್ಟ್ರವಾಗಿರುವ ಸೀಶೆಲ್ಸ್‌ನಲ್ಲಿ ಮೋದಿ ವಿಶ್ವದ ಅತ್ಯಂತ ಹಿರಿಯ ಜೀವಂತ ಪ್ರಾಣಿ ಜೋನಾಥನ್ (Jonathan tortoise) ಹೆಸರಿನ ಆಮೆಯನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರ ಸೀಶೆಲ್ಸ್ ಪ್ರವಾಸವು ಭಾರತ ಮತ್ತು ಸೀಶೆಲ್ಸ್ ನಡುವಿನ ಕಡಲ ಭದ್ರತೆ, ನೀಲಿ ಆರ್ಥಿಕತೆ, ಹವಾಮಾನ ಬದಲಾವಣೆ ಪರಿಣಾಮಗಳು, ವಿವಿಧ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಸಹಕಾರವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.

ಸೀಶೆಲ್ಸ್‌ನ ರಾಷ್ಟ್ರೀಯ ದಿನಾಚರಣೆಗೆ ಗೌರವ ಅತಿಥಿಯಾಗಿ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ್ದು, ಈ ಸಂದರ್ಭದಲ್ಲಿ ಅವರು ಅಲ್ಲಿನ ನಾಯಕರೊಂದಿಗೆ ಕಾರ್ಯತಂತ್ರ, ಆರ್ಥಿಕ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಮಾತುಕತೆ ನಡೆಸಲಿದ್ದಾರೆ.