ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr. M.C.Sudhakar: ವಿಶೇಷ ಕಂದಾಯ ಉಪ ಗ್ರಾಮಗಳ ರಚನೆ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ರಿಂದ ಚಾಲನೆ

ಪ್ರಸ್ತುತದ ಸರ್ಕಾರ ಬಂದ ಮೇಲೆ ಕಂದಾಯ ಇಲಾಖೆಯಲ್ಲಿ ಮಹತ್ತರವಾದ ಯೋಜನೆಗಳು ಜಾರಿಗೆ ಬಂದಿವೆ. ಈ ಪೈಕಿ ವಿಶೇಷ ಕಂದಾಯ ಗ್ರಾಮ ಅಭಿಯಾನ 2.0 ಯೋಜನೆಯಡಿ ಸರ್ಕಾರಿ ಅಥವಾ ಖಾಸಗಿ ಜಾಗದಲ್ಲಿ ನಿರ್ಮಿಸಿರುವ ಅನಧಿಕೃತ ಮನೆಗಳನ್ನು ಗುರ್ತಿಸಿ ಶಾಶ್ವತ ಮಾಲೀಕತ್ವದ ಕಂದಾಯ ದಾಖಲೆಗಳನ್ನು ವಿತರಿಸುವ ಭಾಗವಾಗಿ ಈಗಾಗಲೇ 1.4 ಲಕ್ಷ ಮನೆಗಳನ್ನು ಗುರ್ತಿಸ ಲಾಗಿದೆ.

ವಿಶೇಷ ಕಂದಾಯ ಉಪ ಗ್ರಾಮಗಳ ರಚನೆ ಅಭಿಯಾನಕ್ಕೆ ಚಾಲನೆ

ಕಂದಾಯ ಗ್ರಾಮ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ 1.4 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. -

Profile
Ashok Nayak Apr 14, 2026 12:07 AM

ಚಿಕ್ಕಬಳ್ಳಾಪುರ: ಕಂದಾಯ ಗ್ರಾಮ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ 1.4 ಲಕ್ಷ ಫಲಾನು ಭವಿ(1.4 lakh beneficiaries)ಗಳನ್ನು ಗುರುತಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಸುಧಾಕರ್(Higher Education Minister and District In-charge Minister Dr. M.C.Sudhakar) ತಿಳಿಸಿದರು.

ಜಿಲ್ಲಾಡಳಿತ ವತಿಯಿಂದ ಚಿಂತಾಮಣಿ ತಾಲ್ಲೂಕಿನ ಕೋಟಗಲ್ ಗ್ರಾಮದಲ್ಲಿ ಆಯೋಜಿಸಿದ್ದ, “ವಿಶೇಷ ಕಂದಾಯ ಉಪ ಗ್ರಾಮಗಳ ರಚನೆ ಅಭಿಯಾನ(Special Revenue Sub-village Creation Campaign)ಕ್ಕೆ” ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತದ ಸರ್ಕಾರ ಬಂದ ಮೇಲೆ ಕಂದಾಯ ಇಲಾಖೆಯಲ್ಲಿ ಮಹತ್ತರವಾದ ಯೋಜನೆಗಳು ಜಾರಿಗೆ ಬಂದಿವೆ. ಈ ಪೈಕಿ ವಿಶೇಷ ಕಂದಾಯ ಗ್ರಾಮ ಅಭಿಯಾನ 2.0 ಯೋಜನೆಯಡಿ ಸರ್ಕಾರಿ ಅಥವಾ ಖಾಸಗಿ ಜಾಗದಲ್ಲಿ ನಿರ್ಮಿಸಿರುವ ಅನಧಿಕೃತ ಮನೆಗಳನ್ನು ಗುರ್ತಿಸಿ ಶಾಶ್ವತ ಮಾಲೀಕತ್ವ ದ ಕಂದಾಯ ದಾಖಲೆಗಳನ್ನು ವಿತರಿಸುವ ಭಾಗವಾಗಿ ಈಗಾಗಲೇ 1.4 ಲಕ್ಷ ಮನೆಗಳನ್ನು ಗುರ್ತಿಸ ಲಾಗಿದೆ. ಈ 1.4 ಲಕ್ಷ ಮನೆಗಳ ಅಳತೆ ಕಾರ್ಯ ಹಾಗೂ ದುರಸ್ತಿ ಮಾಡಿ ನಿಯಮಾವಳಿ ರೀತ್ಯ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅರ್ಹರೆಲ್ಲರಿಗೂ ಸಹ ಹಕ್ಕು ಪತ್ರಗಳನ್ನು ನೀಡಲು ಜಿಲ್ಲಾಡಳಿತ ಮುಂದಾಗಿದೆ ಎಂದರು.

ಇದನ್ನೂ ಓದಿ: Dr. M.C. Sudhakar: ಸುಸಜ್ಜಿತ ನಗರ ನಿರ್ಮಾಣಕ್ಕೆ “ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರ” ಸಹಾಯಕಾರಿ: ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್

ಇದರ ಭಾಗವಾಗಿ ಅಳತೆ ಕಾರ್ಯಕ್ಕೆ ಕೋಟಗಲ್ ಗ್ರಾಮದಿಂದ ಚಾಲನೆ ನೀಡಲಾಗಿದೆ. ಈ ಅಭಿಯಾನದಡಿ ಗುರ್ತಿಸಿರುವ ಮನೆಗಳ ಪೈಕಿ ಯಾವುದೇ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗಿರುವ ಆಸ್ತಿಗಳನ್ನು ಹೊರತು ಪಡಿಸಿ ಉಳಿದ ಎಲ್ಲರಿಗೂ ಹಕ್ಕು ಪತ್ರಗಳನ್ನು ವಿತರಿಸಲು ಜಿಲ್ಲಾಡಳಿತ ಯೋಜಿಸಿದೆ. ಇಷ್ಟು ಬೃಹತ್ ಮಟ್ಟದಲ್ಲಿ ಹಕ್ಕುಪತ್ರಗಳನ್ನು ನೀಡುವ ಕಾರ್ಯಕ್ರಮ ವನ್ನು ಮುಖ್ಯಮಂತ್ರಿಗಳನ್ನು ಕರೆಸಿ ಮಾಡಲಾಗುವುದು. ಚಿಂತಾಮಣಿ ತಾಲ್ಲೂಕಿನಲ್ಲಿಯೇ 15,202 ಹಕ್ಕುಪತ್ರಗಳನ್ನು ವಿತರಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು.

ಭೂ ಸುರಕ್ಷ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪೈಲೆಟ್ ಯೋಜನೆಯಾಗಿ ತೆಗೆದುಕೊಳ್ಳ ಲಾಗಿತ್ತು. ಈ ಯೋಜನೆಯಡಿ 3.5 ಲಕ್ಷ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಗುಡಿಬಂಡೆ, ಗೌರಿಬಿದನೂರು ತಾಲ್ಲೂಕು ಗಳ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಂಡಿದೆ. ಉಳಿದ ತಾಲ್ಲೂಕುಗಳ ಸ್ಕ್ಯಾನಿಂಗ್ ಕಾರ್ಯವು ಇನ್ನೆರಡು ತಿಂಗಳಲ್ಲಿ ಪೂರ್ಣ ಆಗಲಿದೆ. ಈಗಾಗಲೇ ಈ ಯೋಜನೆಯಡಿ 2 ಲಕ್ಷ ಪುಟಗಳ ದಾಖಲೆ ಗಳನ್ನು ಸಾರ್ವಜನಿಕರು ಆನ್ ಲೈನ್ ಮೂಲಕ ಪಡೆದಿರುವುದು ವಿಶೇಷ ಎಂದು ತಿಳಿಸಿದರು.

cbpm3d

ಪೌತಿ ಖಾತೆ ಆಂದೋಲನವು ಸಹ ಜಿಲ್ಲೆಯಲ್ಲಿ ಕಳೆದ 3 ತಿಂಗಳಿನಿಂದ ವೇಗ ಪಡೆದುಕೊಂಡಿದೆ. 1.5 ಲಕ್ಷ ಪೌತಿಖಾತೆಗಳನ್ನು ಮಾಡಲು ಗುರಿ ಹೊಂದಲಾಗಿದೆ. ಈಗಾಗಲೇ 17,385 ಪೌತಿಖಾತೆಗಳನ್ನು ಇತ್ತಿಚಿಗೆ ಮಾಡಲಾಗಿದೆ. ಮುಂದಿನ 8 ತಿಂಗಳಲ್ಲಿ ಎಲ್ಲ ಪೌತಿಖಾತೆಗಳು ಪೂರ್ಣಗೊಳ್ಳುವ ಭರವಸೆ ಇದೆ. ಭೂ ಮಂಜೂರಾತಿ ಯೋಜನೆಯಡಿ 57,53,59 ರಡಿ 30 ಸಾವಿರ ಅರ್ಜಿಗಳು ವಿಲೇವಾರಿ ಗುರಿ ಇದ್ದು, ಈಗಾಗಲೇ 4 ಸಾವಿರ ಅರ್ಜಿಗಳನ್ನು ವಿಲೆ ಮಾಡಲಾಗಿದೆ. ಉಳಿದ 24 ಸಾವಿರ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಜಿಲ್ಲಾಡಳಿತ ಯೋಜಿಸಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಪ್ರಭು ಅವರು ಮಾತನಾಡಿ, ಮುಂದಿನ 10 ತಿಂಗಳಲ್ಲಿ 1700 ಕಂದಾಯ ಗ್ರಾಮ ಗಳನ್ನು ರಚನೆ ಮಾಡಲಾಗುವುದು,ಆ ಮೂಲಕ ಭೂದಾಖಲೆಗಳನ್ನು ನೀಡುವ ನಿಟ್ಟಿನಲ್ಲಿ ಇಂದಿನಿಂದ ಕೋಟಗಲ್ ಗ್ರಾಮದಿಂದ ಅಳತೆ ಕಾರ್ಯಕ್ಕೆ ಚಾಲನೆ ದೊರೆತಿದೆ. ಕಂದಾಯ ಗ್ರಾಮ ಅಭಿಯಾನದಡಿ ಈಗಾಗಲೇ ಗುರ್ತಿಸಿರುವ 1.4 ಲಕ್ಷ ಮನೆಗಳಿಗೂ ಹಕ್ಕು ಪತ್ರಗಳನ್ನು ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ. ಈ ಕಾರ್ಯಕ್ರಮ ಜಿಲ್ಲೆಯ ಪಾಲಿಗೆ ಐತಿಹಾಸಿಕ ಯೋಜನೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಭೂ ದಾಖಲೆಗಳ ಉಪನಿರ್ದೇಶಕ ಮಂಜುನಾಥ ತವಣೆ, ಚಿಂತಾಮಣಿ ತಹಸೀಲ್ದಾರ್ ಕೆ. ಸುದರ್ಶನ್ ಯಾದವ್, ಚಿಂತಾಮಣಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮುನಿನಾರಾಯಣಪ್ಪ, ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷ ಸ್ಕೂಲ್ ಸುಬ್ಬಾರೆಡ್ಡಿ, ಚಿಂತಾಮಣಿ ಆರಕ್ಷಕ ಉಪಾಧೀಕ್ಷಕ ಮುರಳೀಧರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ಸೇರಿದಂತೆ ಕೋಟಗಲ್ ಗ್ರಾಮಸ್ಥರು ಹಾಜರಿದ್ದರು.