ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಲ್ಲರಿಗೂ ತೆರೆಯಲಿದೆ ಹೊರ್ಮುಜ್ ಜಲಸಂಧಿ: ಕದನ ಮುಕ್ತಾಯದ ಸೂಚನೆ ಕೊಟ್ರಾ ಡೊನಾಲ್ಡ್ ಟ್ರಂಪ್

ಕಳೆದ ಫೆಬ್ರವರಿ ತಿಂಗಳಾಂತ್ಯದಿಂದ ಉದ್ವಿಗ್ನತೆಯ ಭಾಗವಾಗಿದ್ದ ಹೊರ್ಮುಜ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸುವ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದಾರೆ. ಈ ಮೂಲಕ ಅವರು ಇರಾನ್ ಜೊತೆಗೆ ಯುದ್ಧವನ್ನು ಕೊನೆಗೊಳಿಸುವ ಸೂಚನೆಯನ್ನು ಕೊಟ್ಟಿದ್ದಾರೆ. ಹಾಗಾದರೆ ಅಮೆರಿಕದ ಷರತ್ತುಗಳಿಗೆ ಇರಾನ್ ಒಪ್ಪಿಕೊಂಡಿತೇ? ಈ ಬಗ್ಗೆ ಟ್ರಂಪ್ ಹೇಳಿದ್ದೇನು?

ಹೊರ್ಮುಜ್ ಜಲಸಂಧಿ  ತೆರೆಯುವ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಸಂಗ್ರಹ ಚಿತ್ರ -

ವಾಷಿಂಗ್ಟನ್: ಹೊರ್ಮುಜ್ ಜಲಸಂಧಿಯನ್ನು ವಿಶ್ವದ ಎಲ್ಲ ರಾಷ್ಟ್ರಗಳಿಗೂ ಮುಕ್ತಗೊಳಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭರವಸೆ ನೀಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಇರಾನ್ ಜೊತೆಗೆ ಭಾನುವಾರ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಬಳಿಕ ಹೊರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತವಾಗಲಿದೆ. ಇದರಿಂದ ಮಧ್ಯಪ್ರಾಚ್ಯ ಭಾಗದಲ್ಲಿ ನಡೆಯುತ್ತಿರುವ ಯುದ್ಧ ಕೊನೆಗೊಳ್ಳುವುದು ಎಂದು ತಿಳಿಸಿದ್ದಾರೆ.

ಇರಾನ್ ಜೊತೆಗೆ ಭಾನುವಾರ ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕುವುದಾಗಿ ತಿಳಿಸಿರುವ ಡೊನಾಲ್ಡ್ ಟ್ರಂಪ್, ಈ ಒಪ್ಪಂದವು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಒಪ್ಪಂದಕ್ಕೆ ಹೋಲಿಸಿದರೆ ನಿಖರವಾಗಿ ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ನಿಯಂತ್ರಿಸಲಿದೆ ಎಂದು ಹೇಳಿದರು.

ಇರಾನ್ ಜೊತೆಗೆ ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ಹೊರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತವಾಗಲಿದೆ. ಈ ಒಪ್ಪಂದಕ್ಕೆ ಭಾನುವಾರ ಸಹಿ ಹಾಕಲು ನಿರ್ಧರಿಸಲಾಗಿದೆ. ಸಹಿ ಮಾಡಿದ ತಕ್ಷಣವೇ ಹೊರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತವಾಗಲಿದೆ ಎಂದು ತಿಳಿಸಿದರು.



ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಒಪ್ಪಂದಕ್ಕೆ ಹೋಲಿಸಿದರೆ ತಮ್ಮ ಒಪ್ಪಂದವು ನಿಖರವಾಗಿ ವಿರುದ್ಧವಾಗಿದೆ ಎಂದ ಅವರು, ಒಬಾಮಾ ಅವರ ಒಪ್ಪಂದವು ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಗುರಿಯನ್ನು ವೇಗವಾಗಿ ತಲುಪಲು ಸಹಾಯ ಮಾಡುತ್ತಿತ್ತು ಎಂದು ತಿಳಿಸಿದರು.

ಇರಾನ್ ಆರು ವರ್ಷಗಳ ಹಿಂದೆ ಮಾಡಿಕೊಂಡ ಒಪ್ಪಂದದಲ್ಲಿ ಅದಕ್ಕೆ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ಸುಲಭಗೊಳಿಸಿತ್ತು. ಆದರೆ ಈಗ ನಾವು ಮಾಡುತ್ತಿರುವ ಒಪ್ಪಂದ ಇರಾನ್ ಅನ್ನು ಸಂಪೂರ್ಣವಾಗಿ ಪರಮಾಣು ಶಸ್ತ್ರಾಸ್ತ್ರಗಳಿಲ್ಲದಂತೆ ಮಾಡಲಾಗುತ್ತದೆ. ಇದಕ್ಕಾಗಿ ತಡೆಗೋಡೆಯನ್ನು ಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇರಾನ್ ಇನ್ನು ಮುಂದೆ ಪರಮಾಣು ಶಸ್ತ್ರಾಸ್ತ್ರವನ್ನು ಬಯಸುವುದಿಲ್ಲ ಮತ್ತು ಭವಿಷ್ಯದಲ್ಲಿ ಖರೀದಿ, ಅಭಿವೃದ್ಧಿ ಅಥವಾ ಖರೀದಿಯ ಮೂಲಕ ಅದನ್ನು ಹೊಂದಿರುವುದಿಲ್ಲ ಎಂದು ಹೇಳಿದ ಡೊನಾಲ್ಡ್ ಟ್ರಂಪ್, ಈಗಿನ ಇರಾನ್ ಆಡಳಿತವು ಹಿಂದಿನ ಆಡಳಿತಕ್ಕಿಂತ ಹೆಚ್ಚು ವಿಭಿನ್ನ ಮತ್ತು ಉತ್ತಮ ಸಂಬಂಧವನ್ನು ಹೊಂದಿದೆ ಎಂದು ತಿಳಿಸಿದರು.

ಈಗಾಗಲೇ ಇರಾನ್ ಹೊಂದಿರುವ ಪರಮಾಣು ಶಸ್ತ್ರಾಸ್ತ್ರ ಸಂಗ್ರಹವನ್ನು ಯುನೈಟೆಡ್ ಸ್ಟೇಟ್ಸ್ ಸ್ವಾಧೀನಪಡಿಸಿಕೊಂಡು ನಾಶಪಡಿಸುತ್ತದೆ. ಸರಿಯಾದ ಸಮಯದಲ್ಲಿ ಎಲ್ಲವೂ ಶಾಂತವಾದಾಗ ನಾವು ಗ್ರಾನೈಟ್ ಪರ್ವತಗಳ ಅಡಿಯಲ್ಲಿ ಆಳವಾಗಿ ಹೂತು ಹಾಕಿರುವ ಪರಮಾಣು ಸಂಗ್ರಹವನ್ನು ಪಡೆಯುತ್ತೇವೆ ಮತ್ತು ನಾಶ ಪಡಿಸುತ್ತೇವೆ. ಭವಿಷ್ಯದಲ್ಲಿ ನಾವು ಇರಾನ್ ಮತ್ತು ಸಂಪೂರ್ಣ ಮಧ್ಯಪ್ರಾಚ್ಯದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

ಅಮೆರಿಕ ಅಧ್ಯಕ್ಷರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಅವರು ಅಮೆರಿಕದೊಂದಿಗೆ ಇಸ್ಲಾಮಾಬಾದ್ ಜ್ಞಾಪಕ ಪತ್ರಕ್ಕೆ ಇರಾನ್ ಭಾನುವಾರ ಸಹಿ ಹಾಕುವುದಿಲ್ಲ. ಮುಂದೆ ಸಹಿ ಹಾಕಬಹುದು. ಸಹಿ ಹಾಕುವ ಮುನ್ನ ಎಚ್ಚರಿಕೆ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.