ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ-ಇರಾನ್ ಸಂಬಂಧವು ದೀರ್ಘಕಾಲಿಕ ಎಂದು ಶ್ಲಾಘಿಸಿದ ಟೆಹರಾನ್

India-Iran Relations: ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಭೇಟಿಯಾದ ಕೆಲವೇ ದಿನಗಳ ನಂತರ, ಭಾರತದ ಜೊತೆಗಿನ ಸಂಬಂಧವನ್ನು ದೀರ್ಘಕಾಲದ ಮತ್ತು ಐತಿಹಾಸಿಕ ಸಂಬಂಧ ಎಂದು ಇರಾನ್ ಬಣ್ಣಿಸಿದೆ.

ಭಾರತ-ಇರಾನ್ ಸಂಬಂಧವು ದೀರ್ಘಕಾಲಿಕ ಎಂದು ಶ್ಲಾಘಿಸಿದ ಟೆಹರಾನ್

ಭಾರತ-ಇರಾನ್ ಸಂಬಂಧವು ದೀರ್ಘಕಾಲಿಕ ಎಂದು ಶ್ಲಾಘಿಸಿದ ಟೆಹರಾನ್ -

Priyanka P
Priyanka P Sep 8, 2026 3:15 PM

ಬಿಷ್ಕೆಕ್‌, ಸೆ.8: ಇಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (Masoud Pezeshkian) ಅವರೊಂದಿಗೆ ಭೇಟಿಯಾದ ಕೆಲವೇ ದಿನಗಳ ನಂತರ, ಭಾರತದ ಜೊತೆಗಿನ ಸಂಬಂಧವನ್ನು ದೀರ್ಘಕಾಲದ ಮತ್ತು ಐತಿಹಾಸಿಕ ಸಂಬಂಧ ಎಂದು ಇರಾನ್ ಬಣ್ಣಿಸಿದೆ. ಉಭಯ ನಾಯಕರ ಈ ಮಹತ್ವದ ಭೇಟಿಯಲ್ಲಿ ಜಂಟಿ ಕಾರ್ಯತಂತ್ರದ ಪ್ರಮುಖ ಭಾಗವಾಗಿರುವ ಚಾಬಹಾರ್ ಬಂದರು (Chabahar Port) ಯೋಜನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೇಯ್, ಭಾರತದೊಂದಿಗಿನ ನಮ್ಮ ಸಂಬಂಧವು ದೀರ್ಘಕಾಲದ, ಐತಿಹಾಸಿಕ ಮತ್ತು ನಾಗರಿಕತೆಯ ಬಾಂಧವ್ಯವಾಗಿದೆ. ನಾವು ಭಾರತದೊಂದಿಗಿನ ನಮ್ಮ ಸಂಬಂಧಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಭಾರತವು ಶಾಂಘೈ ಸಹಕಾರ ಸಂಘಟನೆ ಮತ್ತು ಬ್ರಿಕ್ಸ್ ಎರಡರಲ್ಲೂ ಸಕ್ರಿಯ ಸದಸ್ಯ ರಾಷ್ಟ್ರವಾಗಿದೆ. ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ವ್ಯಾಪಾರ ಮತ್ತು ಆರ್ಥಿಕ ಸಹಕಾರದಲ್ಲಿ ನಾವು ಅತ್ಯುತ್ತಮ ಸಂಬಂಧವನ್ನು ಹೊಂದಿರುವ ಪ್ರಮುಖ ದೇಶಗಳಲ್ಲಿ ಭಾರತವೂ ಒಂದಾಗಿದೆ” ಎಂದು ಭಾರತದೊಂದಿಗಿನ ಸ್ನೇಹವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.

ಇರಾನ್ ಮತ್ತು ಭಾರತದ ನಡುವಿನ ಸಮಾಲೋಚನೆಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ವಿವಿಧ ವಿಷಯಗಳು ಚರ್ಚೆಗೆ ಬರುತ್ತವೆ. ಇದರಲ್ಲಿ ಉಭಯ ದೇಶಗಳಿಗೂ ಅತ್ಯಂತ ಪ್ರಮುಖವಾಗಿರುವ ಚಾಬಹಾರ್ ಬಂದರು ಯೋಜನೆಯೂ ಸೇರಿದೆ ಎಂದು ಅವರು ತಿಳಿಸಿದ್ದಾರೆ. ಇದರೊಂದಿಗೆ ಭಾರತದೊಂದಿಗಿನ ಇರಾನ್ ಸಂಬಂಧವು ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದ್ದಾರೆ.

13 ವರ್ಷಗಳ ಹಿಂದಿನ ಹಳೆ ಭಾಷಣ ಮೆಲುಕು ಹಾಕಿದ ನರೇಂದ್ರ ಮೋದಿ; ಅರ್ಧ ತುಂಬಿದ ಗಾಜಿನ ಲೋಟದ ಬಗ್ಗೆ ಪ್ರಧಾನಿ ಹೇಳಿದ್ದೇನು?

ಕಿರ್ಗಿಜ್ ರಿಪಬ್ಲಿಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಸೇರಿದಂತೆ ಹಲವಾರು ನಾಯಕರನ್ನು ಭೇಟಿಯಾದರು. ಈ ವೇಳೆ ಇರಾನ್ ಜೊತೆಗಿನ ದೀರ್ಘಕಾಲದ ಸ್ನೇಹವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು.

ಉಭಯ ನಾಯಕರು ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಹಾಗೂ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆ ಶಾಶ್ವತ ಶಾಂತಿಯನ್ನು ಸ್ಥಾಪಿಸುವ ಪ್ರಯತ್ನಗಳಿಗೆ ಭಾರತದ ಬೆಂಬಲದ ಕುರಿತು ಚರ್ಚಿಸಿದ್ದಾಗಿ ಪ್ರಧಾನಿ ಮೋದಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಇರಾನ್ ನಡುವೆ ಯಾವುದೇ ವ್ಯಾಪಾರ ಒಪ್ಪಂದ ಇದೆ ಎಂದು ನಾನು ಭಾವಿಸುವುದಿಲ್ಲ. ನಿಸ್ಸಂಶಯವಾಗಿ, ಎಲ್ಲಾ ದೇಶಗಳೂ ತಮ್ಮದೇ ಆದ ವಿದೇಶಾಂಗ ನೀತಿಯನ್ನು ರೂಪಿಸಿಕೊಳ್ಳುತ್ತವೆ ಮತ್ತು ಪ್ರಪಂಚದಾದ್ಯಂತದ ಅನೇಕ ದೇಶಗಳು ಇರಾನ್ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತವೆ. ಆದರೆ ಯಾವುದೇ ದೇಶವೂ ಇರಾನ್ ಮೇಲಿನ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ಅದಕ್ಕೆ ಸಹಾಯ ಮಾಡಬಾರದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೋ ಅವರು ತಿಳಿಸಿದ್ದಾರೆ.