Donald Trump: ಏಕಾಏಕಿ ಕುಸಿದ ಟೆಸ್ಲಾ ಷೇರು; ಮಸ್ಕ್‌ಗೆ ಬೆಂಬಲವಾಗಿ ಹೊಸ ಕಾರು ಖರೀದಿಸಿದ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಶ್ವೇತಭವನದ ಡ್ರೈವ್ ವೇನಲ್ಲಿ ಕೆಂಪು ಬಣ್ಣದ ಟೆಸ್ಲಾ ಕಾರನ್ನು ಖರೀದಿಸಿದ್ದಾರೆ. ಎಲಾನ್ ಮಸ್ಕ್ ಅವರ ಎಲೆಕ್ಟ್ರಿಕ್ ವಾಹನ ಕಂಪನಿಗೆ ಬೆಂಬಲ ಸೂಚಿಲು ಟ್ರಂಪ್ ಕಾರನ್ನು ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಡೊನಾಲ್ಡ್ ಟ್ರಂಪ್ -
Vishakha Bhat
Mar 12, 2025 10:56 AM
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಂಗಳವಾರ ಶ್ವೇತಭವನದ ಡ್ರೈವ್ ವೇನಲ್ಲಿ ಕೆಂಪು ಬಣ್ಣದ ಟೆಸ್ಲಾ (Tesla) ಕಾರನ್ನು ಖರೀದಿಸಿದ್ದಾರೆ. ಎಲಾನ್ ಮಸ್ಕ್ (Elon Musk) ಅವರ ಎಲೆಕ್ಟ್ರಿಕ್ ವಾಹನ ಕಂಪನಿಗೆ ಬೆಂಬಲ ಸೂಚಿಲು ಟ್ರಂಪ್ ಕಾರನ್ನು ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಟ್ರಂಪ್‌ಗಾಗಿ ಶ್ವೇತಭವನದ ಹುಲ್ಲುಹಾಸಿನ ಮುಂದೆ ಮಸ್ಕ್ ಕೆಲವು ಟೆಸ್ಲಾ ಕಾರುಗಳನ್ನು ಸಾಲಾಗಿ ತಂದು ನಿಲ್ಲಿಸಿದ್ದರು. ನಂತರ ಟ್ರಂಪ್ ಕೆಂಪು ಬಣ್ಣದ ಕಾರನ್ನು ಆಯ್ಕೆ ಮಾಡಿದ್ದಾರೆ. ಕಾರಿನ ಒಳಗೆ ಕುಳಿತು ಪರಿಶೀಲನೆ ನಡೆಸಿದ್ದಾರೆ.
ಟೆಸ್ಲಾ ಕಂಪನಿಯ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆ ಮತ್ತು ಕಂಪನಿಯ ಷೇರು ಬೆಲೆಯಲ್ಲಿನ ಕುಸಿತದ ನಡುವೆಯೇ ಎಲಾನ್ ಮಸ್ಕ್‌ಗೆ ಬಂಬೆಲ ಸೂಚಕವಾಗಿ ಟ್ರಂಪ್ ಟೆಸ್ಲಾ ಕಾರನ್ನು ಖರೀದಿಸಿದ್ದಾರೆ. ಟ್ರಂಪ್ ಆದೇಶದ ಮೇರೆಗೆ ಮಸ್ಕ್ ಅವರ ಸರ್ಕಾರಿ ನೌಕರನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಎಲ್ಲಡೆಯಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಮಸ್ಕ್ ವಿರುದ್ಧ ಅಮೆರಿಕದಾದ್ಯಂತ ಹಲವು ಪ್ರತಿಭಟನೆಗಳು ನಡೆದಿದ್ದವು. ಟೆಸ್ಲಾ ಷೋರೂಂ ಗೆ ನುಗ್ಗಿದ್ದ ಪ್ರತಿಭಟನಾಕಾರರು ಮಸ್ಕ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ಮಸ್ಕ್ ಅವರಿಗೆ ಬೆಂಬಲವಾಗಿ ನಿಂತಿರುವ ಟ್ರಂಪ್ ಕೆಂಪು ಮಾಡೆಲ್ ಎಕ್ಸ್ ಟೆಸ್ಲಾದಲ್ಲಿ ಕುಳಿತು “ಸುಂದರವಾಗಿದೆ” ಎಂದು ಹೇಳಿದ್ದಾರೆ.
Get in, patriots—we have a country to save.🇺🇸@ElonMusk helps President Trump pick his new @Tesla! pic.twitter.com/VxdKMsOBjW
— The White House (@WhiteHouse) March 11, 2025
ಕಾರಿನಲ್ಲಿ ಟ್ರಂಪ್ ಜೊತೆ ಮಸ್ಕ್ ಕೂಡಾ ಕಾಣಿಸಿಕೊಂಡಿದ್ದಾರೆ. ಯಾಣಿಕರ ಸೀಟಿನಲ್ಲಿದ್ದ ಮಸ್ಕ್, ಕೆಲವು ಸೆಕೆಂಡುಗಳಲ್ಲಿ ಗಂಟೆಗೆ 60 ಮೈಲುಗಳು (95 ಕಿಲೋಮೀಟರ್) ವೇಗವನ್ನು ತಲುಪಬಹುದಾದ ವಾಹನವನ್ನು ಹೇಗೆ ಸ್ಟಾರ್ಟ್ ಮಾಡುವುದು ಎಂದು ಡೆಮೊ ತೋರಿಸಿದ್ದಾರೆ. ಕಾರು ಖರೀದಿಯ ಬಗ್ಗೆ ಮಾತನಾಡಿರುವ ಟ್ರಂಪ್ ಕಾರನ್ನು ನಾನು ಯಾವುದೇ ರಿಯಾಯಿತಿ ದರದಲ್ಲಿ ತೆಗೆದುಕೊಳ್ಳುತ್ತಿಲ್ಲ. ನನಗೆ ಯಾವುದೇ ರಿಯಾಯಿತಿ ಬೇಡ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Elon Musk: 'X' ಮೇಲೆ ಸೈಬರ್ ದಾಳಿ ; ಒಂದು ದೇಶದ ಕೈವಾಡ ಎಂದ ಎಲಾನ್ ಮಸ್ಕ್!
ಎಲಾನ್ ಮಸ್ಕ್ ದೇಶಕ್ಕಾಗಿ ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಟೆಸ್ಲಾವನ್ನು ಬಹಿಷ್ಕರಿಸುವ ಸಲುವಾಗಿ ಎಡ ಪಂಥೀಯರು ಟೆಸ್ಲಾ ಬಗ್ಗೆ ದೂಷಿಸುತ್ತಿದ್ದಾರೆ. ಮಸ್ಕ್‌ಗೆ ಬೆಂಬಲ ನೀಡಲು ನಾನು ಟೆಸ್ಲಾ ಕಾರನ್ನು ಖರೀದಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.