ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಆಕೆ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡಳು"; ಟ್ರಂಪ್‌ ಹೇಳಿಕೆಗೆ ಛೀಮಾರಿ ಹಾಕಿದ ಇಟಲಿ ಪ್ರಧಾನಿ ಮೆಲೋನಿ

ಡೊನಾಲ್ಡ್‌ ಟ್ರಂಪ್‌ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವೆ ಇದೀಗ ಮಾತಿನ ಯುದ್ಧ ಶುರುವಾಗಿದೆ. ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮೆಲೋನಿ ಬೇಡಿಕೊಂಡರು ಎಂದು ಟ್ರಂಪ್ ಹೇಳಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಟ್ರಂಪ್‌ ಹೇಳಿಕೆಗೆ ಛೀಮಾರಿ ಹಾಕಿದ ಇಟಲಿ ಪ್ರಧಾನಿ ಮೆಲೋನಿ? ಎನಿದು ಘಟನೆ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 19, 2026 9:13 PM

ರೋಮ್:‌ ಡೊನಾಲ್ಡ್‌ ಟ್ರಂಪ್‌ (Donald Trump) ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Meloni) ನಡುವೆ ಇದೀಗ ಮಾತಿನ ಯುದ್ಧ ಶುರುವಾಗಿದೆ. ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮೆಲೋನಿ ಬೇಡಿಕೊಂಡರು ಎಂದು ಟ್ರಂಪ್ ಹೇಳಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಜಾರ್ಜಿಯಾ ಮೆಲೋನಿ ಇದನ್ನು ನಿರಾಕರಿಸಿದ್ದು, ಇದು ಶುದ್ಧ ಸುಳ್ಳು ಸಂಪೂರ್ಣ ಕಟ್ಟು ಕತೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮೆಲೋನಿ ಬೇಡಿಕೊಂಡರು ಎಂದು ಟ್ರಂಪ್, ಇಟಲಿಯ ಟಿವಿ ಚಾನೆಲ್ La7 ಗೆ ಹೇಳಿಕೆ ನೀಡಿದ ನಂತರ ಈ ವಿವಾದ ಭುಗಿಲೆದ್ದಿದೆ. ಆಕೆ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಹಾತೊರೆಯುತ್ತಿದ್ದರು. ಅದನ್ನು ನಾನು ತೆಗೆದುಕೊಳ್ಳುತ್ತಿರಲಿಲ್ಲ,ಆದರೆ ಆಕೆಯ ಬಗ್ಗೆ ವಿಷಾದಿಸುತ್ತಿದ್ದೆ ಎಂದು ಟ್ರಂಪ್‌ ಹೇಳಿದ್ದಾರೆ.

ಈ ಹೇಳಿಕೆ ಇಟಲಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ ಮೆಲೋನಿ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಅವರ ಹೇಳಿಕೆಯನ್ನು"ಸಂಪೂರ್ಣವಾಗಿ ಕಲ್ಪಿತ" ಎಂದು ತಳ್ಳಿಹಾಕಿದ್ದಾರೆ. ಸಾರ್ವಜನಿಕವಾಗಿ ಒಮ್ಮೆ ಛೀಮಾರಿ ಹಾಕಿದ್ದನ್ನು ಹೇಳಿಕೊಂಡಿದ್ದಾರೆ. ನಾನು ಅಥವಾ ಇಟಲಿ ಎಂದಿಗೂ ಬೇಡಿಕೊಳ್ಳುವುದಿಲ್ಲ" ಎಂದು ಮೆಲೋನಿ ವೀಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.



ಟ್ರಂಪ್ ವಿರೋಧಿಗಳಿಗಿಂತ ಮಿತ್ರರಾಷ್ಟ್ರಗಳ ಮೇಲೆ ಏಕೆ ಕಠಿಣವಾಗಿ ವರ್ತಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಅಮೆರಿಕಾ ಅಧ್ಯಕ್ಷರು ಯಾಕೆ ಮಿತ್ರರಾಷ್ಟ್ರಗಳ ಜೊತೆ ಈ ರೀತಿ ವರ್ತಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಪಶ್ಚಿಮ ಮತ್ತು ಅಮೆರಿಕದ ಶತ್ರುಗಳ ಜೊತೆ ಅವರು ಅದೇ ದೃಢನಿಶ್ಚಯವನ್ನು ತೋರಿಸದಿರುವುದು ನಿರಾಶಾದಾಯಕವಾಗಿದೆ ಬದಲಿಗೆ ಅವರು ಆ ರಾಷ್ಟ್ರಗಳ ನಾಯಕರನ್ನು ಹೆಚ್ಚಿನ ದಯೆಯಿಂದ ನಡೆಸಿಕೊಳ್ಳುತ್ತಾರೆ ಮೆಲೋನಿ ಕಿಡಿ ಕಾರಿದರು.

ಇರಾನ್ ಸಂಘರ್ಷವನ್ನು ಪೋಪ್ ಖಂಡಿಸಿದ್ದಕ್ಕಾಗಿ ಟ್ರಂಪ್ ಪೋಪ್ ಲಿಯೋ ಅವರ ಮೇಲೆ ದಾಳಿ ಮಾಡಿದ್ದಕ್ಕಾಗಿ ಮೆಲೋನಿ ಟೀಕಿಸಿದ ನಂತರ ಇಬ್ಬರು ನಾಯಕರ ನಡುವೆ ಸಮರ ಪ್ರಾರಂಭವಾಗಿದೆ. ಟ್ರಂಪ್‌ ಹೇಳಿಕೆಯ ಬಳಿಕ ಜೂನ್ 21-22 ರಂದು ಅಮೆರಿಕಕ್ಕೆ ತಮ್ಮ ಯೋಜಿತ ಭೇಟಿಯನ್ನು ರದ್ದುಗೊಳಿಸುತ್ತಿರುವುದಾಗಿ ಇಟಾಲಿಯನ್ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಘೋಷಿಸಿದ್ದಾರೆ. ಟ್ರಂಪ್ ಅವರ ಹೇಳಿಕೆಗಳು ಮೆಲೋನಿ ಮತ್ತು ಇಟಾಲಿಯನ್ ರಾಷ್ಟ್ರ ಎರಡಕ್ಕೂ ಮಾಡಿದ ಅವಮಾನ ಎಂದು ಹೇಳಿದರು.