US Government Shutdown: ಆರು ವರ್ಷಗಳ ಬಳಿಕ ಅಮೆರಿಕ ಸರ್ಕಾರಕ್ಕೆ ಹಣಕಾಸು ಪೂರೈಕೆ ಸ್ಥಗಿತ
ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ ಸರ್ಕಾರಿ ವ್ಯವಸ್ಥೆ ಸ್ಥಗಿತಗೊಂಡಿದೆ. ಇದರಿಂದಾಗಿ ಅನಿವಾರ್ಯವಲ್ಲದ ಕೆಲಸಗಳಿಗಾಗಿ ಹಣಕಾಸು ಪೂರೈಕೆ ಸ್ಥಗಿತಗೊಳ್ಳಲಿದೆ. ಇದು ಲಕ್ಷಾಂತರ ನಾಗರಿಕ ಸೇವಕರ ಕಾರ್ಯದ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಹಲವಾರು ಕಾರ್ಮಿಕರು ತಾತ್ಕಾಲಿಕವಾಗಿ ವೇತನವಿಲ್ಲದೆ ದುಡಿಯಬೇಕಾಗುತ್ತದೆ.

-

ವಾಷಿಂಗ್ಟನ್: ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಸರ್ಕಾರಕ್ಕೆ (US government) ಹಣಕಾಸು ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಮಿಲಿಟರಿ ಸಿಬ್ಬಂದಿ ಸೇರಿದಂತೆ ಅಗತ್ಯ ಕಾರ್ಮಿಕರು ವೇತನವಿಲ್ಲದೆ ಕೆಲವು ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಅನಿವಾರ್ಯವಲ್ಲದ ಉದ್ಯೋಗಿಗಳನ್ನು ರಜೆಯ ಮೇಲೆ ಕಳುಹಿಸಲಾಗುತ್ತಿದೆ. ಪ್ರಜಾಪ್ರಭುತ್ವವಾದಿಗಳು (Democrats) ತಮ್ಮ ಬೇಡಿಕೆಗಳನ್ನು ಪೂರೈಸದೇ ಇರುವ ಕಾರಣ ರಿಪಬ್ಲಿಕನ್ (Republican) ಸ್ಟಾಪ್ ಗ್ಯಾಪ್ ನಿಧಿ ಪ್ಯಾಕೇಜ್ ಅನ್ನು ನಿರ್ಬಂಧಿಸಿತ್ತು. ಇದರಿಂದಾಗಿ ಅಮೆರಿಕ ಸರ್ಕಾರಕ್ಕೆ ಹಣಕಾಸು ಪೂರೈಕೆ ಸ್ಥಗಿತಗೊಂಡಿದೆ.
ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಸರ್ಕಾರಿ ವ್ಯವಸ್ಥೆ ಸ್ಥಗಿತಗೊಂಡಿದೆ. 2018- 2019ರಲ್ಲಿ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಹೊಸ ವರ್ಷದ ದಿನ ಸೇರಿದಂತೆ ಐದು ವಾರಗಳ ಕಾಲ ಸರ್ಕಾರಕ್ಕೆ ಹಣಕಾಸು ಸ್ಥಗಿತಗೊಂಡಿತು. ಈ ವೇಳೆ ಅನಿವಾರ್ಯವಲ್ಲದ ಕೆಲಸಗಳಿಗಾಗಿ ಹಣಕಾಸು ಪೂರೈಕೆ ಸೇವೆ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಲಕ್ಷಾಂತರ ನಾಗರಿಕ ಸೇವಕರು ತಾತ್ಕಾಲಿಕವಾಗಿ ವೇತನವಿಲ್ಲದೆ ದುಡಿಯಬೇಕಾಗುತ್ತದೆ. ಇದರಿಂದ ಪಾವತಿಗಳು ವಿಳಂಬವಾಗುತ್ತದೆ.
ಈ ಸಂದರ್ಭದಲ್ಲಿ ಮಿಲಿಟರಿ ಸಿಬ್ಬಂದಿ ಸೇರಿದಂತೆ ಅಗತ್ಯ ಕಾರ್ಮಿಕರು ವೇತನವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಅನಿವಾರ್ಯವಲ್ಲದ ಸರ್ಕಾರಿ ನೌಕರರನ್ನು ರಜೆಯ ಮೇಲೆ ಕಳುಹಿಸಲಾಗುತ್ತದೆ. ಇದು ಸುಮಾರು 7,50,000 ಕಾರ್ಮಿಕರ ಮೇಲೆ ಪರಿಣಾಮ ಬಿರುವುದು. ಒಂದು ವೇಳೆ ಈ ಹಣಕಾಸು ಪೂರೈಕೆ ಸ್ಥಗಿತಗೊಳ್ಳುವುದು ಮುಂದುವರಿದರೆ ಕಾರ್ಮಿಕರನ್ನು ಶಾಶ್ವತವಾಗಿ ವಜಾಗೊಳಿಸಲೂ ಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಹಣಕಾಸಿನ ಕೊರತೆಯ ಸಮಯದಲ್ಲಿ ಅನಿವಾರ್ಯವಲ್ಲದ ಕಾರ್ಮಿಕರನ್ನು ತಾತ್ಕಾಲಿಕವಾಗಿ ವಜಾಗೊಳಿಸುತ್ತದೆ. ಅನಂತರ ಅವರಿಗೆ ವೇತನವನ್ನು ನೀಡುತ್ತದೆ ಎಂದು ಅವರು ತಳಿಸಿದ್ದಾರೆ.
ಏನೆಲ್ಲ ಕಾರ್ಯ ನಡೆಯುತ್ತದೆ?
ಹಣಕಾಸಿನಲ್ಲಿ ವಿಳಂಬವಾದಾಗ ಫೆಡರಲ್ ಏಜೆನ್ಸಿಗಳು ಕಾರ್ಯವನ್ನು ಸ್ಥಗಿತಗೊಳಿಸುತ್ತದೆ. ಉದ್ಯೋಗಿಗಳನ್ನು ಹೊರತುಪಡಿಸಿ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಕೆಲಸ ಮಾಡುವವರು ಕೆಲಸದಲ್ಲಿ ಮುಂದುವರಿಯುತ್ತಾರೆ. ಆದರೆ ಅವರಿಗೆ ಸಂಬಳ ಇರುವುದಿಲ್ಲ. ಇದರಲ್ಲಿ ವೈದ್ಯಕೀಯ ಆರೈಕೆ, ಗಡಿ ರಕ್ಷಣೆ, ಕಾನೂನು ಜಾರಿ ಮತ್ತು ವಾಯು ಸಂಚಾರ ನಿಯಂತ್ರಣ ಮುಂದುವರಿಯುತ್ತದೆ. ಸಾಮಾಜಿಕ ಭದ್ರತೆ ಮತ್ತು ಮೆಡಿಕೇರ್ ಚೆಕ್ ಗಳನ್ನು ಸಹ ನೀಡಲಾಗುತ್ತದೆ.
ನಾಸಾದ ಬಾಹ್ಯಾಕಾಶ ಕಾರ್ಯಾಚರಣೆಗಳು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನಿಗ್ರಹ ಮತ್ತು ಆಹಾರ ಮತ್ತು ಔಷಧ ಆಡಳಿತ ಮತ್ತು ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯಲ್ಲಿನ ಕೆಲವು ಸಾರ್ವಜನಿಕ ಆರೋಗ್ಯ ಕೆಲಸಗಳಂತಹ ಸರ್ಕಾರಿ ಕಾರ್ಯಗಳು ಸಹ ಸ್ಥಗಿತದ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ.
ಏನು ಸ್ಥಗಿತಗೊಳ್ಳುತ್ತದೆ?
ಈ ಸಮಯದಲ್ಲಿ ಫೆಡರಲ್ ಅನುದಾನಿತ ಆಹಾರ ಸಹಾಯ ಕಾರ್ಯಕ್ರಮ, ಆಹಾರ ತಪಾಸಣೆ, ಸರ್ಕಾರಿ ಪ್ರಿ-ಸ್ಕೂಲ್ ಗಳು, ವಿದ್ಯಾರ್ಥಿ ಸಾಲಗಳ ವಿತರಣೆ, ವಲಸೆ ವಿಚಾರಣೆಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿನ ಕಾರ್ಯಾಚರಣೆಗಳಂತಹ ಸೇವೆಗಳು ಸ್ಥಗಿತಗೊಳ್ಳುತ್ತವೆ.
ಏನು ಪರಿಣಾಮ?
ತಕ್ಷಣಕ್ಕೆ ಯಾವುದೇ ಪರಿಣಾಮ ಬೀಳದೆ ಇದ್ದರೂ ಇದು ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಮಾರುಕಟ್ಟೆ ವ್ಯವಹಾರಗಳನ್ನು ಅಡ್ಡಿ ಪಡಿಸುತ್ತದೆ. ಮುಂದೆ ಇದು ಹಣಕಾಸು ಮಸೂದೆಗಳನ್ನು ಅಂಗೀಕರಿಸುವಾಗ ಹೆಚ್ಚಿನ ವ್ಯಯಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇರುತ್ತದೆ. ಹಣಕಾಸು ಪೂರೈಕೆ ಸ್ಥಗಿತದಿಂದ ಪ್ರತಿ ವಾರ ಆರ್ಥಿಕ ಬೆಳವಣಿಗೆಯಲ್ಲಿ ಸುಮಾರು ಶೇ. 0.1 ರಿಂದ 0.2 ಅಂಕಗಳು ಕಡಿತವಾಗಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು.
ಪ್ರಜಾಪ್ರಭುತ್ವವಾದಿಗಳ ಬೇಡಿಕೆ ಏನು?
ಮಸೂದೆಯಲ್ಲಿ ಹೆಚ್ಚುವರಿ ಆರೋಗ್ಯ ಸಹಾಯಧನಗಳನ್ನು ಸೇರಿಸಬೇಕು ಎಂಬುದು ಪ್ರಜಾಪ್ರಭುತ್ವವಾದಿಗಳ ಬೇಡಿಕೆಯಾಗಿದೆ. ಆದರೆ ರಿಪಬ್ಲಿಕನ್ನರು ಇದನ್ನು ಪ್ರತ್ಯೇಕವಾಗಿ ನಿಭಾಯಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಸರ್ಕಾರ ಕಾರ್ಮಿಕರನ್ನು ವಜಾಗೊಳಿಸಲು ಮುಂದಾದರೆ ಪ್ರತಿಭಾ ಪಲಾಯನಕ್ಕೆ ಕಾರಣವಾಗುತ್ತವೆ. ಈ ವಾರ 1,50,000 ಕ್ಕೂ ಹೆಚ್ಚು ಕಾರ್ಮಿಕರು ಫೆಡರಲ್ ವೇತನದಾರರ ಪಟ್ಟಿಯಿಂದ ಹೊರಹೋಗಲಿದ್ದಾರೆ. ಇದು 80 ವರ್ಷಗಳಲ್ಲಿನ ಅತಿದೊಡ್ಡ ವಲಸೆಯಾಗಿದೆ. ಈ ವರ್ಷ ಈಗಾಗಲೇ ಹತ್ತು ಸಾವಿರ ಜನರನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: Vishwavani Editorial: ಹತಾಶೆಯಲ್ಲಿ ಸಿಲುಕಿರುವ ಪಾಕ್
ಮುಂದೇನು?
1981 ರಿಂದ ಕಾಂಗ್ರೆಸ್ 15 ಬಾರಿ ಸರ್ಕಾರದ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ಅವುಗಳಲ್ಲಿ ಹೆಚ್ಚಿನವು ಒಂದು ಅಥವಾ ಎರಡು ದಿನಗಲಾಗಿತ್ತು. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಇದು ಮೂರು ವಾರಗಳಾಗಿತ್ತು. ಈ ಬಾರಿ ಹಣಕಾಸು ಪೂರೈಕೆ ಸ್ಥಗಿತಗೊಳ್ಳಲು ಮುಖ್ಯ ಕಾರಣ ಆರೋಗ್ಯ ರಕ್ಷಣೆ ವಿಷಯವಾಗಿದೆ. ಈ ವರ್ಷದ ಅಂತ್ಯದಲ್ಲಿ ಮುಕ್ತಾಯಗೊಳ್ಳಲಿರುವ ಶಾಶ್ವತ ಕೈಗೆಟುಕುವ ಆರೈಕೆ ಕಾಯ್ದೆಯ ಸಬ್ಸಿಡಿಗಳನ್ನು ಹೆಚ್ಚಿಸಬೇಕು ಎನ್ನುತ್ತಿದ್ದಾರೆ ಪ್ರಜಾಪ್ರಭುತ್ವವಾದಿಗಳು. ಇದರಿಂದ 24 ಮಿಲಿಯನ್ ಅಮೆರಿಕನ್ನರ ಆರೋಗ್ಯ ವೆಚ್ಚಗಳು ತೀವ್ರವಾಗಿ ಹೆಚ್ಚಾಗುತ್ತವೆ. ಫ್ಲೋರಿಡಾ ಮತ್ತು ಟೆಕ್ಸಾಸ್ ನಂತಹ ರಿಪಬ್ಲಿಕನ್ ನಿಯಂತ್ರಿತ ರಾಜ್ಯಗಳಲ್ಲಿ ಇದು ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ಜಾರಿಗೆ ತರಲು ಸರ್ಕಾರ ನಿರಾಕರಿಸಿದೆ. ಒಂದು ವೇಳೆ ಈ ಕಾನೂನಿಗೆ ಸಹಿ ಹಾಕಿದರೆ ಟ್ರಂಪ್ ಸ್ವತಃ ಈ ಬದಲಾವಣೆಗಳನ್ನು ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಜಾಪ್ರಭುತ್ವವಾದಿಗಳು ಪ್ರಯತ್ನಿಸಿದ್ದಾರೆ.